ಬೆಳಗಾವಿ ಸಮ್ಮಿಶ್ರ ಸರಕಾರದ ಸಿಎಂ ಬಗ್ಗೆ ಮಾತನಾಡುತ್ತಿರುವ ಬಿಜೆಪಿಯ ಜಗದೀಶ ಶೆಟ್ಟರ, ಕೋಟ ಶ್ರೀನಿವಾಸ ಪೂಜಾರಿ, ಈಶ್ವರಪ್ಪ ಬಿಜೆಪಿಯ ಡುಬ್ಲಿಕೇಟ್ ನಾಯಕರು ಎಂದು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಲೇವಡಿ ಮಾಡಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿ.10 ರಂದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷ ಬಿಜೆಪಿಯವರು ಸೌಧಕ್ಕೆ ಮುತ್ತಿಗೆ ಹಾಕುವ ಮುನ್ನ ಕೇಂದ್ರ ಸರಕಾರದ ಮೇಲೆ ರಾಜ್ಯದ ಸಮಸ್ಯೆಯ ಬೆಳಕು ಚೆಲ್ಲಬೇಕು ಎಂದು ಒತ್ತಾಯಿಸಿದರು. ಪ್ರಧಾನಿ ನರೇಂದ್ರ ಮೋದಿ ಉದ್ಯಮಿ …
Read More »ಪ್ರಭಾಕರ ಕೋರೆ, ರಾಜ್ಯಪಾಲ ಆಗೋದು ಬಹುತೇಕ ಖಚಿತ
ಬೆಳಗಾವಿ-ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ, ಕೆ.ಎಲ್ ಇ ಕಾರ್ಯಾಧ್ಕಕ್ಷರಾದ ಡಾ. ಪ್ರಭಾಕರ ಕೋರೆ ಅವರು ರಾಜ್ಯಪಾಲರಾಗಿ ನೇ…
ಸಿಡಿಲುಬಡಿದು ಇಬ್ಬರು ರೈತ ಮಹಿಳೆಯರು ಸಾವು
ಬೆಳಗಾವಿ- ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ಮೃತಪಟ್ಡ ಘಟನೆ,ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿಟ್ಟಣಗಿ ಗ್ರಾ…
ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆಗೆ ಸೂಚನೆ
ಬೆಳಗಾವಿ- ಆಪರೇಷನ್ ಸಿಂಧೂರ್ ಯಶಸ್ಸಿಗೆ ರಾಜ್ಯದ ಎಲ್ಲ ಮಸೀದಿಗಳಲ್ಲಿ ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆ ಮಾಡ…
ಬೆಳಗಾವಿಗೆ ವಂದೇ ಭಾರತ ರೈಲು ಬರತೈತಿ ಅಂತಾ ಅವರು ಹೇಳಿದ್ದಾರೆ,ಇವರು ತಿಳಿಸಿದ್ದಾರೆ
ಬೆಳಗಾವಿಗೆ ಹೊಸ ವಂದೇ ಭಾರತ ರೈಲು ಬರತೈತಿ ಅಂತಾ ದೆಹಲಿಯವರು ಹೇಳಿದ್ದಾರೆ ಬೆಳಗಾವಿಯವರು ತಿಳಿಸಿದ್ದಾರೆ. ಬೆಂಗಳೂರು ಧಾರ…
ಹಿಂದೂಸ್ತಾನದ, ಆಪರೇಷನ್ ಸಿಂಧೂರ್ ದಾಳಿಯಿಂದ ಪಾಕಿಸ್ತಾನ ದಿವಾಳಿ….
:ನಿನ್ನೆಯಷ್ಟೇ ನಡೆದ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದಾಗಿ ಹೈರಾಣಾಗಿರುವ ಪಾಕಿಸ್ತಾನದಲ್ಲಿ ಇಂದು ಬೆಳಗ…
ಆಪರೇಷನ್ ಸಿಂಧೂರ್ ನಲ್ಲಿ ಬೆಳಗಾವಿಯ ಸೊಸೆ…
ಬೆಳಗಾವಿ- ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮನ ಕ್ರಾಂತಿಯ ನ…
ಗೋಕಾಕ್ ನಲ್ಲಿ ನಡುರಸ್ತೆಯಲ್ಲೇ ಯುವಕನ ಮರ್ಡರ್….!!.
ಬೆಳಗಾವಿ-ರಸ್ತೆ ಮೇಲೆ ಬರ್ತಿದ್ದ ಯುವಕನ ಕೊಚ್ಚಿ ಬರ್ಬರ ಹತ್ಯೆ ಮಾಡಿದ ಘಟನೆ,ಗೋಕಾಕ್ ನಗರದ ಹಿಲ್ ಗಾರ್…
ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸನ್ಮಾನ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಬೈಲಹೊಂಗಲ ವಿಧಾನ ಸಭಾ ಕ್ಷೇತ್ರದ ಶಾಸ…
ಬೆಳಗಾವಿ ಜಿಲ್ಲೆಯ ರೂಪಾ, ರಾಜ್ಯಕ್ಕೆ ಟಾಪರ್
ಬೆಳಗಾವಿ- ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಳಗಾವಿಯ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್ ,ಬೆಳಗಾವಿ ಜಿಲ್ಲೆಯ …
20 ವರ್ಷದ ನಂತರ ಆರೋಪಿಯನ್ನು ಪತ್ತೆ ಮಾಡಿದ ಪೋಲೀಸರು.
ಬೆಳಗಾವಿ : ಕಳ್ಳತನ ಪ್ರಕರಣ ಒಂದರಲ್ಲಿ ಜಾಮೀನು ಪಡೆದು ಪರಾರಿಯಾಗಿದ್ದ ಆರೋಪಿಯನ್ನು 20 ವರ್ಷಗಳ ಬಳಿಕ ಸಂಕೇಶ್ವರ ಪೊಲೀಸರ…
LOCAL NEWS
ಮೈತ್ರಿ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಸೆಡ್ಡು ಹೊಡೆಯಲಿರುವ ಬಿಜೆಪಿ …
ಇಂದು ಸಾಯಂಕಾಲ ಕನ್ನಡ ಸಾಹಿತ್ಯ ಭವನದಲ್ಲಿ ಬಿಜೆಪಿ ಬೆಳಗಾವಿ ಜಿಲ್ಲಾ ಪದಾಧಿಕಾರಿಗಳ ಸಭೆ ಹಾಗೂ ೧೦ ಡಿಸೆಂಬರ್ ೨೦೧೮ ರಂದು ನಡೆಯಲಿರುವ ಬಿಜೆಪಿ ರೈತ ಸಮಾವೇಶ ಕುರಿತು ಚರ್ಚೆ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತ ಹಾಗೂ ಜನಪರ ವಿರೋಧ ಸರ್ಕಾರ ವಿರುವದರಿಂದ ಸದನದ ಒಳಗೆ ಹಾಗೂ ಹೊರಗೆ ಪ್ರಜಾತಾಂತ್ರಿಕ ಹೋರಾಟಕ್ಕೆ ಕರೆ ನೀಡಿದರು. ಶಾಸಕರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ …
Read More »ಟಂ ಟಂ ರಿಕ್ಷಾದಲ್ಲಿ ಕದ್ದ ಮಂಗಳಸೂತ್ರ ಪತ್ತೆ ಹಚ್ವಿದವರು ಯಾರು ಗೊತ್ತಾ ?
ಕಂಟ್ರಿ ಪಿಸ್ತೂಲ್ ತೋರಿಸಿ ಡಕಾಯತಿ ಮಾಡುತ್ತಿದ್ದ ಖದೀಮರ ಬಂಧನ
ಬೆಳಗಾವಿ- ರಾತ್ರಿ ಹೊತ್ತು ಒಂಟಿ ಯಾಗಿ ಹೋಗುತ್ತಿದ್ದ ಸಾರ್ವಜನಿಕರಿಗೆ ಕಂಟ್ರಿ ಪಿಸ್ತೂಲ್ ,ತಲ್ವಾರ್ ಚಾಕು ಚೂರಿ ತೋರಿಸಿ ಸಾರ್ವಜನಿಕರನ್ನು ಲೂಟಿ ಮಾಡುತ್ತಿದ್ದ ಗ್ಯಾಂಗ್ ಶಹಾಪೂರ ಪೋಲೀಸರು ಪತ್ತೆ ಮಾಡಿದ್ದಾರೆ ಶಹಾಪೂರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತಲ್ವಾರ್ ಪಿಸ್ತೂಲ್ ತೋರಿಸಿ ಹಣ ಚಿನ್ನಾಭರಣ ಲೂಟಿ ಮಾಡುತ್ತಿದ್ದ ಆರು ಜನ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದು ಒಂದು ಕಂಟ್ರಿ ಪಿಸ್ತೂಲ್ ತಲ್ವಾರ್ ಮತ್ತು ಕ್ರಿಕೇಟ್ ಸ್ಟ್ಯಾಂಪ್ ವಶಪಡಿಸಿಕೊಂಡಿದ್ದಾರೆ
Read More »ಮೂವರು ವಿಧ್ಯಾರ್ಥಿಗಳು ನಾಪತ್ತೆ ,ಹುಡುಕಾಟದಲ್ಲಿ ಪೋಲೀಸರು
ಮೂವರು ವಿಧ್ಯಾರ್ಥಿಗಳು ನಾಪತ್ತೆ ,ಹುಡುಕಾಟದಲ್ಲಿ ಪೋಲೀಸರು ಬೆಳಗಾವಿ- ಬೆಳಗಾವಿ ನಗರದ ವೈಭವ ನಗರದ ನಿವಾಸಿಗಳು ಶಿವಯೋಗಿ ಶಾಲೆಯ ಮೂವರು ವಿಧ್ಯಾರ್ಥಿಗಳು ಶಾಲೆಗೆ ಹೋಗುವದಾಗಿ ಮನೆ ಬಿಟ್ಟು ಶಾಲೆಗೆ ಹೋಗದೇ ನಾಪತ್ತೆಯಾದ ಘಟನೆ ನಡೆದಿದೆ ವೈಭವ ನಗರದ ಪೂಜಾರಿ ಕುಟುಂಬದ ಓರ್ವ ಸಹೋದರಿ ಮತ್ತು ಇಬ್ಬರು ಸಹೋದರರು ನಾಪತ್ತೆಯಾಗಿದ್ದು ಶಾಲೆ ಬಿಡುವ ಸಮಯ ಸಂಜೆ 4 ಘಂಟೆಗೆ ಅವರು ಮನೆಗೆ ಮರಳಬಹುದು ಎನ್ನುವ ನಿರೀಕ್ಷೆಯಲ್ಲಿ ಪಾಲಕರಿದ್ದು ಪೋಲೀಸರು ಬೆಳಗಾವಿಯ ಎಲ್ಲ ಗಾರ್ಡನ್ …
Read More »ಬೆಳಗಾವಿ ಅಧಿವೇಶನದಲ್ಲಿ ತೃತೀಯ ಲಿಂಗಕ್ಕೆ ವಿಶೇಷ ಗೌರವ ಮೋನಿಷಾಗೆ ಸರ್ಕಾರಿ ನೌಕರಿ…..!!!!
ಬೆಳಗಾವಿ ಡಿ ಗ್ರೂಪ್ ಖಾಯಂ ನೌಕರರಾಗಿ ತೃತೀಯ ಲಿಂಗದ ಮೋನಿಷಾ ಎಂಬುವರನ್ನು ವಿಧಾನ ಮಂಡಳದ ಚಳಿಗಾಲದ ಅಧಿವೇಶನದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಖಾಯಂ ಸರಕಾರಿ ಹುದ್ದೆ ಪಡೆಯಲಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಬುಧವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ೨೦೧೬ ವಿಧಾನ ಸೌಧದಲ್ಲಿ ಖಾಲಿ ಇದ್ದ ಗ್ರೂಪ್ ಡಿಗೆ ಅರ್ಜಿ ಹಾಕಿದ್ದ ತೃತೀಯ ಲಿಂಗದ ಮೋನಿಷಾ ಎಂಬುವರು ಅರ್ಜಿ ಹಾಕಿದ್ದರು. ಆದರೆ ಸರಕಾರದಿಂದ …
Read More »ಶಿಕ್ಷಣ ಇಲಾಖೆಯನ್ನು ರಿಪೇರಿ ಮಾಡಲು ಎಬಿವಿಪಿ ಆಗ್ರಹ
ಬೆಳಗಾವಿ ನಿರ್ದೇಶಕರು ಹಾಗೂ ಸಚಿವರಿಲ್ಲದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯನ್ನು ಶೀಘ್ರದಲ್ಲಿಯೇ ಸರಿಪಡಿಸಬೇಕೆಂದು ಆಗ್ರಹಿಸಿ ಬುಧವಾರ ಎಬಿಪಿ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಎಸ್ಸೆಸ್ಸೆಲ್ಲಿ ಮತ್ತು ಪಿಯುಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ. ಈ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸುವುದು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯದ್ದು, ಆದರೆ ಸರಕಾರದ ಒಳ ಒಗಳದಿಂದ ತೆರವಾದ ಸಚಿವ ಸ್ಥಾನವನ್ನು ಭರ್ತಿ ಮಾಡದೆ ಸಮ್ಮಿಶ್ರ ಸರಕಾರ ನಿರ್ಲಕ್ಷ್ಯ ಮಾಡಿರುವುದಕ್ಕೆ ಪ್ರತಿಭಟನಾಕಾರರು …
Read More »ಸಾಮಾಜಿಕ ಜಾಗೃತಿಗಾಗಿ ಮಹಿಳಾ ಪೋಲೀಸರಿಂದ ಬೆಳಗಾವಿಯಿಂದ ಬೆಂಗಳೂರಿಗೆ ಸೈಕಲ್ ಜಾತಾ….
ಬೆಳಗಾವಿ- ಮಹಿಳಾ ಸಬಲೀಕರಣ ಸೇರಿದಂತೆ ಸಾಮಾಜಿಕ ಜಾಗೃತಿಗಾಗಿ ಕೆಎಸ್ ಆರ್ ಪಿ ಆಯೋಜಿಸಿದ ಸೈಕಲ್ ಜಾತಾ ದಲ್ಲಿ ನೂರಕ್ಕೂ ಹೆಚ್ವು ಮಹಿಳಾ ಪೋಲೀಸರು ಭಾಗವಹಿಸಿದ್ದರು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಎಡಿಜಿಪಿ ಭಾಸ್ಕರ್ ರಾವ್ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ನಗರ ಪೋಲೀಸ್ ಆಯುಕ್ತ ರಾಜಪ್ಪ ಸೇರಿದಂತೆ ಹಲವಾರು ಜನ ಅಧಿಕಾರಿಗಳು ಭಾಗವಹಿಸಿದ್ದರು ಮಹಿಳಾ ಪೋಲೀಸ್ ಸೈಕಲ್ ಜಾತಾ ದಲ್ಲಿ ಮೂರು ಜನ ಐಪಿಎಸ್ ಮತ್ತು ಐಎಎಸ್ ಮಹಿಳಾ …
Read More »ಬೆಳಗಾವಿ ರೆಲ್ವೆ ಓವರ್ ಬ್ರಿಡ್ಜ ಉದ್ಘಾಟನೆಗೆ ನಾಳೆ ಮಹೂರ್ತ ಫಿಕ್ಸ….!!!!
ಬೆಳಗಾವಿಯ ರೆಲ್ವೆ ಮೇಲ್ಸೇತುವೆ ಕಾಮಗಾರಿ ಫುಲ್ ಫಾಸ್ಟ….!!! ಬೆಳಗಾವಿ- ಬೆಳಗಾವಿ ರೆಲ್ವೆ ನಿಲ್ದಾಣದ ಬಳಿಯ ರೆಲ್ವೇ ಮೇಲ್ಸೇತುವೆ ಕಾಮಗಾರಿ ಫುಲ್ ಫಾಸ್ಟ ನಡೆಯುತ್ತಿದೆ ಸಂಸದ ಸುರೇಶ ಅಂಗಡಿ ಅವರು ಸೇತುವೆ ಕಾಮಗಾರಿ ಮುಗಿಸಲು ಹಲವಾರು ಬಾರಿ ಡೆಡ್ ಲೈನ್ ಕೊಟ್ಟಿದ್ದರು ಎಲ್ಲ ಡೆಡ್ ಲೈನ್ ಗಳನ್ನು ಮೀರಿರುವ ಈ ಕಾಮಗಾರಿ ಈಗ ಮುಕ್ತಾಯದ ಹಂತ ತಲುಪುವ ಸನೀಹದಲ್ಲಿದೆ ಸೇತುವೆ ಕಾಮಗಾರಿಯಿಂದಾಗಿ ಬೆಳಗಾವಿ ನಗರದ ಸಂಚಾರವೇ ಅಸ್ತವ್ಯೆಸ್ತವಾಗಿತ್ತು ಸೇತುವೆ ಕಾಮಗಾರಿಯಿಂದಾಗಿ ಬೆಳಗಾವಿ …
Read More »ಸಚಿವ ರಮೇಶ್ ಜಾರಕಿಹೊಳಿ ಅವರನ್ನು ವಜಾ ಮಾಡಲು ಶಂಕರ ಮುನವಳ್ಳಿ ಆಗ್ರಹ
ಜಾರಕಿಹೊಳಿ ಸಹೋದರರ ಶಾಸಕತ್ವ ವಜಾ ಮಾಡಿ: ಮುನವಳ್ಳಿ ಬೆಳಗಾವಿ ಸಮ್ಮಿಶ್ರ ಸರಕಾರದಲ್ಲಿ ನಮ್ಮ ಶಾಸಕರನ್ನು ಕರೆದುಕೊಂಡು ಹೋಗುತ್ತೇವೆ ಎಂದು ಬೇದರಿಕೆ ಹಾಕುತ್ತಿರುವ ಕಾಂಗ್ರೆಸ್ ನ ಜಾರಕಿಹೊಳಿ ಸಹೋದರರ ಶಾಸಕತ್ವ ಸ್ಥಾನವನ್ನು ರದ್ದು ಪಡಿಸಬೇಕೆಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಒತ್ತಾಯಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾನವ ಬಂಧುತ್ವ ವೇದಿಕೆಯಿಂದ ನಮ್ಮ ಸಮಾಜದವರನ್ನು ಹತ್ತಿಕ್ಕುವ ಒಂದು ಸಂಘ. ಪರಿಶಿಷ್ಟ ಜಾತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಯಾರು ರಾಜಕೀಯವಾಗಿ ಬೆಳೆಯಬಾರದು ಎಂಬ ದುರುದ್ದೇಶದಿಂದ …
Read More »ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಡಿಸೆಂಬರ್ 4 ರಂದು ಬೆಳಗಾವಿಯಲ್ಲಿ ಬೃಹತ್ ಸಭೆ
ಬೆಳಗಾವಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ಡಿ.4 ಸಂಜೆ 4ಕ್ಕೆ ನಗರದ ಸಂಭಾಜಿ ಉದ್ಯಾನವನದಲ್ಲಿ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗಿದೆ ಎಂದು ಕೃಷ್ಣಾ ಭಟ್ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಮಮಂದಿರ ನಿರ್ಮಾಣಕ್ಕಾಗಿ ದೇಶದ ಎಲ್ಲಡೆ ಬೃಹತ್ ಜನಾಗ್ರಹ ಸಭೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದ ಮುಖ್ಯ ಭಾಷಣವನ್ನು ಅಮರಾವತಿಯ ಶ್ರೀ 108 ಜಿತೇಂದ್ರನಾಥ ಗುರುಮನೋಹರನಾಥ ಮಹಾರಾಜರು ಮಾಡಲಿದ್ದಾರೆ. ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ …
Read More »ಭೂಪಾಲ ಅತ್ತು ಅವರಿಂದ ವಿವಿಧ ಸಾಮಾಜಿಕ ಕಾರ್ಯಕ್ರಮ
ಬೆಳಗಾವಿ-ಬೆಳಗಾವಿಯ ಜೇಡಗಲ್ಲಿ ಶಹಾಪೂರಿನ ಸಾಲೇಶ್ವರ ದೇವಸ್ಥಾನದಲ್ಲಿ ಸಮಾಜ ಸೇವಕ ಭೂಪಾಲಣ್ಣಾ ಅತ್ತು ಇವರ ನೇತ್ರತ್ವದಲ್ಲಿ ವಿವಿಧ ಸಾಮಾಜಿಕ ಕಾರ್ಯಗಳು ನಡೆದಿವೆ ಸಮಾಜ ಸೇವಕ ಭೂಪಾಲಣ್ಣಾ ಅತ್ತು ಅವರು ಇಂದು ಜೇಡಗಲ್ಲಿ ಶಹಾಪೂರಿನ ಸಾಲೇಶ್ವರ ದೇವಸ್ಥಾನದಲ್ಲಿ ಗೌರಿ ದೇವಿಗೆ ಬೆಳ್ಳಿಯ ಕಡ ಸಮರ್ಪಿಸಿದರುಈ ಸಂಧರ್ಭದಲ್ಲಿ ಹಿರಿಯರು ಉಪಸ್ಥತಿತರಿದ್ದರು ಗಲ್ಲಿಯ ಮಹಿಳೆಯರಿಗಾಗಿ ದೇಶಿಯ ಸಂಸ್ಕೃತಿಯನ್ನು ಬೆಳೆಸುವದಕ್ಕಾಗಿ ರಂಗೋಲಿ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು ಸ್ಪರ್ದೆಯಲ್ಲಿ ವಿಜೇತರಾವತಿಗೆ ಕುಕ್ಕರ್ ಹಾಗು ಭಾಗವಹಿಸಿದ ಎಲ್ಲ ಮಹಿಳೆಯರಿಗೆ ನೆನಪಿನ ಕಾಣಿಕೆ …
Read More »ತೆಲಂಗಾಣದ ಆದಿಲಾಬಾದ್ ನಲ್ಲಿಯೂ ಅಭಯ ಪಾಟೀಲರ ಸ್ವಚ್ಛತಾ ಅಭಿಯಾನ ಜಿಂದಾಬಾದ್
ಬೆಳಗಾವಿ- ಸೂರ್ಯೋದಯದ ಮೊದಲು ಬೆಳಗಾವಿ ದಕ್ಷಿಣದಲ್ಲಿ ಕಸ ಹೊಡೆಯುವ ಕಸಬರ್ಗಿ ಸದ್ದು ಕೇಳಿದರೆ ಅಲ್ಲಿಯ ಜನ ಇಂದು ಸಂಡೇ ಶಾಸಕ ಅಭಯ ಪಾಟೀಲರ ವಾರ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ ಎಂದು ತಿಳಿದುಕೊಳ್ಳುತ್ತಾರೆ ಈ ಭಾನುವಾರ ಬೆಳಗಾಬಿ ದಕ್ಷಿಣದಲ್ಲಿ ಕಸಬರ್ಗಿ ಸದ್ದು ಕೇಳಲೇ ಇಲ್ಲ ಯಾಕಂದ್ರೆ ಶಾಸಕ ಅಭಯ ಪಾಟೀಲ ಕಳೆದ ಒಂದು ವಾರದಿಂದ ತೆಲಂಗಾಣದ ಆದಿಲಾಬಾದ್ ನಲ್ಲಿ ದಕ್ಷಿಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗೆ ಬೀಡಾರ ಹೂಡಿದ್ದಾರೆ ಅಲ್ಲಿಯ ವಿಧಾನಸಭೆ ಚುನಾವಣೆಯ …
Read More »ಈಜಲು ಹೋದ ಯುವಕ ನೀರು ಪಾಲು
ಬೆಳಗಾವಿ- ಈಜಲು ತೆರಳಿದ್ದ ಬಾಲಕ ನೀರು ಪಾಲಾದ ಘಟನೆಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಪರಸನಟ್ಟಿ ಗ್ರಾಮದಲ್ಲಿ ನಡೆದಿದೆ ವರುಣ ನಾಗೋಜಿ ನೀರು ಪಾಲಾದ ಯುವಕ ನಾಗಿದ್ದು ಗ್ರಾಮದ ಹೊರ ವಲಯದ ಕೆರೆಯಲ್ಲಿ ನೀರು ಪಾಲಾಗಿದ್ದಾನೆ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಹಾಗೂ ಸ್ಥಳೀಯರಿಂದ ಶೋಧ ಕಾರ್ಯಾಚರಣೆ ನಡೆದಿದ್ದು ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
Read More »ಡಿಕೆ ಶಿವಕುಮಾರ್,ಹೆಬ್ಬಾಳಕರ್,ರಮೇಶ್ ಜಾರಕಿಹೊಳಿ ಒಂದೇ ಪರಿವಾರ- ಸತೀಶ್ ಜಾರಕಿಹೊಳಿ
ಬೆಳಗಾವಿ- ಡಿಕೆ ಶಿವಕುಮಾರ್ ಲಕ್ಷ್ಮೀ ಹೆಬ್ಬಾಳಕರ ಮತ್ತು ರಮೇಶ್ ಜಾರಕಿಹೊಳಿ ಅವರದ್ದು ಒಂದೇ ಪರಿವಾರ ಅವರ ನಡುವೆ ಒಡಕು ಯಾಕಾಯ್ತು ಅದನ್ನು ಅವರನ್ನೇ ಕೇಳಿ ಆರು ತಿಂಗಳ ಹಿಂದೆ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಅವರಾಗಿ ಸಪೋರ್ಟ್ ಮಾಡಿದ್ರು ಅವರ ಸಪೋರ್ಟ್ ತಗೊಂಡೆ ಅಷ್ಟೇ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ರಾಜಕೀಯ ಬೆಳವಣಿಗೆ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಪ್ರತಿಭಟನಾ …
Read More »