Breaking News

ಪತಿಯ ಕಿರುಕಳ ,ನೇಣಿಗೆ ಶರಣಾದ ವಿವಾಹಿತ ಮಹಿಳೆ

ಬೆಳಗಾವಿ-ಪತಿಯ ಮನೆಯವರ ಕಿರುಕುಳಕ್ಕೆ ಬೇಸತ್ತು ವಿವಾಹಿತ ಮಹಿಳೆಯೊಬ್ಬಳು ನೇಣಿಗೆ ಶರಣಾದ ಘಟನೆ,ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ನಡೆದಿದೆ. ಸಾಂಬ್ರಾ ಗ್ರಾಮದ ಸವಿತಾ ಮಾರುತಿ ಜೋಗಾನಿ(32) ನೇಣಿಗೆ ಶರಣಾದ ಮಹಿಳೆಯಾಗಿದ್ದು,ಮೂಲತಃ ರಾಕಸಕೊಪ್ಪ ಗ್ರಾಮದ ಮಾರುತಿ ಜೋಗಾನಿ(40) ಕುಟುಂಬಸ್ಥರ ವಿರುದ್ಧ‌ ಸುನಿತಾ ಕುಟುಂಬಸ್ಥರ ಆರೋಪ ಮಾಡಿದೆ.2018ರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿಯೇ ಮದುವೆ ಆಗಿದ್ದ ಮಾರುತಿ-ಸುನಿತಾ,ಮಾರುತಿ ಜೋಗಾಣಿ ಸರ್ಕಾರಿ ಶಾಲೆ ಶಿಕ್ಷಕನಾಗಿ ಕೆಲಸ ಮಾಡ್ತಿದ್ದಾನೆ.ಮದುವೆ ನಂತರ ಪತಿ ಮಾರುತಿ, ಕುಟುಂಬಸ್ಥರ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು …

Read More »

ಲವ್ ಮಾಡಿದ್ರು, ಪರಸ್ಪರ ಚಾಕುವಿನಿಂದ ಚುಚ್ಚಾಡಿದ್ರು….!!!

ಲಿವಿಂಗ್.. ಲವೀಂಗ್ ಟುಗೆದರ್, ಆಸ್ಪತ್ರೆಗೆ ದಾಖಲು…..!!! ಬೆಳಗಾವಿ- ಅವನ ಹೆಸರು ಆನಂದ ಆತ ಮೂಲತಹ ಬೆಳಗಾವಿಯ ಹುಡುಗ,ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ ಈತ ಗೋಕಾಕಿನ ಆಂಟಿ ಶೋಭಾ ಜೊತೆ ಸ್ನೇಹ ಬೆಳೆಸಿಕೊಂಡಿದ್ದ ಇಬ್ಬರು ಲಿವಿಂಗ್ ಟುಗೆದರ್ ಅಂತಾ ಲವ್ ಮಾಡ್ತಾ ಇದ್ರು, ಈ ಲವ್ ಈಗ ವಿಕೋಪಕ್ಕೆ ಹೋಗಿದ್ದು ಆನಂದ ಶೋಭಾಗೆ ಚಾಕುವಿನಿಂದ ಚುಚ್ಚಿದ್ದಾನೆ, ಶೋಭಾ ಆನಂದಗೆ ಚಾಕುವಿನಿಂದ ಚುಚ್ಚಿದ್ದಾನೆ ಈಗ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ ಈ ಘಟನೆ ನಡೆದಿದ್ದು …

Read More »

ಜನೆವರಿ 3 ರಂದು ಕೆಎಲ್ಇ ಡಾ.  ಕ್ಯಾನ್ಸರ್ ಆಸ್ಪತ್ರೆಯ ಉದ್ಘಾಟನೆ

ಬೆಳಗಾವಿ-ಕೆಎಲ್ಇ ಡಾ. ಸಂಪತಕುಮಾರ ಎಸ್. ಶಿವಣಗಿ ಕ್ಯಾನ್ಸರ್ ಆಸ್ಪತ್ರೆಯ ಉದ್ಘಾಟನೆಯ ಸಮಾರಂಭವನ್ನು 30 ಡಿಸೆಂಬರ್ 2024 ರಂದು ನಿಗದಿಪಡಿಸಲಾಗಿತ್ತು. ಆದರೆ ಭಾರತದ ಮಾಜಿ ಪ್ರಧಾನಿಗಳಾಗಿದ್ದ ಡಾ.ಮನಮೋಹನ್ ಸಿಂಗ್ ಅವರ ನಿಧನದ ಕಾರಣದಿಂದ, ಈ ಆಸ್ಪತ್ರೆಯ ಉದ್ಘಾಟನಾ ಸಮಾರಂಭವನ್ನು ಶುಕ್ರವಾರ 3 ಜನವರಿ, 2025ಕ್ಕೆ ಮರುನಿಗದಿಪಡಿಸಲಾಗಿದೆ. ಭಾರತದ ಗೌರವಾನ್ವಿತ ರಾಷ್ಟçಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಆಸ್ಪತ್ರೆಯನ್ನು ಶುಕ್ರವಾರ, 3 ಜನವರಿ, 2025 ರಂದು ಮಧ್ಯಾಹ್ನ 4.೦೦ ಗಂಟೆಗೆ ಉದ್ಘಾಟಿಸಲಿದ್ದಾರೆ. ಈಗಾಗಲೇ …

Read More »

ಡಾ.ಮನಮೋಹನ್ ಸಿಂಗ್ ನಿಧನ ಬೆಳಗಾವಿಯಲ್ಲಿ ಮೌನ……

ಬೆಳಗಾವಿ- ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದಿಂದ ಬೆಳಗಾವಿ ಮಹಾನಗರ ಸ್ತಭ್ಧವಾಗಿದೆ.ಮಹಾತ್ಮಾ ಗಾಂಧಿ ಅವರ ಅಧಿವೇಶನದ ಶತಮಾನೋತ್ಸವದ ಆಚರಣೆಗೆ ಬೆಳಗಾವಿಗೆ ಬಂದಿದ್ದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ರಾತ್ರಿಯೇ ದೆಹಲಿಗೆ ಮರಳಿದ್ದಾರೆ. ಇಂದು ಬೆಳಗಾವಿಯಲ್ಲಿ ನಡೆಯಲಿದ್ದ ಜೈ ಬಾಪು.ಜೈ ಭೀಮ್…ಜೈ ಸಂವಿಧಾನ…ಸಮಾವೇಶ ಹಾಗು ಸುವರ್ಣಸೌಧ ಪಕ್ಕದಲ್ಲಿ ನಿರ್ಮಿಸಲಾಗಿರುವ ಮಹಾತ್ಮಾ ಗಾಂಧಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ಸೇರಿದಂತೆ ಕಾಂಗ್ರೆಸ್ ಪಕ್ಷದ ಇತರ …

Read More »

ಕೃಷಿ ಪದವೀಧರ ಸಂಘ ಉದ್ಘಾಟಿಸಿದ ಗೃಹ ಸಚಿವ ಪರಮೇಶ್ವರ್

ಬೆಳಗಾವಿ-ನಾವು ಎಲ್ಲ ಕ್ಷೇತ್ರಗಳಿಗೂ ಹೊಂದಿಕೊಂಡು ಹೋಗಬೇಕು ರಾಜಕೀಯ ಕ್ಷೇತ್ರಕ್ಕೆ ಬರುವವರು ಬನ್ನಿ ನಾವು ಕೈಲಾದಮಟ್ಟಿಗೆ ಸಹಾಯ ಮಾಡುತ್ತೇವೆ ಎಂದು ಗೃಹಸಚಿವ ಜಿ ಪರಮೇಶ್ವರ್ ಹೇಳಿದರು. ಬೆಳಗಾವಿಯಲ್ಲಿ ಕೃಷಿ ಪದವೀಧರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘ,ಸಂಸ್ಥೆಗಳು ಅಸ್ತಿತ್ವಕ್ಕೆ ಬಂದ ನಂತರ ಉಪಯುಕ್ತವಾದ ಕಾರ್ಯ ಮಾಡಬೇಕು,ಗ್ರಾಮೀಣ ಅಭಿವೃದ್ಧಿಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಸರ್ಕಾರ ಹೊಸ ಆವಿಷ್ಕಾರ ಮಾಡಿದೆ,ಅದನ್ನು ಬೆಳಗಾವಿಯ ಕೃಷಿ ಪದವಿಧರ ಸಂಘಕ್ಕೂ ಕಳಿಸುತ್ತೇನೆ ಅದನ್ನು ತಿಳಿದುಕೊಂಡು ಗ್ರಾಮಮಟ್ಟದಲ್ಲಿಯೂ ಸಂಘ ಕೈಜೋಡಿಸಿ …

Read More »

ಖಾನಾಪೂರ ಸಿಪಿಐ ಅಮಾನತು

ಬೆಳಗಾವಿ-ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಸಿಟಿ ರವಿ ಆಕ್ಷೇಪಾರ್ಹ ಪದ ಬಳಕೆ ಪ್ರಕರಣಕ್ಕೆ ಸಂಭಂದಿಸಿದಂತೆ,ಕರ್ತವ್ಯಲೋಪದಡಿ ಖಾನಾಪುರ ಸಿಪಿಐಅಮಾನತುಗೋಳಿಸಿ ಆದೇಶ ಹೊರಬಿದ್ದಿದೆ. ಖಾನಾಪುರ ಪೊಲೀಸ ಠಾಣೆಯ ಸಿಪಿಐ ಮಂಜುನಾಥ ನಾಯಕ ಅಮಾನತುಗೊಂಡಿದ್ದಾಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸಕುಮಾರಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಸಿಟಿ ರವಿ ಖಾನಾಪುರ ಠಾಣೆಗೆ ಕರೆತಂದ ವೇಳೆ ಕರ್ತವ್ಯ ಲೋಪ, ನಿಷ್ಕಾಳಜಿತನ, ಬೇಜಬ್ದಾರಿತನ ಪ್ರದರ್ಶಿಸಿ,ಅಪಾಧಿತನರನ್ನ ಹೊರತುಪಡಿಸಿ ಠಾಣೆ ಒಳಗಡೆ ಯಾರನ್ನು ಬಿಡದಂತೆ ಮೇಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ …

Read More »

ಕ್ಷಮಿಸುವದಿಲ್ಲ,ಶಿಕ್ಷೆ ಆಗುವವರೆಗೆ ಬಿಡುವುದಿಲ್ಲ

ಬೆಳಗಾವಿ ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಸಿಟಿ ರವಿ ವಿರುದ್ಧ,ಯಾವುದಕ್ಕೂ ಕಾರಣಕ್ಕೂ ಸಿಟಿ ರವಿ ಕ್ಷಮಿಸುವ ಪ್ರಮೇಯ ಇಲ್ಲ,ಅವರಿಗೆ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ,ಸಿಎಂ ಮತ್ತು ಸಭಾಪತಿ ಅವರು ತನಿಖೆ ಮಾಡಬೇಕು,ಬೇಗ ಎಫ್‌ಎಸ್‌ಎಲ್ ರಿಪೋರ್ಟ್ ತರಿಸಿಕೊಳ್ಳಬೇಕು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುಡುಗಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್,ಒಬ್ಬರು ಯಾರಾದ್ರೂ ಕ್ಷಮೆ ಕೇಳಿದ್ರಾ ? ಮೆರವಣಿಗೆ ಮಾಡಿಕೊಳ್ತಾರಾ ಇವರಿಗೆ. ಎನಾಗಿದೆ ಅವರಿಗೆ ಎಷ್ಟು ಹೊಲಿಗೆ ಬಿದ್ದಿದೆ,ಸಿಟಿ ರವಿಯವರೇ ನನಗೆ ಆ …

Read More »

ಟ್ರ್ಯಾಕ್ಟರ್ ಹರಿಸಿ, ತಮ್ಮನನ್ನೇ ಕೊಲೆಗೈದ ಪಾಪಿ ಅಣ್ಣಾ

ಬೆಳಗಾವಿ-ಟ್ರ್ಯಾಕ್ಟರ್ ಹರಿಸಿ ಒಡಹುಟ್ಟಿದ ತಮ್ಮನನ್ನೇ ಭೀಕರವಾಗಿ ಕೊಲೆಗೈದ ಪಾಪಿ ಅಣ್ಣಾ, ಹತ್ಯೆ ಮಾಡಿದ ಬಳಿಕ ಠಾಣೆಗೆ ಹಾಜರಾಗಿದ್ದಾನೆ.ಆಸ್ತಿವಿವಾದ, ಕುಡಿತದ ಚಟ, ಕಿರುಕುಳಕ್ಕೆ ಬೇಸತ್ತು ಸಹೋದರನ ಭೀಕರ ಹತ್ಯೆ ಮಾಡಿದ್ದಾನೆ ಎಂದು ಗೊತ್ತಾಗಿದೆ.ಈ ಘಟನೆ ನಡೆದಿದ್ದು,ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣ ಹೊರವಲಯದ‌ ಜಮೀನಿನಲ್ಲಿ. ಯರಗಟ್ಟಿಯ ಗೋಪಾಲ ಬಾವಿಹಾಳ( 27) ಹತ್ಯೆಯಾದ ದುರ್ದೈವಿಯಾಗಿದ್ದು,ಮಾರುತಿ ಬಾವಿಹಾಳ(30) ತಮ್ಮನನ್ನೇ ಹತ್ಯೆ ಮಾಡಿದ ಪಾಪಿ ಅಣ್ಣ ಎಂದು ಗೊತ್ತಾಗಿದೆ‌.ನಿತ್ಯ ಮದ್ಯ ಸೇವಿಸಿ ಬಂದು ಪಿತ್ರಾರ್ಜಿತ ಆಸ್ತಿ ಅನುಭವಿಸಲು …

Read More »

ನನ್ನನ್ನು ರಾತ್ರಿಯಿಡಿ ಟೆರರಿಸ್ಟ್ ರೀತಿ ನೋಡಿದ್ರು- ಸಿಟಿ ರವಿ

ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಆರೋಪದಲ್ಲಿ ಪೊಲೀಸರಿಂದ ಬಂಧಿತರಾಗಿದ್ದ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ. ಈ ಆದೇಶದ ಬೆನ್ನಲ್ಲೇ ದಾವಣಗೆರೆಯಲ್ಲಿ ಬಿಜೆಪಿ ನಾಯಕರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಸಿ.ಟಿ. ರವಿ ನನ್ನಗೆ ಹೈಕೋರ್ಟ್ ಜಾಮೀನು ನೀಡಿರುವುದು ಸತ್ಯಕ್ಕೆ ಸಿಕ್ಕ ಜಯವಾಗಿದೆ. ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಳಸಿಕೊಂಡು ನನ್ನ ಮೇಲೆ ದೈಹಿಕವಾಗಿ …

Read More »

ನಾಳೆ ಶನಿವಾರ ಹೆಬ್ಬಾಳಕರ್ ಅಭಿಮಾನಿಗಳಿಂದ ಬೃಹತ್ ಪ್ರತಿಭಟನೆ

ಬೆಳಗಾವಿ : ವಿಧಾನ ಪರಿಷತ್ತಿನಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿದ ಹಿನ್ನೆಲೆಯಲ್ಲಿ ಕೂಡಲೇ ಸಿ.ಟಿ.ರವಿ ಅವರ ಸದಸ್ಯತ್ವ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಶನಿವಾರ ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಸಿಟಿ ರವಿ ಲಕ್ಷ್ಮೀ ಹೆಬ್ಬಾಳಕರ್ ಕುರಿತು ಕೆಟ್ಟ ಶಬ್ದ ಬಳಿಸಿ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆಯೇ ಹೆಬ್ಬಾಳಕರ್ ಅಭಿಮಾನಿಗಳು …

Read More »