ಬೆಳಗಾವಿ-ರೈಲ್ವೆ ಪ್ರಯಾಣದ ವೇಳೆ ವಿಷಾಹಾರ ಸೇವಿಸಿ 8ಜನ ಯುವಕರು ಅಸ್ವಸ್ಥರಾದ ಘಟನೆನಡೆದಿದೆ.ವಾಸ್ಕೋ-ನಿಜಾಮುದ್ದೀನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಪ್ರಜ್ಞಾಹೀನರಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸೇರಿದ್ದಾರೆ. ಗೋವಾದಲ್ಲಿ ವಿಷಾಹಾರ ಸೇವಿಸಿ, ಪ್ರಜ್ಞಾಹೀನ ಸ್ಥಿತಿಗೆ ತಲುಪಿರುವ ಯುವಕರು ರೈಲಿನಲ್ಲಿ ಪ್ರಜ್ಞಾಹೀನ ಸ್ಥತಿಯಲ್ಲಿ ಇದ್ದರು.ರೈಲು ಬೆಳಗಾವಿಗೆ ಬರುತ್ತಿದ್ದಂತೆ ಸಹ ಪ್ರಯಾಣಿಕರಿಂದ ರೈಲ್ವೆ ಪೊಲೀಸರಿಗೆ ಮಾಹಿತಿ ಸಿಕ್ಕ ಬಳಿಕ,ಎಲ್ಲ ಎಂಟೂ ಯುವಕರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರು ಜನ ಯುವಕರು ಪ್ರಜ್ಞಾಹೀನ ಸ್ಥಿತಿಗೆ, ಇಬ್ಬರು …
Read More »ಸರ್ವೇ ಕಾರ್ಯ ಬೇಗ ಮಗಿಯಲಿ,ಕಿತ್ತೂರು ಮೂಲಕ ಬೆಳಗಾವಿಗೆ ರೈಲು ಬರಲಿ…!!
ಬೆಳಗಾವಿ- ಧಾರವಾಡ-ಕಿತ್ತೂರು- ಬೆಳಗಾವಿ ರೈಲ್ವೆ ಮಾರ್ಗ ನಿರ್ಮಾಣ ಕುರಿತಂತೆ ಕಿತ್ತೂರು-ಬೆಳಗಾವಿ ನಡುವೆ ಭೂಸ್ವಾಧೀನಕ್ಕೆ ಅಗತ್ಯವಾದ ಭೂ ಸಮೀಕ್ಷೆ ಕಾರ್ಯ ತಕ್ಷಣ ಕೈಗೊಳ್ಳಬೇಕೆಂದು ಸಂಸದೆ ಮಂಗಳಾ ಅಂಗಡಿ ಆಗ್ರಹಿಸಿದ್ದಾರೆ. ಹುಬ್ಬಳ್ಳಿಯ ನೈರುತ್ಯ ರೈಲ್ವೆ ಮಹಾಪ್ರಬಂಧಕ ಸಂಜೀವ ಕಿಶೋರಿ ಅವರನ್ನು ಸೋಮವಾರ ಭೇಟಿ ಮಾಡಿ ಆಗ್ರಹಿಸಿದರು.ಬೆಳಗಾವಿ-ಕಿತ್ತೂರು-ಧಾರವಾಡ ನಡುವಿನ ಸುಮಾರು 73 ಕಿಮೀ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರಕಾರ 2019ರಲ್ಲಿ ಅನುಮೋದನೆ ನೀಡಿ 974 ಕೋಟಿ ರೂ. ಅನುದಾನವನ್ನು ಸಹ ಬಿಡುಗಡೆ …
Read More »ಬೆಳಗಾವಿಯಲ್ಲಿ 6.65. ಕೋಟಿ ರೂ ವೆಚ್ಚದಲ್ಲಿ ಮಲ್ಟಿ ಲೇವಲ್ ಪಾರ್ಕಿಂಗ್…
ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಿದೆ.ಈ ಸಮಸ್ಯೆ ಪರಿಹಾರಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಮಹತ್ವದ ನಿರ್ಧಾರ ಕೈಗೊಂಡಿದ್ದು ಬೆಳಗಾವಿ ಮಹಾನಗರದ ಹೃದಯ ಭಾಗದಲ್ಲಿ, ಬಾಪಟ್ ಗಲ್ಲಿಯಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಮಲ್ಟಿ ಲೇವಲ್ ಪಾರ್ಕಿಂಗ್ ನಿರ್ಮಾಣಕ್ಕೆ ಇಂದು ಶಂಕು ಸ್ಥಾಪನೆ ನೆರವೇರಿಸಿದೆ. ಬಾಪಟ್ ಗಲ್ಲಿಯಲ್ಲಿ ಈ ಹಿಂದೆ ಹಲವಾರು ಬಾರಿ ಮಲ್ಟಿ ಲೇವಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದ್ರೆ ಈ ಬಾರಿ ಮತ್ತೆ ಶಂಕುಸ್ಥಾಪನೆ ಮಾಡಲಾಗಿದ್ದು …
Read More »ಬೆಳಗಾವಿಯಲ್ಲಿ ಯುವಕನ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿ…
ಬೆಳಗಾವಿ- ಇತ್ತೀಚಿಗೆ ಬೆಳಗಾವಿಯಲ್ಲಿ ನಾಗರಾಜ್ ಗಾಡಿವಡ್ಡರ್ ಎಂಬ ಯುವಕನನ್ನು ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲಾಯಿತು. ಬೆಳಗಾವಿಯ ವಿವಿಧ ಸಂಘಟನೆಗಳ ಕಾರ್ಯಕರ್ತರು ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ನಡೆಸಿದರು.ಇತ್ತೀಚಿಗೆ ಬೆಳಗಾವಿಯ ಶಿವಬಸವ ನಗರ ಪ್ರದೇಶದಲ್ಲಿ ನಾಗರಾಜ್ ಗಾಡಿವಡ್ಡರ್ ಎಂಬ ಯುವಕನನ್ನು ಮೂರು ಜನ ದುಷ್ಕರ್ಮಿಗಳು ಸೇರಿಕೊಂಡು ಅಮಾನುಷವಾಗಿ ಹತ್ಯೆ ಮಾಡಿದ್ದು, ಪೋಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು …
Read More »ಬೆಳಗಾವಿಯಲ್ಲಿ ಗಣೇಶ್ ವಿಸರ್ಜನೆ,ಈದ್ ಮಿಲಾದ್ ಎರಡೂ ಒಂದೇ ದಿನ…
ಬೆಳಗಾವಿ- ಈದ್ ಮಿಲಾದ್ ಹಬ್ಬ ಹಾಗೂ ಗಣೇಶ ವಿಸರ್ಜನೆ ಎರಡೂ ಒಂದೇ ದಿನ ಬಂದಿರುವ ಕಾರಣ, ಇಂದು ಬೆಳಗಾವಿ ನಗರದಲ್ಲಿ ಮಹತ್ವದ ಸಭೆ ನಡೆಯಲಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬವನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಅಲ್ಲಿಯೂ ಸಹ ಈದ್ ಮಿಲಾದ್ ಹಾಗೂ ಗಣೇಶ ವಿಸರ್ಜೆನೆಯ ಹಬ್ಬ ಎರಡೂ ಒಂದೇ ದಿನ ಬಂದಿರುವದರಿಂದ ಮಹಾರಾಷ್ಟ್ರದ ಮುಸ್ಲಿಂ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಸಭೆ ಸೇರಿ, ಈದ್ ಮಿಲಾದ್ ಮೆರವಣಿಗೆಯ ದಿನಾಂಕವನ್ನು …
Read More »ರೇಷನ್ ಕಾರ್ಡ್ ಇಲ್ಲದವರಿಗೆ ಗುಡ್ ನ್ಯುಸ್….!!
ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂದ ನಂತರ ರೇಷನ್ ಕಾರ್ಡ್ ಮಹತ್ವ ಎಲ್ಲರಿಗೂ ಗೊತ್ತಾಗಿದೆ.ರೇಷನ್ ಕಾರ್ಡ್ ಇಲ್ಲದ,ಹಾಗೂ ಇದ್ದರೂ ತಿದ್ದುಪಡಿಯಾಗದೇ ಪರದಾಡುತ್ತಿದ್ದ ಕುಟುಂಬಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯುಸ್ ಕೊಟ್ಟಿದೆ.ಕಾರ್ಡ್ ಪಡೆಯಲು ತಿದ್ದುಪಡಿ ಸರ್ಕಾರ ಅವಕಾಶ ಕಲ್ಪಿಸಿದೆ.ಯಾವ ಜಿಲ್ಲೆಯವರು ಯಾವ ದಿನ ಅರ್ಜಿ ಹಾಕಬೇಕು ಅನ್ನೋದನ್ನು ಸರ್ಕಾರ ಅಧಿಕೃತವಾಗಿ ತಿಳಿಸಲಿದೆ.ಈಗ ಸದ್ಯ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ ದಿನಾಂಕಗಳು ಕೆಳಗಿನಂತಿವೆ,ದಿನಾಂಕಗಳಲ್ಲಿ ಬದಲಾವಣೆ ಆಗುವ …
Read More »ಬೈಲಹೊಂಗಲ ಶುಗರ್ ಫ್ಯಾಕ್ಟರಿ,ಬಾಳೇಕುಂದರಗಿ ಪ್ಯಾನೆಲ್ ವಿಕ್ಟರಿ….!!
ಬೆಳಗಾವಿ-ಕಳೆದ ಒಂದು ತಿಂಗಳಿನಿಂದ ತಾಲ್ಲೂಕಿನ ಜನರ ಕುತೂಹಲಕ್ಕೆ ಕಾರಣವಾಗಿದ್ದ ಬೈಲಹೊಂಗಲದ ಸೋಮೇಶ್ವರ್ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬಾಳೇಕುಂದರಗಿ ಪ್ಯಾನಲ್ ನ 9 ಜನ ಅಭ್ಯರ್ಥಿಗಳು ವಿಜಯಶಾಲಿಗಳಾಗಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಕಾರ್ಖಾನೆಯ ಆಡಳಿತ ಮಂಡಳಿಗೆ 17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಾಳೇಕುಂದರಗಿ ಪ್ಯಾನೆಲ್ ನ 9 ಜನ ಸದಸ್ಯರು ಜಯಶಾಲಿಗಳಾಗಿ ಬಹುಮತ ಪಡೆದುಕೊಂಡಿದ್ದು ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡ್ರ ನೇತ್ರತ್ವದ ಪ್ಯಾನೆಲ್ ನಿಂದ 8 …
Read More »ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇಂದು ಬೆಳಗಾವಿಗೆ…
ಬೆಳಗಾವಿ- ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಇಂದು ಸಂಜೆ 4-00 ಗಂಟೆಗೆ ಸಮಯಕ್ಕೆ ಸರಿಯಾಗಿ ಬೆಳಗಾವಿ ನಗರದ ಚನ್ನಮ್ಮ ಸರ್ಕಲ್ ಗೆ ಆಗಮಿಸುತ್ತಾರೆ . ರಕ್ಷಿತ್ ಶೆಟ್ಟಿ ಅಭಿನಯದ ಸಪ್ತಸಾಗರದಾಚೆ ಎಲ್ಲೋ ,ಸಿನಿಮಾ ಪ್ರಮೋಶನ್ ಗಾಗಿ ರಾಜ್ಯದ ಎಲ್ಲ ಸಿನಿಮಾ ಥೇಟರ್ ಗಳಿಗೆ ವಿಜಯ ಯಾತ್ರೆ ಮಾಡುತ್ತಿರುವ ಸಿನಿಮಾ ತಂಡ ಇಂದು ಭಾನುವಾರ ಸಂಜೆ 4-00 ಗಂಟೆಗೆ ಬೆಳಗಾವಿ ನಗರಕ್ಕೆ ಆಗಮಿಸಲಿದೆ. ಬೆಳಗಾವಿಯ ಚನ್ನಮ್ಮನ ವೃತ್ತದಲ್ಲಿ …
Read More »ಬೆಳಗಾವಿ ಭಾರತ ಜೋಡೋ ನೆನಪಿನ ಯಾತ್ರೆಯಲ್ಲಿ ಭಾಗಿಯಾದ ರಾಹುಲ್….!!
ಬೆಳಗಾವಿ- ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆದು ವರ್ಷವಾಯಿತು ವಿವಿಧತೆಯಲ್ಲಿ ಏಕತೆ ಸಾರಿದ ರಾಹುಲ್ ಗಾಂಧಿ ಅವರ ನೇತ್ರತ್ವದಲ್ಲಿ ನಡೆದ ಈ ಯಾತ್ರೆಯ ವರ್ಷದ ನೆನಪಿಗಾಗಿ ಕಾಂಗ್ರೆಸ್ ಕಾರ್ಯಕರ್ತರೂ ಬೆಳಗಾವಿಯಲ್ಲಿ ಪಾದಯತ್ರೆ ನಡೆಸಿ ಎಲ್ಲರ ಗಮನ ಸೆಳೆದರು. ಬೆಳಗಾವಿಯ ಕಾಂಗ್ರೆಸ್ ಭವನದಿಂದ ಆರಂಭವಾದ ಭಾರತ್ ಜೋಡೋ ನೆನಪಿನ ಯಾತ್ರೆ ಚನ್ನಮ್ಮ ವೃತ್ತದವರೆಗೂ ಸಾಗಿತು.ಈ ಯಾತ್ರೆಯಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಠ,ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ,ರಾಹುಲ್ ಜಾರಕಿಹೊಳಿ,ವಿನಯ …
Read More »ನಿಜಗುಣಾನಂದ ಶ್ರೀಗಳಿಗೆ ಮತ್ತೆ ಜೀವ ಬೆದರಿಕೆ ಪತ್ರ…!
ಬೆಳಗಾವಿ – ಬೆಳಗಾವಿ ಜಿಲ್ಲೆಯ ಪ್ರಮುಖ ಲಿಂಗಾಯತ ಬಸವತತ್ವ, ಸ್ವಾಮೀಜಿಗೆ ಮತ್ತೆ ಜೀವ ಬೇದರಿಕೆ ಪತ್ರ ಬಂದಿದೆ.ಬಸವಣ್ಣನವರ ವಿಚಾರಧಾರೆಯ ಪ್ರಚಾರಕರಾಗಿರುವ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಶ್ರೀಗಳಿಗೆ ಜೀವ ಬೆದರಿಕೆ ಪತ್ರ ಬಂದಿದೆ. ತಮ್ಮ ಖಡಕ್ ಮಾತುಗಳಿಂದಲೇ ರಾಜ್ಯದಲ್ಲಿ ಖ್ಯಾತಿಗಳಿಸಿರುವ ನಿಜಗುಣಾನಂದ ಶ್ರೀಗಳು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ಶ್ರೀಗಳಾಗಿದ್ದಾರೆ. ಅವರಿಗೆ ಈಗ ಎರಡನೇಯ ಬಾರಿಗೆ ಜೀವ ಬೆದರಿಕೆ ಪತ್ರ ಬಂದಿರುವದು ಕಳವಳಕಾರಿ ಸಂಗತಿಯಾಗಿದೆ. ನಿಷ್ಕಲ …
Read More »