Breaking News

ಬೆಳಗಾವಿ ಪಾಲಿಕೆಯಲ್ಲಿ ಶಾಸಕರಿಂದ ಅಧಿಕಾರಿಗಳ ಕ್ಲಾಸ್

ಬೆಳಗಾವಿ ಪಾಲಿಕೆಯಲ್ಲಿ ಶಾಸಕರಿಂದ ಅಧಿಕಾರಿಗಳ ಕ್ಲಾಸ್

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಕೌನ್ಸಿಲ್ ಹಾಲ್ ನಲ್ಲಿ ಅಧಿಕಾರಿಗಳ ಸಭೆ ನಡೆಯಿತು ,ಶಾಸಕ ಅಭಯ ಪಾಟೀಲ,ಅನೀಲ ಬೆನಕೆ ಅವರು ಪಾಲಿಕೆ ಕಾಮಗಾರಿಗಳ ಪ್ರಗತಿ ಪರಶೀಲನೆ ನಡೆಸಿದರು

ಸಭೆಯ ಆರಂಭದಲ್ಲಿ ಬೀದಿ ದೀಪಗಳ ನಿರ್ವಹಣೆ ಕುರಿತು ತೀವ್ರ ಆಕ್ರೋಶ ವ್ಯೆಕ್ತಪಡಿಸಿದರು ನಗರದ ಶೇ 50 ರಷ್ಟು ಬೀದಿ ದೀಪಗಳು ಬಂದ್ ಆಗಿವೆ ,ಬೀದಿ ದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಅಧಿಕಾರಿಗಳು ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕು.ಈ ವಿಷಯದಲ್ಲಿ ಅಧಿಕಾರಿಗಳು ಮುತವರ್ಜಿ ವಹಿಸಿ ಕೆಲಸ ಮಾಡಬೇಕು ,ಕೆಲವು ಕಿಡಗೇಡಿಗಳು ವಿದ್ಯುತ್ ಕಂಬ ,ಮತ್ತು ಬೀದಿ ದೀಪಗಳನ್ನು ದ್ವಂಸ ಮಾಡುತ್ತಿದ್ದಾರೆ,ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ರೆ ಅಂತಹ ಕಿಡಗೇಡಿಗಳ ವಿರುದ್ಧ ಪಾಲಿಕೆ ಅಧಿಕಾರಿಗಳು ದೂರು ನೀಡಬೇಕು ಎಂದು ಅಭಯ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ರು

ಬೆಳಗಾವಿ ನಗರದ ಉದ್ಯಾನವನ ಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಕೂಡಲೇ ಎಲ್ಲ ಗಾರ್ಡನ್ ಗಳಲ್ಲಿ ವಾಚ್ ಮನ್ ಗಳ ನೇಮಕ ಮಾಡಬೇಕು ,ಕೋಟೆ ಕೆರೆ ಈಗ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ ,ಬಹಳ ವರ್ಷಗಳಿಂದ ಒಬ್ಬನೇ ಗುತ್ತಿಗೆದಾರ ಈ ಕೆರೆಯ ನಿರ್ವಹಣೆ ಮಾಡುತ್ತಿದ್ದು ,ಮಾರ್ಚ ತಿಂಗಳಿನಿಂದ ಗುತ್ತಿಗೆದಾರನನ್ನು ಬದಲಾಯಿಸಿ ಸಮರ್ಪಕವಾಗಿ ಕೋಟೆ ಕೆರೆಯ ನಿರ್ವಹಣೆ ಮಾಡಬೇಕು ಎಂದು ಶಾಸಕ ಅಭಯ ಪಾಟೀಲ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು

ನಗರದ ಸ್ವಚ್ಛತೆ ಯ ಕುರಿತು ಎಳೆ ಎಳೆಯಾಗಿ ಪರಶೀಲನೆ ಮಾಡಿದ ಅಭಯ ಪಾಟೀಲ ತ್ಯಾಜ್ಯ ಸಂಗ್ರಹದ ವಿಷಯದಲ್ಲಿ ಗುತ್ತಿಗೆದಾರರು ಅನೇಕ ಲೋಪಗಳನ್ನು ಮಾಡುತ್ತಿದ್ದಾರೆ .ಇದರಿಂದ ಪಾಲಿಕೆಯ ಹಣ ಪೋಲಾಗುತ್ತಿದೆ ,ಗುತ್ತಿಗೆದಾರ ,ಎಷ್ಟು ವಾಹನಗಳನ್ನು ,ಎಷ್ಟು ಕಾರ್ಮಿಕರನ್ನು ಬಳಿಸಿ ಕಸ ವಿಲೇವಾರಿ ಮಾಡುತ್ತಿದ್ದಾನೆ ಎಂಬುವದನ್ನು ನಿಗಾ ವಹಿಸಬೇಕು ಎಂದರು ಅಭಯ ಪಾಟೀಲ

ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ ಮಾತನಾಡಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮನೆ ಮನೆಗೆ ಹೋಗಿ ಕಸ ಸಂಗ್ರಹಣೆ ಮಾಡುವ ಪೌರ ಕಾರ್ಮಿಕರ ಮೇಲೆ ನಿಗಾ ವಹಿಸಲು ಪ್ರತಿ ಮನೆಗೆ ಆರ್ ಎಪ್ ಐಡಿ ಎಫ್ ಸೆನ್ಸಾರ್ ಗಳನ್ನು ಅಳವಡಿಸಲಾಗಿದೆ ಆದ್ರೆ ಕೆಲವು ಕಿಡಗೇಡಿಗಳು ಈ ಆರ್ ಎಫ್ ಐಡಿ ಗಳನ್ನು ಕಿತ್ತೆಸೆಯುವ ಕೆಲಸ ಮಾಡುತ್ತಿದ್ದು ಆರ್ ಎಫ್ ಐಡಿ ಸೆನ್ಸಾರಗಳ ಬಗ್ಗೆ ಸುಳ್ಳು ವದಂತಿಗಳನ್ನು ಹರಡಿಸುವವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುತ್ತೇವೆ ಎಂದು ಶಶಿಧರ ಕುರೇರ ಎಚ್ಚರಿಕೆ ನೀಡಿದ್ರು

ಶಾಸಕ ಅನೀಲ ಬೆನಕೆ ಮಾತನಾಡಿ , ಮಹಾನಗರ ಪಾಲಿಕೆ ಮತ್ತು ಕಾಂಟೋನ್ಮೆಂಟ್ ಅಧಿಕಾರಿಗಳ. ನಡುವೆ ಸಮನ್ವಯತೆ ಇಲ್ಲ ,ಇವರಿಬ್ಬರ ನಡುವಿನ ಜಗಳದಿಂದ ನಗರದ ಸ್ವಚ್ಛತೆ ಹಾಳಾಗುತ್ತಿದೆ , ಎಂದು ಕಿಡಿಕಾರಿದಾಗ ಮದ್ಯ ಪ್ರವೇಶಿಸಿದ ಅಭಯ ಪಾಟೀಲ ಕಾಂಟೋನ್ಮೆಂಟ್ ಪ್ರದೇಶಕ್ಕೆ ನೀರು ಬಂದ್ ಮಾಡಿ ,ಆವಾಗ ಅವರಿಗೆ ಬುದ್ದಿ ಬರುತ್ತದೆ ಎಂದು ಹೇಳಿದ್ರು

ಸಭೆಯಲ್ಲಿ ಬುಡಾ ಆಯುಕ್ತ ಪ್ರೀತಂ ನರಸಲಾಪೂರೆ ,ಪಾಲಿಕೆ ಆಯುಕ್ತ ಜಗದೀಶ್ ಸೇರಿದಂತೆ ಪಾಲಿಕೆಯ ಎಲ್ಲ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Check Also

ಮೂವರ ಜೀವ ಉಳಿಸಿದ ಬಾಲಿಕಾಗೆ ಮಿನಿಸ್ಟರ್ ಶಹಬ್ಬಾಶ್….!

  ಬೆಳಗಾವಿ ಟಿಳಕವಾಡಿಯ ಕಾಂಗ್ರೆಸ್ ರಸ್ತೆಯ ಮೊದಲನೇ ರೇಲ್ವೆ ಗೇಟ್ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಮೂವರ ಜೀವ ಉಳಿಸಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.