Breaking News
Home / Breaking News (page 5)

Breaking News

ಇಲೆಕ್ಷನ್ ದಿನವೇ ಬೆಳಗ್ಗೆ ಇಬ್ಬರ ಹೆಸರು ಹೇಳ್ತೀವಿ….!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಉಪಮಹಾಪೌರರ ಚುನಾವಣೆ ಫೆಬ್ರುವರಿ 15 ರಂದು ನಡೆಯಲಿದ್ದು ಅದೇ ದಿನ ಬೆಳಗ್ಗೆ ಇಬ್ಬರ ಹೆಸರನ್ನು ಪ್ರಕಟಿಸುತ್ತೇವೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಇಂದು ಶುಕ್ರವಾರ ಬೆಳಗಾವಿ ಮಹಾನಗರ ಮಂಡಲದ ಬಿಜೆಪಿ ಅಧ್ಯಕ್ಷೆ ಗೀತಾ ಸುತಾರ್ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನೀಲ ಬೆನಕೆ ಅಭಯ ಪಾಟೀಲ ಅವರ ನೇತ್ರತ್ವದಲ್ಲಿ ಬಿಜೆಪಿ ನಗರಸೇವಕರ …

Read More »

ಫೆ.28 ರಿಂದ ಬೆಳವಡಿ ಮಲ್ಲಮ್ಮ ಉತ್ಸವ….

ಬೆಳವಡಿ ಉತ್ಸವ: ಪೂರ್ವಭಾವಿಸಭೆ ಬೆಳಗಾವಿ,-ಪ್ರತಿವರ್ಷದಂತೆ ಫೆ.28 ಹಾಗೂ 29 ರಂದು ವೀರವನಿತೆ ಬೆಳವಡಿ ಮಲ್ಲಮ್ಮ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಬೈಲಹೊಂಗಲ ಶಾಸಕರಾದ ಮಹಾಂತೇಶ್ ಕೌಜಲಗಿ ಹೇಳಿದರು. ಬೆಳವಡಿ ಗ್ರಾಮದ ಬೆಳವಡಿ ಮಲ್ಲಮ್ಮ ಸ್ಮಾರಕ ಭವನದಲ್ಲಿ ಶುಕ್ರವಾರ(ಫೆ.9) ನಡೆದ ಬೆಳವಡಿ ಮಲ್ಲಮ್ಮ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿ ಸಿಡಿಮದ್ದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಇದರೊಂದಿಗೆ ವಸ್ತುಪ್ರದರ್ಶನವನ್ನು ಆಯೋಜಿಸಲಾಗುವುದು. ಉತ್ಸವದ ಯಶಸ್ವಿಯಾಗಿ ಆಯೋಜಿಸಲು ಗ್ರಾಮದ …

Read More »

ಮತ್ತೆ ಮೂವರಿಗೆ ಭಾರತ ರತ್ನ ಘೋಷಿಸಿದ ಪ್ರಧಾನಿ

  ನವದೆಹಲಿ: ಕಳೆದ ವಾರವಷ್ಟೇ ಮಾಜಿ ಉಪ ಪ್ರಧಾನಿ, ಬಿಜೆಪಿ ಹಿರಿಯ ಧುರೀಣ ಎಲ್ ಕೆ ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ‘ಭಾರತ ರತ್ನ’ ಘೋಷಿಸಿದ್ದ ಕೇಂದ್ರ ಸರ್ಕಾರ ಶುಕ್ರವಾರ ಮೂವರಿಗೆ ಭಾರತ ರತ್ನ ಪ್ರದಾನ ಮಾಡುವುದಾಗಿ ಘೋಷಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನ ಮಂತ್ರಿಗಳಾದ ಪಿ ವಿ ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಹಾಗೂ ದೇಶದ …

Read More »

ಹೆಬ್ಬಾಳಕರ್…….ನಿಂಬಾಳ್ಕರ್……!!!

ಬೆಂಗಳೂರು- ಬರಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಗೃಹ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ತಯಾರಿ ಕುರಿತು ಸಭೆ ನಡೆಯಿತು. ಈ ಸಭೆಯಲ್ಲಿ, ಮಹಿಳಾ ವಿಭಾಗದಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಮಹಿಳೆಯರ ಸುರಕ್ಷತೆಗಾಗಿ ಹಾಗೂ ಅಭಿವೃದ್ಧಿಗಾಗಿ ಜಾರಿಗೊಳಿಸಬಹುದಾದ ಹೊಸ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷೆ ಪುಷ್ಪ ಅಮರನಾಥ್, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, …

Read More »

ಅವರು ದಾನ ಮಾಡಿದ್ದು 17 ಗುಂಟೆ, ಅದರ ಬೆಲೆ 5 ಕೋಟಿ….!!

*ಭೂ- ದಾನಿ ಮರೆಪ್ಪ ಅವರ ಕಾರ್ಯ ಶ್ಲಾಘನೀಯ- ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ* *ಮೂಡಲಗಿಯಲ್ಲಿ ಐದು ಕೋಟಿ ರೂಪಾಯಿ ವೆಚ್ಚದ ಚರ್ಚ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ* *ಚರ್ಚ್ ನಿರ್ಮಾಣಕ್ಕೆ ೧೭ ಗುಂಟೆ ನಿವೇಶನ ದಾನ ಮಾಡಿದ ಮರೆಪ್ಪ ಮರೆಪ್ಪಗೋಳ ದಂಪತಿ* ಮೂಡಲಗಿ- ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ಮೂಡಲಗಿಯಂತಹ ಪಟ್ಟಣ ಪ್ರದೇಶದಲ್ಲಿ ದುಡ್ಡು ನೀಡಿದರೂ ನಿವೇಶನಗಳು ಸಿಗದ ಇಂದಿನ ದಿನಗಳಲ್ಲಿ ಚರ್ಚ ನಿರ್ಮಾಣಕ್ಕೆ ೧೭ ಗುಂಟೆ …

Read More »

P I L ರಿಜೆಕ್ಟ್ ಬೆಳಗಾವಿಯ ಜೈ ಕಿಸಾನ್ ಮಾರುಕಟ್ಟೆಗೆ ಬಿಗ್ ರಿಲೀಫ್….!!

ಬೆಳಗಾವಿ- ಬೆಳಗಾವಿಯ ಜೈ ಕಿಸಾನ ಸಗಟು ತರಕಾರಿ ಮಾರುಕಟ್ಟೆ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ ತಿರಸ್ಕರಿಸಿದೆ. ಭಾರತೀಯ ಕೃಷಿ ಸಮಾಜ ( ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ಮತ್ತು ಇತರ ಐವರು ಕರ್ನಾಟಕ ಹೈಕೋರ್ಟನಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾಧಿಕಾರಿ, ಬೆಳಗಾವಿ ಮಹಾನಗರ ಪಾಲಿಕೆ, ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಹಾಗೂ ಕೃಷಿ ಇಲಾಖೆ ಜೈಕಿಸಾನ ಸಗಟು ಮಾರುಕಟ್ಟೆಗೆ ಅಕ್ರಮವಾಗಿ ಅನುಮತಿ ನೀಡಲಾಗಿದೆ ಎಂದು …

Read More »

ವರಿಷ್ಠರು ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ- ಸತೀಶ್ ಜಾರಕಿಹೊಳಿ

ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್‌ ಸನ್ನದ್ಧ- ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ- ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್‌ ಸನ್ನದ್ಧಗೊಂಡಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಲೋಕಸಭಾ ಚುನಾವಣೆ ಇನ್ನೇನು ಬಹಳ ಹತ್ತಿರದಲ್ಲಿದೆ. ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ಕಾರ್ಯಕರ್ತರೇ ನಮ್ಮ ಪಕ್ಷದ ಆಸ್ತಿ. ಕಾರ್ಯಕರ್ತರ ಮೇಲೆ ಬಹುದೊಡ್ಡ ಜವಾಬ್ದಾರಿಯಿದೆ. …

Read More »

ಎತ್ತಿನಗಾಡಿಗೆ ವಾಹನ ಡಿಕ್ಕಿ ರೈತಮಹಿಳೆಯ ಸಾವು…

ಬೆಳಗಾವಿ-ತರಕಾರಿ ‌ವಾಹನ- ಎತ್ತಿನ ಗಾಡಿ ‌ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ,ಎತ್ತಿನ ಬಂಡಿಗೆ ಭೀಕರವಾಗಿತರಕಾರಿ ವಾಹನ ಡಿಕ್ಕಿ ಹೊಡೆದ ಪರಿಣಾಮ,ಎತ್ತಿನ ಗಾಡಿಯಲ್ಲಿ ಹೊಲಕ್ಕೆ ಹೊರಟಿದ್ದ ರೈತ ಮಹಿಳೆ ಸ್ಥಳದಲ್ಲಿ ಸಾವನ್ನೊಪ್ಪಿದ್ದು ನಾಲ್ವರು ಗಾಯಗೊಂಡಿದ್ದಾರೆ. ಬೆಳಗಾವಿ ‌ಜಿಲ್ಲೆಯ ರಾಮದುರ್ಗ ‌ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಈ ‌ಘಟನೆ ನಡೆದಿದೆ.ರಾಮದುರ್ಗ ‌ತಾಲೂಕಿನ ಕಾಮನಕೊಪ್ಪ ಗ್ರಾಮದ ಯಮನವ್ವ ಮಡ್ಡಿ (42) ಮೃತ ರೈತ ಮಹಿಳೆ ಎಂದು ಗುರುತಿಸಲಾಗಿದೆ. ಸುರೇಶ ಮಡ್ಡಿ, ಅಡಿವೆಪ್ಪ ಜೀರಗಾಳ, ಮಂಜುಳಾ ಜೀರಗಾಳ, …

Read More »

ಬೆಳಗಾವಿ ಮೇಯರ್ ಇಲೆಕ್ಷನ್ ನಡೆಯುತ್ತಾ ಇಲ್ವಾ….??

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಅಧಿಕಾರದ ಅವಧಿ ಫೆಬ್ರುವರಿ 5 ಕ್ಕೆ ಮುಕ್ತಾಯಗೊಳ್ಳಲಿದ್ದು ಹೊಸ ಮೇಯರ್ ಆಯ್ಕೆಗೆ ಇನ್ನುವರೆಗೆ ಪ್ರಾದೇಶಿಕ ಆಯುಕ್ತರು ಚುನಾವಣೆಯ ದಿನಾಂಕವನ್ನು ಪ್ರಕಟಿಸಿಲ್ಲ,ಮೇಯರ್ ಇಲೆಕ್ಷನ್ ನಡೆಯುತ್ತಾ ಇಲ್ವಾ ಎನ್ನುವ ಅನುಮಾನ ಈಗ ಶುರುವಾಗಿದೆ. ಮೇಯರ್ ಚುನಾವಣೆಯ ದಿನಾಂಕವನ್ನು ಪ್ರಾದೇಶಿಕ ಆಯುಕ್ತರು ನಿರ್ಧರಿಸುತ್ತಾರೆ.ಚುನಾವಣಾ ಅಧಿಕಾರಿಯಾಗಿರುವ ಅವರು ಈವರೆಗೆ ಅಧಿಸೂಚನೆ ಹೊರಡಿಸಿಲ್ಲ ಇವತ್ತು ಅಥವಾ ನಾಳೆ ಅಧಿಸೂಚನೆ ಹೊರಡುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.ಫೆಬ್ರುವರಿ …

Read More »

ಬೆಳಗಾವಿ ಮಾರುಕಟ್ಟೆಗೆ ಮ್ಯಾಂಗೋ ಎಂಟ್ರಿ….!!

ಬೆಳಗಾವಿ-ಬೆಳಗಾವಿಯ ಮ್ಯಾಂಗೋ ನೆನಪು ಮಾಡಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ,ಪಕ್ಕದ ರತ್ನಾಗಿರಿ ಆಫುಸ್ ಮಾವು ಈಗ ಬೆಳಗಾವಿ ಮಾರುಕಟ್ಟೆಗೆ ಬಂದಿದೆ ಒಂದು ಡಝನ್ ಆಫುಸ್ ಬಾಕ್ಸ್ 7200 ₹ ಗೆ ಮಾರಾಟವಾಗಿದೆ. ಬೆಳಗಾವಿ ಫ್ರುಟ್ ಮಾರ್ಕೆಟ್ಟಿನ ಮಾವಿನ ಹಣ್ಣಿನ ಮಾರಾಟಗಾರ ದೇಸಾಯಿ ಹಾಗೂ ಅಕ್ಷಯ ಚವ್ಹಾಣ ಮತ್ತು ಅಬ್ದುಲ್ ಭಾಯಿ ಅವರ ಅಂಗಡಿಗಳಲ್ಲಿ ಆಪುಸು ಮಾವಿನ ಪರಿಮಳ ಘಮಘಮಿಸುತ್ತಿದೆ. ಮಾರುಕಟ್ಟೆಗೆ ಈಗ ಮಾವು ಬರೋದು ಶುರುವಾಗಿದೆ. ಬೆಳಗಾವಿ ಮಾರುಕಟ್ಟೆಗೆ ಬಂದಿರುವ …

Read More »