Breaking News

Breaking News

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ.‌ ನಿರಂತರ ಮಳೆಯಿಂದ ಘಟಪ್ರಭಾ, ಕೃಷ್ಣಾ, ದೂಧಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಮಲಪ್ರಭಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಆದ್ದರಿಂದ ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಮಾಡಿದ್ದಾರೆ. …

Read More »

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ ಜೊತೆ ಹಳೆಯ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ಎರಡು-ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಅವರ ಮನೆಯಲ್ಲಿ ಗೋಡೆ ಕುಸಿದು ಬಿದ್ದಿತು. ಈ ಘಟನೆಗೆ ನಂತರ, ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ, ಅವಶೇಷಗಳಡಿ ಸಿಲುಕಿದ್ದ ಫರೀದಾ ಮತ್ತು ರಿಯಾಜ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ತೀವ್ರ ಅಸ್ವಸ್ಥಗೊಂಡಿದ್ದ ಫರೀದಾ ಕೊನೆಯುಸಿರೆಳೆದರು, ಆದರೆ ಗಂಭೀರವಾಗಿ …

Read More »

ನಾಳೆ ಬುಧವಾರವೂ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಶಾಲೆಗಳಿಗೆ ರಜೆ ಘೋಷಣೆ

ಬೆಳಗಾವಿ- ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಜಿಲ್ಲೆಯ ಜನಜೀವನ ಅಸ್ತವ್ಯಸ್ತವಾಗಿದೆ. ನಾಳೆ ಬುಧವಾರ ಬೆಳಗಾವಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಆದೇಶ ಹೊರಡಿಸಿದ್ದಾರೆ. ಸೋಮಾವಾರ ಮತ್ತು ಮಂಗಳವಾರ ಕೆಲವು ತಾಲ್ಲೂಕುಗಳ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿತ್ತು ಇಂದು ಮಂಗಳವಾರವೂ ಅನಾಹುತ ಮಳೆ ಸುರಿಯುತ್ತಿರುವ ಕಾರಣ ಬೆಳಗಾವಿ ಜಿಲ್ಲೆ ಎಲ್ಲ ತಾಲ್ಲೂಕುಗಳ ಶಾಲೆಗಳಿಗೆ ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ …

Read More »

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ ಅಪಪ್ರಚಾರ ನಡೆಸಿದೆ ಎಂದು ಆರೋಪಿಸಿ ಧರ್ಮಸ್ಥಳದ ಸಾವಿರಾರು ಭಕ್ತರು ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ನಡೆಸಲಿದ್ದು ಮರೆವಣಿಗೆ ಆರಂಭವಾಗುವ ಮುನ್ನ ಶಾಸಕ ಅಭಯ ಪಾಟೀಲ ಅವರು ಹತ್ತು ಸಾವಿರಕ್ಕೂ ಹೆಚ್ಚು ರೇನ್ ಕೋಟ್ ಗಳನ್ನು ವಿತರಿಸಲಿದ್ದಾರೆ ಮಳೆ ಬರ್ತಾ ಇದೆ.ಇಂದು ಬೆಳಗಾವಿ ನಗರದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸುವ …

Read More »

ನಾಳೆ ಮಂಗಳವಾರವೂ, ಶಾಲೆಗಳಿಗೆ ರಜೆ ಘೋಷಣೆ

ಬೆಳಗಾವಿ, – ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಬೆಳಗಾವಿ, ಕಿತ್ತೂರು, ಬೈಲಹೊಂಗಲ, ಸವದತ್ತಿ ರಾಮದುರ್ಗ, ಹುಕ್ಕೇರಿ, ಚಿಕ್ಕೋಡಿ ಹಾಗೂ ಖಾನಾಪುರ ತಾಲ್ಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ನಾಳೆ ಮಂಗಳವಾರವೂ(ಆ.19) ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶಿಸಿದ್ದಾರೆ. ವಿಪರೀತ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸೋಮವಾರ ಶಾಲೆಗಳಿಗೆ ರಜೆ ಘೋಷಿಸಿದ್ದರು ಸೋಮವಾರವೂ ಮಳೆಯ ಅರ್ಭಟ ನಿರಂತರಾಗಿದ್ದು ನಾಳೆ ಮಂಗಳವಾರವೂ ಶಾಲೆಗಳಿಗೆ ರಜೆ ನೀಡಲಾಗಿದೆ ಬೆಳಗಾವಿ, ಬೈಲಹೊಂಗಲ, ಕಿತ್ತೂರ, …

Read More »

ಹುದಲಿ ಗ್ರಾಮದಲ್ಲಿ, ಮನೆ ಮುಂದೆ ಕೂಗು ಹಾಕಿದ್ದಕ್ಕೆ ಚಾಕು ಇರಿತ

ಬೆಳಗಾವಿ-ಮನೆ ಮುಂದೆ ಕೂಗು ಹಾಕಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ಬೆಳಗಾವಿಯ ಮಾರಿಹಾಳ ಠಾಣಾ ವ್ಯಾಪ್ತಿಯ ಹುದಲಿ ಗ್ರಾಮದಲ್ಲಿ ನಡೆದಿದೆ. ಮುತ್ತಣ್ಣ ಗುಡಬಲಿ(22) ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ.ನಿನ್ನೆ ಸ್ನೇಹಿತನ ಬರ್ತಡೆ ಮುಗಿಸಿಕೊಂಡು ಮನೆಗೆ ವಾಪಾಸ್ ಆಗ್ತಿದ್ದ ಮುತ್ತಣ್ಣ.ಬೈಕ್ ಮೇಲೆ ತೆರಳುವಾಗ ಆರೋಪಿಗಳ ಮನೆ ಮುಂದೆ ಕೂಗು ಹಾಕಿದ್ದ ಕಾರಣ ಇದೇ ವಿಚಾರ ವಿವಾದವಾಗಿದೆ.ಈ ವೇಳೆ ಹದಿನೈದು ಜನರು ಕೂಡಿಕೊಂಡು ರಾತ್ರಿ ಹಲ್ಲೆ ಮಾಡಿದ್ದಾರೆ,ಇಂದು ಬೆಳಗ್ಗೆ ಮತ್ತೆ ನಾಲ್ವರು ಮನೆಗೆ …

Read More »

ಪೈಲಟ್ ಸಮಯ ಪ್ರಜ್ಞೆಯಿಂದ ಉಳಿಯಿತು 48ಜನರ ಪ್ರಾಣ

ಬೆಳಗಾವಿ-ಪೈಲಟ್ ಸಮಯ ಪ್ರಜ್ಞೆಯಿಂದ 48ಜನ ಪ್ರಯಾಣಿಕರ ಪ್ರಾಣ ಉಳಿದಿದೆ. ಬೆಳಗಾವಿಯಿಂದ ಮುಂಬೈಗೆ ಹೊರಟ್ಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಎದುರಾಗಿ, ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣ್ತಿದ್ದಂತೆ ಹದಿನೈದೇ ನಿಮಿಷದಲ್ಲಿ ಪೈಲೇಟ್ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಲ್ಯಾಂಡಿಂಗ್ ಮಾಡಿದ ಘಟನೆ ನಡೆದಿದೆ. ಮಧ್ಯಾಹ್ನ 2.30ಕ್ಕೆ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಿದ ಸ್ಟಾರ್ ಏರ್ ಕಂಪನಿ ಪ್ರಯಾಣಿಕರನ್ನು ಮುಂಬಯಿ ಗೆ ರವಾನಿಸಿದೆ. ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿರುವ ವಿಮಾನದ,ಇಂಜಿನ್ ನಲ್ಲಿ ತಾಂತ್ರಿಕ ದೋಷ …

Read More »

ಶಾಕೀಂಗ್ ನ್ಯೂಸ್, ಸತೀಶ್ ಮನೆಯ ಮೇಲೆ ED ದಾಳಿ

ಕಾರವಾರ: ಶಾಸಕ ಸತೀಶ್‌ ಸೈಲ್‌ ನಿವಾಸದ ಮೇಲೆ ಬುಧವಾರ ಜಾರಿ ನಿರ್ದೇಶಾನಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಕಾರವಾರದ, ಸದಾಶಿವಘಡದಲ್ಲಿರುವ ಅವರ ನಿವಾಸದ ಬುಧವಾರ ಮುಂಜಾನೆ ಏಕಾಏಕಿ ದಾಳಿ ನಡೆಸಲಾಗಿದೆ. ಪರಶೀಲನೆ ಕಾರ್ಯಾಚರಣೆ ಮುಂದುವರೆದಿದೆ. ಶಾಸಕ ಸತೀಶ್‌ ಸೈಲ್‌ ಅವರ ನಿವಾಸದಲ್ಲಿ ದಾಖಲೆ ಮತ್ತು ಕಾಗದ ಪತ್ರಗಳ ಪರಿಶೀಲನೆ ನಡೆಸಲಾಗುತ್ತಿದೆ. ಅಕ್ರಮ ಹಣ ವರ್ಗಾವಣೆ ಹಾಗೂ ತೆರಿಗೆ ವಂಚನೆ ಆರೋಪದಡಿಯಲ್ಲಿ ಜಾರಿ ನಿರ್ದೇಶಾನಲಯ ಈ ದಾಳಿ ನಡೆಸಿದೆಯೆನ್ನಲಾಗಿದೆ. ಇದುವರೆಗೂ ಜಾರಿ ನಿರ್ದೇಶಾನಲಯದ ಅಧಿಕಾರಿಗಳು …

Read More »

ಬೆಳಗಾವಿಯ ಮರಾಠಾ ರೆಜ್ಮೆಂಟ್ ಗೆ ,1934ರ ಪೋರ್ಡ್ ಮಾಡೆಲ್ ಕಾರು ಹಸ್ತಾಂತರ

ಡಾ.ಪ್ರಭಾಕರ ಕೋರೆಯವರಿಂದ ಎಂಎಲ್‌ಐಆರ್‌ಸಿಗೆ 1934ರ ಪೋರ್ಡ್ ಮಾಡೆಲ್ ಕಾರು ಹಸ್ತಾಂತರ ಬೆಳಗಾವಿ-ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ತಮ್ಮ ಮನೆಯಲ್ಲಿದ್ದ 1934 ಮಾಡೆಲ್ ಪೋರ್ಡ್ ಸಲೂನ್ ಕಾರನ್ನು ಬೆಳಗಾವಿ ಮರಾಠಾ ಲೈಟ್ ಇನ್ಫಾö್ಯಂಟ್ರಿ ರೆಜಿಮೆಂಟಲ್ ಸೆಂಟರ್ (ಎಂಎಲ್‌ಐಆರ್‌ಸಿ)ಗೆ ಇತ್ತೀಚಿಗೆ ಹಸ್ತಾಂತರಿಸಿದರು. ಆಕರ್ಷಕ ವಿನ್ಯಾಸ ಹೊಂದಿದ್ದ 1934ರ ಮಾಡೆಲ್ ಫೋರ್ಡ್ ಸಲೂನ್ ಕಾರ್ ಇಂಜಿನ್ ಕ್ಷಮತೆಯಿಂದ ಕೂಡಿ ಇಂದಿಗೂ ಕಾರ್ಯನಿರ್ವಹಿಸುತ್ತಿತ್ತು. ಕೋರೆಯವರ ಪ್ರೀತಿಯ ಪ್ರತೀಕವಾಗಿದ್ದ ಫೋರ್ಡ್ ಕಾರ್‌ನ್ನು ತಂದೆಯವರ ನೆನಪಿನ ಪ್ರತೀಕವಾಗಿ …

Read More »

ಇಂಡಿಗೋ ವಿಮಾನ ಎಂದಿನಂತೆ ದಿನನಿತ್ಯದ ಸಂಚಾರ

ಬೆಳಗಾವಿ-ರಾಷ್ಟ್ರ ರಾಜಧಾನಿ ಹಾಗೂ ರಾಜ್ಯ ರಾಜಧಾನಿಗೆ ಬೆಳಗಾವಿಯಿಂದ ದಿನನಿತ್ಯ ಹಾರಲಿದೆ ಇಂಡಿಗೋ ವಿಮಾನ : ಸಂಸದ  ಜಗದೀಶ ಶೆಟ್ಟರ ಹೇಳಿದ್ದಾರೆ. ಬೆಳಗಾವಿ: ಬೆಳಗಾವಿ – ದೆಹಲಿ ಮತ್ತು ಬೆಂಗಳೂರು – ಬೆಳಗಾವಿ ನಡುವೆ ಬರುವ 16 ಸೆಪ್ಟೆಂಬರ್ 2025 ರಂದು ಮತ್ತು 21 ಸೆಪ್ಟೆಂಬರ್ 2025 ರಂದು ಇಂಡಿಗೋ ವಿಮಾನ ಎಂದಿನಂತೆ ದಿನನಿತ್ಯದ ಸಂಚಾರ ಆರಂಭಿಸಲಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದರಾದ  ಜಗದೀಶ್ ಶೆಟ್ಟರ್ ಇವರು ತಿಳಿಸಿದ್ದಾರೆ. …

Read More »