ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಕಡಿಮೆಯಾಗಿದೆ. ಇದಕ್ಕೆ ಇನ್ನು ವ್ಯಾಕ್ಸಿನ್ ಸಿಕ್ಕಿಲ್ಲ. ಜನರು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ವಿ.ಮುನ್ಯಾಳ ಹೇಳಿದರು. ಶುಕ್ರವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಜಿಲ್ಲೆಯಲ್ಲಿ ಇಳಿಮುಖವಾಗುತ್ತಿದೆ. ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ಆದರೂ ಜನರು ಜಾಗೃತೆಯಿಂದ ಇರಬೇಕು. ಇದಕ್ಕೆ ಇನ್ನೂ ವ್ಯಾಕ್ಸಿ ಕಂಡು ಹಿಡಿದಿಲ್ಲ. ಸದ್ಯ ಬೆಳಗಾವಿಯಲ್ಲಿ ಸಾಲು ಸಾಲು ಹಬ್ಬ ಇರುವುದರಿಂದ ಜನರು ಸಾಮಾಜಿಕ ಅಂತರ, …
Read More »ಮಳೆಗೆ ಓರ್ವ ವ್ಯೆಕ್ತಿ,6 ಜಾನುವಾರು,35 ಸಾವಿರ ಹೆಕ್ಟೇರ್ ಬೆಳೆ ನಾಶ- ಡಿಸಿ
ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಈ ಬಾರಿ ಓರ್ವ ವ್ಯಕ್ತಿ,6 ಜಾನುವಾರುಗಳ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಹೇಳಿದರು. ಶುಕ್ರವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಳೆಯಿಂದ ಜೀವ ಹಾನಿಯಾದ ಜನ ಜಾನುವಾರುಗಳಿಗೆ ಜಿಲ್ಲಾಡಳಿತದಿಂದ ಈಗಾಗಲೇ ಪರಿಹಾರ ನೀಡಲಾಗಿದೆ. ಅಕ್ಟೋಬರ್ ನಲ್ಲಿ ಸುಮಾರು 62 ಮನೆಗಳು ಮಳೆಯಿಂದ ಹಾನಿಯಾಗಿವೆ.70 ಮನೆಗಳು ಭಾಗಶ ಬಿದ್ದಿವೆ. ಇನ್ನೂ ಸರ್ವೆ ಕಾರ್ಯಾಚರಣೆ ನಡೆಸಲಾಗಿದೆ. ಅವುಗಳಿಗೂ ಸಹ ಪರಿಹಾರ ನೀಡಲಾಗುವುದು ಎಂದರು. ಮಳೆಯಿಂದ ಸುಮಾರು …
Read More »ಬೆಳಗಾವಿಯಲ್ಲಿ ಆಗಲೇ ಬೇಕು,ಸಿಗಲೇ ಬೇಕು ಚಳವಳಿ
ಬೆಳಗಾವಿ- ಮಳೆಯ ಅರ್ಭಟದಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದ್ದು ಪ್ರಧಾನಿ ನರೇಂದ್ರ ಮೋದಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿ 25 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹಿಸಿ ಹಿರಿಯ ಕನ್ನಡಪರ ಹೋರಾಟಗಾರ, ವಾಟಾಳ್ ನಾಗರಾಜ್ ಅವರು ಇಂದು ಶುಕ್ರವಾರ ಬೆಳಿಗ್ಗೆ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ,ಪ್ರಧಾನಿ ಬರಲೇ ಬೇಕು,ಪರಿಹಾರ ಸಿಗಲೇ ಬೇಕು ಎಂದು ಚಳವಳಿ ಮಾಡಿದ್ದಾರೆ. ಬೆಳಗಾವಿ ಸುವರ್ಣ ಸೌಧ ಮುಂದೆ ಪ್ರತಿಭಟಿಸಿ ಮಾತನಾಡಿದ ವಾಟಾಳ್ …
Read More »ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿರುದ್ಧ,ಪ್ರಧಾನಿ ನರೇಂದ್ರ ಮೋದಿಗೆ ದೂರು
ಬೆಳಗಾವಿ- ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಗೋಲ್ಡ್ ಮೆಡಲ್ ಪಡೆದ ವಿದ್ಯಾರ್ಥಿಗಳಿಗೆಮರಡಲ್ ಕೊಡುವ ಬದಲು ಸಾವಿರ ರೂ ನಿಡಿರುವ ವಿಷಯ ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯದ ಕುರಿತು ರ್ಯಾಂಕ್ ಪಡೆದ ವಿದ್ಯಾರ್ಥಿ ಗಳ ಪೋಷಕರು ರಾಜ್ಯಪಾಲರು ಮತ್ತು ಪ್ರಧಾನಿಗೆ ದೂರು ನೀಡಿದ್ದಾರೆ. ರಾಣಿಚನ್ನಮ್ಮ ವಿಶ್ವ ವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಸಾಧನೆಗೈದ ಸೃಷ್ಟಿ ಅಮರೇಂದ್ರ ಜ್ಞಾನಿಗೆ ಚಿನ್ನದ ಪದಕ ನೀಡಿ ಗೌರವಿಸದೇ ವಿವಿ ವಂಚನೆ ಮಾಡಿದ್ದಾರೆ ಎಂದು …
Read More »ಗಾಂಜಾ ಆಯ್ತು ಈಗ ಹುಕ್ಕಾ ಅಂಗಡಿ ಮೇಲೂ ದಾಳಿ ಪಕ್ಕಾ,..!
ಬೆಳಗಾವಿ- ಬೆಳಗಾವಿ ಪೋಲೀಸರು ಮಾದಕ ವಸ್ತು ಮಾರಾಟ ಮತ್ತು ಸೇವನೆಯ ವಿರುದ್ಧ ಸಮರ ಸಾರಿದ್ದು,ಇಷ್ಟು ದಿನ ಗಾಂಜಾ ಮಾರಾಟವನ್ನು ನಿಲ್ಲಿಸಿದ ಪೋಲೀಸರು ಇಂದು ಬೆಳಗಾವಿಯ ಹುಕ್ಕಾ ಅಂಗಡಿಯ ಮೇಲೆ ದಾಳಿ ಮಾಡಿದ್ದಾರೆ. ಬೆಳಗಾವಿ ಸಿಟಿ ಕ್ರೈಂ ಬ್ರ್ಯಾಂಚಿನ ಎಸಿಪಿ ನಾರಾಯಣ ಭರಮಣಿ ಅವರ ನೇತ್ರತ್ವದಲ್ಲಿ,ಬೆಳಗಾವಿಯ ಕೃಷ್ಣ ದೇವರಾಯ ಸರ್ಕಲ್ ನಲ್ಲಿ ( ಕೊಲ್ಹಾಪೂರ ಸರ್ಕಲ್) ಹುಕ್ಕಾ ಅಂಗಡಿಯ ಮೇಲೆ ದಾಳಿ ಮಾಡಿ ಹುಕ್ಕಾ ಫ್ಲೇವರ್ ಪಾಕಿಟ್ ಗಳನ್ನು ವಶ ಪಡಿಸಿಕೊಂಡಿದ್ದಾರೆ. …
Read More »ಮಲಪ್ರಭಾ ಕಾರ್ಖಾನೆ ಚುನಾವಣೆ ಯಾರಿಗೆ ಎಷ್ಟು ಮತ ವಿವರ ಇಲ್ಲಿದೆ
ಸಾಮಾನ್ಯ: ಅಶೋಕ ಯಮಕನಮರ್ಡಿ-1041 (ಆಯ್ಕೆ), ಲಕ್ಷ್ಮಣ ಎಮ್ಮಿ_1025 (ಆಯ್ಕೆ), ಶಂಕರಗೌಡ ಪಾಟೀಲ-958 (ಆಯ್ಕೆ), ಮಂಜುನಾಥ ಪಾಟೀಲ-952 (ಆಯ್ಕೆ), ಜ್ಯೋತಿಬಾ ಹೈಬತ್ತಿ-944 (ಆಯ್ಕೆ), ಬಸವರಾಜ ಬೆಂಡಿಗೇರಿ-929 (ಆಯ್ಕೆ), ಶಿವಪ್ಪ ದೂರಪ್ಪನವರ-922 (ಆಯ್ಕೆ), ಅಶೋಕ ಬೆಂಡಿಗೇರಿ-916 (ಆಯ್ಕೆ), ಬಸವರಾಜ ಪುಂಡಿ-897 (ಆಯ್ಕೆ), ಪ್ರಕಾಶಗೌಡ ಪಾಟೀಲ-511, ಚನಗೌಡ ಪಾಟೀಲ-457, ಶ್ರೀಶೈಲ್ ತುರಮರಿ-430, ಅಡಿವೆಪ್ಪ ಗಡೆನ್ನವರ-423, ಅಶೋಕ ಹಚ್ಚಗೌಡರ-411, ರಾಮನಗೌಡ ಪಾಟೀಲ-399, ಪರ್ವತಗೌಡ ಪಾಟೀಲ-376, ಸಿದ್ಲಿಂಗಪ್ಪ ನಾಗಲಾಪುರ-334, ಶಿವಮೂರ್ತಯ್ಯ ಪೂಜಾರ-296, ಮಾರುತಿ ಹೈಬತ್ತಿ-283, ಆನಂದ ಹುಚ್ಚಗೌಡರ-187, …
Read More »ಬೆಳಗಾವಿಯಲ್ಲಿ ಮತ್ತೊಂದು ಕಲ್ಯಾಣ ಕಲಹ……!
ಬೆಳಗಾವಿ- ಬೆಳಗಾವಿಯಲ್ಲಿ ಕೆ.ಕಲ್ಯಾಣ ಅವರ ಕುಟುಂಬದ ಕಲಹವನ್ನು ಬೆಳಗಾವಿ ಪೋಲೀಸರು ಬಗೆಹರಿಸಿದ ಬೆನ್ನಲ್ಲಿಯೇ ಬೆಳಗಾವಿ ನಗರದಲ್ಲಿ ಮತ್ತೊಂದು ಕಲ್ಯಾಣ ಕಲಹ ಶುರುವಾಗಿದೆ,ಈ ಕಲಹ ಕುಟುಂಬ ಕಲಹ ಅಲ್ಲ ಹಾಗಾದ್ರೆ ಏನಿದು ಹೊಸ ಕಲ್ಯಾಣ ಕಲಹ ಡಿಟೇಲ್ ವರದಿ ಇಲ್ಲಿದೆ ನೋಡಿ…. ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಅವರು ತಮ್ಮ ಪುತ್ರನ ಬರ್ತಡೇ ಸಿಲೆಬ್ರೆಶನ್ ಗಾಗಿ ಅವರ ಕುಟುಂಬ ಹಾಗು ಅವರ ಅಳಿಯನ ಕುಟುಂಬದವರು ಜಾಂಬೋಟಿ ಬಳಿಯ ರಿಸಾರ್ಟ್ ಗೆ ಹೋಗಿದ್ದರು,ಬರ್ತಡೇ …
Read More »ನಾಸೀರ್ ಬಾಗವಾನ್ ಗೆದ್ದಿದ್ದು ಹೇಗೆ..? ಏಕೆ ? ಗೊತ್ತಾ..?
ಬೆಳಗಾವಿ-ಕಿತ್ತೂರು ತಾಲ್ಲೂಕಿನಲ್ಲಿ ಬೆಳಗಾಗುತ್ತಿದ್ದಂತೆಯೇ ನಾಸೀರ್ ಬಾಗವಾನ ಉದ್ಭವಿಸಿದ್ದಾರೆ ಎಂ.ಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದಾರೆ. ಕಿತ್ತೂರು ಕ್ಷೇತ್ರದಲ್ಲಿ ಡಿ.ಬಿ ಇನಾಮದಾರ,ಬಾಬಾಗೌಡ ಪಾಟೀಲ,ಮಹಾಂತೇಶ್ ದೊಡ್ಡಗೌಡ್ರರಂತಹ ನಾಯಕರಿದ್ದರೂ ಅವರಿಗೆಲ್ಲ ಮಲಪ್ರಭಾ ಕಾರ್ಖಾನೆ ಬೇಡವಾಗಿದ್ದು ಹೇಗೆ,ನಾಸೀರ ಬಾಗವಾನ ಅವರನ್ನು ಕಿತ್ತೂರು ತಾಲ್ಲೂಕಿನ ಜನ ಅಲ್ಪಾವಧಿಯಲ್ಲಿಯೇ ನಂಬಿದ್ದು ಏಕೆ ? ಎನ್ನುವ ಚರ್ಚೆ ಈಗ ಆರಂಭವಾಗಿದೆ. ಒಂದು ಕಾಲದಲ್ಲಿ ಮಲಪ್ರಭಾ ಸಕ್ಕರೆ ಕಾರ್ಖಾನೆ ಆರ್ಥಿಕವಾಗಿ ಸದೃಡವಾಗಿತ್ತು,ಇಲ್ಲಿಯ ಆಡಳಿತ ದೇಶದ …
Read More »ರಾಣಿ ಶುಗರ್ಸ್ ನಾಸೀರ ಬಾಗವಾನ್ ಕೊರಳಿಗೆ…..!
ಬೆಳಗಾವಿ-ಕಿತ್ತೂರು ಚನ್ನಮ್ಮನ ತಾಲ್ಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಾಸೀರ ಬಾಗವಾನ್ ಗುಂಪು ಪ್ರಚಂಡ ವಿಜಯ ಸಾಧಿಸಿದ್ದು ಹದಿನೈದಕ್ಕೆ ಹದಿನೈದು ಸ್ಥಾನಗಳು ನಾಸೀರ ಬಾಗವಾನ್ ಪೆನಲ್ ಪಾಲಾಗಿವೆ. ಮದ್ಯರಾತ್ರಿ ಎರಡು ಗಂಟೆಗೆ ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದ್ದು ನಾಸೀರ ಬಾಗವಾನ್ ಗುಂಪಿನ ಎಲ್ಲಾ ಅಭ್ಯರ್ಥಿಗಳು ಗೆಲವು ಸಾಧಿಸಿದ್ದು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರ ಪುತ್ರ …
Read More »ರಾಣಿ ಶುಗರ್ಸ ಚುನಾವಣೆ,ನಾಸೀರ ಗುಂಪಿನ ಮಹಿಳಾ ಅಭ್ಯರ್ಥಿಗಳ ಮುನ್ನಡೆ
ಬೆಳಗಾವಿ- ಕಿತ್ತೂರು ತಾಲ್ಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆ ಇಂದು ನಡೆದಿದ್ದು ಮತ ಎಣಿಕೆ ಶುರುವಾಗಿದೆ ಮೊದಲನೇಯದಾಗಿ ಮಹಿಳಾ ಅಭ್ಯರ್ಥಿಗಳ ಮತ ಎಣಿಕೆ ನಡೆದಿದ್ದು ನಾಸೀರ ಬಾಗವಾನ ಗುಂಪಿನ ಇಬ್ಬರೂ ಮಹಿಳಾ ಅಭ್ಯರ್ಥಿಗಳು ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಭಾರೀ ಮುನ್ನಡೆ ಸಾಧಿಸಿದ್ದಾರೆ. ನಾಸೀರ ಬಾಗವಾನ ಗುಂಪಿನ ಮೀನಾಕ್ಷಿ ನೆಲಂಗಳಿ ಲಕ್ಷ್ಮೀ ಅರಳಿಕಟ್ಟಿ ಇಬ್ಬರೂ ಮಹಿಳಾ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಹಿಂದುಳಿದ ಅ ವರ್ಗದಿಂದ …
Read More »