Breaking News

Breaking News

ಕೊರೋನಾ ವೈರಸ್ ಹರಡದಂತೆ ಪ್ರಾರ್ಥಿಸಿ ಬೆಳಗಾವಿಯಲ್ಲಿ ಧನ್ವಂತರಿ ಹೋಮ…!!!!

ಬೆಳಗಾವಿ-ಕೊರೋನಾ ಸೊಂಕಿನಿಂದ ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಪ್ರಾರ್ಥಿಸಿ ಬೆಳಗಾವಿ ನಗರದ ಲಕ್ಷ್ಮೀ ಟೆಕನಲ್ಲಿಯ ಹುಕ್ಕೇರಿ ಹಿರೇಮಠ ದಲ್ಲಿ ಧನ್ವಂತರಿ ಹೋಮ್ ನಡೆಯಲಿದೆ. ಇಂದು ಮಧ್ಯಾಹ್ನ 2.30 ಗಂಟೆ ಕಾರ್ಯಕ್ರಮ ನಡೆಯಲಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಹುಕ್ಕೇರಿ ಹಿರೇಮಠದ ಮಹಿಳಾ ರುದ್ರ ಬಳಗದಿಂದ ಹೋಮ್ ನಡಯಲಿದೆ. ಕೊರೊನಾ ವೈರಸ್ ಹರಡದಂತೆ ಹೋಮ್ ಆಯೋಜನೆ.ಮಾಡಿರುವದು ವಿಶೇಷವಾಗಿದೆ

Read More »

ಬೆಳಗಾವಿಯ ಮಹಾರಾಷ್ಟ್ರ,ಗೋವಾ, ಗಡಿಯಲ್ಲಿ ,ಮೆಡಿಕಲ್ ಟೆಸ್ಟ್ ಕರೋನಾ…..!!!!

ಬೆಳಗಾವಿ- ಪಕ್ಜದ ಮಹಾರಾಷ್ಡ್ರದಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಬೆಳಗಾವಿ ಜಿಲ್ಲಾಡಳಿತ ಮಹಾರಾಷ್ಟ್ರದ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿ ಗಡಿ ಪ್ರವೇಶ ಮಾಡುವವರ ಆರೋಗ್ಯ ಮೇಲೆ ನಿಗಾ ಇಡಲು ವೈದ್ಯರನ್ನು ನಿಯೋಜನೆ ಮಾಡಿದೆ ನಿಪ್ಪಾಣಿಯ ಕುಗನೋಳಿಯಲ್ಲಿರುವ ಚೆಕ್ ಪೋಸ್ಟ್ ನಲ್ಲಿ,ಮಹಾರಾಷ್ಟ್ರದಿಂದ ಬೆಳಗಾವಿ ಗಡಿ ಪ್ರವೇಶ ಮಾಡುವ ಬಸ್ ಗಳನ್ನು ಇನ್ನಿತರ ಖಾಸಗಿ ಬಸ್ ಗಳನ್ನು ತಡೆದು,ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುವ ಕಾರ್ಯಾಚರಣೆ ಇಂದು ಬೆಳಿಗ್ಗೆಯಿಂದ ಆರಂಭವಾಗಿದೆ. ಮಹಾರಾಷ್ಟ್ರ ದಲ್ಲಿ ಕೊರೋನಾ …

Read More »

ಹೊರದೇಶದಲ್ಲಿರುವ ಜಿಲ್ಲೆಯ ಜನರ ಮಾಹಿತಿ ‌ನೀಡಲು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಮನವಿ

  ಬೆಳಗಾವಿ,  ಜಿಲ್ಲೆಯ ನಿವಾಸಿಗಳ ಪೈಕಿ ಯಾರಾದರೂ ಉದ್ಯೋಗ ಶಿಕ್ಷಣ ಮತ್ತಿತರ ಕಾರಣಗಳಿಂದ ಹೊರದೇಶದಲ್ಲಿ ವಾಸಿಸುತ್ತಿದ್ದು, ಸದ್ಯದಲ್ಲಿ ಸ್ವದೇಶಕ್ಕೆ ಆಗಮಿಸುತ್ತಿದ್ದರೆ ಅಂತಹವರ ಹೆಸರು, ವಿಳಾಸ ಮತ್ತಿತರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಮೂಲತಃ ಇದೇ ಜಿಲ್ಲೆಯವರಾಗಿದ್ದು ಉದ್ಯೋಗ, ಶಿಕ್ಷಣ ಅಥವಾ ಇನ್ಯಾವುದೇ ಉದ್ಧೇಶದಿಂದ ಹೊರದೇಶಗಳಲ್ಲಿ ಇರುವರ ಬಗ್ಗೆ ಸಂಬಂಧಿಸಿದ ‌ಕುಟುಂಬದವರು ಮಾಹಿತಿಯನ್ನು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. …

Read More »

ಸಾಮೂಹಿಕ ಪ್ರಾರ್ಥನೆ; ಸ್ವಯಂನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಮನವಿ

ಬೆಳಗಾವಿ,  ಕೋವಿಡ್ ೧೯ ವೈರಾಣು ಹರಡುವಿಕೆ ತಡೆಗಟ್ಟುವ ಉದ್ಧೇಶದಿಂದ ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲೆಯ ಟೋಲ್ ಪ್ಲಾಜಾಗಳಲ್ಲಿ ಆರೋಗ್ಯ ತಪಾಸಣಾ ತಂಡಗಳನ್ನು ನಿಯೋಜಿಸಲಾಗಿದೆ. ಅದೇ ರೀತಿ ಗೋವಾ ರಾಜ್ಯ ಸಂಪರ್ಕಿಸುವ ಸ್ಥಳಗಳಲ್ಲಿ ಕೂಡ ಸೂಕ್ತ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು. ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡದಂತೆ ತಡೆಗಟ್ಟುವಿಕೆ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಇಂದು ಮಂಗಳವಾರ (ಮಾ.೧೭) ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ವಿವಿಧ …

Read More »

ಕೊರೋನಾ: ಗೋವಾ,ಮಹಾರಾಷ್ಟ್ರ ಗಡಿಯಲ್ಲಿ ವೈದ್ಯರ ತಂಡದ ನಿಯೋಜನೆ -ಡಿಸಿ ಬೊಮ್ಮನಹಳ್ಳಿ

ಗೋವಾ,ಮಹಾರಾಷ್ಟ್ರ ಗಡಿಯಲ್ಲಿ ವೈದ್ಯರ ತಂಡದ ನಿಯೋಜನೆ -ಡಿಸಿ ಬೊಮ್ಮನಹಳ್ಳಿ ಬೆಳಗಾವಿ- ನೆರೆಯ ರಾಜ್ಯಗಳಲ್ಲಿ ಕೊರೋನಾ ಸೊಂಕು ಹರಡುತ್ತಿರುವ ಹಿನ್ನಲೆಯಲ್ಲಿ , ಮುಂಜಾಗೃತಾ ಕ್ರಮವಾಗಿ,ಬೆಳಗಾವಿ ಜಿಲ್ಲೆಯ,ಗೋವಾ,ಮತ್ತು ಮಹಾರಾಷ್ಟ್ರದ ಗಡಿಯಲ್ಲಿ ವೈದ್ಯರ ತಂಡಗಳನ್ನು ನಿಯೋಜಿಸಿ ಬೆಳಗಾವಿ ಜಿಲ್ಲೆ ಗಡಿ ಪ್ರವೇಶ ಮಾಡುವವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಮಾಹಿತಿ ನೀಡಿದರು . ಬೆಳಗಾವಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಧಾರ್ಮಿಕ ಮುಖಂಡರ,ವಿವಿಧ ಸಂಘಟನೆಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ …

Read More »

ಒಂದು ವಾರದವರೆಗೆ ಎಲ್ಲಾ ಸಂತೆ,ಜಾತ್ರೆ,ರದ್ದು ,ಇಂದು ಸಂಜೆ ದಾರ್ಮಿಕ ಮುಖಂಡರ ಸಭೆ

ಬೆಳಗಾವಿ- ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೊಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಮುಂಜಾಗೃತವಾಗಿ ಇಂದಿನಿಂದ ಒಂದು ವಾರದವರೆಗೆ ಜಿಲ್ಲೆಯ ಎಲ್ಲ ಸಂತೆ,ಮತ್ತು ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ದಿನನಿತ್ಯದ ಪೂಜೆ ಮತ್ತು ಇನ್ನಿತರ ಧಾರ್ಮಿಕ ಕಾರ್ಯಗಳಿಗೆ ವಿನಾಯತಿ ನೀಡಲಾಗಿದ್ದು,ಇಂದಿನಿಂದ ಒಂದು ವಾರದವರೆಗೆ ಜಿಲ್ಲೆಯಲ್ಲಿ ಸಂತೆ ,ಮತ್ರು ಜಾತ್ರೆ ನಡೆಯುವಂತಿಲ್ಲ ಎಂದು ಕಟ್ಟು ನಿಟ್ಟಿನ ಆದೇಶ ಮಾಡಲಾಗಿದೆ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕು ಹರಡದಂತೆ ತಡೆಯಲು ದೊಡ್ಡ,ದೊಡ್ಡ ಶಾಪಿಂಗ್ ಮಾಲ್ ಮತ್ತು …

Read More »

ಪಾಟೀಲ ಪುಟ್ಟಪ್ಪ LLB ಕಲಿತಿದ್ದು ಬೆಳಗಾವಿಯಲ್ಲಿ

ಬೆಳಗಾವಿ- ಗಡಿನಾಡ ಕನ್ನಡಿಗರ ಧ್ವನಿಯಾಗಿದ್ದ ನಾಡೋಜ ಪಾಟೀಲ ಪುಟ್ಟಪ್ಪನವರಿಗೆ ಬೆಳಗಾವಿ ಅಂದ್ರೆ ಪಂಚ ಪ್ರಾಣ,ಪಾಪು LLB ಕಲಿತಿದ್ದು ಬೆಳಗಾವಿಯ ಕೆ ಎಲ್ ಎಸ್ ಸಂಸ್ಥೆಯ ಲಾ ಕಾಲೇಜಿನಲ್ಲಿ ಪಾಪು ಬೆಳಗಾವಿಯಲ್ಲಿ ಓದುತ್ತಿರುವಾಗಲೇ ಗಡಿನಾಡ ಕನ್ನಡಿಗರ ಪರವಾಗಿ ಹೋರಾಟದಲ್ಲಿ ಧುಮುಕಿ ಬೆಳಗಾವಿಯ ಧ್ವನಿಯಾಗಿ ಹೊರಹೊಮ್ಮಿದ್ದರು ಗಡಿ ಗಟ್ಟಿ ಆಗಬೇಕಾದರೆ ನಿಪ್ಪಾಣಿ ಜಿಲ್ಲೆ ಆಗಲೇ ಬೇಕು ಎಂದು ಪ್ರತಿಪಾದಿಸುತ್ತ ಬಂದ ಪಾಟೀಲ ಪುಟ್ಟಪ್ಪ ನವರು ಗಡಿನಾಡ ಕುರಿತು ಅಪಾರ ಕಾಳಜಿ ಹೊಂದಿದ್ದರು. ಗಡಿ …

Read More »

ಬಾರದ ಲೋಕಕ್ಕೆ ಮರಳಿದ ಪಾಪು…..

ಬಾರದ ಲೋಕಕ್ಕೆ ಮರಳಿದ ಪಾಪು….. ಬೆಳಗಾವಿ-ಪತ್ರಿಕಾ ಲೋಕದ ಉಜ್ವಲ ತಾರೆ, ಕರ್ನಾಟಕ ವಿದ್ಯಾವರ್ಧಕ ‌ಸಂಘದ ಅಧ್ಯಕ್ಷರಾಗಿದ್ದ ಡಾ.ಪಾಟೀಲ ಪುಟ್ಟಪ್ಪ ಇನ್ನಿಲ್ಲ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಈಗಷ್ಟೇ ಕೊನೆಯುಸಿರೆಳೆದರು. ಕರ್ನಾಟಕ ಏಕೀಕರಣದ ಭೀಷ್ಮ ,ಉತ್ತರ ಕರ್ನಾಟಕದ ಅಭಿವೃದ್ಧಿಯ ಹರಿಕಾರ ,ಗಡಿನಾಡ ಗುಡಿಯ ಭಗವಂತ,ಅಪ್ರತಿಮ ಕನ್ನಡ ಹೋರಾಟಗಾರ ರಾಗಿದ್ದ ಪಾಟೀಲ ಪುಟ್ಟಪ್ಪ ಅವರು ಬಾರದ ಲೋಕಕ್ಕೆ ಮರಳಿದ್ದು ಈ ನಾಡಿಗೆ ತುಂಬುಲಾರದ ನಷ್ಟ

Read More »

ಅಲಮಟ್ಟಿ ಎತ್ತರ ಹೆಚ್ಚಿಸಲು ನಾಳೆ ಜಲಸಂಪನ್ಮೂಲ ಸಚಿವರ ದೆಹಲಿ ಚಲೋ….!!!

  ಬೆಳಗಾವಿ- ಕಳಸಾ ಬಂಡೂರಿ ನಾಲಾ ಯೋಜನೆಯ ಕಾನೂನು ತೊಡಕುಕುಗಳು ನಿವಾರಣೆಯಾದ ಬಳಿಕ ,ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಈಗ ಅಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣಾ ಮಟ್ಟವನ್ನು ಏರಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಾಳೆ ದಿ. 17.03.2020 ಮಂಗಳವಾರ ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ ರಮೇಶ್ ಜಾರಕಿಹೊಳಿಯವರು ಕೇಂದ್ರದ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು …

Read More »

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ತಯಾರಿ…..!!!

ಪಳಗಾವಿ ಬರುವ ಮಹಾ ನಗರ ಪಾಲಿಕೆಯ ಚುನಾವಣಾ ಪೂರ್ವಭಾವಿ ಸಭೆಯನ್ನು ನಿನ್ನೆ ಭಾನುವಾರ ಶಾಸಕರ ಕಾರ್ಯಾಲಯದಲ್ಲಿ ನಡೆಸಲಾಯಿತು. ಪಕ್ಷದ ಟಿಕೆಟ್ ಬಯಸುವ ಅಭ್ಯರ್ಥಿಗಳು ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡ್ ಗಳ ಕೆಲಸ ಕಾರ್ಯಗಳ ಬಗ್ಗೆ ಶಾಸಕರ ಗಮನ ಸೆಳೆದರು , ಚುನಾವಣಾ ರೂಪರೇಷೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಿತು. ಪ್ರಥಮ ಬಾರಿಗೆ ಪಕ್ಷದ ಚಿಹ್ನೆ ಯ ಮೇಲೆ ಚುನಾವಣೆ ನಡೆಸುವುದರಿಂದ ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಪಕ್ಷದ ” …

Read More »