ಬೆಳಗಾವಿ- ದೇಶದಲ್ಲಿ ಕೊರೊನಾ ವೈರಸ್ ಮಾಹಾಮಾರಿ ಅಬ್ಬರ ಜೋರಾಗಿದೆ. ದಿನದಿಂದ ದಿನಕಚಕೆ ಪ್ರಕರಣಗಳ ಸಂಖ್ಯೆಯ ಹೆಚ್ಚಾಗುತ್ತಿವೆ. ಲಾಕ್ ಡೌನ್ ನಿಂದ ಬಡವರು, ಮಧ್ಯಮ ವರ್ಗಕ್ಕೆ ಸಂಕಷ್ಟ ಎದಾಗಿದೆ. ಬಡವರ ನೆರವಿಗೆ ಇದೀಗ ನಿಂಬಾಳ್ಕರ್ ಧಾವಿಸಿದ್ದಾರೆ. ಅಪ್ಪ ಐಎಎಸ್ ಆಫೀಸ್, ಅಮ್ಮ ಶಾಸಕಿಯಾಗಿ ಸಮಾಜ ಸೇವೆ. ಇಬ್ಬರ ಜತೆಗೆ ಇದೀಗ ಪುತ್ರ ಸಹ ಸಾಥ್ ನೀಡಿದ್ದಾರೆ. ಖಾನಾಪುರ ಕ್ಷೇತ್ರದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಪುತ್ರ ಸಹ ಸಮಾಜ ಸೇವೆಯಲ್ಲಿ ತೊಡಿಸಿಕೊಂಡಿದ್ದಾರೆ. …
Read More »ಬೆಳಗಾವಿಯಲ್ಲಿ ಮಳೆಯ ಅರ್ಭಟದ ಜೊತೆಗೆ ಕೊರೋನಾ ಅರ್ಭಟ,ಇಂದು ಮತ್ತೆ 13 ಪಾಸಿಟೀವ್ ಕೇಸ್ ಪತ್ತೆ
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಳೆರಾಯನ ಅರ್ಭಟದ ಜೊತೆ ಜೊತೆಗೆ ಮಹಾಮಾರಿ ಕೊರೋನಾ ಅರ್ಭಟವೂ ಬೆಳಗಾವಿ ಜಿಲ್ಲೆಗೆ ವಕ್ಕರಿಸಿದೆ ಇಂದು ಭಾನುವಾರದ ಹೆಲ್ತ್ ಬುಲೆಟಿನ್ ನಲ್ಲಿ ಜಿಲ್ಲೆಯಲ್ಲಿ ಮತ್ತೆ 13ಜನರಲ್ಲಿ ಸೊಂಕು ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಹೆಲ್ತ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 160 ಕ್ಕೇರಿದೆ ಜಿಲ್ಲಾ ಹೆಲ್ತ್ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 162ಕ್ಕೇರಿದಂತಾಗಿದೆ. ಇಂದು ಪತ್ತೆಯಾದ ಎಂಟು ಜನ ಸೊಂಕಿತರ ಪೈಕಿ ಇಬ್ಬರು ಬೆಳಗಾವಿ ತಾಲ್ಲೂಕಿನ ಅಗಸಗಿ …
Read More »ಬೆಳಗಾವಿಯ ಬೀದಿ ನಾಯಿಗಳು ಹಸಿದಿವೆ ಹುಷಾರ್….. ! ಮೈಮರೆತರೆ ಕುರಿ ಕೋಳಿ ಢಮಾರ್……!!!
ಬೆಳಗಾವಿಯಲ್ಲಿ ನಾಯಿಗಳು ಹಸಿದಿವೆ ಹುಷಾರ್…..!! ಬೆಳಗಾವಿ- ಲಾಕ್ ಡೌನ್ ಅವಧಿಯಲ್ಲಿ ಬೆಳಗಾವಿ ನಗರದ ನಾಯಿಗಳು ಈಗ ಡಾನ್ ಆಗಿವೆ.ಆಹಾರ ಸಿಗದೇ ಪರದಾಡುತ್ತಿರುವ ಬೀದಿ ನಾಯಿಗಳು ಈಗ ಕ್ರೂರಿಯಾಗಿವೆ. ಇಂದು ಮದ್ಯಾಹ್ನ ಹಸಿದ ನಾಯಿಗಳು ಗುಂಪಾಗಿ ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿ ಎರಡು ಕುರಿಗಳನ್ನು ಬೇಟೆಯಾಡಿದ ಘಟನೆ ಬೆಳಗಾವಿಯ ಕಣಬರ್ಗಿ ರಸ್ತೆಯ ಶಿವತೀರ್ಥ ಅಪಾರ್ಟಮಡಂಟ್ ಹಿಂದುಗಡೆ ನಡೆದಿದೆ. ಬೆಳಗಾವಿಯಲ್ಲಿ ಹಸಿದವರಿಗೆ ಉಳ್ಳವರು ಆಹಾರದ ಕಿಟ್ ಗಳನ್ನು ಕೊಡುತ್ತಿದ್ದಾರೆ. ಹೊಟೇಲ್ ಗಳ …
Read More »ಸಿಹಿ ಹಂಚಿದವರಿಗೆ ಟೆನಶ್ಯನ್…..ಬಿಡುಗಡೆ ಆದವರಿಗೆ ಮತ್ತೇ ಕ್ವಾರಂಟೈನ್……!!!
ಬೆಳಗಾವಿ- ಬೆಳಗಾವಿಯ ತಾಲ್ಲೂಕಿನ ಅಗಸಗಿ ಗ್ರಾಮದಲ್ಲಿ ವಿಚಿತ್ರ,ವಿಭಿನ್ನ ರೀತಿಯ ಪಾಲಿಟಿಕ್ಸ್ ನಡೆದಿದೆ. ಬೆಕ್ಕಿಗೆ ಚಲ್ಲಾಟ ಇಲಿಗೆ ಸಂಕಟ ಎನ್ನುವ ಗಾದೆ ಮಾತಿಗೆ ಹೇಳಿ ಮಾಡಿಸಿದಂತಹ ಘಟನೆ ಈ ಗ್ರಾಮದಲ್ಲಿ ನಡೆದಿದೆ. ಮಹಾರಾಷ್ಟ್ರದಿಂದ ಅಗಸಗಿ ಗ್ರಾಮಕ್ಕೆ ಮರಳಿ ಬಂದ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿತ್ತು ,ಎರಡು ದಿನಗಳ ಹಿಂದಷ್ಟೇ ಕ್ವಾರಂಟೈನ್ ಅವಧಿ ಮುಗಿದಿದೆ ಅಂತಾ ಈ ವಲಸೆ ಕಾರ್ಮಿಕರನ್ನು ಬಿಡುಗಡೆ ಮಾಡಲಾಗಿತ್ತು. ವಲಸೆ ಕಾರ್ಮಿಕರು ಬಿಡುಗಡೆ ಆಗಿದ್ದಾರೆ ಅಂತಾ ಕೆಲವು ಕಾಂಗ್ರೆಸ್ …
Read More »ಬೆಳಗಾವಿಗೆ ಶನಿಕಾಟ ಇಂದು ಮತ್ತೊಂದು ಪಾಸಿಟೀವ್ ಕೇಸ್ ಪತ್ತೆ
ಬೆಳಗಾವಿ- ಬೆಳಗಾವಿಯಲ್ಲಿ ಮುಂಬಯಿ ನಂಜು ಏರುತ್ತಲೇ ಇದೆ.ಬೆಳಗಾವಿ ಜಿಲ್ಲೆಯಲ್ಲಿ ಶನಿವಾರದ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಮತ್ತೊಂದು ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಬೆಳಗಾವಿ ತಾಲ್ಲೂಕಿನ ತುರಮರಿ ಗ್ರಾಮದ 30 ವರ್ಷದ ಮಹಿಳೆಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ. ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 147 ಕ್ಕೆ ಏರಿದರೆ ಬೆಳಗಾವಿ ಜಿಲ್ಲಾ ಹೆಲ್ತ್ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 149 ಕ್ಕೆ ಏರಿದಂತಾಗಿದೆ. ಬೆಳಗಾವಿ …
Read More »ಮಹಾರಾಷ್ಟ್ರದಿಂದ ಅಕ್ರಮ ಪ್ರವೇಶ ತಡೆಗೆ ಕಟ್ಟುನಿಟ್ಟಿನ ಸೂಚನೆ.
ಬೆಳಗಾವಿ-ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಜನರಲ್ಲಿ ಅತೀ ಹೆಚ್ಚು ಸೋಂಕು ಕಂಡುಬಂದಿದೆ. ಇದು ಇನ್ನೂ ಹೆಚ್ಚಳವಾಗುತ್ತಿದೆ. ಆದ್ದರಿಂದ ರಾಜ್ಯ ಪ್ರವೇಶಕ್ಕೆ ಇ-ಪಾಸ್ ನೀಡಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇ-ಪಾಸ್ ಇಲ್ಲದೇ ಬರುತ್ತಿರುವವರನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಾರದ ಮಾರ್ಗಸೂಚಿ ಪ್ರಕರ ಎಲ್ಲರನ್ನೂ ತಪಾಸಣೆ ನಡೆಸಿ ಅಗತ್ಯವಿದ್ದರೆ ಕ್ವಾರಂಟೈನ್ ಮಾಡಬೇಕು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಕುಗನೊಳ್ಳಿ ಬಳಿ ಇರುವ ಅಂತರ್ ರಾಜ್ಯ …
Read More »ಬಿಜೆಪಿ ಶಾಸಕರನ್ನು ಸೆಳೆಯಲು, ನಮ್ಮ ಹತ್ತಿರ ಅಷ್ಟೊಂದು ಬ್ಯಾಂಕ್ ಬ್ಯಾಲೆನ್ಸ್ ಇಲ್ಲ.
.ಬೆಳಗಾವಿ- ಉತ್ತರ ಕರ್ನಾಟಕದ ಪ್ರವಾಸದ ಬಳಿಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬೆಳಗಾವಿಯಲ್ಲಿ ಹೊಸ ಬಾಂಬ್. ಹಾಕಿದ್ದಾರೆ. ಬೆಳಗಾವಿಯ ಗೃಹ ಕಚೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಹಿರಿಯ ಶಾಸಕ ಉಮೇಶ ಕತ್ತಿ ಔತಣಕೂಟ ವಿಚಾರ. ಇದು ಬಿಜೆಪಿ ಪಕ್ಷದ ಆಂತರಿಕ ವಿಚಾರವಾಗಿದೆ. ವಲಸಿಗರಿಂದ ಮೂಲ ಬಿಜೆಪಿ ಅವ್ಯಾಯವಾಗಿದೆ,ಎಂದು ಸತೀಶ್ ಜಾರಕಿಹೊಳಿ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಬಿಜೆಪಿ ಹೈಕಮಾಂಡ್ ತೀರ್ಮಾನ,ಮಾಡುತ್ತದೆ. ಉತ್ತರ ಕರ್ನಾಟಕ ಭಾಗದ ಶಾಸಕರಿಂದ …
Read More »ನಾಳೆ ಸಂಡೇ ಕರ್ಫ್ಯು ಇಲ್ಲಾ…..
ನಾಳೆ ಸಂಡೇ ಕರ್ಫ್ಯು ಇಲ್ಲಾ…..ಬೆಳಗಾವಿ-ನಾಳೆ ಭಾನುವಾರ ರಾಜ್ಯದಲ್ಲಿ ಕರ್ಫ್ಯು ಇಲ್ಲಾ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಕಳೆದ ಭಾನುವಾರ ರಾಜ್ಯದಲ್ಲಿ ಕರ್ಫ್ಯು ಮಾದರಿಯ ಲಾಕ್ ಡೌನ್ ಇತ್ತು .ಪ್ರತಿ ಭಾನುವಾರವೂ ಕರ್ಫ್ಯು ಇರುತ್ತೆ ಅಂತಾ ಸಿಎಂ ಹೇಳಿದ್ರು ಆದ್ರೆ ಇಂದು ಏಕಾ ಏಕಿ ಕರ್ಫ್ಯು ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿದೆ.ಹೀಗಾಗಿ ನಾಳೆ ಸಂಡೇ ರಾಜ್ಯದ ಜನರಿಗೆ ಫುಲ್ ರಿಲ್ಯಾಕ್ಸ್ ಸಂಡೇ ಎಂಜಾಯ್ ಮಾಡಿ ಆದ್ರೆ ಸಾಮಾಜಿಕ …
Read More »ಬೆಳಗಾವಿಯಲ್ಲಿ 12 ಜನರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಳಗಾವಿ,-ಕೋವಿಡ್-೧೯ ಸೋಂಕು ತಗುಲಿದ್ದ 12 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಗಲಕೋಟೆ ಜಿಲ್ಲೆಯ ಒಬ್ಬರು ಸೇರಿದಂತೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಸಂಕೇಶ್ವರ, ರಾಯಬಾಗ ಮತ್ತು ಅಥಣಿ ತಾಲ್ಲೂಕಿನ 12 ಜನರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬಿಡುಗಡೆ ಹೊಂದಿದವರ ವಿವರ: ಪಿ-574 ಪಿ-723 ಪಿ- 820 ಪಿ-821 ಪಿ-824 ಪಿ-834 ಪಿ-830 …
Read More »ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರನ್ನು ಭೇಟಿಯಾದ ಸಾಹುಕಾರ್…..!!!
ಬಿಡುವಿಲ್ಲದ ಓಡಾಟದ ಮಧ್ಯೆಯೂ, ಕನ್ನಡದ ಅಗ್ರಗಣ್ಯ ಲೇಖಕರೂ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ, ಕಾದಂಬರಿಕಾರರಾದ ಡಾ. ಎಸ್ ಎಲ್ ಭೈರಪ್ಪನವರನ್ನು ಕುವೆಂಪು ನಗರದ ನಿವಾಸದಲ್ಲಿ ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರೊಂದಿಗೆ ಭೇಟಿ ಮಾಡಿದೆನು. ಅವರ ಜ್ಞಾನ ಭಂಡಾರ ಅಗಾಧ. ಇಂತಹಾ ಇಳಿ ವಯಸ್ಸಿನಲ್ಲಿಯೂ, ಅಖಂಡ ಭಾರತದ ಚರಿತ್ರೆಯ ಬಗ್ಗೆ, ಟಿಪ್ಪು ಆಕ್ರಮಣ, ಯದುವಂಶ ದೊರೆಗಳಿಗಿದ್ದ ಸಾಮಾಜಿಕ ಕಳಕಳಿ ಇತ್ಯಾದಿ ಹಲವು ಜ್ವಲಂತ ವಿಷಯಗಳ …
Read More »