ಬೈಲವಾಡ ಗ್ರಾಮದಲ್ಲಿ ಜನರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಧ್ವನಿಯಾದರು,ಈ ಗ್ರಾಮದ ಯುವಕ ಡಿಸಿ ಹಿರೇಮಠ ಅವರನ್ನು ಭೇಟಿಯಾಗಿ,ತಂದೆ ಇಲ್ಲ ತಾಯಿಗೆ ಅನಾರೋಗ್ಯ,ನಾನು ಇರೋದು ಬಾಡಿಗೆ ಮನೆಯಲ್ಲಿ ನನಗೊಂದು ಆಶ್ರಯ ಮನೆ ಕೊಡಿ ಎಂದು ಗ್ರಾಮದ ಬಾಲಕನೊಬ್ಬ ಡಿಸಿಗೆ ಮನವಿ ಅರ್ಪಿಸಿ ಎಲ್ಲರ ಗಮನ ಸೆಳೆದಿದ್ದಾನೆ.ಇದೇ ಗ್ರಾಮದಲ್ಲಿ ವಾಸ್ತವ್ಯ ಮಾಡಲಿರುವ ಜಿಲ್ಲಾಧಿಕಾರಿಗಳು ಈ ಬಾಲಕನ ಸಮಸ್ಯೆಗೆ ಸ್ಪಂದನೆ ಮಾಡುತ್ತಾರೆಯೋ ಇಲ್ಲವೋ ಕಾದು ನೋಡೋಣ ಬೆಳಗಾವಿ,-ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ …
Read More »ಖಾಕಿ ರೇಡ್ ಬೆಳಗಾವಿಯಲ್ಲಿ ಅನ್ನಭಾಗ್ಯ ಅಕ್ಕಿ ವಶ
ಬೆಳಗಾವಿ ನಗರದ ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯ ಶೆರಿಗಲ್ಲಿಯಲ್ಲಿ ಸರ್ಕಾರ ವಿತರಿಸುವ ಪಡಿತರ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾಗ ರೇಡ್ ಮಾಡಿ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ.- 1, ಸುಹಾಸ ಸುರೇಶ್ ಪಿಳವಕರ, ಸಾ: ವಡಗಾಂವಿ, ಅನಂ-2 ಮಹಾದೇವ ಲಕ್ಷ್ಮಣ ಪಾಟೀಲ್, ಸಾ: ಧಾಮನೆ, ಹಾಗೂ ಆರೋಪಿ-3 ಅಹಮದ ಬಸೀರ ಅಹಮದ, ಸಾ: ವೀರಭದ್ರನಗರ, ಬೆಳಗಾವಿ ರವರನ್ನು ಬಂಧಿಸಲಾಗಿದೆ ಖಡೇಬಜಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ ದೀರಜ್ ಬಿ ಶಿಂಧೆ …
Read More »ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮಹಾ ಸರ್ಕಾರಕ್ಕೆ ಎಚ್ಚರಿಕೆ….
ಬೆಳಗಾವಿ,- ನಮ್ಮ ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿರುವ ಕನ್ನಡದ ನಾಡು ನುಡಿಯ ಬಗ್ಗೆ ಅಪಾರ ಅಭಿಮಾನ ಉಳ್ಳ ಮಹಾರಾಷ್ಟ್ರದ ಜತ್ತ, ಅಕ್ಕಲಕೋಟೆ ಹಾಗೂ ದಕ್ಷಿಣ ಸೊಲ್ಲಾಪುರದ ಗಡಿ ಭಾಗದಲ್ಲಿ ಅನ್ಯ ಭಾಷಿಕರ ಸಮೀಕ್ಷೆ ನಡೆಸಲು ಮಹಾರಾಷ್ಟ್ರ ಸರ್ಕಾರ ಗ್ರಾಮ ಪಂಚಾಯತಿಗಳಿಗೆ ಆದೇಶ ನೀಡಿದೆ ಎಂಬುದು ತುಂಬಾ ಅಸಂಗತ ಅಪ್ರಸ್ತುತ ಖಂಡನೀಯ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಇದನ್ನು ರಾಜ್ಯದ ಕನ್ನಡಿಗರೆಲ್ಲ ವಿರೋಧಿಸುತ್ತೇವೆ ಅಲ್ಲಿನ ಕನ್ನಡಿಗರನ್ನು ಮಹಾರಾಷ್ಟ್ರಸರ್ಕಾರ ಇಂತಹ ಸಮೀಕ್ಷೆ ಯ ಮೂಲಕ ಹೆದರಿಸುವ ಪ್ರಯತ್ನ ಮಾಡಬಾರದು ಎಂದು …
Read More »ಹಿಂಡಲಗಾ ಜೈಲಿಗೆ ಖಾಕಿ ಹಿಂಡು, ಸಿಕ್ಕಿದ್ದು ಒಂದೇ ತುಂಡು….!!!
ಬೆಳಗಾವಿ- ಹಿಂಡಲಗಾ ಜೈಲಿನಲ್ಲಿ ಇದ್ದುಕೊಂಡೇ ರೌಡಿಯೊಬ್ಬ ಫೋನ್ ಮಾಡಿ ಧಮಕಿ ಹಾಕಿದ ಬೆನ್ನಲ್ಲಿಯೇ ಬೆಳಗಾವಿ ಖಾಕಿ ಪಡೆ ಇಂದು ಸಂಜೆ ಹಿಂಡಲಗಾ ಜೈಲಿನ ಮೇಲೆ ಧಿಡೀರ್ ದಾಳಿ ಮಾಡಿ,ಸುಮಾರು ಐವತ್ತಕ್ಕೂ ಹೆಚ್ಚು ಪೋಲೀಸರು ಜೈಲಿನಲ್ಲಿ ಶೋಧ ಮಾಡಿದಾಗ ಸಿಕ್ಕಿದ್ದು ಒಂದೇ ಒಂದು ಮೋಬೈಲ್… ಯಾಕಂದ್ರೆ ಹಿಂಡಲಗಾ ಜೈಲಿನಲ್ಲಿದ್ದ ರೌಡಿಯೊಬ್ಬ ಫೋನ್ ಮಾಡಿದ್ದು ಹೇಗೆ,ಜೈಲಿನಲ್ಲಿ ಫೋನ್ ಬಂದಿದ್ದು ಎಲ್ಲಿಂದ ಎಂದು ಮಾದ್ಯಗಳು ಪ್ರಶ್ನೆ ಮಾಡಿದ ಹಿನ್ನಲೆಯಲ್ಲಿ ಹಿಂಡಲಗಾ ಜೈಲಿನ ಅಧಿಕಾರಿಗಳು ಎಚ್ಚೆತ್ತುಕೊಂಡು …
Read More »ಎಲ್ಲದಕ್ಕೂ ಸೈ…ಎಮ್ಮೆ, ಆಕಳು ಪ್ರದರ್ಶನಕ್ಕೂ ಜೈ….!!!
ಪಂಡರಪೂರ ತಳಿಯ ಎಮ್ಮೆ ಇದು……. ಬೆಳಗಾವಿ- ದಿನ ಬೆಳಗಾದ್ರೆ ಕೇವಲ ಅಭಿವೃದ್ಧಿಯ ಜಪ ಮಾಡ್ತಾರೆ,ಮಾತೆತ್ತದ್ರೆ ಐಟಿ,ಬಿಟಿ ಪಾರ್ಕ ಅಂತಾರೆ,ಯಾವಾಗ ನೋಡಿದಾಗ ಕೇವಲ ಡೆವಲಪ್ಮೆಂಟ್ ಬಗ್ಗೆಯೇ ಶಾಸಕ ಅಭಯ ಪಾಟೀಲ ಚಿಂತೆ ಮಾಡ್ತಾರೆ,ಎನ್ನುವ ಟಿಪ್ಪಣಿ ಇತ್ತು… ಆದ್ರೆ ಶಾಸಕ ಅಭಯ ಪಾಟೀಲ ಇವತ್ತು ವಿಭಿನ್ನವಾದ,ವಿಶೇಷವಾದ,ರೈತಪರವಾದ ಕಾರ್ಯಕ್ರಮವನ್ನು ಬೆಳಗಾವಿ ನಗರದಲ್ಲಿ ಹಮ್ಮಿಕೊಳ್ಳುವ ಮೂಲಕ ಅಭಯ ಪಾಟೀಲ ಎಲ್ಲದಕ್ಕೂ ಸೈ ಎಂದು ಸಾಭೀತು ಮಾಡಿದ್ದಾರೆ.. ಯಾಕಂದ್ರೆ ಇವತ್ತು ರಾಮಲಿಂಗೇಶ್ವರ ಭವನ,ಕಲ್ಮೇಶ್ವರ ಮಂದಿರದ ಆವರಣ,ಹಳೆಯ ಬೆಳಗಾವಿಯಲ್ಲಿ …
Read More »ಇಪ್ಪತ್ತು ಲಕ್ಷ ರೂ ಮೌಲ್ಯದ ಆಫೀಮು ಜಪ್ತು ಮೂವರ ಅರೆಸ್ಟ್….
ಬೆಳಗಾವಿ-ಗಾಂಜಾ,ಮಟಕಾ,ಜೂಜಾಟದ ವಿರುದ್ಧ ಸಮರವನ್ನೇ ಸಾರಿರುವ ಬೆಳಗಾವಿ ಪೋಲೀಸರು ಇಂದು ಮತ್ತೊಂದು ಮಹತ್ವದ ದಾಳಿ ಮಾಡುವ ಮೂಲಕ ಅಪಾರ ಪ್ರಮಾಣದ ಆಫೀಮು ವಶಪಡಿಸಿಕೊಂಡಿದ್ದಾರೆ ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ ಬೆಳಗಾವಿಯಲ್ಲಿ ನಿರಂತರವಾಗಿ ಮಟಕಾ ಜೂಜಾಟ,ಮತ್ತು ಗಾಂಜಾ ಮಾರಾಟದ ಅಡ್ಡೆಗಳ ಮೇಲೆ ದಾಳಿ ನಡೆಯುತ್ತಿದೆ. ಇವತ್ತು ಸೈಬರ್ ಕ್ರೈಂ ವಿಭಾಗದ ಪೋಲೀಸರು ದಾಳಿ ಮಾಡಿ ಒಂದು ಕೆ.ಜಿಗೂ ಹೆಚ್ಚು ಆಫೀಮು ಜಪ್ತು ಮಾಡಿದ್ದು ಇದರ ಮೌಲ್ಯ ಅಂದಾಜು ಇಪ್ಪತ್ತು ಲಕ್ಷಕ್ಕೂ …
Read More »ಹತ್ತು ಗಂಟೆಗಳ ಕಾಲ ಆಪರೇಷನ್ ಮಾಡಿ ತುಂಡಾದ ಕೈ ಜೋಡಿಸಿದರು…
ಬೆಳಗಾವಿ- ಬಸ್ಸಿನಲ್ಲಿ ಸಂಚರಿಸುವಾಗ ಕಿಟಕಿಯಿಂದ ಕೈ ಹೊರಗೆ ಪರಿಣಾಮ ತುಂಡಾಗಿ ಹೋಗಿದ್ದ ಐದು ವರ್ಷದ ಬಾಲಕಿಯ ಕೈಯನ್ನು ಹತ್ತು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮರುಜೋಡಣೆ ಮಾಡುವಲ್ಲಿ ಬೆಳಗಾವಿಯ ವಿಜಯಾ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. 12/06/2019 ರಂದು ಕುಮಾರಿ ಆಯಾ ಶೇಖ ಎಂಬ ಐದು ವರ್ಷದ ಚಿಕ್ಕ ಹುಡುಗಿ ಬಸ್ಸಿನಲ್ಲಿ ಸಂಚರಿಸುತ್ತಿರುವಾಗ ಮಳೆಯ ನೀರನ್ನು ಹಿಡಿಯಲೆಂದು ಕಿಟಕಿಯಿಂದ ಬಲ ಕೈಯನ್ನು ಹೊರಚಾಚಿದಾಗ, ಎದುರಗಡೆಯಿಂದ ಬರುತ್ತಿರುವ ಇನ್ನೊಂದು ವಾಹನಕ್ಕೆ ಈ …
Read More »ಬೆಳಗಾವಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಓರ್ವನ ಸಾವು…
ಬೆಳಗಾವಿ-ಇಂದು ಸಂಜೆ ಹೊತ್ತು ಗುಡುಗು ಮಿಂಚಿನ ಮಳೆ ಸುರಿಯುತ್ತಿರುವಾಗ ಸಿಡಿಲು ಬಡಿದು ಓರ್ವನು ಸಾವನ್ನೊಪ್ಪಿದ ಘಟನೆ ಖಾನಾಪೂರ ತಾಲ್ಲೂಕಿನ ನೀಡಗಲ್ ಗ್ರಾಮದಲ್ಲಿ ನಡೆದಿದೆ. ಜೋಯಿಡಾ ಗ್ರಾಮದ 20 ವರ್ಷದ ಗುರುನಾಥ್ ನಾರ್ವೇಕರ್ ಇಂದು ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ ಈತ ಮೂಲತಹ ಜೋಯಿಡಾ ಗ್ರಾಮದವನಾಗಿದ್ದು, ಕುಟುಂಬ ಸಮೇತ ಖಾನಾಪೂರ ತಾಲ್ಲೂಕಿನ ನೀಡಗಲ್ ಇಟ್ಟಂಗಿ ತಯಾರಿಕಾ ಘಟಕದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಇಂದು ಸಂಜೆ ಮಳೆ ಶುರುವಾದ ಸಂಧರ್ಭದಲ್ಲಿ ಇಟ್ಟಂಗಿ ರಾಶಿಯ …
Read More »ಮಳೆಯಲ್ಲಿ ದರ್ಶನ ಪಡೆದ ಸಾವಿರಾರು ಭಕ್ತರು
ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಗುರುವಾರ ಸುರಿದ ಧಾರಾಕಾರ ಮಳೆ ನಡುವೆಯ ಭಕ್ತರು ಸರದಿ ಸಾಲಿನಲ್ಲಿ ನಿಂತು ಯಲ್ಲಮ್ಮ ದೇವಿ ದರ್ಶನ ಆಶೀರ್ವಾದ ಪಡೆದುಕೊಂಡರು. ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಇತ್ತು. ಯಲ್ಲಮ್ಮ ದೇವಿ ದರ್ಶನಕ್ಕೆ ದೇಶದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಸಂಜೆ ಏಕಾಏಕಿ ಮಳೆ ಶುರುವಾಯಿತು. ಆದರೂ, ಭಕ್ತರು ಸ್ಥಳಬಿಟ್ಟು ಕದಲದೆ, ಮಳೆಯಲ್ಲಿ ನೆನೆಯುತ್ತಲೇ ಭಕ್ತರು ದೇವಿ ದರ್ಶನ ಪಡೆದಿದ್ದು ವಿಶೇಷವಾಗಿತ್ತು.ಮಳೆಯಿಂದಾಗಿ ವ್ಯಾಪಾರಸ್ಥರು ಪರದಾಡುವಂತಾಯಿತು.
Read More »ಕುಂದಾನಗರಿ.,..ಥಂಡಾ..ಥಂಡಾ..ಕೂಲ್..ಕೂಲ್….!!
ಬೆಳಗಾವಿ- ಇಂದು ಮಧ್ಯಾಹ್ನ ಎರಡು ಘಂಟೆಗೆ ಬೆಳಗಾವಿಯಲ್ಲಿ ಏಕಾ ಏಕಿ,ಗುಡುಗು ಸಿಡಿಲಿನ ಜೊತೆಗೆ ಮಳೆ ಶುರುವಾಯಿತು,ವಾತಾವರಣ ತಂಪಾಗುವದರ ಜೊತೆಗೆ ತಂಗಾಳಿ ಬೀಸಿತು ಸುಮಾರು ಮೂರು ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿಯಿತು. ಬೆಳಗಾವಿಯಲ್ಲಿಂದು ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಅಬ್ಬರದ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನತೆಗೆ ಮಳೆ ತಂಪೇರೆದಿದೆ. ಮಳೆ ಜೊತೆಗೆ ತಂಗಾಳಿಯೂ ಬಿಸತೊಡಗಿದ್ದರಿಂದ ಇಡೀ ನಗರದಲ್ಲಿ ತಂಪಿನ ವಾತಾವರಣ ಸೃಷ್ಟಿಯಾಗಿದೆ. ಬಿಸಿಲಿನ ನಡುವೆಯೇ ಮಧ್ಯಾಹ್ನ …
Read More »