Breaking News

Breaking News

ಬೆಳಗಾವಿ: ಡೆಂಟಲ್ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಸಿಬ್ಬಂದಿ….

ಬೆಳಗಾವಿ-ಡೆಂಟಲ್ ಆಸ್ಪತ್ರೆಯಲ್ಲೇ ಅಲ್ಲಿನ‌ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ತೇರ್ ಬಜಾರ್ ‌ನಲ್ಲಿರುವ ಡೆಂಟಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.ರಾಮದುರ್ಗ ಪಟ್ಟಣದ ಬಡಕೋಟಿ ಗಲ್ಲಿಯ ನಿವಾಸಿ ಕಾಶಿನಾಥ ಪೇಟೆ (51) ಆತ್ಮಹತ್ಯೆಗೆ ಶರಣಾಗಿದ್ದಾನೆ.ರಾಮದುರ್ಗ ಪಟ್ಟಣದ ಶೀಲಾ ಡೆಂಟಲ್ ಕ್ಲಿನಿಕ್‌ನಲ್ಲಿ ಅಟೆಂಡರ್ ಆಗಿದ್ದ ಕಾಶಿನಾಥ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಡಾ. ಸಂಜೀವ್ ದಾಣಿ ಎಂಬುವವರಿಗೆ ಸೇರಿದ ಹಲ್ಲಿನ ಆಸ್ಪತ್ರೆ ಇದಾಗಿದೆ. …

Read More »

ಬೆಳಗಾವಿಗೆ ಬರ್ತೇವಿ,ಬೆಳಗಾವಿಯಲ್ಲೇ ಸಭೆ ಮಾಡ್ತೀವಿ ಎಂದ ಮಹಾರಾಷ್ಟ್ರದ ಮಂತ್ರಿಗಳು…!!!

ಬೆಳಗಾವಿ- ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಗಡಿವಿವಾದವನ್ಬು ರಾಜಕೀಯ ದಾಳವನ್ನಾಗಿ ಪ್ರಯೋಗಿಸಲು ಕುತಂತ್ರ ನಡೆಸಿದ್ದು,ಈಗ ಮತ್ತೊಂದು ಪುಂಡಾಟಿಕೆ ನಡೆಸಲು ಶಿವಸೇನೆಯ ಶಿಂಧೆ ಬನ ಮುಂದಾಗಿದೆ. ಅಧಿವೇಶನಕ್ಕೂ ಮೊದಲು ಬೆಳಗಾವಿಯಲ್ಲಿ ದೊಂಬಿ ಎಬ್ಬಿಸಲು ಶಿವಸೇನೆಯ ಶಿಂಧೆ ಬಣ ಮುಂದಾಗಿದೆ ಶಿವಸೇನೆ ಹಾಗೂ ಎಮ್.ಈ.ಎಸ್ ಜಂಟಿಯಾಗಿ,ಗಡಿ ವಿಚಾರವಾಗಿ ಬೆಳಗಾವಿಯಲ್ಲಿ ಸಭೆ ನಡೆಸಲು ಇಬ್ಬರು ಸಚಿವರು ಬೆಳಗಾವಿಗೆ ಬರ್ತಾ ಇದ್ದಾರೆ.ಡಿಸೆಂಬರ್ 3 ರಂದು ಬೆಳಗಾವಿಯಲ್ಲಿ ಸಭೆ ನಡೆಸುವುದಾಗಿ ಶಿವಸೇನೆ ಮಹಾ ಸರ್ಕಾರದ ಇಬ್ಬರು ಸಚಿವರು ಟ್ವೀಟ್ …

Read More »

ಬೆಳಗಾವಿ ಉತ್ತರ: ಆರಂಭದಲ್ಲಿ “ವಿನಯ” ಕೊನೆಯ ಕ್ಷಣದಲ್ಲಿ “ಕಿರಣ”…!!!

ಬೆಳಗಾವಿ- ಟಿಕೆಟ್ ಆಕಾಂಕ್ಷಿಗಳಿಂದ ಕಾಂಗ್ರೆಸ್ ಪಕ್ಚ ಅರ್ಜಿ ಅಹ್ವಾನಿಸಿ, ಎಲ್ಲ ಆಕಾಂಕ್ಷಿಗಳಿಂದ ಅರ್ಜಿಯ ಜೊತೆಗೆ ಎರಡು ಲಕ್ಷ ರೂ ದೇಣಿಗೆ ಪಡೆದಿದೆ. ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಕೊನೆಯ ಕ್ಷಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಬೆಳಗಾವಿ ಉತ್ತರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಆರಂಭದಲ್ಲಿ ಮಾಜಿ ಶಾಸಕ ಫಿರೋಜ್ ಸೇಠ, ರಾಜು ಸೇಠ,ಫೈಜಾನ್ ಸೇಠ,ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ,ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಹಾಶಮ್ ಭಾವಿಕಟ್ಟಿ,ನಗರ ಸೇವಕ ಅಜೀಂ ಪಟವೇಗಾರ,ಯುವ ಕಾರ್ಯಕರ್ತ ಸಿದ್ದೀಕ …

Read More »

ಮಹಾ ಪುಂಡರ ಕೃತ್ಯಕ್ಕೆ ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳ ತಿರುಗೇಟು…!!

ಬೆಳಗಾವಿಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಮುನ್ನೆಲೆ ಮತ್ತೇ ತಾರರಕ್ಕೇರಿದೆ. ಮಹಾರಾಷ್ಟ್ರ ಪುಂಡರ ವಿಕೃತಿಗೆ ಸಿಡಿಡೆದ್ದ ಕರವೇ ಕಾರ್ಯಕರ್ತರು ಇಂದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಸಿಎಂ, ಡಿಸಿಎಂ ಪ್ರತಿಕೃತಿ ಅಣಕು ಶವಾಯತ್ತೆ ಮಾಡಿ ಆಕ್ರೋಶ ಹೊರಹಾಕಿದರು. ಮಹಾನಾಯಕರ ವಿರುದ್ಧ ಕನ್ನಡ ಸಂಘಟನೆಗಳು ಆಕ್ರೋಶಗೊಂಡಿದ್ದೇಕೆ. ಈ ಸುದ್ದಿ ಓದಿ.. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಮುನ್ನೆಲೆಗೆ ಬರುತ್ತಿದ್ದಂತೆ ಉಭಯ ರಾಜ್ಯಗಳಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದಲ್ಲಿ ಸಂಚರಿಸುತ್ತಿದ್ದ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮತ್ತೆ ಸಾಹುಕಾರ್ ಮೀಟೀಂಗ್….!!

ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈಗಿನಿಂದಲೇ ತಯಾರಿ ನಡೆಸಿದ್ದು,ಹಿಂಡಲಗಾ ಗ್ರಾಮ ಪಂಚಾಯತಿ ಅದ್ಯಕ್ಷ ನಾಗೇಶ್ ಮನ್ನೋಳಕರ ಅವರನ್ಬು ಬೆಂಗಳೂರಿಗೆ ಕರೆದುಕೊಂಡು ಹೋಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿಸಿದ ಬೆನ್ನಲ್ಲಿಯೇ ಇಂದು ಗ್ರಾಮೀಣ ಕ್ಷೇತ್ರದ ಸಾಂಬ್ರಾದಲ್ಲಿ ಬಿಜೆಪಿ ನಾಯಕರ ಸಭೆ ನಡೆಸಿದ್ದಾರೆ‌. ಇಂದು ಬೆಳಗ್ಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮಕ್ಕೆ ಭೇಟಿ ನೀಡಿದ ರಮೇಶ್ ಜಾರಕಿಹೊಳಿ ಸುಳೆಭಾವಿ, ಸಾಂಬ್ರಾ,ಮಾರಿಹಾಳ,ಬಾಳೇಕುಂದ್ರಿ,ಮೋದಗಾ ಸೇರಿದಂತೆ …

Read More »

ಅದೇ ಜಾಗದಲ್ಲಿ ಮತ್ತೊಂದು ಅಪಘಾತ,ಬೆಳಗಾವಿ ಮೂಲದ ವ್ಯಕ್ತಿ ಸಾವು…!!

ದಾವಣಗೆರೆ, ನವೆಂಬರ್‌ 27: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಸಹೋದರ ರಮೇಶ್ ಪುತ್ರ ಚಂದ್ರಶೇಖರ್ ಸಾವಿ‌ನ ನಿಗೂಢತೆ ಇನ್ನೂ ಹೊರಬಂದಿಲ್ಲ. ಇದೇ ರೀತಿಯ ಮತ್ತೊಂದು ಘಟನೆ ಮರುಕಳಿಸಿದೆ. ಹೊನ್ನಾಳಿಯಲ್ಲಿ ಕಾರೊಂದು ಹಳ್ಳಕ್ಕೆ ಬಿದ್ದಿದ್ದು, ಚಂದ್ರಶೇಖರ್ ಪತ್ತೆಯಾದ ರೀತಿಯಲ್ಲಿ ವ್ಯಕ್ತಿ ಮೃತದೇಹ ಕಾರಿನ ಹಿಂಬದಿ ಸೀಟ್‌ನಲ್ಲಿ ಪತ್ತೆಯಾಗಿದೆ. ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ‌ ಬಳಿ‌ ಈ ಘಟನೆ ನಡೆದಿದೆ. ಅಪಘಾತದಲ್ಲಿ ಬೆಳಗಾವಿ ತಾಲೂಕಿನ ಬಸವನಕುಡುಚಿಯ ಪೊಲೀಸ್ ಠಾಣೆಯಲ್ಲಿ ಎಎಸ್ಐ …

Read More »

ಬೆಳಗಾವಿ ಗಡಿ ವಿವಾದ ನವ್ಹೆಂಬರ್ 30 ರಂದು ಅಂತಿಮ ವಿಚಾರಣೆ ಫಿಕ್ಸ್..

ಬೆಳಗಾವಿ-ಕಳೆದ ಆರು ದಶಕಕಗಳಿಂದ ಸಂಘರ್ಷಕ್ಕೆ ಕಾರಣವಾಗಿರುವ ಬೆಳಗಾವಿ ಗಡಿವಿವಾದದ ಕುರಿತು ಮಾನ್ಯ ಸುಪ್ರೀಂ ಕೋರ್ಟಿನಲ್ಲಿ ನವೆಂಬರ್ 30 ರಂದು ಅಂತಿಮ ವಿಚಾರಣೆಗೆ ದಿನಾಂಕ ಫಿಕ್ಸ್ ಆಗಿದೆ. ನವೆಂಬರ್ 30 ರಂದು ಸುಪ್ರೀಂ ಕೋರ್ಟಿನಲ್ಲಿ ಅಂತಿಮ ವಿಚಾರಣೆ ನಡೆಯಲಿದ್ದು ಕರ್ನಾಟಕದ ಪರವಾಗಿ ವಾದ ಮಂಡಿಸಲು ನುರಿತ,,ಕಾನೂನು ತಜ್ಞರ ಸಮೀತಿಯನ್ನು ರಚಿಸಲಾಗಿದೆ.ಈ ಸಮೀತಿಯಲ್ಲಿ ಮುಘುಲ್ ರೋಹಟಗಿ ಶ್ಯಾಮ ದಿವಾನ್ ಉದಯ ಹೊಳ್ಳ ಬೆಳಗಾವಿಯ ಎಂ ಬಿ ಝಿರಲಿ ಸೇರಿದಂತೆ ಅನೇಕ ಜನ ಕಾನೂನು …

Read More »

ಬೆಳಗಾವಿಯ ನಾಲ್ಕು ಜನ ಯುವತಿಯರು ನೀರು ಪಾಲು

ಬೆಳಗಾವಿ- ಬೆಳಗಾವಿಯಲ್ಲಿ ಘನಘೋರ ದುರಂತ ನಡೆದಿದೆ‌ *ಕಿತವಾಡ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರ ಸಾವುನೊಪ್ಪಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿ ಇರುವ ಕಿತವಾಡ ಫಾಲ್ಸ್ ನಲ್ಲಿ ಈ ದುರಂತ ನಡೆದಿದೆ. ಬೆಳಗಾವಿಯಿಂದ ಕಿತವಾಡ ಫಾಲ್ಸ್‌ಗೆ ಟ್ರಿಪ್‌ಗೆ ತೆರಳಿದ್ದ 40 ಯುವತಿಯರು. ಈ ವೇಳೆ ಸೆಲ್ಫಿ ಫೋಟೋ ತಗೆದುಕೊಳ್ಳುವ ವೇಳೆ ಕಾಲು ಜಾರಿ ಬಿದ್ದ ಐವರು ಯುವತಿಯರ ಪೈಕಿ, ಐವರು ಯುವತಿಯರ ಪೈಕಿ ನಾಲ್ವರು ಯುವತಿಯರು ನೀರು ಪಾಲಾಗಿದ್ದಾರೆ. ಓರ್ವಳ …

Read More »

ಕಿತ್ತೂರು ತಹಶೀಲ್ದಾರ್ ಲೋಕಾಯುಕ್ತರ ಬಲೆಗೆ: ಅರ್ಜಿದಾರನ ತಂದೆ ಹೃದಯಾಘಾತದಿಂದ ವಿಧಿವಶ….

ಬೆಳಗಾವಿ-ಕಿತ್ತೂರು ತಹಶಿಲ್ದಾರ ಮತ್ತು ಗುಮಾಸ್ತ ಲೋಕಾಯುಕ್ತ ಬಲೆಗೆ ವಿಚಾರವಾಗಿ,ಆರೋಪಿಗಳನ್ನು ಲೋಕಾಯುಕ್ತ ಸಿಬ್ಬಂಧಿಗಳು ಹಿಂಡಲಗಾ ಜೈಲಿಗೆ ಕರೆತಂದಿದ್ದಾರೆ. ಬೆಳಗಾವಿಯ ಬಿಮ್ಸ್ ನಲ್ಲಿ ಆರೋಗ್ಯ ತಪಾಸಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ.ಸೋಮವಾರದವರೆಗೂ ನ್ಯಾಯಾಂಗ ಬಂಧನ ನೀಡಿದ ನ್ಯಾಯಾಧೀಶರು,ಸೋಮವಾರ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸೂಚನೆ ನೀಡಿದ್ದಾರೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹಿಂಡಲಗಾ ಜೈಲಿಗೆ ಆರೋಪಿಗಳನ್ನು ಶಿಪ್ಟ್ ಮಾಡಲಾಗಿದೆ.ತಹಶಿಲ್ದಾರ ಸೋಮಲಿಂಗ ಹಾಲಗಿ, ಗುಮಾಸ್ತ ಪ್ರಸನ್ನ ಜಿ. ಹಿಂಡಲಗಾ ಜೈಲಿಗೆ ಶಿಪ್ಟ್ ಆಗಿದ್ದಾರೆ.10ಎಕರೆ ಜಮೀನಿನ …

Read More »

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಮೇಲೆ ಕಲ್ಲು ತೂರಾಟ..

  ಬೆಳಗಾವಿ-ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಬಸ್‌ ಮೇಲೆ ತೂರಿ ಮರಾಠಿ ಭಾಷಿಕ ಪುಂಡರು ಪುಂಡಾಟಿಕೆ ನಡೆಸಿದ್ದಾರೆ.ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ತಾರಕಕ್ಕೇರಿದ್ದು ಮಹಾರಾಷ್ಟ್ರದಲ್ಲಿ ಈ ವಿಚಾರದಲ್ಲಿ ಗೂಂಡಾಗಿರಿ ಶುರುವಾಗಿದೆ. ಮಿರಜ್ ಕಾಗವಾಡ‌ ಮಧ್ಯೆದ ಮಾರ್ಗದಲ್ಲಿ ಕರ್ನಾಟಕ ಬಸ್ ಗೆ ಕಲ್ಲು ತೂರಾಟ ನಡೆಸಿರುವ ಗೂಂಡಾಗಳು ಮತ್ತೆ ಪುಂಡಾಟಿಕೆ ನಡೆಸಿದ ದ್ದಾರೆ.ಪುನೆಯಿಂದ ಅಥಣಿ ಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್,ಕಳೆದ ರಾತ್ರಿ 10.30ರ ಸುಮಾರಿಗೆ ರನ್ನಿಂಗ್ ಅಲ್ಲಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ …

Read More »