ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಹದಿಮೂರು ಕ್ಷೇತ್ರಗಳ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು,ನಾಳೆ ಮೂರು ಕ್ಷೇತ್ರಗಳ ಚುನಾವಣೆ ನಡೆಯಲಿದೆ. ಖಾನಾಪೂರ,ತಾಲ್ಲೂಕಿನ ಪಿಕೆಪಿಎಸ್,ರಾಮದುರ್ಗ ತಾಲ್ಲೂಕಿನ ಪಿಕೆಪಿಎಸ್ ಪ್ರತಿನಿಧಿಗಳ ಸ್ಥಾನಕ್ಕೆ,ಹಾಗು ನೇಕಾರ ಸಹಕಾರಿ ಕ್ಷೇತ್ರದ ಪ್ರತಿನಿಧಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಮೂರು ಕ್ಷೇತ್ರಗಳ ಪೈಕಿ ಖಾನಾಪೂರ ದಲ್ಲಿ ಎಂಈಎಸ್ ಮಾಜಿ ಶಾಸಕ ಅರವಿಂದ್ ಪಾಟೀಲ್ ಮತ್ತು ಖಾನಾಪೂರದ ಶಾಸಕಿ ಅಂಜಲಿ ನಿಂಬಾಳ್ಕರ್ ನಡುವೆ ಬಿರುಸಿನ ಪೈಪೋಟಿ ನಡೆದಿದ್ದು,ಇಬ್ಬರ ನಡುವೆ …
Read More »ನ್ಯಾಯ ಎಲ್ಲಿದೆ…? ಅಂತಾ ಇವರು ಕೇಳುತ್ತಿದ್ದಾರೆ….!
ಬೆಳಗಾವಿ- ಗಂಡ,ಹೆಂಡತಿ,ಇಬ್ಬರು ಹೆಣ್ಣು ಮಕ್ಕಳೊಂದಿದೆ ಬೆಳಗಾವಿಯ ಡಿಸಿ ಕಚೇರಿಯ ಎದುರು ಕುಳಿತುಕೊಂಡಿದ್ದಾರೆ.ನ್ಯಾಯ ಎಲ್ಲಿದೆ ಅಂತಾ ಕೇಳುತ್ತಿದ್ದಾರೆ. ನ್ಯಾಯ ಸಿಗೋವರೆಗೂ ಅಹೋರಾತ್ರಿ ಧರಣಿ ಮಾಡುತ್ತೇವೆ,ಅಲ್ಲಿಯವರೆಗೆ ಇಲ್ಲಿಯೇ ಕುಳಿತುಕಿಳ್ಳುತ್ತೇವೆ ಅಂತ,ಈ ಕುಟುಂಬ ಡಿಸಿ ಕಚೇರಿ ಎದುರು ಧರಣಿ ಆರಂಭಿಸಿದೆ. ರಾಯಬಾಗ ತಾಲ್ಲೂಕಿನ, ನರಸಲಾಪೂರ ಗ್ರಾಮದ ಸಂಗೀತಾ ಬಂಡು ಚಾವರೆ ಕುಟುಂಬ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.ಈವರ ಪಾಲಿಗೆ ಬರುವ ಜಮೀನು ಮತ್ತು ಆಸ್ತಿಯನ್ನು,ಇವರ ಸಮಂಧಿಕರು ಮಾಡಿಕೊಡುತ್ತಿಲ್ಲ,ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎನ್ನುವ ಕಾರಣಕ್ಕಾಗಿ ನಮಗೆ …
Read More »ಬೆಳಗಾವಿಯ ನಿವಾಸಿ ಈಗ ಅಮೇರಿಕಾದ ಸಂಸದ
ಬೆಳಗಾವಿ- ಬೆಳಗಾವಿಯ ನಿವಾಸಿಯೊಬ್ಬ ಅಮೇರಿಕಾದ ಸಂಸದನಾಗಿ ಆಯ್ಕೆಯಾಗಿದ್ದಾನೆ. ಬೆಳಗಾವಿ ಶಹಾಪೂರ ಪ್ರದೇಶದ ಮೀರಾಪೂರ ಗಲ್ಲಿಯ ನಿವಾಸಿ ಶ್ರೀನಿವಾಸ ಥಾಣೆದಾರ ಈಗ ಅಮೆರಿಕಾ ದೇಶದ ಸೆನೆಟ್ ಮೆಂಬರ್ ಆಗಿ ಆಯ್ಕೆಯಾಗಿದ್ದಾರೆ. ಚಿಂತಾಮಣರಾವ ಶಾಲೆಯಲ್ಲಿ ಹೈಸ್ಕೂಲ ಕಲೆತಿರುವ ಶ್ರೀನಿವಾಸ ಥಾಣೆದಾರ್ ಅಮೇರಿಕಾದಲ್ಲಿ ಕೆಮಿಕಲ್ ಉದ್ಯಮಿಯಾಗಿದ್ದಾರೆ.
Read More »ರಪೀಕ ಖಾನಾಪೂರಿ ಋಣ ತೀರಿಸಿದ ಅಂಜಲಿತಾಯಿ
ಬೆಳಗಾವಿ-ಖಾನಾಪೂರ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ನಿಜವಾಗಿಯೂ ತಾಯಿ ಪಾತ್ರ ನಿಭಾಯಿಸುತ್ತಿದ್ದಾರೆ,ರಪೀಕ ಖಾನಾಪೂರಿ ಅವರ ಮಗನನ್ನು ಖಾನಾಪೂರ ನಗರಸಭೆಯ ಅಧ್ಯಕ್ಷ ರನ್ನಾಗಿ ನೇಮಿಸಿ ರಪೀಕ ಖಾನಾಪೂರಿ ಕಾಂಗ್ರೆಸ್ ಪಕ್ಷಕ್ಕೆ ಮಾಡಿದ ಋಣ ತೀರಿಸಿದ್ದಾರೆ. ಶಾಸಕಿ ಡಾ ಅಂಜಲಿ ಹೇಮಂತ್ ನಿಂಬಾಳ್ಕರ್ ಅವರ ನೇತೃತ್ವದಲ್ಲಿ ಖಾನಾಪೂರ ಪಟ್ಟಣ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ ನಡೆಯಿತು. ಖಾನಾಪೂರ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ದಿ. ರಫೀಕ್ ಖಾನಾಪೂರಿ ಅವರ ಪುತ್ರ ಶ್ರೀ ಮಜರ್ …
Read More »ರೈಲಿನಲ್ಲಿ ಕಳವು ಮಾಡಿ ಬ್ಯಾಂಕಿನಲ್ಲಿ ಇಟ್ಟಿದ್ದ
ಬೆಳಗಾವಿ- ಸೊಲ್ಲಾಪೂರದಿಂದ ಬಾಗಲಕೋಟೆಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯ ಪರ್ಸ ಕಳುವು ಮಾಡಿದ ಚಾಲಾಕಿಯನ್ನು ಬಂಧಿಸುವಲ್ಲಿ ರೇಲ್ವೆ ಪೋಲೀಸರು ಯಶಸ್ವಿಯಾಗಿದ್ದಾರೆ. ಮಹಿಳೆಯ ಬ್ಯಾಗ್ ನಲ್ಲಿದ್ದ 40 ಗ್ರಾಂ ತೂಕದ ಮಂಗಳಸೂತ್ರ ಮಾಡಿದ ಆತ ಮಂಗಳಸೂತ್ರವನ್ನು ಬ್ಯಾಂಕಿನಲ್ಲಿ ಒತ್ತೇ ಇಟ್ಟಿದ್ದ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಆರೊಪಿ .ಮಾಳಪ್ಪ @ ಮನೊಜ್ ತಂದೆ ಮಲಕಪ್ಪ ಮಾದರ (೨೫).ಸಾ”ಹಚ್ಯಾಳ್ ತಾ”ಸಿಂದಗಿ ಜಿ”ವಿಜಯಪುರ ಬಂಧಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ರೇಲ್ವೆ ಪೋಲೀಸ್ ಸಿಪಿಐ ಕಾಳಿಮಿರ್ಚಿ ಸೇರಿದಂತೆ …
Read More »ನೆಲ,ಜಲ,ಭಾಷೆಗೆ ವಿರೋಧ ಮಾಡಿದ್ದನ್ನು ನೋಡಬೇಕಿತ್ತು,ಹತ್ತು ಬಾರಿ ಯೋಚಿಸಬೇಕಿತ್ತು…
ಬೆಳಗಾವಿ- ಎಂಈಎಸ್ ಮಾಜಿ ಶಾಸಕ ಅರವಿಂದ್ ಪಾಟೀಲ್ ಅವರನ್ನು ಬಿಜೆಪಿಗೆ ಕರ್ಕೊಂಡ ಬರ್ತೀವಿ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಘಟಪ್ರಭಾದಲ್ಲಿರುವ ಸೇವಾದಳದ ಕಚೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು,ನಾಡಿನ ನೆಲ,ಜಲ,ಭಾಷೆಗೆ ವಿರೋಧ ಮಾಡಿದ್ದನ್ನು ಮಂತ್ರಿಗಳು ನೋಡಬೇಕಾಗಿತ್ತು,ರಾಷ್ಟ್ರೀಯ ಪಕ್ಷವೊಂದು ನಾಡಿನ ವಿರುದ್ಧ ಕೆಲಸ ಮಾಡಿದವರಿಗೆ,ಪಕ್ಷಕ್ಕೆ ಅಹ್ವಾನ ನೀಡುತ್ತಿದೆ.ಅದು ಅವರ ಪಕ್ಷದ ಸಿದ್ಧಾಂತ ಈಬಗ್ಗೆ ನಾವು ಏನೂ …
Read More »ನಾಡದ್ರೋಹಿ, ಎಂಈಎಸ್ ಗೆಲ್ಲಿಸಲು,ನಾಡಿನ ಹಿತವನ್ನೇ ಗಲ್ಲಿಗೇರಿಸಿದ,ಬಿಜೆಪಿ ನಾಯಕರು
ಬೆಳಗಾವಿ: ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಪಕ್ಷಾತೀತವಾಗಿ ನಡೆಯಬೇಕಿದ್ದ ಚುನಾವಣೆ ಕನ್ನಡ ನಾಡಿನ ಪ್ರತಿಷ್ಠೆ, ಮಾನ ಮರ್ಯಾದೆಯನ್ನು ಪಣಕ್ಕಿಟ್ಟಿದೆ. ಡಿಸಿಸಿ ಬ್ಯಾಂಕ್ ನ ಎಲ್ಲ 16 ಸ್ಥಾನಕ್ಕೆ ಅವಿರೋಧ ಆಯ್ಕೆಗೆ ಬಿಜೆಪಿ, ಆರ್ ಎಸ್ ಎಸ್ ವರಿಷ್ಠರ ಆದೇಶ ಮೇರೆಗೆ ಜಿಲ್ಲೆಯ ಬಿಜೆಪಿ ನಾಯಕರು ತಮ್ಮ ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದರು. 16 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಇನ್ನು ಮೂರು ಸ್ಥಾನಕ್ಕೆ ಅ. …
Read More »ಬೆಳಗಾವಿಯ ಹಳೇಯ ಬಸ್ ನಿಲ್ಧಾಣಕ್ಕೆ ಅಭಿವೃದ್ಧಿಯ ಭಾಗ್ಯ
ಬೆಳಗಾವಿ ಸ್ಮಾಟ್೯ ಸಿಟಿ ಯೋಜನೆಯಲ್ಲಿ ನಿರ್ಮಿಸಲಾಗುತ್ತಿರುವ ಬಸ್ ನಿಲ್ದಾಣವನ್ನು ಆದಷ್ಟು ಬೇಗ ಮುಗಿಸಿಕೊಡಬೇಕು ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಹೇಳಿದರು. ಅವರು ಮಂಗಳವಾರ ನಗರದ ರೈಲ್ವೆ ನಿಲ್ದಾಣದ ಎದುರಿನ ಬಸ್ ನಿಲ್ದಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು. ಬೆಳಗಾವಿಯ ಕೇಂದ್ರ ಬಿಂದು ದಂಡುಮಂಡಳಿಯ ವ್ಯಾಪ್ತಿಯ 1.86 ಲಕ್ಷ ವೆಚ್ಚದಲ್ಲಿ ನರ್ಮಿಸುತ್ತಿರುವ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಇದು ಅತೀ ಶೀಘ್ರದಲ್ಲೇ ಈ ಕಾಮಗಾರಿ ಮುಗಿಯಬೇಕು. ಸಿಬಿಟಿ …
Read More »ರಾಜಪ್ಪನವರು ಬರೀತಾರೆ,ಪೋಲೀಸ್ ಲಹರಿ….!
ಬೆಳಗಾವಿ -ಕರ್ನಾಟಕ ರಾಜ್ಯ ಪೊಲೀಸ್ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಿವೃತ್ತ ಡಿಐಜಿಪಿ ಡಾ.ಡಿ.ಸಿ.ರಾಜಪ್ಪ ಅವರ ಸಂಪಾದಕತ್ವದಲ್ಲಿ ಪೊಲೀಸ್ ಲಹರಿ ಮಾಸಪತ್ರಿಕೆ ಬಿಡುಗಡೆ ಸಮಾರಂಭ ನ.4 ರಂದು ಬೆಂಗಳೂರಿನ ಸೀನಿಯರ್ ಪೊಲೀಸ್ ಆಫೀರ‍್ಸ್ ಮೆಸ್‌ನ ಸಭಾಂಗಣದಲ್ಲಿ ಜರುಗಲಿದೆ. ಪೊಲೀಸ್ ಲಹರಿ ಮಾಸಪತ್ರಿಕೆಯ ಬಿಡುಗಡೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಲಿದ್ದಾರೆ. ಅಧ್ಯಕ್ಷತೆಯನ್ನು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ನಗರದ ಪೊಲೀಸ್ ಆಯುಕ್ತ ಕಮಲ್ ಪಂಥ್ …
Read More »ಹಳ್ಳದ, ಹೆಸರು ನೋಡಿ,300,ಎಕರೆ ಹಳ್ಳ ಹಿಡಿಸಿದ್ರು
ಬೆಳಗಾವಿ- ಪಾಪ ಈ ರೈತರು ಏನೂ ತಪ್ಪು ಮಾಡಿಲ್ಲ,ಇವರ ಹೆಸರು ಹಳ್ಳದ ಇರುವದೇ ದೊಡ್ಡ ತಪ್ಪಾಗಿದೆ, ಹಳ್ಳದ ಎನ್ನುವ ಹೆಸರು ಇರುವ ಉತಾರಗಳಲ್ಲಿ,ಹಳ್ಳ ಸೇರಿ ,300 ಎಕರೆಗೂ ಹೆಚ್ಚು ಜಮೀನು,ಸರ್ಕಾರಿ ಜಮೀನು ಎಂದು ಪರಿವರ್ತನೆಯಾಗಿದೆ. ಅಧಿಕಾರಿಗಳು ಮಾಡಿದ ಯಡವಟ್ಟಿನಿಂದಾಗಿ,ಹಳ್ಳದ ಎಂಬ ಹೆಸರಿನಲ್ಲಿರುವ 300 ಎಕರೆಗೂ ಹೆಚ್ಚು ಜಮೀನು ಈಗ ಸರ್ಕಾರಿ ಜಮೀನು ಎಂದು ದಾಖಲಾಗಿದ್ದು ಹಳ್ಳದ ಕುಟುಂಬಗಳ ರೈತರು ನ್ಯಾಯ ದೊರಕಿಸಿಕೊಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. ಈ ಅವಘಡ …
Read More »