ಗೋಕಾಕ ಚುನಾವಣೆ ಜಾರಕಿಹೊಳಿ ಬೆಂಬಲಿಗರಿಗೆ ನುಂಗಲಾರದ ತುತ್ತಾಗಿದೆ-ಡಾ ರಾಜೇಂದ್ರ ಸಣ್ಣಕ್ಕಿ
ಬೆಳಗಾವಿ- ನಾವು ಯಾವುದೇ ಇಂದು ವ್ಯೆಕ್ತಿಯ ಬೆಂಬಲಿಗರು ಅಲ್ಲವೇ ಅಲ್ಲ ,ನಾವು ಜಾರಕಿಹೊಳಿ ಸಹೋದರರ ಬೆಂಬಲಿಗರು ಈ ಚುನಾವಣೆ ಜಾರಕಿಹೊಳಿ ಸಹೋದರರಿಗೆ ನುಂಗಲಾರದ ತುತ್ತಾಗಿದೆ ಎಂದು ಜಾರಕಿಹೊಳಿ ಸಹೋದರರ ಪ್ರಮುಖ ಬೆಂಬಲಿಗ ನಾಯಕ ಡಾ.ರಾಜೇಂದ್ರ ಸಣ್ಣಕ್ಕಿ ಅಸಮಾಧಾನ ವ್ಯೆಕ್ತ ಪಡಿಸಿದ್ದಾರೆ.
ಮಾದ್ಯಮಗಳ ಜೊತೆ ಮಾತನಾಡಿದ ಅವರು ನಾವು ಎಲ್ಲ ಸಹೋದರರ ಬೆಂಬಲಿಗರು ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕು ಎನ್ನುವ ಸಂಕಷ್ಟ ಎದುರಾಗಿದೆ.ನಮಗೆ ಎಲ್ಲರೂ ಬೇಕು 2008 ರಲ್ಲಿ ಭೀಮಶಿ ಜಾರಕಿಹೊಳಿ ಇಲೆಕ್ಷನ್ ಗೆ ನಿಂತಾಗ ಪರಿಸ್ಥಿತಿ ಭಿನ್ನವಾಗಿತ್ತು ಆವಾಗ ನಾಲ್ಕುಜನ ಸಹೋದರರು ಒಂದೇ ಕಡೆ ಇದ್ದರು ಹಾಗಾಗಿ ಜಾರಜಿಹೊಳಿ ಸಹೋದರರಲ್ಲಿ ಒಡಕಾಗಿದೆ ಎಂದು ಭಾವಿಸಿರಲಿಲ್ಲ ಸಮಸ್ಯೆ ಆಗಿರಲಿಲ್ಲ ಈಗ ಆ ಕಡೆ ಇಬ್ನರು ಈ ಕಡೆ ಇಬ್ಬರು ಇರುವದರಿಂದ ಕಾರ್ಯಕರ್ತರಿಗೆ ಸಮಸ್ಯೆಯೂ ಆಗಿದೆ ನೋವು ಆಗಿದೆ ಕಾರ್ಯಕರ್ತರಿಗೆ ಮಾನಸಿಕ ಆಗಿದೆಎಂದು ಡಾ ರಾಜೇಂದ್ರ ಸಣ್ಣಕ್ಕಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ರಮೇಶ್ ಜಾರಕಿಹೊಳಿ,ಸತೀಶ್ ಜಾರಕಿಹೊಳಿ,ಬಾಲಚಂದ್ರ ಜಾರಕಿಹೊಳಿ ಮೂರು ಜನ ಮುಂಚೂಣಿ ನಾಯಕರು ಮೂರು ಜನ ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ.ಜಾರಕಿಹೊಳಿ ಸಾಮ್ರಾಜ್ಯ ಕಟ್ಟುವಲ್ಲಿ ಜಾರಕಿಹೊಳಿ ಸಹೋದರರ ಪರಿಶ್ರಮ ಎಷ್ಟಿದೆಯೋ ಅಷ್ಟೇ ಪರಿಶ್ರಮ ಬೆಂಬಲಿಗರದ್ದೂ ಇದೆ ನಾವು ತಟಸ್ಥ ವಾಗಿಲ್ಲ ನಾವು ಯಾರಿಗೆ ಬೆಂಬಲಿಸಬೇಕು ಎನ್ನುವ ಗೊಂದಲದಲ್ಲಿದ್ದೇವೆ.ರಾಜಕೀಯ ಕಾರ್ಯಕರ್ತರು ಸೇರಿ ನಿರ್ಣಯ ತೆಗೆದುಕೊಳ್ಳುತ್ತೇವೆ.ಎಂದು ರಾಜೇಂದ್ರ ಸಣ್ಣಕ್ಕಿ ಹೇಳಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ