ಬೆಳಗಾವಿ:
ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ನಾಡು ನುಡಿ, ನೆಲ-ಜಲ ಭಾಷೆಗೆ ಧಕ್ಕೆ ಬಂದಾಗ ನಿರಂತರವಾಗಿ ಹೋರಾಟ ಮಾಡುತ್ತ ಬಂದಿರುವ ಕನ್ನಡ ಪರ ಹೋರಾಟಗಾರ ದೀಪಕ ಗುಡಗನಟ್ಟಿ ಮಂಗಳವಾರ ಮಾತೃ ಸಂಘಟನೆಗೆ ಮರಳಿದರು.
ಮಂಗಳವಾರ ಬೆಳಗಾವಿಯಲ್ಲಿ ನಡೆದ ಕರವೇ ಜಿಲ್ಲಾ ಮಟ್ಟದ ಸಭೆಯಲ್ಲಿ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ದೀಪಕ್ ಗುಡಗನಟ್ಟಿ ಅವರಿಗೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಜಿಲ್ಲೆಯಲ್ಲಿ ಕನ್ನಡದ ಸಂಘಟನೆಯನ್ನು ಬಲಿಷ್ಠಗೊಳಿಸುವ ಜವಾಬ್ದಾರಿ ನೀಡಿದರು.
ಕರವೇ ಜಿಲ್ಲಾ ಸಂಚಾಲಕರಾಗಿ ಬಾಳು ಜಡಗಿ, ಕರೆಪ್ಪ ಕೊಚ್ಚರಗಿ, ಸಂಜು ಬಡಿಗೇರ, ಕೃಷ್ಣಾ ಖಾನಪ್ಪನವರ ಅವರನ್ನು ನೇಮಕ ಮಾಡಲಾಯಿತು. ಜೊತೆಗೆ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಟಿ.ಶಾಂತಮ್ಮ ಅವರನ್ನು ರಾಜ್ಯ ಸಮಿತಿಗೆ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟಿ.ಎ.ನಾರಾಯಣಗೌಡ, ಕರವೇ ಕಾರ್ಯಕರ್ತರು ಗಡಿನಾಡು ಬೆಳಗಾವಿಯಲ್ಲಿ ಕನ್ನಡದ ಸಂರಕ್ಷಣೆ ಮಾಡುವುದರ ಜೊತೆಗೆ ಕನ್ನಡದ ಸಂಘಟನಾ ಶಕ್ತಿಯನ್ನು ಬಲೀಷ್ಠಗೊಳಿಸಬೇಕು. ಕನ್ನಡದ ಸಂಘಟನಾ ಶಕ್ತಿ ರಾಜಕೀಯ ಶಕ್ತಿಯಾಗಿ ಬೆಳೆದರೆ ಕನ್ನಡ ನೆಲ, ಜಲ, ರಕ್ಷಣೆಯ ಜೊತೆಗೆ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದರು.
ಸಭೆಯಲ್ಲಿ ಕರವೇ ರಾಜ್ಯಮಟ್ಟದ ಪದಾಧಿಕಾರಿಗಳಾದ ಸನ್ನೀರಪ್ಪ ಪಡಕೋಟೆ, ಜಿಲ್ಲಾಧ್ಯಕ್ಷ ಮಹಾದೇವ ತಳವಾರ, ಗಣೇಶ ರೋಕಡೆ, ಸುರೇಶ ಗವನ್ನವರ ಸೇರಿದಂತೆ ಜಿಲ್ಲೆಯ ಕರವೆ ಮುಖಂಡರು ಉಪಸ್ಥಿತರಿದ್ದರು.
Check Also
ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?
ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …