ಬೆಳಗಾವಿ : ಸಿಡಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಸಿಡಿಯಲ್ಲಿ ಇದ್ದಾಳೆ ಎನ್ನಲಾದ ಯುವತಿ ಎಸ್ ಐ ಟಿ ತನಿಖೆ ವೇಳೆ ಭಿನ್ನ ಹೇಳಿಕೆ ನೀಡಿದ್ದಾಳೆ. ನರೇಶ್ ಹಾಗೂ ಶ್ರವನ್ ಎಂಬುವವರು ನನ್ನನ್ನು ಹನಿ ಟ್ರ್ಯಾಪ್ ಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾಳೆ.
ಸಿಡಿ ಯುವತಿ ಎಸ್ ಐ ಟಿ ಮುಂದೆ ಈ ರೀತಿ ಹೇಳಿಕೆ ನೀಡಿದ್ದು. ಪ್ರಕರಣದಲ್ಲಿ ನಾನು ಅಂದುಕೊಂಡತೆ ಆಗಲಿಲ್ಲ. ನನಗೆ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ನನಗೆ ಗೊತ್ತಿಲ್ಲದೇ ಕೆಲವೊಂದು ವಿಚಾರಗಳು ನಡೆದುಹೋಗಿವೆ.
ನನ್ನ ಬೆನ್ನ ಹಿಂದೆ ನಡೆದ ವಿಚಾರ ತಿಳಿದುಕೊಳ್ಳಲು ಸಾಕಷ್ಟು ದಿನ ಕಳೆಯಿತು. ನನ್ನ ಅಪ್ಪ ಅಮ್ಮನಿಗೂ ನೋವು ನೀಡಿದ್ದೇನೆ. ಸಿಡಿ ಕಿಂಗ್ ಪಿನ್ ಗಳಾದ ನರೇಶ್ ಮತ್ತು ಶ್ರವನ್ ನನ್ನನ್ನು ಹನಿ ಟ್ರ್ಯಾಪ್ ಗೆ ಬಳಸಿಕೊಂಡಿದ್ದಾರೆ. ಹಾಗೆಯೇ ನ್ಯಾಯಾಲದ ಮುಂದೆ ಹೇಳುವುದು ಬಹಳಷ್ಟಿದೆ ಎಂದು ಹೇಳಿಕೆ ನೀಡಿದ್ದು. ಮಂದೆ ಈ ಪ್ರಕರಣ ಯಾವ ತಿರುವು ಪಡೆಯುತ್ತದೆಯಾ ಎಂದು ಕಾದು ನೋಡಬೇಕು.
ಈ ಸುದ್ಧಿ ಎಲ್ಲ ದೃಶ್ಯ ಮಾದ್ಯಮಗಳಲ್ಲಿ ಪ್ರಸಾರ ಆಗುತ್ತಿದೆ .ಸತ್ಯಾ ಸತ್ಯತೆ ಕುರಿತು ಆ ಯುವತಿ ಮಾದ್ಯಮಗಳ ಎದುರು ಪ್ರತ್ಯಕ್ಷವಾಗಿ ಹೇಳಿಕೆ ನೀಡಿದ ಬಳಿಕವೇ ಸತ್ಯಾಂಶ ಹೊರಬೀಳಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ