Breaking News

ಎ ಪಿ ಎಂ ಸಿ ಚುನಾವಣೆಗೆ ಸಕಲ ಸಿದ್ಧತೆ

ಬೆಳಗಾವಿ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ಯನ್ನು ನಾಮಪತ್ರಗಳನ್ನು ಡಿ.೨೨ರಿಂದ ೨೯ ರವರೆಗೆ ಬೆಳಿಗ್ಗೆಯಿಂದ ಮಧ್ಯಾಹ್ನ ೩ ಗಂಟೆ ವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೧೦ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿವೆ. ಸಮಿತಿಯಲ್ಲಿ ತಲಾ ೧೧ ರೈತ ಮತ ಕ್ಷೇತ್ರಗಳು ಹಾಗೂ ೩ ವರ್ತಕ ಮತಕ್ಷೇತ್ರಗಳಿವೆ ಎಂದರು.

ಪ್ರತಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಒಂದು ಸ್ಥಾನ ಪರಿಶಿಷ್ಠ ಜಾತಿ, ಒಂದು ಪರಿಶಿಷ್ಠ ಪಂಗಡ, ಒಂದು ಹಿಂದುಳಿದ ಅ ವರ್ಗ, ಒಂದು ಹಿಂದುಳಿದ ಬ ವರ್ಗ, ೨ ಸ್ತಾನ ಮಹಿಳೆ, ಹಾಗೂ ೫ ಸ್ಥಾನ ಗಳನ್ನು ಸಾಮಾನ್ಯ ವರ್ಗ ಗಳಿಗೆ ಮಿಸಲಾತಿ ಇರುವವು. ಬೆಳಗಾವಿ ಜಿಲ್ಲೆಯ ೧೦ ಕೃಷಿ ಉತ್ಪನ್ನ ಮಾರುಕಟ್ಟೆ ಗಳಿಗೆ ಒಟ್ಟು ೧೧೦ ಸ್ಥಾನಗಳಿದ್ದು ೧೦ ಸ್ಥಾನ  ಪ. ಜಾತಿ, ೧೦ ಪ.ಪಂಗಡ ೧೦ ಹಿಂದುಳಿದ ಅ ವರ್ಗ, ೧೦ ಹಿಂದುಳಿದ ಬ ವರ್ಗ, ೨೦ ಮಹಿಳೆ, ೫೦ ಸಾಮಾನ್ಯ ವರ್ಗಗಳಿಗೆ ಮೀಸಲಾತಿ ನಿಗದಿ ಪಡಿಸಿ ಅದಿಸೂಚನೆ ಹೊರಡಿಸಲಾಗಿದೆ ಎಂದರು.

ಎಲ್ಲ ಕ್ಷೇತ್ರಗಳಿಗೆ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ  ನ್ಯಾಯಸಮ್ಮತ ಚುನಾವಣೆಗೆ ಅಗತ್ಯವಾಗಿರುವ ಎಲ್ಲ ಕ್ರಮಗಳನ್ನು ಜರುಗಿದಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು

 


 

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.