ವಿಧ್ಯಾರ್ಥಿಗಳಿಗೆ ಆಸರೆಯಾದ ಲಕ್ಷ್ಮೀತಾಯಿ ಫೌಂಡೇಶನ್

ಬೆಳಗಾವಿ-ಜಾಂಬೋಟಿಯಿಂದ ಬೆಳಗಾವಿಗೆ ವಾಪಸ್ ಆಗುವ ಸಂಧರ್ಭದಲ್ಲಿ ರಣಕುಂಡೆ ಗ್ರಾಮದ ಕ್ರಾಸ್ ನಲ್ಲಿ ಕೆಲವು ವಿಧ್ಯಾರ್ಥಿನಿಯರು ಬಿಸಿಲಲ್ಲಿ ಬಸ್ಸಿಗಾಗಿ ಕಾಯುತ್ತಿರುವದನ್ನು ಗಮನಿಸಿದ ಲಕ್ಷ್ಮೀ ಹೆಬ್ಬಾಳಕರ ಅವರು ಹಳ್ಳಿಯ ವಿಧ್ಯಾರ್ಥಿಗಳ ನೋವು ಅರ್ಥ ಮಾಡಿಕೊಂಡು ಹದಿನೈದು ದಿನದಲ್ಲಿಯೇ ತಮ್ಮ ಸ್ವಂತ ಖರ್ಚಿನಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಿ ಅದನ್ನು ವಿಧ್ಯಾರ್ಥಿಗಳ ಕೈಯಿಂದಲೇ ಉದ್ಘಾಟಿಸಿ ಇತರರಿಗೆ ಮಾದರಿಯಾಗಿದ್ದಾರೆ
ಲಕ್ಷ್ಮೀ ಹೆಬ್ಬಾಳಕರ ಅವರ ಲಕ್ಷ್ಮೀತಾಯಿ ಫೌಂಡೇಶನ್ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸದ್ದಿಲ್ಲದೆ ಸಮಾಜ ಸೇವೆಯನ್ನು ಮಾಡುತ್ತಿದೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಐವತ್ತಕ್ಕೂ ಹೆಚ್ಚು ಬೋರವೆಲ್ಲಗಳನ್ನು ಕೊರೆಯಿಸಿ ಸರ್ಕಾರಿ ಶಾಲೆಗಳಿಗೆ ಪ್ರೋಜೆಕ್ಟರ್ ಗಳನ್ನು ನೀಡುವ ಕಾರ್ಯವನ್ನು ಆರಂಭಿಸಿರುವ ಲಕ್ಷ್ಮೀ ತಾಯಿ ಫೌಂಡೇಶನ್ ಈಗ ಗ್ರಾಮೀಣ ಕ್ಷೇತ್ರದಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸುವ ಮಹತ್ವದ ಕಾರ್ಯಕ್ಕೆ ಕೈ ಹಾಕಿದೆ
ಭಾನುವಾರ ರಣಕುಂಡೆ ಗ್ರಾಮದಲ್ಲಿ ಸಂಬ್ರಮ ಮನೆ ಮಾಡಿತ್ತು ಲಕ್ಷ್ಮೀತಾಯಿ ಫೌಂಡೆಶನ್ ನಿರ್ಮಿಸಿದ ಬಸ್ ನಿಲ್ದಾಣವನ್ನು ವಿಧ್ಯಾರ್ಥಿಗಳೇ ಊದ್ಘಾಟಿಸಿದರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ ಗುಡ್ಡಗಾಡು ಪ್ರದೇಶದ ಮಕ್ಕಳು ದಿನನಿತ್ಯ ಶಾಲೆ-ಕಾಲೇಜುಗಳಿಗೆ ತೆರಳಲು ಮತ್ತು ಈ ಭಾಗದ ಸುಮಾರು ಏಳೆಂಟು ಗ್ರಾಮಗಳ ಜನತೆ ಬೆಳಗಾವಿಗೆ ತಲುಪಲು ಬಿಸಿಲು, ಮಳೆಯಲ್ಲಿ ನಿಂತು ಬಸ್ಸಿಗಾಗಿ ದಾರಿ ಕಾಯುವುದನ್ನು ಕಂಡಿz್ದÉೀನೆ. ಈ ಹಿನ್ನೆಲೆಯಲ್ಲಿ ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಇದೀಗ ಬಸ್‍ಶೆಲ್ಟರ್ ನಿರ್ಮಿಸಿಕೊಡಲಾಗಿದೆ. ಒಟ್ಟಿನಲ್ಲಿ ಬಸ್ಸಿಗಾಗಿ ಸಂಚರಿಸುವ ಗ್ರಾಮಸ್ಥರಿಗೆ ನೆರಳು ಒದಗಿಸುವ ದೃಷ್ಠಿಯಿಂದ ಈ ಬಸ್‍ಶೆಲ್ಟರ್ ಕಟ್ಟಿಸಲಾಗಿದ್ದು, ಮಕ್ಕಳು ಮತ್ತು ನಾಗರೀಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ರಣಕುಂಡೆ ಗ್ರಾಮದ ಕ್ರಾಸ್ ಈ ಭಾಗದ ಸುಮಾರು 7-8ಹಳ್ಳಿಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಈ ಕ್ರಾಸ್‍ನಿಂದ ಬೆಳಗಾವಿ ಕೇವಲ 10-15ಕೀಮೀ ದೂರದಲ್ಲಿದೆ. ಆದಾಗ್ಯೂ ಬೆಳಗಾವಿ ತಲುಪಲು ಇವರು ಮಳೆ, ಚಳಿ, ಬಿಸಿಲುಗಳನ್ನು ಎದುರಿಸಬೇಕಾಗಿತ್ತು. ಈ ಭಾಗತ ಜನಪ್ರತಿನಿಧಿಗಳೂ ಸಹ ಇದರತ್ತ ಗಮನಹರಿಸದಿರುವುದು ನೋವಿನ ವಿಚಾರ. ಈ ಸ್ಥಳದಲ್ಲಿ ಬಸ್‍ಶೆಲ್ಟರ್ ಕಟ್ಟಿಸಿಕೊಡುವಂತೆ ಸಂಬಂದಿಸಿದ ಜನಪ್ರತಿನಿಧಿಗಳಿಗೆ ಈ ಗ್ರಾಮಸ್ಥರು ಕಳೆದ 3-4ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಬಂದಿದ್ದರೂ ಸಹ ಅದು ಇದುವರೆಗೂ ಈಡೇರಿಲ್ಲ. ಅಲ್ಲದೇ ರಾಜ್ಯ ಸರ್ಕಾರ ಇಂಥ ಕಾರ್ಯಕ್ರಮಗಳಿಗೆಂದೇ ಶಾಸಕರ ನಿಧಿಯನ್ನು ನೀಡುತ್ತಿದ್ದು ಅದರ ಸಮರ್ಪಕ ಬಳಕೆಗೆ ಮುಂದಾಗಬೇಕಿತ್ತು. ಆದರೆ ಜನರ ನೋವಿಗೆ ಜನಪ್ರತಿನಿಧಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ನಮ್ಮ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದಲೇ ಈ ಬಸ್‍ಶೆಲ್ಟರ್ ನಿರ್ಮಿಸಿಕೊಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೇ ಭಾಗದ ಕಿಣಯೇ, ಕರ್ಲೆ ಮತ್ತಿತರೆಡೆ ಸುಮಾರು 7-12 ಬಸ್‍ಶೆಲ್ಟರ್‍ಗಳನ್ನು ನಿರ್ಮಿಸುವ ಗುರಿ ಇದೆ ಎಂದರು
ಅಲ್ಲದೇ ಫೌಂಡೇಷನ್ ವತಿಯಿಂದ ಸ್ಲಂ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಮತ್ತು ಕುಡಿವ ನೀರಿಗೆ ಮೊದಲ ಆಧ್ಯತೆ ನೀಡಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಈಗಾಗಲೇ ಈ ಭಾಗದ ಎರಡು ಹೋಬಳಿಗಳಿಗೆ ಎರಡು ಅಂಬ್ಯುಲೆನ್ಸ್‍ಗಳನ್ನು ಒದಗಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಇಬ್ಬರು ತಜ್ಞವೈದ್ಯರನ್ನು ಫೌಂಡೇಷನ್ ವತಿಯಿಂದ ನಿಯೋಜನೆ ಮಾಡಿ ಈ ಭಾಗದ ಜನರ ಆರೋಗ್ಯದ ನಿರಂತರ ತಪಾಸಣೆಗೆ ಮುಂದಾಗಲಿz್ದÉೀವೆ. ಕೇವಲ ಕಣ್ಣು, ಹೃದಯ, ಬಿಪಿ, ಸಕ್ಕರೆ ಖಾಯಿಲೆ ಮಾತ್ರವಾಗಿರದೆ ಸಮಗ್ರ ಆರೋಗ್ಯ ತಪಾಸಣೆ ನಡೆಯಲಿದೆ. ಈ ಭಾಗದ ಎಲ್ಲ ಗ್ರಾಮಕ್ಕೂ ಈ ವೈದ್ಯರು ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಗ್ರಾಮಸ್ಥರು ಲಕ್ಷ್ಮೀ ಹೆಬ್ಬಾಳಕರ ಅವರು ಅಧಿಕಾರ ಇಲ್ಲದಿದ್ದರೂ ಅನೇಕ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಜಿಲ್ಲಾ ಪಂಚಾಯತಿ ಅಧ್ಯಕ್ಷ ಆಶಾ ಐಹೊಳೆ ಬುಡಾದ ಮಾಜಿ ಅಧ್ಯಕ್ಷ ಯುವರಾಜ ಕದಂ, ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ, ಜಿಪಂ ಸದಸ್ಯರಾದ ಮೋಹನ ಮೋರೆ, ಶಂಕರಗೌಡ ಪಾಟೀಲ, ಚರಣರಾಜ ಹಟ್ಟಿಹೋಳಿ, ಯಲ್ಲಪ್ಪಾ ಡೆಕೋಳಕರ,ಬೀರಮತ್ತಿ ತಾಲೂಕಾ ಪಂಚಾಯತಿ ಸದಸ್ಯರಾದ ನೀಲೇಶ ಕಿರಣ ಪಾಟೀಲ ಯರಗಟ್ಟಿ ಬಿ ವಾಯ್ ಪಾಟೀಲ ಮಾರುತಿ ಡುಕರೆ ಶಂಕರ ದಳವಿ ಈರಪ್ಪಾ ಕಲಕಾಂಬಕರ ನೂರ ತಹಶಿಲ್ದಾ ಮುರಾರಿ ಪಾಟೀಲ ವೆಂಕಟ ಪಾಟೀಲ ಸಾತೇರಿ ಕೋಕಿತಕರ ಎಂ ಎಸ್ ತಹಶಿಲ್ದಾರ ಮೊದಲಾದವರು ಉಪಸ್ಥಿತರಿದ್ದರು

Check Also

ಚನ್ನಮ್ಮಾಜಿಯ ಮೂರ್ತಿ ತೆರವು ವಿವಾದ, ಸಂಧಾನ ಸಫಲ

ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮನ ಅಶ್ವಾರೂಢ ಪ್ರತಿಮೆ ತೆರವಿಗೆ ಪೊಲೀಸ್‌ರು ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾದ ವೇಳೆ …

Leave a Reply

Your email address will not be published. Required fields are marked *