Breaking News

ಸತೀಶ್ ಜಾರಕಿಹೊಳಿ ನಿಜವಾದ ಬಸವ ಭಕ್ತ- ವಿನಯ ನಾವಲಗಟ್ಟಿ

ಬೆಳಗಾವಿ-ಬದುಕಿನಲ್ಲಿ,ಸೇವಾ ಕ್ಷೇತ್ರದಲ್ಲಿ ಬಸವ ತತ್ವಗಳನ್ನು ಅನುಸರಿಸಿ,ಬಸವ ತತ್ವಗಳನ್ನು ಪಾಲಿಸುತ್ತಿರುವ ಸತೀಶ್ ಜಾರಕಿಹೊಳಿ ಅವರು ನಿಜವಾದ ಬಸವ ಭಕ್ತರು ಎಂದು ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಘಟಕದ ಅದ್ಯಕ್ಚ ವಿನಯ ನಾವಲಗಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು,ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ,ರಸಗೊಬ್ಬರ ದರವನ್ನು ದುಪ್ಪಟ್ಟು ಮಾಡಿ,ಸರ್ಕಾರಿ ಸಂಸ್ಥೆಗಳನ್ನು ಖಾಸಗಿಕರಣ ಮಾಡಿ ಬಡವರ ಹೊಟ್ಟೆಗೆ ಕಲ್ಲುಕಟ್ಟುವ,ರೈತರನ್ನು ಸಂಕಷ್ಟದ ಹೊಂಡಕ್ಕೆ ತಳ್ಳುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮುಚ್ಚಲು ಬಿಜೆಪಿ ನಾಯಕರು ಹಿಂದುತ್ಬದ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಿನಯ ನಾವಲಗಟ್ಟಿ ಆರೋಪಿಸಿದ್ದಾರೆ.

ಬಿಜೆಪಿ ನಾಯಕರು ಸತೀಶ್ ಜಾರಕಿಹೊಳಿ ಅವರನ್ನು ಹಿಂದೂ ವಿರೋಧಿ ಎಂದು ಸುಳ್ಳು ಆರೋಪ ಮಾಡುತ್ತಿದ್ದು,ಸತೀಶ್ ಜಾರಕಿಹೊಳಿ ಅವರು ಸ್ವತಃ ಬಸವ ತತ್ವಗಳನ್ನು ಪಾಲಿಸಿ,ಮಾನವ ಬಂದುತ್ವ ವೇದಿಕೆಯ ಮೂಲಕ ಬಸವ ತತ್ವಗಳನ್ನು ಪ್ರಸಾರ ಮಾಡುತ್ತಿದ್ದು ಅವರೇ ನಿಜವಾದ ಬಸವ ಭಕ್ತರಾಗಿದ್ದು ಸತೀಶ್ ಜಾರಕಿಹೊಳಿ ಅವರನ್ನು ಹಿಂದೂ ವಿರೋಧಿ ಎಂದು ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು ಬಸವ ತತ್ವದ ವಿರೋಧಿಗಳಾಗಿದ್ದಾರೆ.ಸತೀಶ್ ಅವರನ್ನು ಹಿಂದೂ ವಿರೋಧಿ ಎಂದು ಹೇಳುವ ಮೂಲಕ ಶರಣ ಸಂಸ್ಕೃತಿಗೆ ಅವಮಾನ ಮಾಡುತ್ತಿದ್ದಾರೆ ಎಂದು ವಿನಯ ನಾವಲಗಟ್ಟಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ.

ಕೋವೀಡ್ ಸಂಧರ್ಭದಲ್ಲಿ ಜಾತಿ,ಧರ್ಮ,ಭಾಷೆಯನ್ನು ಲೆಕ್ಕಿಸದೇ ಸಂತ್ರಸ್ತರಿಗೆ ತಮ್ಮ ಗೆಸ್ಟ್ ಹೌಸ ನಲ್ಲಿ ಆಶ್ರಯ ನೀಡಿದ್ದ ಸತೀಶ್ ಅವರ ಮಾನವೀಯತೆ ಎಲ್ಲರಿಗೂ ಮಾದರಿಯಾಗಿದ್ದು ಅವರಿಗೆ ಹಿಂದೂ ವಿರೋಧಿ ಪಟ್ಟ ಕಟ್ಟುವ ಬಿಜೆಪಿ ನಾಯಕರೇ ಬಸವಣ್ಣನ ವಿರೋಧಿಗಳಾಗಿದ್ದು ಸುಳ್ಳು ಹೇಳಿಕೆಗಳಿಂದ ಸತ್ಯ ಮುಚ್ವುವದಿಲ್ಲ,ಸತೀಶ್ ಜಾರಕಿಹೊಳಿ ಅವರು ಮಾಡುತ್ತಿರುವ ಸಾಮಾಜಿಕ ಸೇವೆ ಜನರ ಹೃದಯ ಸಿಂಹಾಸನದಲ್ಲಿ ವೀರಾಜಮಾನವಾಗಿದ್ದು ಉಪ ಚುನಾವಣೆಯಲ್ಲಿ ಅವರ ಗೆಲುವು ನಿಶ್ಚಿತ ಎಂದು ವಿನಯ ನಾವಲಗಟ್ಟಿ ವಿಶ್ವಾಸ ವ್ಯೆಕ್ತಪಡಿಸಿದ್ದಾರೆ.

Check Also

ಮಂತ್ರಿಗಿರಿ ರೇಸ್ ನಲ್ಲಿ ಬೆಳಗಾವಿಯ ಜಾತ್ಯಾತೀತ ಕುಟುಂಬದ, ಶಾಸಕ!

ಬೆಳಗಾವಿ ಯಾರಿಗೆ ಸೇರಿದ್ದು ಎಂದು ವಿಚಾರಣೆ ಮಾಡಲು ಕೇಂದ್ರ ಸರ್ಕಾರಗಳು ರಚಿಸಿದ ಫಜಲ್ ಅಲಿ,ಆಯೋಗ,ಮಹಾಜನ್ ಆಯೋಗ ಬೆಳಗಾವಿಗೆ ಬಂದಾಗ ಎಲ್ಲ …

Leave a Reply

Your email address will not be published. Required fields are marked *