Breaking News

Breaking News

ಗುರುವಾರ ಒಂದು ಇನ್ ಕಮೀಂಗ್ …ಇಬ್ಬರು ಔಟ್ ಗೋಯಿಂಗ್…..!!!

ಮತ್ತೆ ಇಬ್ಬರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಬೆಳಗಾವಿ, ಮೇ 7(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದವರ ಪೈಕಿ ಇಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರೇಬಾಗೇವಾಡಿಯ ಪಿ-284 ಮತ್ತು ಕುಡಚಿಯ ಪಿ-300 ಇಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಇಂದು ಗುರುವಾರ ಒಂದು ಪಾಸಿಟೀವ್ ಕೇಸ್ ಪತ್ತೆಯಾಗಿ ಸೊಂಕಿತರ ಗುಂಪಿನಲ್ಲ ಸೇರ್ಪಡೆಯಾದ್ರೆ ಇಬ್ಬರು …

Read More »

ಕೊರೋನಾ ವಾರಿಯರ್ಸ ಮಾಡಿದ ಮೊತ್ತೊಂದು ಮಹತ್ಕಾರ್ಯ ಯಾವುದು ಗೊತ್ತಾ….???

“ಕರೊನಾ ವಾರಿಯರ್ಸ್”ಗಳಿಂದ ರಕ್ತದಾನ ಬೆಳಗಾವಿ,- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ವತಿಯಿಂದ “ವಾರ್ತಾಭವನ” ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶಿಬಿರದಲ್ಲಿ ಕೊರೊನಾ ವಾರ್ಯರ್ಸ್ ಹಾಗೂ ಮತ್ತಿತರರು ರಕ್ತದಾನ ಮಾಡಿದರು. ಕೊರೊನಾ ಹಿನ್ನೆಲೆಯಲ್ಲಿ ತುರ್ತು ಅಗತ್ಯವಿರುವ ಕುಟುಂಬಗಳಿಗೆ ಔಷಧಿ, ದಿನಸಿ ಒದಗಿಸುವುದು; ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಜನಜಾಗೃತಿ ಸೇರಿದಂತೆ ವಿವಿಧ ಬಗೆಯ ಕೆಲಸಗಳನ್ನು ಸ್ವಯಂಪ್ರೇರಣೆಯಿಂದ ಮಾಡುತ್ತಿರುವ ಸ್ವಯಂಸೇವಕರು ಹಾಗೂ …

Read More »

ಬೆಳಗಾವಿ ಜಿಲ್ಲೆಗೆ ಮತ್ತೆ ಆಘಾತ ಇಂದು ಮತ್ತೊಂದು ಪಾಸಿಟಿವ್ ಕೇಸ್ ಪತ್ತೆ…

ಬೆಳಗಾವಿ- ಇಂದು ಗುರುವಾರ ಬೆಳಗಿನ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಮೊತ್ತೊಂದು ಪಾಸಿಟೀವ್ ಕೇಸ್ ಪತ್ತೆಯಾಗಿದೆ. ಹಿರೇಬಾಗೇವಾಡಿ ಗ್ರಾಮದ ಸೊಂಕಿತನ ಸಂಪರ್ಕಕ್ಕೆ ಬಂದಿರುವ ಮತ್ತೋರ್ವನಿಗೆ ಸೊಂಕು ತೊಗಲಿದ್ದು ದೃಡವಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 74 ಕ್ಕೆ ಏರಿದಂತಾಗಿದೆ ಹಿರೇಬಾಗೇವಾಡಿಲ್ಲಿ ಸೊಂಕಿತರ ಸಂಖ್ಯೆ 37 ಕ್ಕೆ ಏರಿದೆ.

Read More »

ಅಭಯ ಪಾಟೀಲರ ಡೋನೇಶನ್ ಸೂಪರ್ ಹಿಟ್…48 ಸಾವಿರ ಜನರಿಗೆ ಸಿಗುತ್ತೆ ಫುಡ್ ಕಿಟ್…..!!!

ಬೆಳಗಾವಿ- ಬೆಳಗಾವಿ ನಗರದ ದಾನಶೂರ ರಿಂದ ಕೇಂದ್ರ ಸರ್ಕಾರಕ್ಕೆ ಕೋಟ್ಯಾಂತರ ರೂ ಅನುದಾನ ಕೊಡಿಸಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಈಗ ಮತ್ತೊಂದು ಮಹತ್ಕಾರ್ಯ ಮಾಡುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ . ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸಮೀಕ್ಷೆ ಮಾಡಿ 48 ಸಾವಿರ ಜನರನ್ನು ಗುರುತಿಸಿ ಅವರಿಗೆ ಫುಡ್ ಕಿಟ್ ಕೊಡುವ ಮಹತ್ಕಾರ್ಯಕ್ಕೆ ಶಾಸಕ ಅಭಯ ಪಾಟೀಲ ಇಂದು ಚಾಲನೆ ನೀಡಿದ್ದಾರೆ. ಬೆಳಗಾವಿಯ ಮಹಾವೀರ ಭವನದಲ್ಲಿ ಕಿಟ್ …

Read More »

ಸಹಾಯ ಕೇಳಲು ಹೋದವರಿಗೆ ದುಡ್ಯಾಕ ಹೋಗ್ರೀ ಅಂದ್ರು …. ಸುಮ್ಮನೇ ಗುದ್ದ್ಯಾಡಾಕ ಹೋಗಬ್ಯಾಡ್ರಿ ಅಂದ್ರು…..!!

ಬೆಳಗಾವಿ-ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರದ್ದು ಸಾಧು ಸ್ವಭಾವ ಇದನ್ನು ಎಲ್ಲರೂ ನಂಬುತ್ತಾರೆ.ಆದ್ರೆ ಬಡವರು ಅವರ ಹತ್ತಿರ ಸಹಾಯ ಕೇಳಲು ಹೋದ ಸಂಧರ್ಭದಲ್ಲಿ ಅವರು ಆಡಿದ ಮಾತುಗಳನ್ನು ಕೇಳಿದರೆ ಅದನ್ನು ನಂಬೋಕೆ ಆಗ್ತಾ ಇಲ್ಲ ಕೊರೋನಾ ಸಂಕಷ್ಟದಿಂದ ಎಲ್ಲರೂ ಕಷ್ಟ ಅನುಭವಿಸುತ್ತಿದ್ದಾರೆ.ಟಿವ್ಹಿ ಯಲ್ಲಿ,ಪೇಪರ್ ನಲ್ಲಿ ಎಲ್ಲಾ ಕ್ಷೇತ್ರದ ಶಾಸಕರು ಸಹಾಯ ಮಾಡುತ್ತಿರುವ ಸುದ್ಧಿ ನೋಡಿ,ಬೈಲಹೊಂಗಲದ ಬಡಪಾಯಿಗಳು ಸಹಾಯ ಮಾಡುವಂತೆ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಬಳಿ ಹೋದ ಸಂಧರ್ಭದಲ್ಲಿ ಬಡವರ …

Read More »

ಪುಣೆಯ ಭಟ್ ದಂಪತಿಗೆ ನೆರವಾದ ಬೆಳಗಾವಿ ಎಸ್ ಪಿ ನಿಂಬರಗಿ….!!!!

ಪುಣೆಯಿಂದ ಗರ್ಭಿಣಿ ಪತ್ನಿಯೊಂದಿಗೆ ರಾಜ್ಯಕ್ಕೆ ಆಗಮಿಸಲು ಕನ್ನಡಿಗ ಪರದಾಡಿದ ಘಟನೆ ನಿಪ್ಪಾಣಿ ಬಳಿ ಚೆಕ್ ಪೋಸ್ಟ್ ನಲ್ಲಿ ನಡೆದಿದೆ. ಎಂಟು ತಿಂಗಳ ಗರ್ಭಿಣಿ ಪತ್ನಿ ಜೊತೆ ರಾಘವೇಂದ್ರ ಭಟ್‌ ನಿಪ್ಪಾಣಿಯ ಕುಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ಧಮ್ಮಯ್ಯಾ ಅಂದ್ರೂ ಕರ್ನಾಟಕದ ಗಡಿ ಪ್ರವೇಶ ಮಾಡಲು ಅವಕಾಶ ಸಿಗಲಿಲ್ಲ. ಆ್ಯಂಬುಲೆನ್ಸ್‌ನಲ್ಲಿ ಪುಣೆಯಿಂದ ಕೊಗನೊಳ್ಳಿ ಗೇಟ್‌ಗೆ ಆಗಮಿಸಿರುವ ದಂಪತಿ ನಾವು ಕುಮಟಾಗೆ ಹೋಗಬೇಕು ನಮಗೆ ಪುಣೆ ಜಿಲ್ಲಾಡಳಿತ ಪಾಸ್ ಕೊಟ್ಟಿದೆ ನೀವೂ ಕೊಡಿ …

Read More »

ಸತತ ನಾಲ್ಕು ದಿನ ಬೆಳಗಾವಿ ಜಿಲ್ಲೆಯಲ್ಲಿ ಪಾಸಿಟೀವ್ ಕೇಸ್ ಇಲ್ಲ

ಬೆಳಗಾವಿ – ಎಪ್ರಿಲ್ 2 ರಂದು ಕೇವಲ ಒಂದೇ ಒಂದು ಪಾಸಿಟೀವ್ ಕೇಸ್ ಬಂದಿತ್ತು ಇದಾದ ಬಳಿಕ ಸತತ ನಾಲ್ಕು ದಿನಗಳಿಂದ ಕೊರೋನಾ ತಾಂಡವ ಬೆಳಗಾವಿ ಜಿಲ್ಲೆಯಲ್ಲಿ ಶಾಂತವಾಗಿದೆ. ನಾಲ್ಕು ದಿನಗಳಿಂದ ಬೆಳಿಗ್ಗೆ ಸಂಜೆ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ಗಳು ಬೆಳಗಾವಿ ಜಿಲ್ಲೆಯ ಜನರಿಗೆ ವರದಾನವಾಗಿವೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 73 ಅದರಲ್ಲಿ 34 ಜನ ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಒಬ್ಬರು ಸಾವನ್ನೊಪ್ಪಿದ್ದು 38 …

Read More »

ಅವರೊಳ್ಳಿಯಲ್ಲಿ ಚಿರತೆ ದಾಳಿ ,ಯುವಕ ಬಚಾವ್….!!!

ಬೆಳಗಾವಿ- ಖಾನಾಪೂರದ ಅವರೊಳ್ಳಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ನಿನ್ನೆ ರಾತ್ರಿ ಕುರಿ ಬಲಿ ಪಡೆದಿದ್ದ ಚಿರತೆ ಇಂದು ಬೆಳಿಗ್ಗೆ ಯುವಕನ ಮೇಲೆ ದಾಳಿ ಮಾಡಿದ್ದು ಯುವಕ ಬಚಾವ್ ಆದ ಘಟನೆ ನಡೆದಿದೆ. ಹೊಲಕ್ಕೆ ಹೋಗಿದ್ದ ಯುವಕನ ಮೇಲೆ ಚಿರತೆ ದಾಳಿ ಮಾಡಿರುವದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ನಿನ್ನೆಯಷ್ಟೇ ಕುರಿಯ ಮೇಲೆ ದಾಳಿ ಮಾಡಿದ್ದ ಈ ಚಿರತೆ ಇಂದು ಅವರೊಳ್ಳಿಯಲ್ಲಿ ಯುವಕನ ಮೇಲೆ‌ ದಾಳಿ ಮಾಡಿದೆ. ಅದೃಷ್ಟವಶಾತ್ ಚಿರತೆಯಿಂದ ತಪ್ಪಿಸಿಕೊಂಡು ಯುವಕ ಬಚಾವ್ …

Read More »

ಬೆಳಗಾವಿ ಜಿಲ್ಲಾಧಿಕಾರಿಗಳ ಸರ್ಕಾರಿ ಬಂಗಲೆಯ ಪೋಲೀಸ್ ಗಾರ್ಡ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಜಿಲ್ಲಾಧಿಕಾರಿ ನಿವಾಸದ ಗಾರ್ಡ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸದ ಮುಖ್ಯದ್ವಾರದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಪೋಲೀಸ್ ಪೇದೆಯೊಬ್ಬ ಸಕ್ಯುರಿಟಿಗೆ ನೀಡಲಾಗಿದ್ದ ಆಯುಧದಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪ್ರಕಾಶ ಗುರುವಣ್ಣವರ (35) ಆತ್ಮತ್ಯೆ ಮಾಡಿಕೊಂಡ ಪೇದೆಯಾಗಿದ್ದು. ಕಿತ್ತೂರು ಸಮೀಪದ ಅಂಬಡಗಟ್ಟಿ ಗ್ರಾಮದವರಾಗಿದ್ದಾರೆ. ಇವರು ಮನೋವ್ಯಾದಿಯಿಂದ ಬಳಲುತ್ತಿದ್ದರು,ಅದರ ಉಪಚಾರವನ್ನು ಪಡೆಯುತ್ತಿದ್ದರು. ನಿನ್ನೆ ರಾತ್ರಿ ಇವರ ಮನೆಯವರು ಸ್ಮಾರ್ಟ್ ಫೋನ್ ಕಸಿದುಕೊಂಡು ಸಾದಾ ಫೋನ್ ನೀಡಿದ್ದಕ್ಕಾಗಿ …

Read More »

ಖಾನಾಪುರ ತಾಲೂಕಿನ‌ ಅವರೊಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ

ಬೆಳಗಾವಿ-ಖಾನಾಪುರ ತಾಲೂಕಿನ‌ ಅವರೊಳ್ಳಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮದ ಕುರಿಯನ್ನು ಬಲಿ ಪಡೆದ ಘಟನೆ ನಡೆದಿದೆ. ಬೆಳಗಾವಿ ‌ಜಿಲ್ಲೆಯ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ ಕರೊನಾ ಭಯದ ಮಧ್ಯೆ ಜನರಿಗೆ ಚಿರತೆಯ ಭಯ ಶುರುವಾಗಿದೆ. ಅವರೊಳ್ಳಿ ಗ್ರಾಮದ ಸುತ್ತಮುತ್ತ ಓಡಾಡ್ತಾ ಇರೋ ಚಿರತೆ ನೋಡಿ ಜನ ಭಯಭೀತರಾಗಿ ಓಡಾಡಿದ್ದಾರೆ. ಅವರೊಳ್ಳಿ ಗ್ರಾಮಕ್ಕೆ ನುಗ್ಗಿರುವ ಚಿರತೆ ಕುರಿಯೊಂದನ್ನು ಬಲಿ ಪಡೆದಿದೆ ಜನರ ಕೂಗಾಟ ಕೇಳಿ ಅರ್ಧಕ್ಕೆ ಕುರಿಯನ್ನು ಬಿಟ್ಟು ಹೋಗಿದೆ …

Read More »