Home / Breaking News (page 483)

Breaking News

ಶರತ್ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಬಿಜೆಪಿ ಪ್ರತಿಭಟನೆ

  ಬೆಳಗಾವಿ- ಮಂಗಳೂರಿನ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಖಂಡಿಸಿ ಬೆಳಗಾವಿಯ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ಹೊರಡಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ರು ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಅವರ ಹತ್ಯೆಗೈದ ಆರೋಪಿಗಳನ್ನು ಬಂಧಿಸುವಲ್ಲಿ …

Read More »

ಜಿಲ್ಲೆಯಲ್ಲಿ ಧಾರಾಕಾರ ಮಳೆ ಟ್ರ್ಯಾಕ್ಸ ಸಮೇತ ಕೊಚ್ಚಿಹೋದ ರಸ್ತೆ

ಬೆಳಗಾವಿ- ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಜನ ಜೀವನ ಅಸ್ತವ್ಯೆಸ್ಥ ವಾಗಿದ್ದು ನೂರಾರು ಗಿಡಮರಗಳು ನೆಲಕ್ಕುರಿಳಿವೆ ಹಲವಡೆ ಮನೆಗಳು ಕುಸಿದಿವೆ ಮಲಪ್ರಭಾ ಉಗಮಸ್ಥಾನದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕಣಕುಂಬಿಯ ಕಳಸಾ ಕಾಮಗಾರಿ ಸ್ಥಳದಲ್ಲಿ ಭೂ ಕುಸಿತವಾದ ಪರಿಣಾಮ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಕಣಕುಂಬಿ. ಮಾವುಲಿ ದೇವಸ್ಥಾನದ ಎದುರಿನ ರಸ್ತೆ ಕೊಚ್ಚಿಹೋಗಿದೆ ಕಣಕುಂಬಿ-ಚಿಗಳೆ,ಕಣಕುಂಬಿ-ಹಂದಿಗೊಪ್ಪ ನಡುವಿನ ರಸ್ತೆ ಸಂಚಾರ ಸ್ಥಗಿತವಾಗಿದೆ ಪ್ರವಾಹದಲ್ಲಿ ಟ್ರ್ಯಾಕ್ಸ್ ವಾಹನ ಕೊಚ್ಚಿಹೋಗಿದೆ …

Read More »

ದಾಳಿ ಮಾಡಲು ಹೋದ ತಹಶೀಲ್ದಾರನ ಮೇಲೆ ಅಟ್ಯಾಕ್..

ರಾಮದುರ್ಗದಲ್ಲಿ‌ ಮರಳು ದಂಧೆಕೋರರ ಅಟ್ಟಹಾಸ ಮುಂದುವರೆದಿದೆ ಅಕ್ರಮ ಮರಳು ಸಾಗಾಟ ತಡೆಯಲು ಹೋದ ತಹಶೀಲ್ದಾರ ವಾಹನಕ್ಕೆ ಟ್ಯಾಕ್ಟರ್ ಡಿಕ್ಕಿ ಹೊಡೆಯುವ ಮೂಲಕ ಆಕ್ರಮ ತಡೆಯಲು ಹೋದ ತಹಶೀಲ್ದಾರನ ಮೇಲೇಯೇ ಅಟ್ಯಾಕ್ ಮಾಡಿದ ಘಟನೆ ನಡೆದಿದೆ ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ತಹಶೀಲ್ದಾರರ ಟಾಟಾ ಸುಮೋ ವಾಹನಕ್ಕೆ ಡಿಕ್ಕಿ ಹೊಡಿಸಿ ಚಾಲಕ ಪರಾರಿಯಾಗಿದ್ದಾನೆ ರಾಮದುರ್ಗ ಪಟ್ಟಣದ ಹೊರವಲಯದಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದೆ ತಹಶೀಲ್ದಾರ ರಾಮಚಂದ್ರ ಕಟ್ಟಿ ಕೈಗೆ ಗಾಯಗಳಾಗಿದ್ದು ಕುಲಗೋಡ …

Read More »

ತಗ್ಗಿ ನಲ್ಲಿ ಮಣ್ಣು ಹಾಕಿದರೆ ರಾಡಿ ಆಗತೈತಿ…ಖಡೀ ಹಾಕಿದ್ರ ಜಿಗಿತೈತಿ…!

  ಬೆಳಗಾವಿ-ಬೆಳಗಾವಿಗೆ ಬರುವ ಜನ ಬೆಳಗಾವಿ ತಗ್ಗಿನಲ್ಲಿದೆಯೋ ಅಥವಾ ತಗ್ಗಿನಲ್ಲಿ ಬೆಳಗಾವಿ ಇದೆಯೋ ಅಂತ ಕೇಳ್ತಾರೆ ರಸ್ತೆಯಲ್ಲಿ ಬಿದ್ದಿರುವ ತಗ್ಗುಗಳಲ್ಲಿ ಮಣ್ಣು ಹಾಕಿದ್ರ ರಾಡಿ ಆಗತೈತಿ ಖಡೀ ಹಾಕಿದ್ರ ಜಿಗಿತೈತಿ ಅದಕ್ಕ ಮಣ್ಣು ಖಡೀ ಹಾಕದೇ ತಗ್ಗುಗಳಲ್ಲಿ ಫೇವರ್ ಹಾಕಿ ಅಂತ ನಗರ ಸೇವಕಿ ಸರಳಾ ಹೇರೇಕರ ಅವರು ಪಾಲಿಕೆ ಸಭೆಯಲ್ಲಿ ಧ್ವನಿ ಎತ್ತಿದರು ನಗರಸೇವಕಿ ಪುಷ್ಪಾ ಪರ್ವತರಾವ ಅವರು ಮಾತನಾಡಿ ಗಣೇಶ ಹಬ್ಬ ಹತ್ತಿರ ಬಂದಿದೆ ರಸ್ತೆಯಲ್ಲಿ ಬಿದ್ದಿರುವ …

Read More »

ಬೆಳಗಾವಿ ಪಾಲಿಕೆ ಸಭೆಯಲ್ಲಿ ಮುಂದುವರೆದ ನಾಡಗೀತೆ ಸಂಪ್ರದಾಯ

  ಬಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಸ್ಥಾಯಿ ಸಮೀತಿಗಳ ಚುನಾವಣೆಯ ಸಂಧರ್ಭದಲ್ಲಿ ಪಾಲಿಕೆಯ ಕೌನ್ಸೀಲ್ ಹಾಲ್ ನಲ್ಲಿ ಜಿಲ್ಲಾಧಿಕಾರಿ ಎನ್ ಜಯರಾಮ ಅವರು ಸಭೆಯ ಆರಂಭದಲ್ಲಿ ನಾಡಗೀತೆ ನುಡಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವ ಮೂಲಕ ಐತಿಹಾಸಿಕ ಸಂಪ್ರದಾಯಕ್ಕೆ ಚಾಲನೆ ನೀಡಿದ್ದರು ಇಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯ ಆರಂಭದಲ್ಲಿ ಮೇಯರ್ ಸಂಜೋತಾ ಬಾಂಧೆಕರ ಮೊದಲು ಸ್ಥಾಯಿ ಸಮೀತಿಗಳ ನೂತನ ಅಧ್ಯಕ್ಷರಿಗೆ ಅಭಿನಂಧನೆ ಸಲ್ಲಿಸಿದ ಬಳಿಕ ನಾಡಗೀತೆಗೆ ಗೌರವಸಲ್ಲಿಸಲು ಎಲ್ಲ …

Read More »

ಗೊಂದಲದ ಗೂಡಾಗಲಿರುವ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ

ಬೆಳಗಾವಿ- ಇಂದು ಸೋಮವಾರ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯಲಿದ್ದು ಈ ಸಭೆ ಎಂಈಎಸ್ ಭಿನ್ನಮತದ ಸೇಡಿಗೆ ಆಹುತಿಯಾಗಲಿದೆ ಇತ್ತೀಚಿಗೆ ನಡೆದ ಸ್ಥಾಯಿ ಸಮೀತಿಗಳ ಅಧ್ಯಕ್ಷರ ಚುನಾವಣೆಯಲ್ಲಿ ಎಂಈಎಸ್ ನಗರ ಸೇವಕರ ಒಂದು ಗುಂಪು ತಟಸ್ಥವಾಗಿ ಉಳಿದ ಪರಿಣಾಮ ಮೂರು ಸ್ಥಾಯಿ ಸಮೀತಿಗಳಿಗೆ ಕನ್ನಡ ನಗರಸೇವಕರೇ ಆಯ್ಕೆಯಾಗಿದ್ದರು ಈ ವಿಷಯವನ್ನೇ ಮುಂದಿಟ್ಟುಕೊಂಡು ಕೆಲವು ಎಂಈಎಸ್ ನಗರ ಸೇವಕರ ಎರಡು ಗುಂಪುಗಳು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗುವ ಸಾಧ್ಯತೆಗಳಿವೆ ಜೊತೆಗೆ …

Read More »

ರಾಜ್ಯದಲ್ಲಿ ಬಿಜೆಪಿ ನಾಯಕರಿಂದ ಕಾನೂನು ಭಂಗ

ಬೆಳಗಾವಿ-ರಾಜ್ಯದಲ್ಲಿ ಬಿಜೆಪಿ ನಾಯಕರು ಕಾನೂನನ್ನು ಕೈಗೆತ್ತಿಕೊಂಡು ಕಾನೂನು ಭಂಗ ಮಾಡಿದ್ದಾರೆ ಓಟ್ ಬ್ಯಾಂಕ್ ಗೋಸ್ಕರ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ತ ಸದಸ್ಯ ಕಾಂಗ್ರೆಸ್ ಮುಖಂಡ ಉಗ್ರಪ್ಪ ಆರೋಪಿಸಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಉಗ್ರಪ್ಪ ರಾಜ್ಯದ ಬಿಜೆಪಿ ನಾಯಕರು ಗುಜರಾತ್ ಮಾಡೆಲ್ ಅನುಸರಿಸಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಸಮಾಜದ ಸ್ವಾಸ್ಥ್ಯವನ್ನು ಕೆಡೆಸುತ್ತಾದ್ದಾರೆ ಓಟ್ ಬ್ಯಾಂಕ್ ಗೋಸ್ಕರ ಹಿಂದುಗಳನ್ನು ಎತ್ತಿಕಟ್ಟುವ …

Read More »

ಸ್ಮಾರ್ಟ್ ಸಿಟಿಯಲ್ಲಿ ಸ್ಮಾರ್ಟ್ ಶಾಸಕನ..ಸ್ಮಾರ್ಟ್ ನಗರ…..!!

ಬೆಳಗಾವಿ- ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಯಾವಾಗ ಪ್ರಾರಂಭ ಆಗುತ್ತದೆಯೋ ಗೊತ್ತಿಲ್ಲ ಆದರೆ ಬೆಳಗಾವಿಯ VIP ಬಡಾವಣೆ ಎಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ಹನುಮಾನ ನಗರವಂತೂ ಸ್ಮಾರ್ಟ್ ಆಗಿದೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ಹನಮಾನ ನಗರದ ಜಾಧವ ನಗರದಿಂದ ಹಿಂಡಲಗಾ ಗಣಪತಿ ಮಂದಿರದ ವರೆಗೂ ರಸ್ತೆಯ ಡಿವೈಡರ್ ಗಳಲ್ಲಿ ಅತ್ಯಾಕರ್ಷಕ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ಅತ್ಯಾಕರ್ಷಕ ಬೀದಿ ದೀಪಗಳನ್ನು …

Read More »

ಹಿಂಡಲಗಾ ಜೈಲಿನ ಮುಂದೆ ಟೆಂಟ್ ಹಾಕಿ ಜೈಲು ಸಿಬ್ಬಂಧಿಗಳ ಪ್ರತಿಭಟನೆ

ಬೆಳಗಾವಿಯಲ್ಲಿ ಹಿಂಡಲಗಾ ಜೈಲಿನಲ್ಲಿ ಡಿಐಜಿ ರೂಪ ಪರಪ್ಪನ ಅ್ಗರಹಾರದ ಕುರಿತು ನೀಡಿರುವ ವರದಿಯನ್ನು ಖಂಡಿಸಿ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ. ನಡೆಸಿದ್ದಾರೆ ಜೈಲು ಅಧೀಕ್ಷ ಟಿ.ಪಿ.ಶೇಷ ನೇತೃತ್ವದಲ್ಲಿ ನೂರಾರು ಸಿಬ್ಬಂದಿಗಳ ಪ್ರತಿಭಟನೆ ನಡೆಸಿದ್ದು ಡಿಐಜಿ ರೂಪ ತಮ್ಮ ಹಿರಿಯ ಅಧಿಕಾರಿಗೆ ಪರಪ್ಪನ ಅಗ್ರಹಾರ ಜೈಲಿನ ಬಗ್ಗೆ ಬರೆದ ಪತ್ರದ ಹಿನ್ನಲೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ ಹಿಂಡಲಗಾ ಜೈಲು ಸಿಬ್ಬಂದಿಯಿಂದ ಮೌನ ಪ್ರತಿಭಟನೆ ಮುಂದುವರೆದಿದ್ದು …

Read More »