ಬೆಳಗಾವಿ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ಯನ್ನು ನಾಮಪತ್ರಗಳನ್ನು ಡಿ.೨೨ರಿಂದ ೨೯ ರವರೆಗೆ ಬೆಳಿಗ್ಗೆಯಿಂದ ಮಧ್ಯಾಹ್ನ ೩ ಗಂಟೆ ವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೧೦ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿವೆ. ಸಮಿತಿಯಲ್ಲಿ ತಲಾ ೧೧ ರೈತ ಮತ ಕ್ಷೇತ್ರಗಳು ಹಾಗೂ ೩ ವರ್ತಕ ಮತಕ್ಷೇತ್ರಗಳಿವೆ ಎಂದರು.
ಪ್ರತಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಒಂದು ಸ್ಥಾನ ಪರಿಶಿಷ್ಠ ಜಾತಿ, ಒಂದು ಪರಿಶಿಷ್ಠ ಪಂಗಡ, ಒಂದು ಹಿಂದುಳಿದ ಅ ವರ್ಗ, ಒಂದು ಹಿಂದುಳಿದ ಬ ವರ್ಗ, ೨ ಸ್ತಾನ ಮಹಿಳೆ, ಹಾಗೂ ೫ ಸ್ಥಾನ ಗಳನ್ನು ಸಾಮಾನ್ಯ ವರ್ಗ ಗಳಿಗೆ ಮಿಸಲಾತಿ ಇರುವವು. ಬೆಳಗಾವಿ ಜಿಲ್ಲೆಯ ೧೦ ಕೃಷಿ ಉತ್ಪನ್ನ ಮಾರುಕಟ್ಟೆ ಗಳಿಗೆ ಒಟ್ಟು ೧೧೦ ಸ್ಥಾನಗಳಿದ್ದು ೧೦ ಸ್ಥಾನ ಪ. ಜಾತಿ, ೧೦ ಪ.ಪಂಗಡ ೧೦ ಹಿಂದುಳಿದ ಅ ವರ್ಗ, ೧೦ ಹಿಂದುಳಿದ ಬ ವರ್ಗ, ೨೦ ಮಹಿಳೆ, ೫೦ ಸಾಮಾನ್ಯ ವರ್ಗಗಳಿಗೆ ಮೀಸಲಾತಿ ನಿಗದಿ ಪಡಿಸಿ ಅದಿಸೂಚನೆ ಹೊರಡಿಸಲಾಗಿದೆ ಎಂದರು.
ಎಲ್ಲ ಕ್ಷೇತ್ರಗಳಿಗೆ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ ನ್ಯಾಯಸಮ್ಮತ ಚುನಾವಣೆಗೆ ಅಗತ್ಯವಾಗಿರುವ ಎಲ್ಲ ಕ್ರಮಗಳನ್ನು ಜರುಗಿದಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು