ಬೆಳಗಾವಿ -ಬೆಳಗಾವಿ ನಗರದ ಖಂಜರ್ ಗಲ್ಲಿಯ ಪಾರ್ಕಿಂಗ್ ಸ್ಥಳದ ಎಲ್ಲ ಅಡತಡೆಗಳು ನಿವಾರಣೆಯಾದರೂ ಪಾರ್ಕಿಂಗ್ ಸ್ಥಳದ ಉದ್ಘಾಟನೆಗೆ ಗ್ರಹಣ ಹಿಡಿದಿದೆ
ಗೋರಿ ಸಮಸ್ಯೆ ನಿವಾರಣೆಯಾಗಿ ಆರು ತಿಂಗಳು ಗತಿಸಿದೆ ಆದರೆ ಪಾರ್ಕಿಂಗ್ ಸ್ಥಳದ ಊದ್ಘಾಟನೆ ಆಗಿಲ್ಲ. ಹೀಗಾಗಿ ಜನ ಅಲ್ಲಿ ಮತ್ತೆ ಮೋಡಕಾ ಸಾಮುಗ್ರಿಗಳನ್ನು ಇಡಲು ಆರಂಭಿಸಿದ್ದು ಮತ್ತೊಂದು ವಿವಾದ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ
ಬೆಳಗಾವಿ ನಗರದ ಮುಖ್ಯ ಮಾರುಕಟ್ಟೆ ರಸ್ತೆಗಳಾಗಿರುವ ಖಡೇಬಝಾರ,ಗಣಪತಿಗಲ್ಲಿ,ಮತ್ತು ಕಚೇರಿ ರಸ್ತೆಯಲ್ಲಿನ ಪಾರ್ಕಿಂಗ್ ನಿಷೇಧಿಸಿ ಖಂಜರ್ ಗಲ್ಲಿಯಲ್ಲಿ ಪಾರ್ಕಿಂಗ್ ವ್ಯೆವಸ್ಥೆ ಮಾಡುವ ಕಾಲ ಕೂಡಿ ಬಂದಿದೆ ಆದರೆ ಇಲ್ಲಿ
ಪಾರ್ಕಿಂಗ್ ಶುರು ಮಾಡಲು ಪಾಲಿಕೆ ಅಧಿಕಾರಿಗಳು ಹಿಂದೇಟು ಹಾಕುತ್ತರುವದೇಕೆ,,?ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
