ಅವರೇನು ಸತ್ಯ ಹರಿಶ್ಚಂದ್ರ ಅಲ್ಲ, ಆಸ್ತಿ ಸಾಮ್ರಾಜ್ಯದಂತೆ ವಿಸ್ತರಿಸಿದೆ ಏಲಿಂದ ಬಂತು: ತಿವಿದ ಜೋಶಿ ಬೆಳಗಾವಿ: ಅಕ್ರಮ ಆಸ್ತಿ ವಿವಾದದ ಪ್ರಕರಣ ಇನ್ನೂ ಕೊರ್ಟ್ ನಲ್ಲಿದೆ ಅದಕ್ಕಾಗಿ ಸಿಬಿಐ ದಾಳಿ ನಡೆಸಿದ್ದಾರೆ. ರಾಜಕೀಯಕ್ಕೆ ಬರುವ ಮೊದಲು ಡಿಕೆಶಿ ಆಸ್ತಿ ಎಷ್ಟಿತ್ತು ಸ್ಪಷ್ಟಪಡಿಸಲಿ , ಅಧಿಕಾರಕ್ಕೆ ಬಂದ್ ಬಳಿಕ ಆಸ್ತಿ ಸಾಮ್ರಾಜ್ಯದಂತೆ ವಿಸ್ತರಿಸಿದೆ ಏಲಿ ಬಂತು ಎಂದು ಸ್ಪಷ್ಟವಾಗಿ ಹೇಳಲಿ ಅವರೇನು ಸತ್ಯ ಹರಿಶ್ಚಂದ್ರಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ …
Read More »ಡಿಕೆಶಿ ನನ್ನ ಹಳೆಯ ಮಿತ್ರ,ಕಾನೂನು ಹೋರಾಟದಲ್ಲಿ ಶುಭವಾಗಲಿ ಎಂದ ರಮೇಶ್ ಸಾಹುಕಾರ್
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನ ಹಳೆಯ ಗೆಳೆಯ. ಅವರು ಕಾನೂನು ಹೋರಾಟದಲ್ಲಿ ಗೆದ್ದು ಬರಲಿ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಶುಭಕೋರಿದ್ದಾರೆ. ಬೆಂಗಳೂರಿನಲ್ಲಿ ಮಾನತಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ ಮೇಲೆನ ಸಿಬಿಐ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ರಮೇಶ್ ಜಾರಕಿಹೊಳಿ ಶುಭ ಹಾರೈಸಿದ್ದಾರೆ. ವೈಯಕ್ತಿಕವಾಗಿ ಡಿಕೆ ಶಿವಕುಮಾರ್ …
Read More »ಡಿಸ್ಟರ್ಬ್ ಮಾಡಲು ದಾಳಿ ಮಾಡಿದ್ದಾರೆ-ಸತೀಶ್ ಜಾರಕಿಹೊಳಿ
ಬೆಳಗಾವಿ- ಇಂದು ಬೆಳಿಗ್ಗೆ ಕಾಂಗ್ರೆಸ್ ಅದ್ಯಕ್ಷ ಡಿಕೆ ಶಿವಕುಮಾರ್ ಅವರ ಮನೆಯ ಮೇಲೆ ನಡೆದಿರುವ ದಾಳಿ ಹೊಸದೇನಲ್ಲ ಇದು ಪೂರ್ವ ನಿಯೋಜಿತ,ನಮ್ಮನ್ನು ಡಿಸ್ಟರ್ಬ್ ಮಾಡಲು ದಾಳಿ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. ಈ ಕುರಿತು ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವ ಅವರು,ಕೇಂದ್ರ ಸರ್ಕಾರ ತನ್ನ ಅಂಗ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ,ಈ ಬಗ್ಗೆ ಸಾಕಷ್ಟು ಸಲ ನಾವು ಆರೋಪ ಮಾಡಿದ್ದೇವೆ,ಉಪ ಚುನಾವಣೆ ಸಂಧರ್ಭದಲ್ಲಿ ನಮಗೆ ತೊಂದರೆ …
Read More »ಯಾರನ್ನೂ ಯಾರೂ ಕಟ್ಟಿ ಹಾಕಕ್ಕಾಗಲ್ಲ,- ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ-ಸಿಬಿಐ ದಾಳಿ ಖಂಡಿತ ರಾಜಕೀಯ ಪ್ರೇರಿತ ರಾಜಕೀಯ ದುರುದ್ದೇಶದಿಂದ ಮಾಡಿದ್ದು ಎಂದು ಬೆಳಗಾವಿಯಲ್ಲಿ ಮಾದ್ಯಮಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ಉಪಚುನಾವಣೆ ನಡೀತಿದೆ ಈ ವೇಳೆ ದಾಳಿ ಮಾಡಿದ್ದಾರೆ, ಸಾರ್ವಜನಿಕವಾಗಿ ಡಿ.ಕೆ.ಶಿವಕುಮಾರ್ ಈ ಬಗ್ಗೆ ಹತ್ತು ಸಾರಿ ಹೇಳಿದ್ದಾರೆ, ವಿಶೇಷವಾಗಿ ಈ ವಿಚಾರವಾಗಿ ನನ್ನ ಜೊತೆ ಏಕೆ ಮಾತನಾಡುತ್ತಾರೆ?, ಪ್ರತಿಯೊಂದು ರಾಜ್ಯದಲ್ಲಿ ಯಾರು ಕಾಂಗ್ರೆಸ್ ಪರವಾಗಿದ್ದಾರೆ ಅವರ ವಿರುದ್ಧ ಈ ರೀತಿ ದಾಳಿ ಮಾಡ್ತಿದಾರೆ, ಅದನ್ನ ನನ್ನ ಬಾಯಿಂದ …
Read More »ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಮನೆಯ ಮೇಲೆ ಸಿ ಬಿ ಐ ದಾಳಿ
ಬೆಂಗಳೂರು- ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆಯ ಮೇಲೆ ಸಿಬಿಐ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ಮಾಡಿದ್ದಾರೆ, ಸದಾಶಿವ ನಗರದಲ್ಲಿ ಇರುವ ಡಿಕೆ ಶಿವಕುಮಾರ್ ಮನೆ,ಕನಕಪುರ ದಲ್ಲಿರುವ ಮನೆ,ಮತ್ತು ಡಿಕೆಶಿ ಸಹೋದರ ಡಿಕೆ ರವಿ ಅವರ ಮನೆಯ ಮೇಲೆ ದಾಳಿ ಮಾಡಿರುವ ಸಿಬಿಐ ಅಧಿಕಾರಿಗಳು ದಾಖಲೆಗಳನ್ನು ಪರಶೀಲನೆ ಮಾಡುತ್ತಿದ್ದಾರೆ
Read More »ಕಾಂಗ್ರೆಸ್ ನಲ್ಲಿ ಈಗ ಮೀಸೆ ಮಾವನೇ ಗಂಡು…..!!
ಬೆಳಗಾವಿ- ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಉಪ ಚುನಾವಣೆ ಘೋಷಣೆ ಆಗಿಲ್ಲ ಆದ್ರೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಆಕಾಂಕ್ಷಿಗಳ ಕಸರತ್ತು ಜೋರಾಗಿಯೇ ನಡೆದಿದೆ. ಬಿಜೆಪಿ ಪಾಳೆಯದಲ್ಲಿ ಅಗಣಿತ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ,ಆದ್ರೆ ಕಾಂಗ್ರೆಸ್ ನಲ್ಲಿ ಅಬ್ಯರ್ಥಿಗಳ ಹುಡುಕಾಟ ಶುರುವಾಗಿದೆ.ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ನಲ್ಲಿ ಪಾವರ್ ಫುಲ್ ಕ್ಯಾಂಡಿಡೇಟ್ ಯಾರಾಗಬಹುದು ಎನ್ನುವ ಚರ್ಚೆ ಜೋರಾಗಿಯೇ ನಡೆದಿದೆ,ಮಾಜಿ ಮಂತ್ರಿ,ಮಾಜಿ ಸಂಸದ ,ವರ್ಕರ್ ಮೀಸೆ ಮಾವ ಪ್ರಕಾಶ ಹುಕ್ಕೇರಿ ಅವರೇ ಪಾವರ್ ಫುಲ್ ಎನ್ನುವದು ಕಾಂಗ್ರೆಸ್ …
Read More »ಸೂಪರ್ ಕಾಪ್, ರ‌್ಯಾಂಬೋ ಡಾರ್ಲಿಂಗ್ ಹ್ಯಾಪಿ ಬರ್ತಡೇ……!!!
ಬೆಳಗಾವಿ-ಮೈಕಲ್ ಜಾಂಕ್ಷನ್ ಹಾಗೆ ಡ್ಯಾನ್ಸ್ ಮಾಡುವ,ಮೇಕಪ್ ಮಾಡ್ಕೊಂಡು ಪಬ್ ಸುತ್ತಾಡುವ ರ‌್ಯಾಂಬೋ ಡಾರ್ಲಿಂಗ್ ಇದಲ್ಲ , ವಾಸನೆ ಹಿಡಿದು ಕ್ರಿಮಿನಲ್ ಗಳನ್ನು ಪತ್ತೆ ಮಾಡುವ ರ‌್ಯಾಂಬೋ ಡಾರ್ಲಿಂಗ್ ಬೆಳಗಾವಿ ನಗರ ಪೋಲೀಸ್ ಇಲಾಖೆಯ ಶ್ವಾನ ದಳದಲ್ಲಿದೆ. ಬೆಳಗಾವಿ ಡಿಸಿಪಿ ವಿಕ್ರಮ್ ಅಮಟೆ ಇಂದು ಶ್ವಾನದಳದ ಅಧಿಕಾರಿಗಳ ಜೊತೆ,ಕೇಕ್ ಕತ್ತರಿಸಿ ರ‌್ಯಾಂಬೋ ಡಾರ್ಲಿಂಗ್ ಬರ್ತಡೇ ಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಿದ್ರು…. ರ‌್ಯಾಂಬೋ ಬರ್ತ್ ಡೇ ನಿಮಿತ್ಯ ಕೇಕ್ ಕತ್ತರಿಸಿ ಪ್ರೀತಿಯ ನಾಯಿ …
Read More »ಗೀತ ಸಾಹಿತಿ ಕೆ ಕಲ್ಯಾಣ ಕುಟುಂಬವನ್ನು ವಶೀಕರಣ ಮಾಡಿದ ಮಂತ್ರವಾದಿ
ಬೆಳಗಾವಿ- ಕರ್ನಾಟಕದ ಸುಪ್ರಸಿದ್ದ ಗೀತ ಸಾಹಿತಿ ಕೆ ಕಲ್ಯಾಣ ಅವರ ಮಡದಿ,ಅತ್ತೆ ಮತ್ತು ಮಾವ,ನನ್ನು ಮಂತ್ರವಾದಿಯೊಬ್ಬ ಕಿಡ್ನ್ಯಾಪ್ ಮಾಡಿದ್ದಾನೆಂದು ಆರೋಪಿಸಿ ಬೆಳಗಾವಿ ಮಾಳ ಮಾರುತಿ ಠಾಣೆಯಲ್ಲಿ ದೂರು ದಾಖಲಾಗಿದೆ ಬೀಳಗಿಯ ಮಂತ್ರವಾದಿ ಶಿವಾನಂದ ವಾಲಿ ಗೀತ ಸಾಹಿತಿ ಜೆ.ಕಲ್ಯಾಣ ಅವರ ಹೆಂಡತಿ,ಅತ್ತೆ ಮತ್ತು ಮಾವನನ್ನು ಕಿಡ್ನ್ಯಾಪ್ ಮಾಡಿ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು,ಬ್ಯಾಂಕ್ ಬ್ಯಾಲೇನ್ಸ್ ನ್ನು ಲಪಟಾಯಿಸಿದ್ದಾನೆ ಎಂದು ಕೆ.ಕಲ್ಯಾಣ ಅವರು ಮಂತ್ರವಾದಿ ಶಿವಾನಂದ ವಾಲಿ ವಿರುದ್ಧ ಬೆಳಗಾವಿಯ ಮಾಳ ಮಾರುತಿ …
Read More »ಚನ್ನಮ್ಮ ಯುನಿವರ್ಸಿಟಿ ಘಟಿಕೋತ್ಸವ ಸುವರ್ಣಸೌಧದಲ್ಲಿ
ಬೆಳಗಾವಿ,-ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸೋಮವಾರ(ಅ.5) ಸುವರ್ಣವಿಧಾನಸೌಧದಲ್ಲಿ ನಡೆಯಲಿದೆ ಎಂದು ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ರಾಮಚಂದ್ರಗೌಡ ತಿಳಿಸಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಭವನದಲ್ಲಿ ಶನಿವಾರ (ಅ.3) ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ರಾಜ್ಯಪಾಲರಾದ ವಜೂಭಾಯ್ ರೂಡಾಭಾಯ್ ವಾಲಾರವರು 8 ನೇ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಹಾಗೂ ಸಹ- ಕುಲಾಧಿಪತಿಗಳಾದ ಅಶ್ವಥ್ ನಾರಾಯಣ ಅಥಿತಿಗಳಾಗಿ ಆಗಮಿಸಲಿದ್ದು, ಬೆಂಗಳೂರಿನ ನ್ಯಾಕ್ ನಿರ್ದೇಶಕರಾದ ಪ್ರೊ.ಎಸ್.ಸಿ. ಶರ್ಮಾ …
Read More »ನಾಳೆ ಸಿಎಂ ಬಿ.ಎಸ್ ಯೂರಪ್ಪ ಬೆಳಗಾವಿಗೆ
ಬೆಳಗಾವಿ- ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಾಳೆ ಭಾನುವಾರ ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ ಕೇಂದ್ರ ಸಚಿವ ದಿ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪಾಲ್ಗೊಂಡಿರಲಿಲ್ಲ,ಹೀಗಾಗಿ ನಾಳೆ ಬೆಳಗಾವಿಯ ಸದಾಶಿವ ನಗರದಲ್ಲಿರುವ ಸುರೇಶ್ ಅಂಗಡಿ ಅವರ ಕುಟುಂಬಸ್ಥರಿಗೆ ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿದ್ದು ಈ ಬಗ್ಗೆ ಅಧಿಕೃತ ಮಾಹಿತಿ ಇನ್ನುವರೆಗೆ ಬಂದಿಲ್ಲ
Read More »