Breaking News

ಬೆಳಗಾವಿಯಲ್ಲಿ, ತಂದೆ,ತಾಯಿಯ ಎದುರೇ ಮಗನ ಮರ್ಡರ್

ಬೆಳಗಾವಿಯಲ್ಲಿ, ತಂದೆ,ತಾಯಿಯ ಎದುರೇ ಮಗನ ಮರ್ಡರ್

ಬೆಳಗಾವಿ-ತಂದೆ,ತಾಯಿಯ ಎದುರೇ ಕೆಲವು ದುಷ್ಕರ್ಮಿಗಳು ಮಗನ ಮೇಲೆ,ಸೈಕಲ್ ಚೈನ್ ಮತ್ತು ಜಂಬಿಯಾದಿಂದ ಹಕ್ಲೆ ಮಾಡಿ,ಕೊಲೆ ಮಾಡಿದ ಘಟನೆ ಬೆಳಗಾವಿ ಮಹಾನಗರದಲ್ಲಿನಡೆದಿದೆ.

ಬೆಳಗಾವಿಯ ಹಳೆ ಪಿಬಿ ರಸ್ತೆಯಲ್ಲಿರುವ ಧಾಕೋಜಿ ಹಾಸ್ಪಿಟಲ್ ಹತ್ತಿರ  ಈ ಘಟನೆ. ನಡೆದಿದ್ದು,ಮಹೇಶ್ ಜ್ಞಾನೇಶ್ವರ ಕಾಮನ್ನಾಚೆ,35 ವಿಜಯನಗರ ಹಲಗಾ ಎಂದು ಗುರುತಿಸಲಾಗಿದೆ.

ಮಹೇಶ ಜ್ಞಾನೇಶ್ವರ ಕಾಮನ್ನಾಚೆ,ಬೆಳಗಾವಿಯ ಖಾಸಬಾಗ ಪ್ರದೇಶದಲ್ಲಿ ಮೇಕ್ಯಾನಿಕ್ ಗ್ಯಾರೇಜ್ ನಡೆಸುತ್ತಿದ್ದ,ನಿನ್ನೆ ರಾತ್ರಿ ಈತನ ಗ್ಯಾರೇಜ್ ನಲ್ಲಿ ಕಾರೊಂದು ರಿಪೇರಿ ಆಗಿತ್ತು,ರಿಪೇರಿಯಾದ ಕಾರಿನಲ್ಲಿ ಕಾರಿನ ಮಾಲೀಕನನ್ನು ಕೂರಿಸಿಕೊಂಡು‌ ಟ್ರಾಯಿಲ್ ನೋಡಲು ಹೊರಟಾಗ, ಬೈಕ್ ಸವಾರನೊಬ್ಬ ಈ ಕಾರಿಗೆ ಡಿಕ್ಕಿ ಹೊಡೆದು,ಇಬ್ಬರ ನಡುವೆ ಗಲಾಟೆಯಾದ ಸಂಧರ್ಭದಲ್ಲಿ ಈ ಘಟನೆ ನಡೆದಿದೆ.

ಕಾರ್ ಮೆಕ್ಯಾನಿಕ್ ಬೈಕ್ ಸವಾರನ ಜೊತೆ ಗಲಾಟೆ ಮಾಡುತ್ತಿರುವ ಸಂಧರ್ಭದಲ್ಲಿ ಅದೇ ಮಾರ್ಗದಿಂದ ಮೆಕ್ಯಾನಿಕ್ ತಂದೆ,ಮತ್ತು ತಾಯಿ ಆಸ್ಪತ್ರೆಗೆ ತೆರಳುತ್ತಿರುವಾಗ,ಗದ್ದಲ ನೋಡಿ ನಿಂತಿದ್ದಾರೆ. ಇದೇ ಸಂಧರ್ಭದಲ್ಲಿ ಬೈಕ್ ಸವಾರ ಕೆಲವು ಪುಂಡರನ್ನು ಕರೆಯಿಸಿ,ಮೇಕ್ಯಾನಿಕ್ ಮಹೇಶ್ ಮೇಲೆ ಸೈಕಲ್ ಚೈನ್ ಮತ್ತು ಜಂಬಿಯಾದಿಂದ ಹಲ್ಲೆ ಮಾಡಿದ್ದು,ಈ ಘರ್ಷಣೆ ಕೊಲೆಯಲ್ಲಿ ಅಂತ್ಯವಾಗಿದೆ.

ಈ ಘಟನೆ ನಿನ್ನೆ ರಾತ್ರಿನಡೆದಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮೇಕ್ಯಾನಿಕ್ ಮಹೇಶ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು,ಚಿಕಿತ್ಸೆ ಫಲಕಾರಿಯಾಗದೇ ಮಹೇಶ್ ಮೃತಪಟ್ಟಿದ್ದಾನೆ. ಶಹಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.