Breaking News

ಬೆಳಗಾವಿ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆ ಮಾಡಲು ಸಚಿವ ಸುರೇಶ ಅಂಗಡಿ ಸಂಕಲ್ಪ

ಬೆಳಗಾವಿ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆ ಮಾಡಲು ಸಚಿವ ಸುರೇಶ ಅಂಗಡಿ ಸಂಕಲ್ಪ

ಬೆಳಗಾವಿ- ಐತಿಹಾಸಿಕ ಬೆಳಗಾವಿ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆಯನ್ನಾಗಿಸಲು ಕೇಂದ್ರದ ರಾಜ್ಯ ರೇಲ್ವೆ ಸಚಿವ ಸುರೇಶ ಅಂಗಡಿ ಸಂಕಲ್ಪ ಮಾಡಿದ್ದಾರೆ
ಇಂದು ಶುಕ್ರವಾರ ಬೆಳಿಗ್ಗೆ
ಬೆಳಗಾವಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ
ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಜತೆ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಚಿಂತನ ಮಂಥನ ಸಭೆ ನಡೆಸಿದರು.

ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಫಲಾನುಭವಿಗಳು ಸೇರಿದಂತೆ ಹಲವರು ಭಾಗಿಯಾಗಿ ಯೋಜನೆಯ ಸಾಧಕ ಭಾದಕ ಬಗ್ಗೆ ಚರ್ಚೆ ಮಾಡಲಾಯಿತು. ಕೇಂದ್ರ ಸಚಿವ ಸುರೇಶ್ ಅಂಗಡಿ ‌ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆಯನ್ನಾಗಿ ಮಾಡುವ ಪಣತಡೊಣ ಅಂತಾ ಜಿಪಂ ಸಿಇಓ ರಾಮಚಂದ್ರ ಹೇಳಿದರು.

ಸಚಿವ ಸುರೇಶ್ ಅಂಗಡಿ ಪ್ರಧಾನಮಂತ್ರಿ ಅವಾಸ್ ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಈ ಯೋಜನೆಯ ಫಲಾನುಭವಿಗಳಿಗೆ ತೊಂದರೆ ಆಗದಂತೆ ನಿಗಾ ವಹಿಸಬೇಕು ಎಂದು ಅಂಗಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.