ಗ್ಯಾಸ್ ಪೈಪ್ ಲೈನ್ ಲಿಕೇಜ್…ಶಹಾಪೂರ ಪ್ರದೇಶದಲ್ಲಿ ಆತಂಕ..

ಬೆಳಗಾವಿ- ಇತ್ತೀಚಿಗೆ ಬಾಕ್ಸೈಟ್ ರಸ್ತೆಯಲ್ಲಿ ಮರಾಠಾ ಮಂಡಳದ ಡೆಂಟಲ್ ಕಾಲೇಜು ಬಳಿ ಕಾಣಿಸಿಕೊಂಡ ಹೊಗೆ ಮತ್ತು ಬೆಂಕಿ ಗ್ಯಾಸ್ ಪೈಪ್ ಲೈನ್ ಲಿಕೇಜ್ ನಿಂದ ಆಗಿರುವ ಅವಘಡ ಅಲ್ಲವೇ ಅಲ್ಲ ಸಮಂಧಿಸಿದ ಗ್ಯಾಸ್ ಕಂಪನಿ ಸಮರ್ಥನೆ ಮಾಡಿಕೊಂಡ ಬೆನ್ನಲ್ಲಿಯೇ ಬೆಳಗಾವಿಯ ಮಹಾತ್ಮಾಪುಲೆ ರಸ್ತೆಯಲ್ಲಿ ಗ್ಯಾಸ್ ಪೈಪ್ ಲೈನ್ ಲಿಕೇಜ್ ಆಗಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.
ಬೆಳಗಾವಿಯಲ್ಲಿ ಅಳವಡಿಸುತ್ತಿರುವ ಗ್ಯಾಸ್ ಪೈಪ್ ಲೈನ್ ಸುರಕ್ಷಿತವೇ ಎನ್ನುವ ಆತಂಕ ಎದುರಾಗಿದೆ .
ಇಂದು ಮಹಾತ್ಮಾಪುಲೆ ರಸ್ತೆಯಲ್ಲಿ ಏಕಾಏಕಿ ಗ್ಯಾಸ್ ಲಿಕೇಜ್ ಆಗುತ್ತಿದ್ದಂತೆಯೇ ಅದನ್ನು ಸರಿಪಡಿಸಲು ಸಾರ್ವಜನಿಕರು ಪರದಾಡಿದರು ನಂತರ ಗ್ಯಾಸ್ ಏಜನ್ಸಿಯ ಆಸಾಮಿ ಬಂದು ಅದನ್ನು ಸರಿ ಪಡಿಸಿದಾಗ ಅಲ್ಲಿಯ ಜನ ನಿಟ್ಟುಸಿರು ಬಿಟ್ಟೊದ್ದಾರೆ.
ಬೆಳಗಾವಿಯಲ್ಲಿ ಅಳವಡಿಸುತ್ತಿರುವ ಅಡುಗೆ ಅನೀಲದ ಪೈಪ್ ಲೈನ್ ಸುರಕ್ಷಿತವಾಗಿದೆ ಇಲ್ಲವೋ ಅನ್ನೋದರ ಬಗ್ಗೆ ಬೆಳಗಾವಿ ಮಹಾನಗರ ಪಾಲಿಕೆ ನಿಗಾ ವಹಿಸಬೇಕಿದೆ .ಥುಕ್ ಪಾಲಿಶ್ ವರ್ಕ ನಡೆಯುತ್ತಿದ್ದರೆ ಗ್ಯಾಸ್ ಏಜನ್ಸಿಯ ವಿರುದ್ಧ ಈಗಲೇ ಕ್ರಮ ಕೈಗೊಂಡು ಮುಂಜಾಗೃತೆ ವಹಿಸಬೇಕು ಇಲ್ಲದಿದ್ದರೆ ಕಂಡು ಕಂಡಲ್ಲಿ ಗ್ಯಾಸ್ ಲಿಕೇಜ್ ಆಗಿ ಅನೇಕ ಅನಾಹುತಗಳನ್ನು ಸೃಷ್ಠಿಮಾಡುವ ಸಾಧ್ಯತೆಗಳಿದ್ದು ಈ ವಿಷಯವನ್ನು ಪಾಲಿಕೆ ಆಯುಕ್ತರು ಗಂಭೀರವಾಗಿ ಪರಗಣಿಸಬೇಕು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ