Home / Breaking News / ರಮೇಶ್ ಜಾರಕಿಹೊಳಿ,ಬಾಲಚಂದ್ರ ಜಾರಕಿಹೊಳಿ,ನಡೆ,ನಿರ್ಣಾಯಕ…!!!!

ರಮೇಶ್ ಜಾರಕಿಹೊಳಿ,ಬಾಲಚಂದ್ರ ಜಾರಕಿಹೊಳಿ,ನಡೆ,ನಿರ್ಣಾಯಕ…!!!!

ಬೆಳಗಾವಿ- ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಚರ್ಚೆ ಆಗುತ್ತಿರುವದು ಒಂದೇ ವಿಷಯ,ಎಲ್ಲರಿಗೂ ಕುತೂಹಲ ಕೆರಳಿಸಿರಯವದು ಅದೇ ವಿಷಯ,ಈ ವಿಷಯವೇ,ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ನಿರ್ಣಾಯಕ ಆಗಲಿದೆ.

ಈ ಬಾರಿ ಅರಭಾಂವಿ,ಗೋಕಾಕ್ ಏನಾಗಬಹುದು,ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ಲೀಡ್ ಸಿಗುತ್ತೋ ? ಅಥವಾ ಬಿಜೆಪಿಗೆ ಲೀಡ್ ಸಿಗುತ್ತೋ ? ರಮೇಶ್ ಜಾರಕಿಹೊಳಿ,ಬಾಲಚಂದ್ರ ಜಾರಕಿಹೊಳಿ ಈ ಬಾರಿ ಏನು ಮಾಡಬಹುದು ? ಎನ್ನುವದು ಎಲ್ಲರ ಪ್ರಶ್ನೆಯಾಗಿದೆ.ಈ ಪ್ರಶ್ನೆಗೆ ಉತ್ತರ ಕೊಡಲು ಯಾರಿಂದಲೂ ಸಾಧ್ಯವಿಲ್ಲ,ಚುನಾವಣೆಯ ಫಲಿತಾಂಶವೇ ಇದಕ್ಕೆ ಉತ್ತರ ನೀಡಲಿದೆ.

ಈ ಪ್ರಶ್ನೆ ಯಾಕೆ ಎದುರಾಗಿದೆ ಅಂದ್ರೆ,ಗೋಕಾಕ್ ತಾಲ್ಲೂಕಿನಲ್ಲಿ ಪಕ್ಷದ ಬ್ರ್ಯಾಂಡ್ ನಡೆಯೋದಿಲ್ಲ,ಇಲ್ಲಿ ನಡೆಯೋದು ಜಾರಕಿಹೊಳಿ‌ ಬ್ರ್ಯಾಂಡ್ ,ಇಲ್ಲಿ ಪಕ್ಷ ಮೌನ,ಗೋಕಾಕ್ ಮತ್ತು ಅರಭಾಂವಿ ಕ್ಷೇತ್ರದ ಜನ ಜಾರಕಿಹೊಳಿ ಸಹೋದರರನ್ನು ಬೆಂಬಲಿಸುತ್ತ,ಅವರನ್ನೇ ಗೆಲ್ಲಿಸುತ್ತ ಬಂದಿರುವದು ಎಲ್ಲರಿಗೂ ಗೊತ್ತಿರುವ ವಿಷಯ.

ಬಾಲಚಂದ್ರ,ಜಾರಕಿಹೊಳಿ,ರಮೇಶ್ ಜಾರಕಿಹೊಳಿ ಇಬ್ಬರೂ ಬಿಜೆಪಿಯಲ್ಲಿದ್ದಾರೆ,ಅರಭಾಂವಿ ಮತ್ತು ಗೋಕಾಕ ಇವರಿಬ್ಬರ ಹಿಡಿತದಲ್ಲಿದೆ ಯಾಕಂದ್ರೆ ಇವರಿಬ್ಬರೂ ಈ ಕ್ಷೇತ್ರಗಳ ಶಾಸಕರಾಗಿದ್ದಾರೆ.ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿದ್ದು,ಕುಟುಂಬದ ವಿಚಾರ ಬಂದಾಗ,ಎಲ್ಲ ಜಾರಕಿಹೊಳಿ‌ ಸಹೋದರರು ಒಮ್ಮತದ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಎಲ್ಲರ ನಂಬಿಕೆ.

ಈಗ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ,ಮತ್ತು ರಮೇಶ್ ಜಾರಕಿಹೊಳಿ ಈ ಇಬ್ಬರು ಶಾಸಕರು ಬಿಜೆಪಿ ಪರವಾಗಿ ಕೆಲಸ ಮಾಡುತ್ತಾರೆಯೋ ಅಥವಾ ಸಹೋದರ ಸತೀಶ್ ಪರವಾಗಿ ಕೆಲಸ ಮಾಡುತ್ತಾರೆಯೋ ಅನ್ನೋದೆ,ಈಗ ಡಾಲರ್ ಪ್ರಶ್ನೆಯಾಗಿದೆ.

ಅರಭಾಂವಿ ,ಗೋಕಾಕಿನಲ್ಲಿ ಯಾರಿಗೆ ಲೀಡ್ ಸಿಗುತ್ತದೆ,ಅವರೇ ವಿಜಯಶಾಲಿ ಆಗ್ತಾರೆ ಎಂಬುದು ಒಬ್ಬ ಸಾಮಾನ್ಯ ಕಾರ್ಯಕರ್ತನ ವಿಶ್ಲೇಷಣೆಯಾಗಿದ್ದು,ಈ ಎರಡೂ ಕ್ಷೇತ್ರಗಳಲ್ಲಿ ಏನಾಗುತ್ತೆ ಅಂತಾ ಬಿಜೆಪಿ ನಾಯಕರಿಗೂ ಈಗ ದುಗುಡ ಶುರುವಾಗಿದೆ.

Check Also

ಪರಿಷತ್ತ ಚುನಾವಣೆಯಲ್ಲಿ ವೋಟ್ ಮಾಡುವದು ಹೇಗೆ ಇಲ್ಲಿದೆ ರೂಲ್ಸ್…!!!

ಬೆಳಗಾವಿ,- ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಮತಗಟ್ಟೆ ಏಜೆಂಟರುಗಳು ಚುನಾವಣಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಗೊಂದಲವಾಗದಂತೆ ನಿಯಮಾನುಸಾರ ಕಾರ್ಯನಿರ್ವಹಿಸಬೇಕು …

Leave a Reply

Your email address will not be published. Required fields are marked *