Breaking News

ರಾಜ್ಯಸಭೆಯಲ್ಲಿ ಈರಣ್ಣಾ ಕಡಾಡಿ ಪ್ರಸ್ತಾಪಿಸಿದ ಬೇಡಿಕೆ ಏನು ಗೊತ್ತಾ ??

ಬೆಳಗಾವಿ-ಮುಂಬೈ ಮತ್ತು ಹೈದರಾಬಾದ್ ನಡುವೆ
ದೈನಂದಿನ ರೈಲು ಸೇವೆ ಪ್ರಾರಂಭಕ್ಕೆ ಸಂಸದ ಈರಣ್ಣ ಕಡಾಡಿ ಒತ್ತಾಯ

ಬೆಳಗಾವಿ: ಬೆಳಗಾವಿಯಿಂದ ಹೈದರಾಬಾದ್ ಮತ್ತು ಮುಂಬೈ ನಗರಗಳಿಗೆ ದೈನಂದಿನ ರೈಲು ಸೇವೆಯನ್ನು ಪ್ರಾರಂಭಿಸಬೇಕೆAದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಮಂಗಳವಾರ (ಡಿ-13) ರಂದು ರಾಜ್ಯಸಭಾ ಸಂಸತ್ತಿನ ಚಳಿಗಾಲ ಅಧಿವೇಶನದ ವಿಶೇಷ ಉಲ್ಲೇಖದ ಮೂಲಕ ವಿಷಯ ಪ್ರಸ್ತಾಪಿಸಿದ ಸಂಸದ ಈರಣ್ಣ ಕಡಾಡಿ ಅವರು, ಬೆಳಗಾವಿ ಐತಿಹಾಸಿಕ, ಕೈಗಾರಿಕಾ ಮತ್ತು ಸಾಂಸ್ಕೃತಿಕವಾಗಿ ಮಹತ್ವದ ಜಿಲ್ಲೆಯಾಗಿದ್ದು, ಶೈಕ್ಷಣಿಕ, ಪ್ರವಾಸೋದ್ಯಮ, ವ್ಯಾಪಾರ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಪ್ರತಿದಿನ ಸಾವಿರಾರು ಪ್ರಯಾಣಿಕರು ಮುಂಬೈ ಮತ್ತು ಹೈದರಾಬಾದ್‌ಗೆ ಪ್ರಯಾಣಿಸುತ್ತಾರೆ. ಪ್ರಸ್ತುತ, ಜನರು ರಸ್ತೆಗಳ ಮೂಲಕ ಪ್ರಯಾಣಿಸುತ್ತಾರೆ, ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದರು.

ಪ್ರಸ್ತುತ ಬೆಳಗಾವಿಯಿಂದ ಮುಂಬೈ, ಹೈದರಾಬಾದ್ ನಗರಗಳಿಗೆ ನೇರ ರೈಲು ಇಲ್ಲ ಮತ್ತು ಜನರು ಹಬ್ಬಗಳ ಸಮಯದಲ್ಲಿ ಬಸ್‌ನಲ್ಲಿ ಪ್ರಯಾಣಿಸಲು ಎರಡು ಅಥವಾ ಮೂರು ಪಟ್ಟು ದರವನ್ನು ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಈ ನಗರಗಳ ನಡುವೆ ಪ್ರತಿನಿತ್ಯ ರೈಲು ಸಂಚಾರ ಆರಂಭಿಸಬೇಕು ಎಂಬುದು ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರ ಆಗ್ರಹವಾಗಿದೆ.

ರೈಲ್ವೆ ಸಚಿವಾಲಯವು ಇದನ್ನು ತಕ್ಷಣವೇ ಪರಿಗಣಿಸಿ ಬೆಳಗಾವಿಯಿಂದ-ಮುAಬೈ, ಹೈದರಾಬಾದ್‌ನಂತಹ ಪ್ರಮುಖ ನಗರಗಳಿಗೆ ಸಂಪರ್ಕಿಸಲು ರೈಲು ಸೇವೆಯನ್ನು ಪ್ರಾರಂಭಿಸಬೇಕು, ಇದು ರೈಲ್ವೆಗೆ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದರು.

Check Also

ಬೆಳಗಾವಿಗೆ ಹುಲಿ ಬಂದಿದ್ದು ನೂರಕ್ಕೆ ನೂರು ಸತ್ಯ….!!

ಬೆಳಗಾವಿ: ಕಳೆದ ತಿಂಗಳಷ್ಟೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಹೆಣ್ಣು ಸಿಂಹವೊಂದು ಸೇರ್ಪಡೆಯಾಗಿತ್ತು. ಈಗ ಹೆಣ್ಣು ಹುಲಿಯೊಂದರ …

Leave a Reply

Your email address will not be published. Required fields are marked *