ಬೆಳಗಾವಿ- ಬೆಳಗಾವಿ ಬಸ್ ನಿಲ್ಧಾಣ ಇವತ್ತು ಅಕ್ಷರಶಃ ಹೋರಾಟದ ಕೇಂದ್ರವಾಗಿದೆ ಇವತ್ತು ಇಡೀ ದಿನ ಈ ನಿಲ್ಧಾಣದಲ್ಲಿ ಕ್ರಾಂತಿಯ ಕಿಡಿಯ ಜೊತೆಗೆ ಒಲೆಯೂ ಹೊತ್ತಿದೆ,
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ನಡೆಯುತ್ತಿರುವ ಸಾರಿಗೆ ನೌಕರರ ಹೋರಾಟಕ್ಕೆ ವಿವಿಧ ಸಂಘಟನೆಗಳಿಂದ ಬೆಂಬಲ ವ್ಯೆಕ್ತವಾಗಿದೆ.
ಧರಣಿ ನಡೆಸುತ್ತಿರುವ ಸಾರಿಗೆ ನೌಕರರು ಮದ್ಯಾಹ್ನದ ಊಟವನ್ನು ನಿಲ್ಧಾಣದಲ್ಲೇ ಮಾಡಿದರು.ಈಗ ರಾತ್ರಿ ಊಟಕ್ಕೆ ಅಡುಗೆ ತಯಾರಿಸುವ ಕಾರ್ಯ ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದಲ್ಲೇ ನಡೆಯುತ್ತಿದೆ
ಮುಷ್ಕರದಲ್ಲಿ ಪಾಲ್ಗೊಂಡ ನೌಕರರಿಗೆ ಅನ್ನ ಸಾಂಬಾರ್ ರೆಡಿಯಾಗುತ್ತಿದೆ.ಸಾರಿಗೆ ನೌಕರರು ಬಸ್ ಗಳನ್ನು ನಿಲ್ಧಾಣದಲ್ಲೇ ಪಾರ್ಕ್ ಮಾಡಿ ಹೋರಾಟ ಮುಂದುವರೆಸಿದ್ದಾರೆ.
ಬಸ್ ಈಗ ಆರಂಭವಾಗುವದು ಆಗ ಆರಂಭವಾಗುದು ಎಂದು ಸಂಜೆಯವರೆಗೂ ಕಾಯ್ದ ಪ್ರಯಾಣಿಕರು ಕತ್ತಲಾಗುತ್ತಿದ್ದಂತೆಯೇ ಬಸ್ ನಿಲ್ಧಾಣದಿಂದ ಜಾಗ ಖಾಲಿ ಮಾಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ