Breaking News

Breaking News

ಕೋವೀಡ್ ನಿಯಂತ್ರಿಸಲು ಬೆಳಗಾವಿ ಡಿಸಿ ರೌಂಡ್ಸ್….

ಬೆಳಗಾವಿ, : ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲೆಯ ಪ್ರತಿ ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿಕೊಂಡು ಕೋವಿಡ್-೧೯ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಸೂಚನೆ ನೀಡಿದ್ದಾರೆ. ಕೋವಿಡ್-೧೯ ಮಾರ್ಗಸೂಚಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬೈಲಹೊಂಗಲ, ಕಿತ್ತೂರು ಹಾಗೂ ಖಾನಾಪುರ ತಾಲ್ಲೂಕುಗಳಿಗೆ ಮಂಗಳವಾರ ಭೇಟಿ ನೀಡಿ ಅಧಿಕಾರಿಗಳ ಜತೆ ಅವರು ಸಭೆ ನಡೆಸಿದರು. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ …

Read More »

ಕೊರಾನಾ ಕುರಿತು ಸಾಹುಕಾರ್ ಸ್ಪೇಶಲ್ ಕೇರ್…!!!!

ಯಮಕನಮರಡಿ : ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಇಂದು ಭೇಟಿ ನೀಡಿ, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪರಿಶೀಲಿಸಿದರು. ರಾಜ್ಯ ಹಾಗೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಪ್ರತಿ ದಿನ ಹೆಚ್ಚಳವಾಗುತ್ತಿದೆ. ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ವೈದ್ಯರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಜ್ಯದ ಹಲವು ಕಡೆಗಳಲ್ಲಿ …

Read More »

ಯಾರಿಗೆ ಲಾಭ…ಯಾರಿಗೆ ನಷ್ಟ ಅಂತಾ ಹೇಳೋದು ಕಷ್ಟ….!!!!

ಬೆಳಗಾವಿ- ಬೆಳಗಾವಿ ಬೈ ಇಲೆಕ್ಷನ್ ಮತದಾನ ಮಗಿದಿದೆ.ಈಗ ಗೆಲುವಿನ ಲೆಕ್ಕಾಚಾರ ಶುರುವಾಗಿದೆ.ಎಲ್ಲಿ ಯಾರಿಗೆ ಲೀಡ್ ಶಿಕ್ಕಿದೆ,ಯಾವ ಸಮುದಾಯ ಯಾರ ಕೈ ಹಿಡಿದಿದೆ,ಯಾರು,ಯಾರಿಗೆ ಕೈ ಕೊಟ್ಟಿದ್ದಾರೆ,ಯಾರಿಂದ ಯಾರಿಗೆ ಲಾಭ ? ಯಾರಿಗೆ ನಷ್ಟ ಎನ್ನುವ ಗಂಭೀರ ಚರ್ಚೆ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಈಗ ಸಾಮಾನ್ಯವಾಗಿದೆ. ಗೆಲುವಿನ ಕುರಿತು ಕಾಂಗ್ರೆಸ್ಸಿನ ಬೆಂಬಲಿಗರು,ಹಿತೈಶಿಗಳು,ಮತ್ತು ಕಾರ್ಯಕರ್ತರ ಒಂದು ಸರಳ ಲೆಕ್ಕಾಚಾರ,ಅದೇನಂದ್ರೆ  ಎಂಈಎಸ್ ನ ಶುಭಂ ಶಿಳಕೆ ಒಂದು ಲಕ್ಷ ಕ್ಕೂ ಹೆಚ್ವು ಮತಗಳನ್ನು ಪಡೆಯುತ್ತಾನೆ.ಬಿಜೆಪಿ ಮತಗಳು …

Read More »

45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದುಕೊಳ್ಳಬೇಕು: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮನವಿ

ಬೆಳಗಾವಿ, ಏ.18(ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ನಗರದ ವಂಟಮುರಿ ಕಾಲನಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ (ಏ.18) ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡರು. ಇದಕ್ಕೂ ಎಂಟು ವಾರಗಳ ಮುಂಚೆ  ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಅನ್ನು‌‌ ಅವರು ಪಡೆದುಕೊಂಡಿದ್ದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು, ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ; ಆದ್ದರಿಂದ ಸರ್ಕಾರದ ಮಾರ್ಗಸೂಚಿ ಪ್ರಕಾರ …

Read More »

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 54.02 ರಷ್ಟು ಮತದಾನ

ಬೆಳಗಾವಿ- ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಒಟ್ಟು 54.02 ರಷ್ಟು ಮತದಾನವಾಗಿದ್ದು,ಗೋಕಾಕಿನಲ್ಲಿ ಅತೀ ಹೆಚ್ಚು 60.47 ರಷ್ಡು ಮತದಾನವಾಗಿದೆ. ಬೆಳಿಗ್ಗೆಯಿಂದ ಸಂಜೆ 5 ಗಂಟೆಯವರೆಗೆ ನಿಧಾನಗತಿಯಲ್ಲಿ ಮತದಾನವಾಗಿತ್ತು ಸಂಜೆ 5 ರ ನಂತರ ಬಿರುಸಿನ ಮತದಾನವಾಗಿದೆ. ಬೆಳಗಾವಿ ಲೋಕದಭಾ ಮತಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ ಈ ಎಂಟು ವಿಧಾನಸಭಾ ಮತಕ್ಷೇತ್ರದಲ್ಲಿ ಮತದಾನ ಎಷ್ಟಾಗಿದೆ ವಿವರ ಇಲ್ಲಿದೆ ನೋಡಿ ಬೆಳಗಾವಿ ಗ್ರಾಮೀಣ-58.36% ಬೆಳಗಾವಿ ಉತ್ತರ-42/88% ಬೆಳಗಾವಿ ದಕ್ಷಿಣ-44.84 ಬೈಲಹೊಂಗಲ 58 …

Read More »

ಇವತ್ತು ನಡೆದಿದ್ದು ಹೊಸ ಆಟ…ಖತ್ತಲ್ ರಾತ್ರಿಗೂ ಕೊರೋನಾ ಕಾಟ…!!!

ಬೆಳಗಾವಿ- ನಾಳೆ ಮತದಾನ ಅಂದ್ರೆ ಇವತ್ತಿನ ರಾತ್ರಿ ಖತ್ತಲ್ ರಾತ್ರಿ,ಆದ್ರೆ ಈ ಬೈ ಇಲೆಕ್ಷನ್ ನ ಖತ್ತಲ್ ರಾತ್ರಿಯ ಮಹೂರ್ತ ಸರಿಯಾಗಿಲ್ಲ ಯಾಕಂದ್ರೆ ಈ ರಾತ್ರಿಗೂ ಕೊರೋನಾ ಕಾಟ ಅಪ್ಪಳಿಸಿದ್ದರಿಂದ ಬಹಳಷ್ಟು ಜನ ಕಂಗಾಲು ಆಗಬೇಕಾದ ಪರಿಸ್ಥಿತಿ ಎದುರಾಯಿತು. ಕೆಲವರು ಇವತ್ತು ಬೆಳಿಗ್ಗೆಯಿಂದಲೇ ಯಾರ ಹತ್ತಿರ ಹೋಗಬೇಕು,ಎಷ್ಟು ವಸೂಲಿ ಮಾಡಬೇಕು ಅಂತ ಪ್ಲ್ಯಾನ್ ಮಾಡಿಕೊಂಡಿದ್ದರು,ಆದ್ರೆ ಸಂಜೆಯಾಗುತ್ತಲೇ ಬಹಳಷ್ಟು ಜನರಿಗೆ ಕೊರೋನಾ ಸೊಂಕು ತಗಲಿದೆ ಅಂತಾ ಟ್ವೀಟ್ ಗಳು ಬರುತ್ತಿದ್ದಂತೆಯೇ ಖತ್ತಲ್ …

Read More »

ಬೆಳಗಾವಿ ಸುತ್ತಾಡಿದ ಸಿಎಂ ಯಡಿಯೂರಪ್ಪ ಗೆ ಕೊರೊನಾ ಪಾಸಿಟೀವ್

ಬೆಳಗಾವಿ : ಕಳೆದ ಒಂದು ವಾರಗಳ ಕಾಲ ಬೆಳಗಾವಿಯಲ್ಲಿ ವಾತ್ಸವ್ಯ ಮಾಡಿ ಲೋಕಸಭಾ ಉಪ ಚುನಾವಣೆ ಹಿನ್ನಲೆಯ,ಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದ ಸಿಎಂ ಬಿಎಸ್ ವೈ ಅವರಿಗೆ ಕೊರೊನಾ ಸೋಂಕು ದೃಡಪಟ್ಟಿದೆ. ನಿನ್ನೆ ಸಂಜೆಯಷ್ಟೆ ಬೆಳಗಾವಿಯಿಂದ ಬೆಂಗಳೂರಿಗೆ ತೆರಳಿದ್ದ ಸಿಎಂ ಇಂದು ಬೆಳಿಗ್ಗೆ ಎಮ್ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕೊವಿಡ್ ತಪಾಸಣೆ ಮಾಡಿಸಿದ ಸಂದರ್ಭದಲ್ಲಿ ಅವರಿಗೆ ಸೋಂಕು ದೃಢವಾಗಿದ್ದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಎರಡು ದಿನಗಳಿಂದ …

Read More »

ಇಂದು ಬೆಳಗಾವಿಯಲ್ಲಿ ಕೊರೋನಾ ಸ್ಪೋಟ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಸೊಂಕಿನ ಎರಡನೇಯ ಅಲೆ ಅಪ್ಪಳಿಸಿದೆ ಇವತ್ತು ಒಂದೇ ದಿನ ಬೆಳಗಾವಿ ಜಿಲ್ಲೆಯಲ್ಲಿ 135 ಜನರಿಗೆ ಸೊಂಕು ದೃಡವಾಗಿದೆ. ಬೆಳಗಾವಿ ತಾಲ್ಲೂಕಿನಲ್ಲಿ ಅತೀ ಹೆಚ್ವು 103 ಜನ ಸೊಂಕಿತರು ಪತ್ತೆಯಾಗಿದ್ದು ಇವತ್ತು ಯಾವ ತಾಲ್ಲೂಕಿನಲ್ಲಿ ಎಷ್ಟು ಜನ ಸೊಂಕಿತರು ಪತ್ತೆಯಾಗಿದ್ದಾರೆ ಮಾಹಿತಿ ಇಲ್ಲಿದೆ ನೋಡಿ Athani 3 Belagavi 103 Bailhongal 2 Chikkodi 3 Gokak 3 Hukkeri 2 Khanapur 3 …

Read More »

ಪ್ರತಿಯೊಬ್ಬ ಮತದಾರರಿಗೆ ಮಾಸ್ಕ ಕಡ್ಡಾಯ

ಬೆಳಗಾವಿ, – ಮತದಾನ ಸಮಯದಲ್ಲಿ ಕೋವಿಡ್ ನಿಯಮ ಪಾಲನೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತಿ ಮತಗಟ್ಟೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಕಡ್ಡಾಯವಾಗಿ ನೇಮಕ ಮಾಡಲಾಗಿದೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಕೆ. ಹೆಚ್. ಜಗದೀಶ್ ಅವರು ತಿಳಿಸಿದರು. ಮಹಾನಗರ ಪಾಲಿಕೆಯ ಸಹಾಯಕ               ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಗುರುವಾರ (ಏ.15) ನಡೆದ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಪೂರ್ವ …

Read More »

ಮಕ್ಕಳನ್ನು ಚುನಾವಣೆ ಪ್ರಚಾರಕ್ಕೆ ಬಳಸಿದ ಎಂಇಎಸ್ ಬೆಂಬಲಿತ ಅಭ್ಯರ್ಥಿ

ಬೆಳಗಾವಿ- ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಮಹಾರಾಷ್ಟ್ರ ಏಕೀಕರಣ  ಸಮಿತಿ ಅಸ್ತಿತ್ವ ಕಳೆದುಕೊಂಡಿದೆ. ಲೋಕಸಭೆ ಉಪಚುನಾವಣೆ ಮೂಲಕ ಮತ್ತೆ ಬೆಳಗಾವಿಯಲ್ಲಿ ಎಂಇಎಸ್ ಪ್ರಭಾವ ಜಾಸ್ತಿ ಮಾಡಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಎಂಇಎಸ್ ಅಭ್ಯರ್ಥಿ ಶುಭಂ ಶಿಳಕೆ ನಿಲ್ಲಿಸಲಾಗಿದೆ. ಶುಭಂ ಪರ ಪ್ರಚಾರಕ್ಕಾಗಿ ಚಿಕ್ಕ ಮಕ್ಕಳನ್ನು ಬಳಸುತ್ತಿದೆ. ಮಕ್ಕಳು ಸೈಕಲ್ ಮೇಲೆ ಬಾವುಟ ಹಿಡಿದು ಪ್ರಚಾರ ನಡೆಸುತ್ತಿದ್ದಾರೆ. ಎಂಇಎಸ್ ಅಂದ್ರೆ ಹಿಂದೂಸ್ತಾನ್ ಪಾರ್ಟಿ ಎಂದು ಮಕ್ಕಳ ತೆಲೆ …

Read More »