Breaking News
Home / Breaking News / ಕುಂತಿನಾಥ ಕಲಮನಿ ಅವರಿಗೆ “ಪ್ರಭಾತಕಾರ ವಾ.ರಾ.ಕೋಠಾರಿ ಅದರ್ಶ ಪತ್ರಕಾರ ಪುರಸ್ಕಾರ” ಪ್ರದಾನ

ಕುಂತಿನಾಥ ಕಲಮನಿ ಅವರಿಗೆ “ಪ್ರಭಾತಕಾರ ವಾ.ರಾ.ಕೋಠಾರಿ ಅದರ್ಶ ಪತ್ರಕಾರ ಪುರಸ್ಕಾರ” ಪ್ರದಾನ

: ಪತ್ರಕರ್ತ ಕುಂತಿನಾಥ ಕಲಮನಿ ಅವರಿಗೆ ಸಾಂಗಲಿ ಪಟ್ಟಣದಲ್ಲಿ ” ಪ್ರಭಾತಕಾರ ವಾ.ರಾ.ಕೋಠಾರಿ ಅದರ್ಶ ಪತ್ರಕಾರ ಪುರಸ್ಕಾರ” ಪ್ರದಾನ ಮಾಡಲಾಯಿತು. ರಾವಸಾಹೇಬ ಪಾಟೀಲ ದಾದಾ, ಸಚಿವ ರಾಜೇಂದ್ರ ಶಾ.ಪಾಟೀಲ ಯಡ್ರಾವಕರ , ಡಾ.ಅಜೀತ ಪಾಟೀಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಬೆಳಗಾವಿ.ಮೇ.16: ಬೆಳಗಾವಿಯ ಹಿರಿಯ ಪತ್ರಕರ್ತ ಹಾಗೂ ಹಳ್ಳಿಯ ಸಂದೇಶ ಪ್ರಾದೇಶಿಕ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಕುಂತಿನಾಥ ಕಲಮನಿ ಅವರಿಗೆ ದಕ್ಷಿಣ ಭಾರತ ಜೈನ ಸಭೆಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪುರಸ್ಕಾರವಾದ “ಪ್ರಭಾತಕಾರ ವಾ.ರಾ.ಕೋಠಾರಿ ಆದರ್ಶ ಪತ್ರಕರ್ತ ಪುರಸ್ಕಾರ ” ಪ್ರದಾನ ಮಾಡಿ ಗೌರವಿಸಲಾುತು.
ರವಿವಾರ ಮೇ 15 ರಂದು ಮಹಾರಾಷ್ಟ್ರದ ಸಾಂಗಲಿ ಪಟ್ಟಣದಲ್ಲಿ ನಡೆದ ದಕ್ಷಿಣ ಭಾರತ ಜೈನ ಸಭೆಯ ತ್ರೈವಾರ್ಷಿಕ ಮಹಾ ಅಧಿವೇಶನದ ಶತಮಾನೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಳೆದ 23 ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಹಾಗೂ ಸಧ್ಯಕ್ಕೆ ಹಳ್ಳಿಯ ಸಂದೇಶ ಪ್ರಾದೇಶಿಕ ಕನ್ನಡ ದಿನಪತ್ರಿಕೆ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕುಂತಿನಾಥ ಕಲಮನಿ ಅವರು ಜೈನ ಸಮಾಜದಲ್ಲಿನ ಎಲ್ಲ ಕಾರ್ಯಕ್ರಮಗಳ ಯಶಸ್ವಿಗಾಗಿ ಶ್ರಮಿಸುವ ಮೂಲಕ ಸಮಾಜಸೇವೆಯನ್ನು ಕೈಗೊಂಡಿದ್ದಾರೆ. ಅವರ ಈ ಸೇವೆಯನ್ನು ಗಮನಿಸಿ ದಕ್ಷಿಣ ಭಾರತ ಜೈನ ಸಭೆಯು ಈ ಪುರಸ್ಕಾರ ನೀಡಿ ಗೌರವಿಸಿದೆ.
ಅದೇ ರೀತಿ ಕರ್ನಾಟಕ ಶ್ರವಣಬೆಳಗೊಳದ ಡಾ.ಸಿ.ಪಿ.ಕುಸಮಾ ಅವರಿಗೆ ಆಚಾರ್ಯ ಕುಂದ ಕುಂದ ಪ್ರಾಕೃತ ಗ್ರಂಥ ಸಂಶೋಧನ ಮತ್ತು ಲೇಖನ ಪುರಸ್ಕಾರ , ಮೈಸೂರಿನ ಮೋಹನ ಶಾಸ್ತ್ರಿ ಅವರಿಗೆ ಆಚಾರ್ಯ ಬಾಹುಬಲಿ ಕನ್ನಡ ಸಾಹಿತ್ಯ ಪುರಸ್ಕಾರ , ಬೆಂಗಳೂರಿನ ಡಾ.ಅಜೀತ ಮುರಗುಂಡೆ ಅವರಿಗೆ ಶ್ರೀ, ಬಾಳ ಪಾಟೀಲ ಸೋಷಲ ಕಲ್ಚರಲ್ ಅವೇರನೆಸ್ಸ ಆವಾರ್ಡ ಸೇರಿದಂತೆ ಇನ್ನಿತರರಿಗೆ ಪುರಸ್ಕಾರಗಳನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ಆರೋಗ್ಯ ಸಚಿವ ಹಾಗೂ ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ. ರಾಜೇಂದ್ರ ಶಾ.ಪಾಟೀಲ ಯಡ್ರಾವಕರ , ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ ದಾದಾ , ಚೇರಮನ್ ಆರ್‌.ಎ.ಪಾಟೀಲ, ಮುಖ್ಯಮಹಾಮಂತ್ರಿ ಡಾ.ಅಜೀತ ಪಾಟೀಲ, ಹಿರಿಯ ಉಪಾಧ್ಯಕ್ಷ ಭಾಲಚಂದ್ರ ಪಾಟೀಲ, ಉಪಾಧ್ಯಕ್ಷ ದತ್ತಾ ಡೋರ್ಲೆ, ಸಾಂಗಲಿ ಮಾಜಿ ಮಹಾಪೌರ ಸುರೇಶ ಪಾಟೀಲ, ಜಿ.ಜಿ.ಲೋಬೋಗೋಳ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Check Also

ಅಮೀತ್ ಶಾ ಅವರನ್ನು ಭೇಟಿಯಾದ ಡಾ.ಸೋನಾಲಿ ಸರ್ನೋಬತ್,ಖಾನಾಪೂರ ಕ್ಷೇತ್ರದಲ್ಲಿ ಸಂಚಲನ..!!

ಬೆಳಗಾವಿ-ಬೆಳಗಾವಿ ಬಿಜೆಪಿ ಸಂಘಟನೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತಿರುವ ಬಿಜೆಪಿ ನಾಯಕಿ,ಡಾ.ಸೋನಾಲಿ ಸರ್ನೋಬತ್ ಅವರು ಖಾನಾಪೂರ ತಾಲ್ಲೂಕಿನ ಬಿಜೆಪಿ …

Leave a Reply

Your email address will not be published. Required fields are marked *