ಬೆಳಗಾವಿ-ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೇತ್ರತ್ವದ ಕರ್ನಾಟಕದ ನಿಯೋಗ ಇಂದು ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಜಯಂತ ಪಾಟೀಲರನ್ನು ಮುಂಬಯಿಯಲ್ಲಿ ಭೇಟಿ ಮಾಡಿ ನೀರಾವರಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದೆ. ವಿಶೇಷ ವಿಮಾನದ ಮೂಲಕ ಮುಂಬಯಿ ಗೆ ತೆರಳಿದ ನಿಯೋಗ ಮಹಾರಾಷ್ಟ್ರ ದ ನೀರಾವರಿ ಸಚಿವರ ಜೊತೆ ನೀರಾವರಿ ಸಮಸ್ಯೆಗಳ ಕುರಿತು ಸುಧೀರ್ಘ ಸಮಾಲೋಚನೆ ನಡೆಸಿದೆ,ಜೊತೆಗೆ ನೆರೆ ನಿರ್ವಹಣೆ ಕುರಿತು ಮಹಾರಾಷ್ಟ್ರದ ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆಯೂ ನಿಯೋಗ ಸಭೆ ನಡೆಸಿದೆ. …
Read More »ಇಂದು ಪಾಸಿಟಿವ್ ಇಪ್ಪತ್ತು ಮುಂದುವರೆದ ಮಹಾಮಾರಿ ಆಪತ್ತು…..!
ಬೆಳಗಾವಿ- ಲಕ್ಷ್ಮೀ ಹೆಬ್ಬಾಳರ ಮತ್ತು ರಮೇಶ್ ಜಾರಕಿಹೊಳಿ ಗುದ್ದಾಟದ ನಡುವೆ ಕೊರೋನಾ ಮಹಾಮಾರಿ ಬೆಳಗಾವಿ ಜಿಲ್ಲೆಗೆ ಜೋರಾಗಿ ಗುದ್ದಿದೆ,ಯಾಕಂದ್ರೆ ಈ ಮಹಾಮಾರಿ ಇಂದು ಬೆಳಗಾವಿ ಜಿಲ್ಲೆಯ ಇಪ್ಪತ್ತು ಜನರಿಗೆ ತಗಲಿದೆ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಕಾಟ ಬಿಡುವಿಲ್ಲದೇ ಕಾಡುತ್ತಿದೆ ಇಂದು ಜಿಲ್ಲೆಯಲ್ಲಿ 20 ಸೊಂಕಿತರು ಪತ್ತೆಯಾಗಿದ್ದು ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 414 ಕ್ಕೇರಿದೆ. ತೀವ್ರ ಉಸಿರಾಟದ ತೊಂದರೆಯಿಂದ ಕೊಣ್ಣೂರ ಗ್ರಾಮದ 55 ವರ್ಷದ ಮಹಿಳೆ ಸಾವನ್ನೊಪ್ಪದ್ದು, …
Read More »ನಾನು ರಾಣಿ ಚೆನ್ನಮ್ಮನ ವಂಶಸ್ಥೆ,ಪೊಳ್ಳು ಬೆದರಿಕೆಗೆ ಹೆದರುವದಿಲ್ಲ- ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ – ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಚಿಂತನೆ ನಡೆಸಿರುವುದಾಗಿ ಮತ್ತು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ. ಸಚಿವ ರಮೇಶ ಜಾರಕಿಹೊಳಿ ಮಂಗಳವಾರ ಬೆಳಗ್ಗೆ ಗ್ರಾಮೀಣ ಬಿಜೆಪಿ ಕಚೇರಿ ಉದ್ಘಾಟನೆ ವೇಳೆ ಮಾತನಾಡುತ್ತ, ಗ್ರಾಮೀಣ ಕ್ಷೇತ್ರದಲ್ಲಿ ಕುಕ್ಕರ್ ಹಂಚಿದ್ದು ನನ್ನ ದುಡ್ಡಿನಿಂದ ಎಂದು ಹೇಳಿಕೆ ನೀಡಿದ್ದರು. ಜೊತೆಗೆ, ಬರಲಿರುವ …
Read More »ಕೊರೋನಾ ಎದುರಿಸಲು ರೆಡಿಯಾಗಿ,- ರಮೇಶ್ ಜಾರಕಿಹೊಳಿ
ಬೆಳಗಾವಿ, ಜುಲೈ – ಮುಂಬರುವ ದಿನಗಳಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳು ಇರುವುದರಿಂದ ಜಿಲ್ಲೆಯಲ್ಲಿ ವೆಂಟಿಲೇಟರ್, ಹಾಸಿಗೆಗಳು ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ(ಜು.7) ನಡೆದ ಕೋವಿಡ್ ಹಾಗೂ ಪ್ರವಾಹ ನಿರ್ವಹಣೆ ಕುರಿತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂದಿನ ಎರಡು ತಿಂಗಳು ಪ್ರಮುಖವಾಗಿರುವುದರಿಂದ …
Read More »ಲಕ್ಷ್ಮೀ ಕುಕ್ಕರ್ ಹಂಚಿದ್ದು ನನ್ನ ದುಡ್ಡಿನಿಂದ,ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ- ಸಾಹುಕಾರ್
ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ,ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳಕರ ಅವರು ಹಂಚಿರುವ ಕುಕ್ಕರ್ ಹಿಂದಿರುವ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ ,ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕುಕ್ಕರ್ ಹಂಚಿದ್ದು ನನ್ನ ದುಡ್ಡುನಿಂದ ಅದು ಅಕೀ ದುಡ್ಡಲ್ಲ,ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಾಗಿದೆ,ಈಗ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಅವರು ದುಡ್ಡು ಹಂಚುತ್ತಿರುವದು ನನ್ನ ಗಮನಕ್ಕೆ ಬಂದಿದೆ ,ಅವರು …
Read More »ಬೆಳಗಾವಿ ಜಿಲ್ಲೆಯಲ್ಲಿ ಕಿಲ್ಲರ್ ಕೊರೋನಾ ಸೊಂಕಿನಿಂದ ಇಂದು ಮತ್ತೊಬ್ಬ ಮಹಿಳೆ ಬಲಿ
ಬೆಳಗಾವಿ- ಇಂದು ಸೋಮವಾರ ಕಿಲ್ಲರ್ ಕೊರೋನಾ ಮರಣ ಮೃದಂಗ ಬೆಳಗಾವಿ ಜಿಲ್ಲೆಯಲ್ಲಿ ಮುಂದುವರೆದಿದೆ.ಅಥಣಿ ತಾಲ್ಲೂಕಿನ ಮೊತ್ತೊಬ್ಬ ಸೊಂಕಿತ ಮಹಿಳೆ ಇಂದು ಮೃತಪಡ್ಟಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಕೊರೋನಾ ಸೊಂಕಿಗೆ 6 ಜನ ಬಲಿಯಾಗಿದ್ದು ಇಂದು ಮತ್ತೊಬ್ಬ ಮಹಿಳೆ (60)/ ಬಲಿಯಾಗಿದ್ದು.ಬೆಳಗಾವಿ ಜಿಲ್ಲೆಯಲ್ಲಿ ಕಿಲ್ಲರ್ ಕೊರೋನಾ ಚೆಲ್ಲಾಟ ಮುಂದುವರೆದಿದೆ. ಅಥಣಿ ತಾಲ್ಲೂಕಿನ ಗ್ರಾಮವೊಂದರ 60 ವರ್ಷದ ಸೊಂಕಿತ ಮಹಿಳೆ ಇಂದು ಬಲಿಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಈಗ ಖರೇ ಖರೇ ಮಹಾಮಾರಿ ವೈರಸ್ …
Read More »ಮೂರು ತಿಂಗಳಿಗೊಮ್ಮೆ,ಸುವರ್ಣಸೌಧದಲ್ಲಿ ಕ್ಯಾಬಿನೆಟ್ ಮೀಟೀಂಗ್ ನಡೆಯಲಿ
ಬೆಳಗಾವಿ- ಮೂರು ತಿಂಗಳಿಗೊಮ್ಮೆ,ಬೆಳಗಾವಿಯ ಸುವರ್ಣಸೌಧದಲ್ಲಿ ಕ್ಯಾಬಿನೆಟ್ ಮೀಟೀಂಗ್ ನಡೆಸುವದು,ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು. ಬೆಳಗಾವಿಯ ಸುವರ್ಣಸೌಧ ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿ ಆಗಬೇಕು,ಇದು ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಆಗಬೇಕು,500 ಕೋಟಿ ಖರ್ಚು ಮಾಡಿ ಕಟ್ಟಿದ ಈ ಕಟ್ಟಡ ನಿರಂತರವಾಗಿ ಕ್ರೀಯಾಶೀಲ ಆಗುವ ನಿಟ್ಟಿನಲ್ಲಿ ಸರ್ಕಾರ ರಾಜ್ಯಮಟ್ಟದ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರ ಮಾಡಬೇಕು …
Read More »ಬೆಳಗಾವಿ ಜಿಲ್ಲೆಯಲ್ಲಿ ಕಿಲ್ಲರ್ ಕೊರೋನಾ ಕಾಟ ಇಂದು ಮತ್ತೆ 11 ಜನ ಸೊಂಕಿತರ ಪತ್ತೆ
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಿಲ್ಲರ್ ಕೊರೋನಾ ಕಾಟ ಬೆಂಬಿಡದೇ ಕಾಡುತ್ತಿದೆ.ಇಂದು ಮತ್ತೆ 11 ಜನ ಸೊಂಕಿತರು ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 393 ಕ್ಕೇರಿದಂತಾಗಿದೆ ಬೆಳಗಾವಿ ಜಿಲ್ಲೆಯಲ್ಲಿ ಇಂದು ಪತ್ತೆಯಾಗಿರುವ 11ಜನ ಸೊಂಕಿತರ ಪೈಕಿ ನಾಲ್ಕು ಜನ ಬೆಳಗಾವಿ ನಗರದವರಾಗಿದ್ದಾರೆ. ಒಬ್ಬರು ವೀರಭದ್ರ ನಗರ ಬೆಳಗಾವಿ ವಯಸ್ಸು (48) ಸಾವು ಇನ್ನೊಬ್ಬರು ಸುಭಾಷ್ ನಗರ ,ಅನಿಗೋಳ,ಹನುಮಾನ ನಗರದಲ್ಲಿ ತಲಾ ಒಂದು ಅಥಣಿ ತಾಲ್ಲೂಕು 5 ರಾಯಬಾಗ 1 …
Read More »ಕೊರೋನಾ ಸೊಂಕಿಗೆ ಬಲಿಯಾದವರ ಇಬ್ಬರ ಅಂತ್ಯಕ್ರಿಯೆ ಇನ್ನೂ ನಡೆದಿಲ್ಲ.
ಬೆಳಗಾವಿ- ಕೊರೋನಾ ಸೊಂಕಿನಿಂದ ಬೆಳಗಾವಿಯ ಭೀಮ್ಸ್ ಆಸ್ಪತ್ರೆಯಲ್ಲಿ ನಿನ್ನೆಯ ದಿನ ಇಬ್ಬರು ಮೃತಪಟ್ಟಿದ್ದು ಮೃತರ ಅಂತ್ಯಕ್ರಿಯೆ ಇನ್ನುವರೆಗೆ ನಡೆದಿಲ್ಲ ನಿನ್ನೆ ಮದ್ಯಾಹ್ನ,ರಾಯಬಾಗ ಕುಡಚಿಯ 70 ವರ್ಷದ ವೃದ್ಧ, ನಿನ್ನೆ ಸಂಜೆ ಬೆಳಗಾವಿಯ ವೀರಭದ್ರನಗರದ 48 ವರ್ಷದ ವ್ಯೆಕ್ತಿ ಮೃತಪಟ್ಟಿದ್ದು ಇಬ್ಬರ ಶವಗಳನ್ನು,ಕೋವಿಡ್ ಮಾರ್ಗಸೂಚಿಯ ಪ್ರಕಾರ ಪ್ಯಾಕ್ ಮಾಡಲಾಗಿದೆ,ಆದ್ರೆ ಅಂತ್ಯಕ್ರಿಯೆ ಮಾಡೋದು ಯಾವಾಗ ಎಂದು ಮೃತರ ಕುಟುಂಬಸ್ಥರು ನಿನ್ನೆಯಿಂದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲೇ ಕಾಯ್ದು ಕುಳಿತಿದ್ದಾರೆ. ಈ ಕುರಿತು ಭೀಮ್ಸ್ ನಿರ್ದೇಶ …
Read More »ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಖಡಕ್ ಲಾಕ್ ಡೌನ್…..!
ಬೆಳಗಾವಿ-ಬೆಳಗಿನ ಜಾವ ಪೋಲೀಸರು ಫೀಲ್ಡ್ ಗೆ ಇಳಿದಿದ್ದಾರೆ,ರಸ್ತೆಗಳ ಮೇಲೆ ವಾಹನಗಳ ಓಡಾಟ ಇಲ್ಲವೇ ಇಲ್ಲ,ಜನರಂತೂ ಕಾಣಿಸುತ್ತಿಲ್ಲ,ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣ ಬಿಕೋ ಎನ್ನುತ್ತಿದೆ.ಬೆಳಗಾವಿ ನಗರ ಮತ್ತು ಸಂಪೂರ್ಣ ಜಿಲ್ಲೆಯಲ್ಲಿ ಫುಲ್ ಖಡಕ್ ಲಾಕ್ ಡೌನ್ ಅನುಷ್ಠಾನಗೊಂಡಿರುವದು ಸತ್ಯ. ಬೆಳಗಾವಿ ನಗರದಲ್ಲಿ ಹಾಲು,ಔಷಧಿ ಅಂಗಡಿ ಹೊರತುಪಡಿಸಿದರೆ ಬೇರೆ ಯಾವ ಅಂಗಡಿಯೂ ಬಾಗಿಲು ತೆರೆದಿಲ್ಲ,ಬೆಳಗಾವಿಯ ಹೋಲ್ ಸೇಲ್ ತರಕಾರಿಯ ಎಪಿಎಂಸಿ ಮಾರುಕಟ್ಟೆಯೂ ಸಂಪೂರ್ಣವಾಗಿ ಬಂದ್ ಆಗಿದೆ.ಅಗತ್ಯ ವಸ್ತುಗಳ ಸರಕು ವಾಹನಗಳನ್ನು ಹೊರತುಪಡಿಸಿ ಬೇರೆ …
Read More »