Breaking News
Home / Breaking News / ಬೆಳಗಾವಿಯಲ್ಲಿ ಕರೋನಾ ವದಂತಿ ಹರಡಿಸಿದ ಯುವಕನ ಅರೆಸ್ಟ್….

ಬೆಳಗಾವಿಯಲ್ಲಿ ಕರೋನಾ ವದಂತಿ ಹರಡಿಸಿದ ಯುವಕನ ಅರೆಸ್ಟ್….

ಬೆಳಗಾವಿ- ಎಂ ಈ ಎಸ್ ನಾಯಕ ಸೂರಜ ಕಣಬರಕರ ಅವರಿಗೆ ಕರೋನಾ ವೈರಸ್ ತಗುಲಿದೆ,ಆತನನ್ನು ಕೆ. ಎಲ್ ಇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ  ಸುಳ್ಳು ವದಂತಿ ಹರಡಿಸಿದ ಯುವಕನನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ .

ಈ ವದಂತಿ ಹರಡಿಸಿದ ಯುವಕ,ಬೇರೆ ಯಾರೂ ಅಲ್ಲ ,ಸೂರಜ ಕಣಬರಕರ ಅವರ ಚಿಕ್ಕಪ್ಪನ ಮಗ,ಮೇಘನ್ ಅಶೋಕ ಕಣಬರಕರ ಎಂಬುದು ವಿಶೇಷ

ಈತ ಎಲ್ಲ ವ್ಯಾಟ್ಸಪ್ ಗ್ರೂಪ್ ಗಳಲ್ಲಿ ,ಎಂಈಎಸ್ ನಾಯಕ ಸೂರಜ್ ಕಣಬರಕರಗೆ ಕರೋನಾ ಸೊಂಕು ತಗಲಿದೆ ಆತನನ್ನು ಕೆ ಎಲ್ ಇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸುಳ್ಳು ಸುದ್ಧಿಯನ್ನು ಹಬ್ಬಿಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಆರೋಪದ ಮೇಲೆ ಮಾಳ ಮಾರುತಿ ಪೋಲೀಸರು ಓಲ್ಡ ಗಾಂಧಿ ನಗರದ ನಿವಾಸಿ ಮೇಘನ್ ಅಶೋಕ ಕಣಬರಕರನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳಿಸಿದ್ದಾರೆ

ಕರೋನಾ ಸೊಂಕಿನ ಕುರಿತು ಸುಳ್ಳು ವದಂತಿ ಹರಡಿಸುವ ಕಿಡಗೇಡಿಗಳ ಮೇಲೆ ಪೋಲೀಸರು ವಿಶೇಷ ನಿಗಾ ಇಟ್ಟಿದ್ದಾರೆ ಕರೋನಾ ಕುರಿತು ವದಂತಿ ಹರಡಿಸಿ ಆತಂಕ ಮೂಡಿಸಿದ ಯುವಕ ಈಗ ಜೈಲು ಪಾಲಾಗಿದ್ದಾನೆ .

Check Also

ಶಾಸಕ ರಾಜು ಕಾಗೆ ಅವರಿಗೆ ನೋಟೀಸ್ ಜಾರಿ..

ವಿವಾದಾತ್ಮಕ ಹೇಳಿಕೆ ಶಾಸಕರಾದ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ ಚಿಕ್ಕೋಡಿ (ಮೇ.1) ಕಾಗವಾಡ ಶಾಸಕರಾದ ರಾಜು ಕಾಗೆ ಅವರು …

Leave a Reply

Your email address will not be published. Required fields are marked *