Breaking News

ರಾಜ್ಯದ ಅಣೆಕಟ್ಟುಗಳ ಪುನಶ್ಚತನಕ್ಕೆ 750 ಕೋಟಿ ಅನುದಾನ

ನವದೆಹಲಿ: ಆಣೆಕಟ್ಟೆಗಳ ಮನಶ್ವೇತನ ಹಾಗೂ ಸುಧಾರಣಾ ಯೋಜನೆಗಳ ಅನುದಾನದಲ್ಲಿ

ಕರ್ನಾಟಕದ ಹಲವು ಅಣೆಕಟ್ಟೆಗಳ ಸಬಲೀಕರಣಕ್ಕೆ ಕೇಂದ್ರ ಸರ್ಕಾರವು 750 ಕೋಟಿ ರೂ ಅನುದಾನ
ನೀಡಲು ಒಪ್ಪಿಗೆ ನೀಡಿದೆ.
ರಾಜ್ಯದ ಜಲ ಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರ ಸತತ ಪ್ರಯತ್ನದ
ಹಿನ್ನೆಲೆಯಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರು ಈ ಅನುದಾನ
ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ.
ಕೇಂದ್ರ ಜಲಶಕ್ತಿ ಆಯೋಗವು ದೇಶದ ಪ್ರಮುಖ ಅಣೆಕಟ್ಟೆಗಳ ಸಬಲೀಕರಣಕ್ಕಾಗಿ ವಿಶ್ವಬ್ಯಾಂಕ್
ನೆರವಿನ ಡ್ರಿಪ್ (ಡ್ಯಾಮ್ ರಿಹ್ಯಾಬಿಲಿಟೇಶನ್ ಅಂಡ್ ಇಂಪ್ರೋವ್‌ಮೆಂಟ್ ಪ್ರಾಜೆಕ್ಟ್) ಯೋಜನೆಯಡಿ
ಗಾಯತ್ರಿ ಡ್ಯಾಂ. ತುಂಗಭದ್ರಾ ಡ್ಯಾಂ, ನಾರಾಯಣಪುರ ಡ್ಯಾಂ ಮತ್ತು ಕೆ.ಆರ್.ಎಸ್ ಡ್ಯಾಂಗಳ
ಸಬಲೀಕರಣ ಸೇರಿದಂತೆ 52 ಅಣೆಕಟ್ಟೆಗಳ ಮನಶ್ವೇತನಕ್ಕಾಗಿ ರಾಜ್ಯ ಜಲಸಂಪನ್ಮೂಲ ಇಲಾಖೆಯ 1500
ಕೋಟಿ ರೂಗಳ ಅನುದಾನ ಬೇಡಿಕೆ ಇಟ್ಟಿತ್ತು.
ಇಂದು ನವದೆಹಲಿಯ ಜಲಶಕ್ತಿಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯದ
ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಕೇಂದ್ರ ಸಚಿವರ ಗಮನ ಸೆಳೆದು
750 ಕೋಟಿ ರೂಗಳ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೇಂದ್ರ ಸಚಿವರ ಸಭೆಯ ಬಳಿಕ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ರಾಜ್ಯದ
ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ನಾವು ಬದ್ಧರಾಗಿದ್ದೇವೆ. ವಿಶ್ವ
ಬ್ಯಾಂಕ್ ನೆರವಿನ ಯೋಜನೆಗಳ ಅನುದಾನಕ್ಕೆ ನಾವು ಮಾಡಿದ ಮನವಿಗೆ ಕೇಂದ್ರ ಸಚಿವರು
ಸಮ್ಮತಿಸಿದ್ದು, ಕಾರ್ಯಯೋಜನೆಯನ್ನು ಅಂತಿಮಗೊಳಿಸಿ ಅನುಮೋದನೆ ಪಡೆಯುತ್ತೇವೆ ಎಂದರು.
ಕೇಂದ್ರ ಸಚಿವರ ಜೊತೆಗೆ ನಡೆದ ಸಭೆಯಲ್ಲಿ ರಾಜ್ಯದ ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್,
ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಉಪಸ್ಥಿತರಿದ್ದರು.

Check Also

ನಾಳೆ ಬೆಳಗಾವಿಯಲ್ಲಿ ಗಾಂಜಾವಾಲಾ, ಕೋಕೀಲಾ ಲೈವ್ ರಸಮಂಜರಿ….

ಕಿತ್ತೂರು ಉತ್ಸವ: ಅ.22 ರಂದು ಬೆಳಗಾವಿ ನಗರದಲ್ಲಿ ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ರಸಮಂಜರಿ ಬೆಳಗಾವಿ,-: ಕಿತ್ತೂರು ಉತ್ಸವ ಹಾಗೂ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.