Breaking News

ಕೇಂದ್ರ ರಕ್ಷಣಾ ಸಚಿವರನ್ನು ಭೇಟಿಯಾದ ಡಿಸಿಎಂ ಸವದಿ

ಬೆಳಗಾವಿ- ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ನವದೆಹಲಿಯಲ್ಲಿ ಇಂದು ಕೇಂದ್ರ ರಕ್ಷಣಾ ಖಾತೆ ಸಚಿವರು ಹಾಗೂ ಬಿಜೆಪಿಯ ಹಿರಿಯ ಮುಖಂಡರು ಆಗಿರುವ ಸನ್ಮಾನ್ಯ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದರು.

ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ, ಭೇಟಿ ಮಾಡಿ ಚರ್ಚಿಸಿದರು. ಬೆಂಗಳೂರು ನಗರದಲ್ಲಿ ರಕ್ಷಣಾ ಇಲಾಖೆಯ ವ್ಯಾಪ್ತಿಯಲ್ಲಿ ಹಲವು ಭೂಪ್ರದೇಶಗಳು ಒಳಗೊಂಡಿರುವುದರಿಂದ ರಸ್ತೆ ಅಭಿವೃದ್ಧಿಯ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗಿ ವಾಹನ ದಟ್ಟಣೆ ಮಿತಿ ಮೀರುತ್ತಿದೆ.
ಆದ್ದರಿಂದ ಈಗಾಗಲೇ ಕಂದಾಯ ಇಲಾಖೆಯಿಂದ ರಕ್ಷಣಾ ಇಲಾಖೆಗೆ ಪರ್ಯಾಯ ಜಾಗವನ್ನು ನೀಡಲು ಕ್ರಮ ವಹಿಸಲಾಗಿದ್ದು ರಸ್ತೆ ವಿಸ್ತರಣೆಗೆ ತೊಂದರೆ ಉಂಟಾಗುತ್ತಿರುವ ಜಾಗಗಳನ್ನು ತೆರವು ಮಾಡಿಕೊಡುವಂತೆ ರಕ್ಷಣಾ ಮಂತ್ರಿಗಳಿಗೆ ಮನವಿ ನೀಡಲಾಯಿತು.

ಕಂದಾಯ ಸಚಿವರಾದ ಆರ್ ಅಶೋಕ್ ಉಪಸ್ಥಿತರಿದ್ದರು

Check Also

ವಿಧಾನಸಭೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರತಿಧ್ವನಿ

ಬೆಳಗಾವಿ – ವಿಧಾನಸಭೆಯಲ್ಲಿ ಮೊದಲ ದಿನವೇ ಪಂಚಮಸಾಲಿ ಮೀಸಲಾತಿ ಹೋರಾಟ ಪ್ರತಿಧ್ವನಿಸಿತುವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಸಭಾದ್ಯಕ್ಷರು …

Leave a Reply

Your email address will not be published. Required fields are marked *