ಬೆಳಗಾವಿ-ಬಣ್ಣದಾಟದ ದಿನವೇ ಉಪ ಚುನಾವಣೆಯ ಖರೇ ಖರೇ ಆಟ ಈಗ ಶುರುವಾಗಿದ್ದು,ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಸತೀಶ್ ಜಾರಕಿಹೊಳಿ ಅವರು ಇಂದು ನಾಮಪತ್ರ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ,ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್,ಎಂಬಿ ಪಾಟೀಲ,ಆರ್ ವ್ಗಿ ದೇಶಪಾಂಡೆ,ಸೇರಿದಂತೆ ಇತರ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಸತೀಶ್ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸಿದರು. ಬಣ್ಣದ ಹಬ್ಬದ ದಿನವೇ ಸತೀಶ್ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸಿದ್ದು ವಿಶೇಷ,ಜೊತೆಗೆ ಸತೀಶ್ …
Read More »ಪ್ರಲ್ಹಾದ್ ಜೋಶಿ ಸೈಡ್ ಆ್ಯಕ್ಟರ್,ಸಿದ್ರಾಮಯ್ಯ ಲೇವಡಿ
ಬೆಳಗಾವಿ-ಮೋದಿ ಸರ್ಕಾರದಲ್ಲಿ ಏನು .ನಡೆಯುತ್ತಿದೆ,ಬೆಲೆ ಏರಿಕೆಯಿಂದ ಜನರಿಗೆ ಎಷ್ಟು ತೊಂದರೆ ಆಗಿದೆ,ಯಾವುದು ಬಸ್ ಸ್ಟ್ಯಾಂಡ್ ಆಗಿದೆ ಪಾಪ ಪ್ರಲ್ಹಾದ್ ಜೋಶಿ ಅವರಿಗೆ ಗೊತ್ತಿಲ್ಲ,ಮೋದಿ ಸರ್ಕಾರದಲ್ಲಿ ಜೋಶಿ ಒಬ್ನ ಸೈಡ್ ಆ್ಯಕ್ಟರ್ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಲೇವಡಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಯಡಿಯೂರಪ್ಪ ಸರಕಾರ ಹೇಡಿ ಸರಕಾರ ಎಂದು ಕಿಡಿಕಾರಿದ ಸಿದ್ದರಾಮಯ್ಯ,ಬೆಳಗಾವಿ ಚುಣಾವಣೆ ನೂರಕ್ಕೆ ನೂರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೆ ಎಂದರು. ಕೇಂದ್ರದ ಮೋದಿ …
Read More »ವಿಘ್ನೇಶ್ವರನ ಆಶಿರ್ವಾದ ಪಡೆದ ಡಿಕೆಶಿ- ಲಕ್ಷ್ಮೀ
ಬೆಳಗಾವಿ-ಬೆಳಗಾವಿಯ ಹಿಂಡಲಗಾ ಗಣಪತಿ ಮಂದಿರಕ್ಕೆ ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿ ವಿಘ್ನೇಶ್ವರನ ಆಶಿರ್ವಾದ ಪಡೆದರು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಹಲವಾರುಜನ ಕಾಂಗ್ರೆಸ್ ಮುಖಂಡರು ಡಿಕೆ ಶಿವಕುಮಾರ್ ಅವರ ಜೊತೆ ಶ್ರೀಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂಧರ್ಬದಲ್ಲಿ ಮಾದ್ಯಮಗಳ ಮಾತನಾಡಿದ ಡಿಕೆಶಿ,ಎಲ್ಲ ವಿಘ್ನಗಳನ್ನು ನಿವಾರಣೆ ಮಾಡುವ ದೇವರು ವಿನಾಯಕ ರಾಜ್ಯ, ರಾಷ್ಟ್ರದಲ್ಲಿ ವಿಘ್ನ ನಿವಾರಣೆಯಾಗಲಿ ಅಂತಾ ಪೂಜೆ ಮಾಡಿದ್ದೇವೆ ನಮ್ಮ ಅಭ್ಯರ್ಥಿ ಗೆಲ್ಲಲಿ ಅಂತಾ …
Read More »ಬೈ ಇಲೆಕ್ಷನ್,, ಚೆಕ್ ಪೋಸ್ಟ್ ಚೆಕ್..ಚೆಕ್..ಚೆಕ್…!!
ಬೆಳಗಾವಿ-: ಲೋಕಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಪಾಲನೆಗೆ ವಿವಿಧ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ನಿಯೋಜಿಸಲಾಗಿರುವ ತಂಡಗಳ ಮುಖ್ಯಸ್ಥರು ಹಾಗೂ ಸೆಕ್ಟರ್ ಅಧಿಕಾರಿಗಳ ಜತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಸಮಾಲೋಚನೆ ನಡೆಸಿದರು. ಭಾನುವಾರ (ಮಾ.28) ಗೋಕಾಕ, ಅರಭಾಂವಿ, ರಾಮದುರ್ಗ, ಸವದತ್ತಿ ಮತ್ತು ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಂಡಗಳ ಜತೆ ಪ್ರತ್ಯೇಕವಾಗಿ ಸಮಾಲೋಚನಾ ಸಭೆಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, …
Read More »ಡಿಕೆಶಿಗೆ ಕಾಂಗ್ರೆಸ್ಸಿನಿಂದ ಸುಸ್ವಾಗತ,ಜಾರಕಿಹೊಳಿ ಅಭಿಮಾನಿಗಳಿಂದ ಕಪ್ಪು ಬಾವುಟ….
ಬೆಳಗಾವಿ- ನಿಗದಿತ ಪ್ರವಾಸ ಪಟ್ಟಿಯಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇವತ್ತು ಮದ್ಯಾಹ್ನ 3 ಗಂಟೆಗೆ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಆಗಮಿಸಿದರು ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ನೂರಾರು ಜನ ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿಯನ್ನು ಅದ್ದೂರಿಯಾಗಿ ಸ್ವಾಗತಿಸಿದರು ಮಾದ್ಯಮಗಳ ಜೊತೆ ಮಾತನಾಡಿದ ಬಳಿಕ ಡಿಕೆ ಶಿವಕುಮಾರ್ ಬೆಳಗಾವಿ ನಗರಕ್ಕೆ ಪ್ರಯಾಣ ಬೆಳೆಸಿದರು,ಸಾಂಬ್ರಾ ವಿಮಾನ ನಿಲ್ಧಾಣದ ಬಯಲಿನಲ್ಲಿ ಸಮಾವೇಶಗೊಂಡಿದ್ದ ರಮೇಶ್ ಜಾರಕಿಹೊಳಿ ಅಭಿಮಾನಿಗಳು ಡಿಕೆಶಿ ಅವರ ಕಾರು …
Read More »ಕಾಂಗ್ರೆಸ್ಸಿಗೆ ನೋ ಸ್ಟ್ಯಾಂಡ್ ಅದು ಬಸ್ ಸ್ಟ್ಯಾಂಡ್
ಬೆಳಗಾವಿ-ಕಾಂಗ್ರೆಸ್ಸಿಗೆ ಸ್ಟ್ಯಾಂಡ್ ಅದು ಬಸ್ ಸ್ಟ್ಯಾಂಡ್ ಆಗಿದೆ.ಅಲ್ಲಿ ಯಾರೋ ಹೊಕ್ತಾರೆ,ಬಸ್ಸಿನ ಜೊತೆ ಟಿಂಪೋಗಳು ಹೊಕ್ತಾವೆ,ಎಂದು ಬೆಳಗಾವಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದ್ದಾರೆ. ರಾಜ್ಯದಲ್ಲಿ ನಡೆಯುವ ಮೂರು ಉಪಚುನಾವಣೆ ಬಿಜೆಪಿ ಐತಿಹಾಸಿಕ ಗೆಲವು ಸಾಧಿಸುತ್ತದೆ. ಬೆಳಾಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ದಾಖಲೆ ಗೆಲವು ಸಾಧಿಸಲಿದ್ದಾರೆ ಎಂದು ಜೋಶಿ ಭವಿಷ್ಯ ನುಡಿದರು. ಬೆಳಗಾವಿ ಉಪಚುನಾವಣೆಯಲ್ಲಿ ದೇಶದಲ್ಲಿ ನರೇಂದ್ರ ಮೋದಿ ಅಭಿವೃದ್ಧಿ ಕೆಲಸ.ಸುರೇಶ್ ಅಂಗಡಿ ಅಭಿವೃದ್ಧಿ ಕೆಲಸ …
Read More »ಭಾರತ ಮಾತೆಯನ್ನೇ ಮಾರಾಟಕ್ಕಿಟ್ಟು ಭಾರತ್ ಮಾತಾಕೀ ಜೈ ಅಂದ್ರೆ ಹೇಗೆ..??
ಬೆಳಗಾವಿ-ಮಾರ್ಚ್ 31ರಂದು ಬೆಳಗಾವಿಯಲ್ಲಿ ರೈತ ಮಹಾ ಪಂಚಾಯತ್ ಸಮಾವೇಶ ನಡೆಯಲಿದ್ದು ಈ ಸಮಾವೇಶದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ರೈತರು ಸಮಾವೇಶ ಗೊಳ್ಳುತ್ತಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ ಬೆಳಗಾವಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು,ಕೇಂದ್ರ ಸರ್ಕಾರದ ವಿರುದ್ಶ ಆಕ್ರೋಶ ವ್ಯೆಕ್ತಪಡಿಸಿದರು ರೈತ ಮುಖಂಡ ಕೆ.ಟಿ.ಗಂಗಾಧರ ಮಾತನಾಡಿ ಭಾರತದ ಭೂಮಿಯೇ ಭಾರತ ಮಾತೆ,ಮೋದಿ ಸರ್ಕಾರ ಭಾರತ ಮಾತೆಯನ್ನೇ ಮಾರಾಟಕ್ಕಿಟ್ಟು ಭಾರತ್ ಮಾತಾಕೀ ಜೈ ಅಂದ್ರೆ ಹೇಗೆ? ಎಂದು ಬೆಳಗಾವಿಯಲ್ಲಿ ರೈತ …
Read More »ಬಿಜೆಪಿಯಲ್ಲಿ ಸರ್ವ ಮಂಗಳ,ಇವತ್ತಿನಿಂದ ಶ್ರೀ ಗಣೇಶ….!!!
ಬೆಳಗಾವಿ-ದಿ ಸುರೇಶ್ ಅಂಗಡಿ ಅವರ ಕುಟುಂಬಕ್ಕೆ ಅದೃಷ್ಠದ ಬಾಗಿಲು ತೆರೆದಿದೆ,ನಿನ್ನೆ ರಾತ್ರಿ ಬಿಜೆಪಿ ಹೈಕಮಾಂಡ್ ಸುರೇಶ್ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ,ಅವರ ಹೆಸರು ಘೋಷಣೆ ಮಾಡುತ್ತಿದ್ದಂತೆ ಮಂಗಲಾ ಅಂಗಡಿ ಇವತ್ತು ಬೆಳ್ಳಂ ಬೆಳಿಗ್ಗೆ ಫೀಲ್ಡ್ ಗೆ ಇಳಿದಿದ್ದಾರೆ. ಮಂಗಲಾ ಅಂಗಡಿ,ಪುತ್ರಿ ಶ್ರದ್ಧಾ, ಮತ್ತು ಡಾ. ಸ್ಪೂರ್ತಿ ಸೇರಿದಂತೆ ಕುಟುಂಬಸ್ಥರು ಇವತ್ತು ಬೆಳಿಗ್ಗೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿರುವ ಶ್ರೀ ಗಣೇಶ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಅಖಾಡಕ್ಕೆ …
Read More »ಬಿಜೆಪಿ ಅಭ್ಯರ್ಥಿಯಾಗಿ ಮಂಗಳಾ ಅಂಗಡಿ ಫೈನಲ್
ಬೆಳಗಾವಿ- ಕೊನೆಗೂ ಸುರೇಶ್ ಅಂಗಡಿ ಕುಟುಂಬಕ್ಕೆ ಅದೃಷ್ಠ ಒಲಿದು ಬಂದಿದ್ದು,ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಬಿಜೆಪಿ ಹೈಕಮಾಂಡ್ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯನ್ನಾಗಿ ಮಂಗಳಾ ಅಂಗಡಿ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
Read More »ಕಾಂಗ್ರೆಸ್ ಅಭ್ಯರ್ಥಿಯಾಗಿ ಜಾರಕಿಹೊಳಿ ಫೈನಲ್
ಬೆಂಗಳೂರು: ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಮಾ.29 (ಸೋಮವಾರ) ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ನಾಮಪತ್ರ ಸಲ್ಲಿಕೆ ವೇಳೆ ಸತೀಶ ಅವರೊಂದಿಗೆ ಹಾಜರಿರಲಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಹ ನಾಮಪತ್ರ ಸಲ್ಲಿಕೆ ವೇಳೆ ಭಾಗವಹಿಸುವ ಸಾಧ್ಯತೆ ಇದೆ.
Read More »