ಬೆಳಗಾವಿ-ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕೆ ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಹೋರಾಟ ಅವರ ಇತಿಹಾಸದ ಗತವೈಭವ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶ ಪ್ರೇಮ ನಮ್ಮೆಲ್ಲರಿಗೂ ಪ್ರೇರಣೆ ಇಂತಹ ರಾಷ್ಟ್ರ ಪುರುಷರ ಇತಹಾಸವೇ ನಮಗೆ ಆದರ್ಶ
ಸ್ವಾತಂತ್ರ್ಯೋತ್ಸ ಆಚರಣೆಗೆ ಕೇವಲ ನಾಲ್ಕು ದಿನಗಳು ಬಾಕಿ ಇವೆ ಭಾರತವನ್ನು ಬ್ರೀಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಲು ಪ್ರಾಣ ತ್ಯಾಗ ಮಾಡಿ ಮಹಾಪುರುಷರನ್ನ ನಾವೆಲ್ಲರೂ ಸ್ಮರಿಸುವದೇ ನಮ್ಮೆಲ್ಲರ ದೇಶ ಪ್ರೇಮ
ಬೆಳಗಾವಿಯ ಚನ್ನಮ್ಮ ಸರ್ಕಲ್ ನೋಡಿದರೆ ವೀರ ರಾಣಿಯ ಹೋರಾಟದ ಗತವೈಭವ ಕಣ್ಮುಂದೆ ಬಂದಂತಾಗುತ್ತೆ ಹೋರಾಟಗಾರು ಚನ್ನಮ್ಮ ಸರ್ಕಲ್ ಬಿಟ್ಟು ಬೆರೆ ಕಡೆಗೆ ಹೋರಾಟ ಮಾಡುವದೇ ಇಲ.್ಲ ಹೀಗಾಗಿ ಬೆಳಗಾವಿಯ ಚನ್ನಮ್ಮ ಸರ್ಕಲ್ ಈಗ ಕ್ರಾಂತಿಕಾರಿ ಸರ್ಕಲ್ ಆಗಿದೆ ಹೋರಾಟಗಾರರ ಅಚ್ಚು ಮೆಚ್ಚಿನ ಸ್ಥಳವಾಗಿದೆ ಇಲ್ಲಿ ಹೋರಾಟ ಮಾಡಿದರೆ ಹೋರಾಟ ಯಶಸ್ವಿ ಆಗುತ್ತದೆ ಎನ್ನುವದು ಹೋರಾಟಗಾರರ ನಂಬಿಕೆ. ಅದು ನಿಜ ಕೂಡ
