Breaking News

Breaking News

ವಾಕಿಂಗ್ ಮಾಡುವ ಮಹಿಳೆಯರು ಟಾರ್ಗೆಟ್….!!

ಬೆಳಗಾವಿ- ಬೆಳಗಾವಿ ಜಿಕ್ಲೆಯ ಗೋಕಾಕ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಖತರ್ನಾಕ್ ಲೂಟಿಕೋರನನ್ನು ಗೋಕಾಕ್ ಪೋಲೀಸ್ರು ಬಂಧಿಸಿದ್ದಾರೆ. ಗೋಕಾಕಿನ ಕಡಬಗಟ್ಟಿ ಪ್ರದೇಶದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯ ಸುಮಾರು ಎರಡು ಲಕ್ಷ ರೂ ಮೌಲ್ಯದ ಮಂಗಳಸೂತ್ರ ದೋಚಿ ಪರಾರಿಯಾಗಿದ್ದ ದರೋಡೆಕೋರನನ್ನು ಪೋಲೀಸರು ಪತ್ತೆ ಮಾಡಿ ಆತನಿಂದ ಮಂಗಳಸೂತ್ರವನ್ನು ವಶಪಡಿಸಿಕೊಂಡಿದ್ದಾರೆ. ಬಸವರಾಜ್ ರಾಮಣ್ಣಾ ಕರೆಯಪ್ಪಗೋಳ್ ಎಂಬಾತನನ್ನು ಬಂಧಿಸಿರುವ ಪೋಲೀಸರು ಈತನಿಂದ ಮಂಗಳಸೂತ್ರ ಮತ್ತು ಲೂಟಿಗೆ ಬಳಿಸುತ್ತಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ. ಗೋಕಾಕಿನ …

Read More »

ಎರಡು ಕಾರ, ಟ್ರಕ್ ಹಾಗೂ 4 ಕ್ಕೂ ಹೆಚ್ಚು ಬೈಕ್ ಗಳ ಸರಣಿ ಅಪಘಾತ…

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸರಣಿ ಅಪಘಾತ ಸಂಭವಿಸಿದ್ದು ಓರ್ವ ವಾಹನ ಚಾಲಕ ಮೃತಪಟ್ಟಿದ್ದಾನೆ. ಎರಡು ಕಾರ, ಟ್ರಕ್ ಹಾಗೂ 4 ಕ್ಕೂ ಹೆಚ್ಚು ಬೈಕ್ ಗಳ ಸರಣಿ ಅಪಘಾತ ಸಂಭವಿಸಿದೆ.ಮೊಲ್ಯಾಸೀಸ್ ತುಂಬಿದ್ದ ಟ್ಯಾಂಕರ್ ನಿಂದ ಮೊಲ್ಯಾಸೀಸ್ ಸೋರಿಕೆ ಹಿನ್ನಲೆ ಸರಣಿ ಅಪಘಾತ ಸಂಭವಿಸಿದ್ದು ಈ ಸರಣಿ ಅಪಘಾತಕ್ಕೆ ಓರ್ವ ಬಲಿಯಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿ ಘಟನೆ ನಡೆದಿದೆ.ಹೆದ್ದಾರಿಯಲ್ಲಿ ಮೊಲ್ಯಾಸೀಸ್ ಸೋರಿಕೆ ಹಿನ್ನಲೆ ವಾಹನಗಳು …

Read More »

ಬ್ರೇಕ್ ಫೇಲ್ ಆಯ್ತು,ಪ್ರಾವೇಟ್ ಬಸ್ಸ್ ಬಿಲ್ಡಿಂಗ್ ಒಳಗೆ ನುಗ್ಗಿತು…!!

ಬೆಳಗಾವಿ- ಬೆಳಗಾವಿ ನಗರ ಪೋಲೀಸ್ ಆಯುಕ್ತರ ಕಚೇರಿ ಕಡೆಯಿಂದ ಆರ್ ಟಿ ಓ ಸರ್ಕಲ್ ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸು ಬ್ರೇಕ್ ಫೇಲ್ ಆಗಿ ನಿಂಬಾಳ್ಕರ್ ಬಿಲ್ಡಿಂಗ್ ಒಳಗೆ ನುಗ್ಗಿದ ಘಟನೆ ನಡೆದಿದೆ. ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸರ್ಕಲ್ ( RTO circle) ನಲ್ಲಿರುವ ಪೋಲೀಸ್ ಇಲಾಖೆಯ ಹೊಸ ಕಟ್ಟಡದಲ್ಲೇ ಈ ಬಸ್ಸು ನುಗ್ಗಿದ್ದು ಕಂಪೌಂಡು ಒಡೆದು ಒಳಗೆ ನುಗ್ಗಿದೆ.ಬಸ್ಸಿನಲ್ಲಿ ಪ್ಯಾಸೆಂಜರ್ ಇರಲಿಲ್ಲ ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. …

Read More »

ಗೆಳೆಯರ ಜೊತೆ ಈಜಲು ಹೋದ ಬಾಲಕ ಮರಳಿ ಬರಲಿಲ್ಲ….

ಬೆಳಗಾವಿ- ಗೆಳೆಯರ ಜೊತೆ ಈಜಲು ಹೋದ ಬಾಲಕ ನೀರು ಪಾಲಾದ ಘಟನೆ ಬೆಳಗಾವಿ ಮಹಾನಗರದ ಪಕ್ಕದಲ್ಲೇ ಇರುವ ಕೆ‌.ಕೆ ಕೊಪ್ಪ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಬೆಳಗಾವಿ ಪಕ್ಕದ ಕೆ.ಕೆ ಕೊಪ್ಪ ಗ್ರಾಮದಲ್ಲಿರುವ ಧರ್ಮಪೂರ ಹದ್ದಿಯಲ್ಲಿರುವ ಕಲ್ಲಿನ ಕ್ವಾರಿಯ ಹೊಂಡದಲ್ಲಿ ಗೆಳೆಯರ ಜೊತೆ ಈಜಲು ಹೋಗಿದ್ದ 14 ವರ್ಷದ ಬಾಲಕ ಈಜಲು ಬಾರದೇ ನೀರು ಪಾಲಾಗಿದ್ದಾನೆ. ಮೂಲತಹ ಉಡಪಿಯ 14 ವರ್ಷದ ವಾಹೀಲ ದಾದಾಪೀರ ದೇಸಾಯಿ ಎಂಬ ಬಾಲಕ ತನ್ನ …

Read More »

ಬೆಳಗಾವಿಯ ಸುವರ್ಣಸೌಧದಲ್ಲಿ ಈ ವರ್ಷವೇ ಚೆನ್ನಮ್ಮ, ರಾಯಣ್ಣನ ಪ್ರತಿಮೆ: ಬೊಮ್ಮಾಯಿ

ಬೆಂಗಳೂರು, ಅಕ್ಟೋಬರ್ 02: ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದೇ ವರ್ಷ ಬೆಳಗಾವಿ ಸುವರ್ಣಸೌಧದಲ್ಲಿ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಳಗಾವಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಕಿತ್ತೂರು ಉತ್ಸವದ ಪೂರ್ವಭಾವಿಯಾಗಿ ಸಮಾರಂಭ ಆಯೋಜಿಸಲಾಗಿತ್ತು. ಅದರಲ್ಲಿ ‘ಕಿತ್ತೂರು ಚೆನ್ನಮ್ಮಾಜಿ …

Read More »

ಬೆಳಗಾವಿಯ ಹಿಂಡಲಗಾ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಕೈದಿ….

ಬೆಳಗಾವಿ-ಬೆಳಗಾವಿಯ ಹಿಡಲಗಾ ಜೈಲಿನಲ್ಲಿ ವಿಚಾರಣಾದೀನ ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಜೈಲಿನ ಕ್ವಾರಂಟೈನ್ ಕೊಠಡಿಯಲ್ಲಿ ಕೈದಿ ನೇಣಿಗೆ ಶರಣಾಗಿದ್ದಾನೆ.ಬಚ್ಚನಕೇರಿ ಗ್ರಾಮದ ಮಂಜುನಾಥ ನಾಯ್ಕರ (20) ಆತ್ಮಹತ್ಯೆ ಮಾಡಿಕೊಂಡ‌ ಕೈದಿಯಾಗಿದ್ದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದವನಾಗಿದ್ದಾನೆ. 3ತಿಂಗಳ ಹಿಂದೆ ಪೋಕ್ಸೊ ಪ್ರಕರಣದಲ್ಲಿ ಹಿಡಲಗಾ ಜೈಲು ಸೇರಿದ್ದ ಆರೋಪಿ.ಕ್ವಾರಂಟೈನ್ ಕೊಠಡಿಯಲ್ಲಿ ಬೆಡ್‌ಶೀಟ್ ನಿಂದ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ವಯಸ್ಸು ಚಿಕ್ಕದು, ಆದ್ರೆ, ಮನಸ್ಸು ದೊಡ್ಡದು…!!!

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಾಮ್ರಾಜ್ಯ ಇರೋದು ಒಂದೇ ಆದ್ರೆ ಈ ಸಾಮ್ರಾಜ್ಯದಲ್ಲಿ ಅನೇಕ ಜನ ಸಾಮ್ರಾಟರಿದ್ದಾರೆ, ಈ ಎಲ್ಲ ಸಾಮ್ರಾಟರನ್ನು, ಜಿಲ್ಲೆಯ ಜನ ಪ್ರೀತಿಯಿಂದ ಸಣ್ಣ ಸಾಹುಕಾರ್ ದೊಡ್ಡ ಸಾಹುಕಾರ್ ಅಂತಾ ಕರೀತಾರೆ,ಈ ಸಾಮ್ರಾಜ್ಯದ ಎರಡನೇಯ ಪೀಳಿಗೆ ಈಗ ಸಮಾಜ ಸೇವಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದೆ. ರಾಜಕೀಯ ಕ್ಷೇತ್ರದ ಮಾಸ್ಟರ್ ಮೈಂಡ್ ಎಂದೇ ಕರೆಯಲ್ಪಡುವ ಸತೀಶ್ ಜಾರಕಿಹೊಳಿ ಅವರ ಸುಪುತ್ರ ರಾಹುಲ್ ಜಾರಕಿಹೊಳಿ ಅವರು ಚಿಕ್ಕ ವಯಸ್ಸಿನಲ್ಲಿ ವರ್ಚಸ್ಸು ಗಳಿಸಿಕೊಂಡಿದ್ದಾರೆ.ಅಕ್ಟೋಬರ್ …

Read More »

ಬೆಳಗಾವಿ ಜಿಲ್ಲೆಯಲ್ಲಿ ಮನೆ ಕುಸಿದು,ತಾಯಿ ಮಗು ಸಾವು…..

  ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರಿ ಮಳೆ.ಮಳೆಯಿಂದ ಮನೆಗೋಡೆ ಕುಸಿದು ತಾಯಿ ಮಗು ಸಾವನ್ನೊಪ್ಪಿದ ಘಟನೆ,ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮಾಡಮಗೇರಿ ಗ್ರಾಮದಲ್ಲಿ ನಡೆದಿದೆ. ಯಲ್ಲವ್ವಾ ಬಾಗಿಲದ(40), ಮಗ ಪ್ರಜ್ವಲ್ ಬಾಗಿಲದ(5)ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದು ಯರಗಟ್ಟಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.ನಿರಂತರ ಮಳೆಯಿಂದಾಗಿ ಮಣ್ಣಿನ ಗೋಡೆಯಲ್ಲಿ ನೀರಿಳಿದು ಗೋಡೆ ಕುಸಿದು ಈ ಘಟನೆ ನಡೆದಿದೆ.ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬೆಡ್ ಸಮೇತ ಅಜ್ಜಿಯನ್ನು ರಜಿಸ್ಟರ್ ಕಚೇರಿಗೆ ತಂದ್ರು…!!

ಬೆಳಗಾವಿ-ಮಾನವೀಯತೆ ಅನ್ನೋದು ಸತ್ತು ಹೋಗಿದೆ.ಅಧಿಕಾರಿಗಳಿಗೆ ದುಡ್ಡು ಕೊಡದಿದ್ರೆ ಯಾವದಕ್ಕೂ ಅನಕೂಲ ಮಾಡಿ ಕೊಡುವುದಿಲ್ಲ ಅನ್ನೋದು ಬೆಳಗಾವಿಯ ದಕ್ಷಿಣ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸಾಭೀತಾಗಿದೆ. ದಕ್ಷಿಣ ಸಬ್ ರಿಜಿಸ್ಟರ್ ಕಚೇರಿಯ ನೋಂದಣಿ ಅಧಿಕಾರಿ,ಪದ್ಮನಾಭನ್ ಗುಡಿ ಅವರ ಕಚೇರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 80 ವರ್ಷದ ಅಜ್ಜಿಯನ್ನು ಬೆಡ್ ಸಮೇತ ಕರೆತಂದು ಆಸ್ತಿ ಹಂಚಿಕೆ ಹಕ್ಕುಪತ್ರಕ್ಕೆ ಹೆಬ್ಬಟ್ಟು ಒತ್ತಿಸಿದ ಅಮಾನವೀಯ ಘಟನೆ ನಡೆದಿದೆ. 80 ವರ್ಷದ ಅಜ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,ನಾವು ವೈದ್ಯರ …

Read More »

ಕಿತ್ತೂರು ಉತ್ಸವಕ್ಕೆ ಎರಡು ಕೋಟಿ,ಬೆಂಗಳೂರಿಗೆ ಜ್ಯೋತಿ….!!

ಬೆಳಗಾವಿ, ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ಈ ಬಾರಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಆಚರಿಸಲಾಗುತ್ತಿದ್ದು, ಸರಕಾರ ಎರಡು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿರುತ್ತದೆ. ಉತ್ಸವದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸಲಿರುವ ವೀರಜ್ಯೋತಿಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ.2 ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಮಹಾಂತೇಶ್ ದೊಡ್ಡಗೌಡ್ರ ತಿಳಿಸಿದರು. ಚೆನ್ನಮ್ಮನ ಕಿತ್ತೂರಿನ ವೀರಭದ್ರೇಶ್ವರ ಕಲ್ಯಾಣಮಂಟಪದಲ್ಲಿ ಶುಕ್ರವಾರ (ಸೆ.30) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ …

Read More »