ಬೆಳಗಾವಿ-ಮಗನ ಕಳೆದುಕೊಂಡ ಭಾರವಾದ ತಾಯಿ ಹೃದಯಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮನ ಮಿಡಿದಿದ್ದಾರೆ. ಚಿಕಿತ್ಸೆಗಾಗಿ ಮಗನನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿ,ಚಿಕಿತ್ಸೆ ಫಲಕಾರಿಯಾಗದೇ ಮಗನನ್ನು ಕಳೆದುಕೊಂಡು,ಮಗನ ಅಂತಿಮ ಸಂಸ್ಕಾರ ಮಾಡಲು ಸಾಧ್ಯವಾಗದೇ ಅಸಹಾಯಕಳಾಗಿ ನಂತರ ಮಾಜಿ ಮೇಯರ್ ವಿಜಯ ಮೋರೆ ಅವರ ಪುತ್ರ ಅಲೆನ್ ಮತ್ತು ಅವರ ಗೆಳೆಯರ ನೆರವಿನಿಂದ ಮಗನ ಅಂತ್ಯಸಂಸ್ಕಾರ ಮುಗಿಸಿ ಊರಿಗೆ ಹೋಗಿದ್ದ ತಾಯಿಯ ನೆರವಿಗೆ ಮಿನಿಸ್ಟರ್ ಲಕ್ಷ್ಮೀ ಹೆಬ್ಬಾಳಕರ್ …
Read More »ಖಾನಾಪುರದ ಹಳ್ಳಿಯಲ್ಲಿ ಕಂಡು ಬಂತು ಚಿರತೆ ಮರಿ…
ಬೆಳಗಾವಿ :ದಟ್ಟ ಕಾಡಿನಿಂದ ಕೂಡಿರುವಖಾನಾಪುರದ ಹಳ್ಳಿಯಲ್ಲಿ ಚಿರತೆ ಮರಿ ಇರುವುದು ಕಂಡು ಬಂದಿದ್ದು, ಜನ ಭಯ ಭೀತರಾಗಿದ್ದಾರೆ.ಚಿರತೆ ಮರಿ ಪ್ರತ್ಯಕ್ಷವಾಗಿರುವುದರಿಂದ ತಾಯಿ ಮರಿಯನ್ನು ಹುಡುಕಿಕೊಂಡು ಬರುವ ಶಂಕೆವ್ಯಕ್ತವಾಗಿದೆ. ಹಲಸಿವಾಡಿ ಗ್ರಾಮದ ಕೃಷಿ ಜಮೀನಿನಲ್ಲಿ ಚಿರತೆ ಮರಿ ಕಾಣಿಸಿಕೊಂಡಿದೆ. ಜಮೀನಿನಲ್ಲಿ ರೈತರು ಕೃಷಿ ಕಾರ್ಯ ಕೈಗೊಂಡಿದ್ದಾಗ ಚಿರತೆ ಮರಿ ಜಮೀನಿನ ಒಂದು ಬದಿಯಿಂದ ಮತ್ತೊಂದು ಬದಿಗೆ ಹಾದುಹೋಗಿದೆ. ಜನವಸತಿ ಪ್ರದೇಶದ ಬಳಿ ಚಿರತೆ ಕಾಣಿಸಿಕೊಂಡ ಕಾರಣ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. …
Read More »ಜ್ಞಾನ ಜ್ಯೋತಿಯನ್ನು ಬೆಳಗುವ ಉತ್ಸವ ಬೆಳಗಾವಿಯಲ್ಲಿ….
ರಾಮಕೃಷ್ಣ ಮಿಷನ್ ವಿಶ್ವಭಾವೈಕ್ಯ ಮಂದಿರ ವಾರ್ಷಿಕೋತ್ಸವ : ಶಿಕ್ಷಕರು ಪ್ರೀತಿಯಿಂದ ಬೋಧಿಸಬೇಕು- ವೀರೇಶಾನಂದಜೀ ಮಹಾರಾಜ ಬೆಳಗಾವಿ : ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರೀತಿಯಿಂದ ಬೋಧನೆ ಮಾಡಬೇಕು ಎಂದು ಬೆಂಗಳೂರು ವೀರೇಶಾನಂದಜೀ ಮಹಾರಾಜ ತಿಳಿಸಿದರು. ಇಲ್ಲಿಯ ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಉದ್ಘಾಟನೆಯ ಸವಿನೆನಪಿಗೆ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ಸಮ್ಮೇಳನದಲ್ಲಿ ಅವರು ಕಲಿಕೆ ಎಂಬ ಸಂತಸದ ಸಾಹಸ ವಿಷಯವಾಗಿ ಮಾತನಾಡಿದರು. ಮಕ್ಕಳು …
Read More »ನಿಮ್ಮ ಸಹಾಯಕ್ಕೆ ನಮ್ಮ ಸಲಾಂ…..!!!
ಬೆಳಗಾವಿ: ಅನಾರೋಗ್ಯದಿಂದ ಸಾವನ್ನಪ್ಪಿದ ಮಗನ ಅಂತ್ಯಕ್ರಿಯೆಗೆ ದುಡ್ಡಿಲ್ಲದೇ ಪರದಾಡುತ್ತಿದ್ದ ತಾಯಿಗೆ ಬೆಳಗಾವಿಯ ವಿಜಯ ಮೋರೆ ಅವರ ಯಂಗ್ ಬೆಲಗಾಮ್ ಫೌಂಡೇಶನ್ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಹೌದು ಸವದತ್ತಿ ತಾಲ್ಲೂಕಿನ ಮರುಕುಂಬಿ ಗ್ರಾಮದ ವಿಶ್ವನಾಥ ಶಿವಲಿಂಗಪ್ಪ ಗುರಕ್ಕನವರ(34) ಅನಾರೋಗ್ಯದಿಂದ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತರಾಗಿದ್ದರು. ಈ ವೇಳೆ ಮೃತ ವಿಶ್ವನಾಥ ತಾಯಿ ನೀಲವ್ವ ದಿಕ್ಕೆ ತೋಚದಂತಾಗಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆಗ ಸಹಾಯಕ್ಕೆ ಬಂದಿದ್ದೆ ಯಂಗ್ ಬೆಲಗಾಮ್ ಫೌಂಡೇಶನ್. ಮಗನ …
Read More »ಟ್ರೇಡಿಂಗ್ ಹೆಸರಿನಲ್ಲಿ ಚೀಟೀಂಗ್ ,ಕೋಟಿ,ಕೋಟಿ ವಂಚನೆ…
ಗೋಕಾಕ: ಸೈಬರ್ ವಂಚಕರಿಂದ ಇಬ್ಬರು ಇಂಜಿನಿಯರ್, ಓರ್ವ ಉದ್ಯಮಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ಘಟನೆ ಗೋಕಾಕದಲ್ಲಿ ನಡೆದಿದೆ. ಗೋಕಾಕ ಮೂಲದ ಉದ್ಯಮಿ ಬಾಬುರಾವ್ ಹಾಗೂ ಚಿಕ್ಕೋಡಿ ತಾಲೂಕಿನ ಖಡಕಲಾಟ್ ಗ್ರಾಮದ ನಿವಾಸಿ ಚಿದಾನಂದ ಹಾಗೂ ಇಂಜಿನಿಯರ್ ಶಿವರಾಜ್‌ಗೆ ಸೈಬರ್ ವಂಚಕರು ಲಕ್ಷ ಲಕ್ಷ ಪಂಗನಾಮ ಹಾಕಿದ್ದಾರೆ. ಫೇಸ್ಬುಕ್‌ನಲ್ಲಿ ಬಂದ ಜಾಹೀರಾತು ರೀಲ್ಸ್ ನೋಡಿ ಮೋಸ ಹೋಗಿರುವ ಶಿವರಾಜ್ ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸಿದರೆ ಒಂದೇ ದಿನದಲ್ಲಿ ಶೇ. 10 …
Read More »ಬೆಳಗಾವಿ ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ ಎಷ್ಟು ಗೊತ್ತಾ..??
ಲೋಕಸಭೆ ಚುನಾವಣೆ, ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ ಬೆಳಗಾವಿ- ಸಾರ್ವತ್ರಿಕ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ ರೆಡಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 40,37,275 ಲಕ್ಷ ಮತದಾರರು ಇದ್ದಾರೆ. ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ ಮಾಹಿತಿ ನೀಡಿದ್ದು, ಕರಡು ಮತದಾರರ ಪಟ್ಟಿಯಲ್ಲಿ 2005003 ಪುರುಷರು, 1973668 ಮಹಿಳೆಯರು, 155 ಇತರರು ಹೀಗೆ 3978826 ಮತದಾರರಿದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ …
Read More »ಅಂತ್ಯಸಂಸ್ಕಾರಕ್ಕೆ ಆಕ್ಷೇಪ,ಕವಳೇವಾಡಿಯಲ್ಲಿ ಜಟಾಪಟಿ….!!
ಬೆಳಗಾವಿ-ಮೃತ ವ್ಯಕ್ತಿಯ ಅಂತ್ಯಕ್ರಿಯೆ ವೇಳೆ ಜಮೀನು ಮಾಲೀಕ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕವಳೇವಾಡಿ ಗ್ರಾಮದಲ್ಲಿ ಜಟಾಪಟಿ ನಡೆದಿದೆ. ನನ್ನ ಜಮೀನಿನಲ್ಲಿ ಸಂಸ್ಕಾರ ಮಾಡಬೇಡಿ ಎಂದು ಕೋರ್ಟ್ ಆರ್ಡರ್ ತಂದ ಭೂ ಮಾಲೀಕ ಅಂತ್ಯಸಂಸ್ಕಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ.ವಿವಾದಿತ ಜಾಗದಲ್ಲಿ ಮೃತ ವ್ಯಕ್ತಿಯ ಅಂತ್ಯಕ್ರಿಯೆಗೆ ಗ್ರಾಮಸ್ಥರ ಪಟ್ಟು ಹಿಡಿದರೂ ಜಮೀನು ಮಾಲೀಕ ಒಪ್ಪದ ಹಿನ್ನಲೆಯಲ್ಲಿ ಕೆಲ ಕಾಲ ಗದ್ದಲ ಗಲಾಟೆ ನಡೆದಿದೆ.ವಿವಾದಿತ ಜಾಗದಲ್ಲೇ ಶವ ಇಟ್ಟು ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ರುಪೊಲೀಸರಿಂದ ಮಾಲೀಕನ ಮನವೊಲಿಕೆ …
Read More »ಗ್ಯಾಸ್ ಸ್ಟೌ ಅಂಗಡಿಗೆ ಬೆಂಕಿ, ಬೆಚ್ಚಿಬಿದ್ದ ಜನತೆ ಬೆಳಗಾವಿ
ಬೆಳಗಾವಿ-ನಗರದ ಖಡೇಬಜಾರ ಮಾರ್ಗದಲ್ಲಿ ಗ್ಯಾಸ್ ಸ್ಟೌ ಅಂಗಡಿಯಲ್ಲಿ ಶುಕ್ರವಾರ ಸಂಜೆ ಶಾರ್ಟ ಸರ್ಟ್ಯೂಟದಿಂದ ಬೆಂಕಿ ಅವಗಢ ಸಂಭವಿಸಿದೆ. ಈ ಅವಗಢದಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದರಿಂದ ಅಂಗಡಿ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ಅಪಾರ ಪ್ರಮಾಣದ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಅಂಗಡಿ ಧಗಧಗನೇ ಹೊತ್ತಿ ಉರಿಯುತ್ತಿರುವ ದೃಶ್ಯ ಕಂಡ ಜನತೆ ಬೆಚ್ಚಿಬಿದ್ದು, ಅಲ್ಲಿಂದಕೂಡಲೇ ತೆರಳಿದರು. ಪೈ ಇಂಟರನ್ಯಾಷಲ್ ಶೋ ರೂಂ ಬದಿಯಲ್ಲಿರುವ ಸ್ಟೌ ರಿಪೇರಿ ಮಾಡುವ ಅಂಗಡಿಗೆ ಬೆಂಕಿಗಾಹುತಿಯಾಗಿದೆ. ಖಡೆಬಜಾರ ಮಾರ್ಗ ಜನದಟ್ಟನೆಯಿಂದ ಕೂಡಿರುತ್ತದೆ.ಈ …
Read More »ಪೌರ ಕಾರ್ಮಿಕ ಮಹಿಳೆಗೆ ಒಲಿದ ಮೇಯರ್ ಪಟ್ಟ…
ಪೌರ ಕಾರ್ಮಿಕ ಮಹಿಳೆಗೆ ಒಲಿದ ಮೇಯರ್ ಪಟ್ಟ… ದಲಿತ ಮಹಿಳೆಗೆ ಒಲಿದ ಅಂಬೇಡ್ಕರ್ ಕಾನೂನಾತ್ಮಕ ಹೋರಾಟದ ಪ್ರತಿಫಲ* *”ಸವಿತಾ” “ಕಾಂಬಳೆ” ಬೆಳಗಾವಿ ಮಹಾನಗರ ಪಾಲಿಕೆಯ ಪ್ರಥಮ ಪ್ರಜೆ – ಸ್ತ್ರೀಶಕ್ತಿಗೆ ಸಂದ ಐತಿಹಾಸಿಕ ಜಯ* ಬೆಳಗಾವಿ-ಮಹಿಳಾ ಶೋಷಣೆಯ ವಿವಿಧ ಮಗ್ಗಲುಗಳ ಬಗ್ಗೆ ಆಳವಾಗಿ ಚಿಂತಿಸಿ, ಧಾರ್ಮಿಕ- ಸಾಮಾಜಿಕ- ರಾಜಕೀಯ ಹಕ್ಕುಗಳನ್ನು ಸಂವಿಧಾನ ದತ್ತಿವಾಗಿ ನೀಡಲು ಶ್ರಮಿಸಿದ ಭಾರದತ ಮೊದಲ ವ್ಯಕ್ತಿ ಭಾರತ ರತ್ನ ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ್ ಅವರು. ʻಯಾವುದೇ …
Read More »ಟ್ರೇಲರ್ ಬಿಡುಗಡೆ ಆಗುವ ಮುನ್ನವೇ ಪಿಕ್ಚರ್ಸ್ ರಿಲೀಸ್…!!!
ಬೆಳಗಾವಿ-ಪಾರ್ಲಿಮೆಂಟ್ ಇಲೆಕ್ಷನ್ ಬಂದಿದೆ, ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂದು ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗಲೇ ಸೋಶಿಯಲ್ ಮಿಡಿಯಾ ದಲ್ಲಿ ಪೂಲ್ ಪಿಕ್ಚರ್ಸ್ ರಿಲೀಸ್ ಆಗಿದ್ದು ಸೋಶಿಯಲ್ ಮಿಡಿಯಾ ದಲ್ಲಿ ಹರದಾಡುತ್ತಿರುವ ಪೋಟೋ ಸಖತ್ತ್ ವೈರಲ್ ಆಗಿದೆ. ಒಂದು ಪೋಟೋ ನೂರು ಪದಗಳಿಗೆ ಸಮ ಎಂದು ಹೇಳ್ತಾರೆ, ಆದ್ರೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ,ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ …
Read More »