Breaking News
Home / ಬೆಳಗಾವಿ ನಗರ / ಕಬ್ಬಿಗೆ ಎಸ್‍ಎಪಿ ದರ ನಿಗದಿ ಮಾಡಲು ಒತ್ತಾಯ:

ಕಬ್ಬಿಗೆ ಎಸ್‍ಎಪಿ ದರ ನಿಗದಿ ಮಾಡಲು ಒತ್ತಾಯ:

ಬೆಳಗಾವಿ: ಜಿಲ್ಲೆಯಲ್ಲಿ ಈಗ ಕಬ್ಬು ನುರಿಸುವ ಹಂಗಾಮು ಆರಂಭವಾಗಿದೆ ಹೀಗಾಗಿ ರೈತ ಹೋರಾಟಗಾರರು ಈಗ ಬೆಳಗಾವಿ ಜಿಲ್ಲೆಗೆ ವಲಸೆ ಬರುವ ಸೀಜನ್ ಆರಂಭವಾಗಿದ್ದು ರೈತ ನಾಯಕ ಕುರಬರಶಾಂತಕುಮಾರ ಕಬ್ಬಿಗೆ ಎಸ್ ಎ ಪಿ ದರ ನಿಗದಿ ಮಾಡುವಂತೆ ಸರ್ಕಾರದ ವಿರುದ್ಧ ಗುಡಗಿದ್ದಾರೆ
ಕಬ್ಬು ಬೆಳೆಗಾರರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನ್ಯಾಯವೆಸಗುತ್ತಿದ್ದು, ಇದುವರೆಗೂ ಎಫ್‍ಆರ್‍ಫಿ ದರ ಪರಿಷ್ಕರಣೆ ಹಾಗೂ ಎಸ್‍ಎಪಿ ದರ ನಿಗದಿಗೊಳಿಸಿಲ್ಲ. ಇದನ್ನು ಖಂಡಿಸಿ ಅಕ್ಟೋಬರ್ 19 ರಂದು ಬೆಂಗಳೂರಿನ ಕಬ್ಬು ಅಭಿವೃದ್ದಿ ಆಯುಕ್ತರ ಕಚೇರಿ ಮುಂದೆ ಧರಣಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ರವಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕಬ್ಬು ಬೆಳೆಗಾರರ ಮೇಲೆ ಕಿಂಚಿತ್ತು ಕಾಳಜಿ ಇಲ್ಲ. ಕೇಂದ್ರ ಸರ್ಕಾರ ವಿದೇಶದಿಂದ ಸಕ್ಕರೆ ಆಮದು ಮಾಡಿಕೊಳ್ಳಲು ಚಿಂತನೆ ನಡೆಸುತ್ತಿದ್ದು, ದೇಶದ ಕಬ್ಬು ಬೆಳೆಗಾರರ ಸರ್ವನಾಶ ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸಕ್ತ ಸಾಲಿನ ಎಫ್‍ಆರ್‍ಫಿ ಕಬ್ಬಿನ ಬೆಲೆಯನ್ನು 9.5 ಇಳುವರಿಗೆ 2300 ಬೆಲೆ ನಿಗದಿ ಮಾಡಿರುವುದನ್ನು ಖಂಡಿಸಲಾಗುವುದು. ಕಳೆದ ವರ್ಷದ ಎಸ್‍ಎಪಿ ದರ ಉತ್ಪನ್ನಗಳ ಲಾಭ ನಿರ್ಧರಿಸಿ ರೈತರಿಗೆ ಅಂತಿಮ ಕಂತು ಕೊಟ್ಟಿಲ್ಲ. ಆದ್ದರಿಂದ ಕಬ್ಬಿನ ಬೆಲೆ ಏರಿಕೆ ಮಾಡಬೇಕು ಹಾಗೂ ಅಂತಿಮ ಕಂತು ಕೂಡಲೇ ನೀಡಬೇಕು ಎಂದು ಆಗ್ರಹಿಸಿ 19 ರಂದು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳು ಧರಣಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದ ಶಾಸಕರು, ಸಂಸದರು ಹಾಗೂ ಸರ್ಕಾರಿ ನೌಕರರು ತಮ್ಮ ವೇತನಗಳನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದುವರೆಗೂ ಕಬ್ಬು ಇಳುವರಿ ಕಡಿಮೆ ಇದ್ದು, ಸಕ್ಕರೆ ಬೆಲೆ ಏರಿಕೆಯಾಗಿದ್ದರೂ ರೈತರು ಬೆಳೆದ ಕಬ್ಬಿಗೆ ಹೆಚ್ಚು ಬೆಲೆ ನಿಗದಿ ಮಾಡದೆ ರೈತರನ್ನು ನಿರ್ಲಕ್ಷ ಭಾವನೆಯಿಂದ ಸರ್ಕಾರಗಳು ನೋಡುತ್ತಿವೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಬಾಬು ಬರ್ಮಪ್ಪ ಉವಾಸಿ, ಜಿಲ್ಲಾಧ್ಯಕ್ಷ ಈರಣ್ಣ ಅರಳಿಕಟ್ಟಿ, ಅತ್ತಹಳ್ಳಿ ದೇವರಾಜ್, ಶಂಕ್ರಗೌಡ ಹಾದಿಮನಿ, ಸಿದ್ದಪ್ಪ ಸಿದ್ನಾಳ, ಶಾನಪ್ಪ ನಾವಿ, ಶಿವಪ್ಪ ಬೈರೋಜಿ, ಮಾರುತಿ ಕಿತ್ತೂರು, ಮಲ್ಲಪ್ಪ ಮನಿಯಾಳ, ನಿಂಗನಗೌಡ ಪಾಟೀಲ, ಶಂಕರಪ್ಪ ಕಿತ್ತೂರು, ನಾಗಪ್ಪ ಮನಿಯಾಳ, ಜಗದೀಶ ಮಡಿಮಟ್ಟಿ, ಮಾರುತಿ ಅನ್ವಾರೆ ಸೇರಿದಂತೆ ಮತ್ತೀತರರ ರೈತ ಮುಂಖಡರು ಇದ್ದರು.

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *