ಸುವರ್ಣಸೌಧದ ಒಳಗೆ ಕೆಡಿಪಿ ಸಭೆ,ಹೊರಗೆ ರೈತರ ಪ್ರತಿಭಟನೆ.ಮಾತಿನ ಚಕಮಕಿ….
ಬೆಳಗಾವಿ- ಸುವರ್ಣ ಸೌಧದ ಒಳಗೆ ಕಡೆಪಿ ಸಭೆ ನಡೆಯುತ್ತಿದ್ದರೆ ಹೊರಗೆ ರೈತರು ,ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ
ಪ್ರತಿಭಟನಾ ಸ್ಥಳಕ್ಕೆ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಕರೆಸುವಂತೆ ಪಟ್ಟು ಹಿಡಿದಿದ್ದಾರೆ
ರೈತರ ಮತ್ತು ಪೊಲಿಸ್ರ ಮದ್ಯ ಮಾತಿನ ಚಕಮಕಿ ನಡೆದಿದೆ ಜಗದೀಶ್ ಶೆಟ್ಟರ್ ಕೈಗೆ ಮನವಿ ನೀಡುತ್ತೇವೆ ಅಂತಾ ರೈತರ ಪಟ್ಟು ಹಿಡಿದು ಕುಳಿತಿದ್ದಾರೆ.
ಕಳೆದ ಒಂದು ಗಂಟೆಯಿಂದ ಬಿರು ಬಿಸಿಲಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು
ಸುವರ್ಣ ಸೌಧದಲ್ಲಿ ಕೆಡಿಪಿ ಸಭೆ ನಡೆಸುತ್ತಿರುವ ಜಗದೀಶ್ ಶೆಟ್ಟರ್ ಅವರಿಗೆ ಪೋಲೀಸರು ಮಾಹಿತಿ ರವಾನಿಸಿದ್ದಾರೆ. ಜಗದೀಶ ಶೆಟ್ಟರ್
ಬರದೇ ಹೊದರೆ ಅರೆ ಬೆತ್ತಲೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ ರೈತರು
ಬೆಳಗಾವಿ ಸುವರ್ಣ ಸೌಧದೊಳಗೆ ಕೆಡಿಪಿ ಸಭೆ, ಹೊರಗೆ ರೈತರ ಪ್ರತಿಭಟನೆ ನಡೆಯುತ್ತಿದೆ
ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಧರಣಿ ನಡೆಯುತ್ತಿದೆ.
ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ.. ಧಿಕ್ಕಾರ ಎಂದು ಘೋಷಣೆ ಕೂಗುವ ಜೊತೆಗೆ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆಯೂ ಆಗ್ರಹ ಪಡಿಸಿದ್ದಾರಡ
ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ ರೈತರು ಸಾಲ ಪಾವತಿಸುವಂತೆ ಬ್ಯಾಂಕ್ ನೋಟಿಸ್ ಬರುತ್ತಿದೆ ಎಂದು ಆಕ್ರೋಶ ವ್ಯೆಕ್ತಪಡಿಸಿದ್ದಾರೆ
ಕರ್ನಾಟಕ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ರೈತರ ಧರಣಿ ನಡೆಯುಥತದೆ
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ವಿರುದ್ಧವೂ ರೈರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ