ಒಂದೇ ಕಲ್ಲಿನಿಂದ ಜೋಡಿ ಹಕ್ಕಿ ಹೊಡೆದ ಸವದಿ ಸಾಹುಕಾರ್….!!!
ಬೆಳಗಾವಿ- ಬೆಳಗಾವಿ ಜಿಲ್ಲೆ ರಾಜಕೀಯವಾಗಿ ,ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ,ಜಿಲ್ಲೆಯ ನಾಯಕರು ಪರಸ್ಪರ ಕಾಲೆಳೆದರೂ ಕುಸ್ತಿ ಗೆದ್ದ ಕೀರ್ತಿ,ಮಾತ್ರ ಬೆಳಗಾವಿಗೆ ಸಿಗುತ್ತಿದೆ.
ಬಿಜೆಪಿ ಸರ್ಕಾರದ ರಚನೆಯಲ್ಲಿ ಅತೃಪ್ತ ಶಾಸಕರ ಸರ್ದಾರನಾಗಿ ಸಾಹುಕಾರ್ ರಮೇಶ್ ಜಾರಕಿಹೊಳಿ ಮುಖ್ಯ ಪಾತ್ರ ನಿಭಾಯಿಸಿ,ಹೊಸ ಸರ್ಕಾರದ ರಚನೆಯ ರೂವಾರಿಯಾದರು,ಈಗ ಬೆಳಗಾವಿ ಜಿಲ್ಲೆಯವರಾದ ಲಕ್ಷ್ಮಣ ಸವದಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೂ,ರಾಜ್ಯದ ಉಪ ಮುಖ್ಯಮಂತ್ರಿಯಾದರು
ಅಥಣಿ ಕ್ಷೇತ್ರದಿಂದ ಗೆದ್ದ ಮಹೇಶ್ ಕುಮಟೊಳ್ಳಿ,ಮತ್ತು ಜಿಲ್ಲೆಯ ಪ್ರಭಾವಿ ನಾಯಕ ಉಮೇಶ್ ಕತ್ತಿ ಅವರನ್ನು ಮಂತ್ರಿ ಸ್ಥಾನದಿಂದ ಕೋಕ್ ಕೊಟ್ಟವರು ಯಾರು ? ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಕೋಕ್ ಕೊಡುವ ಗೇಮ್ ನ ಮಾಸ್ಟರ್ ಮೈಂಡ್ ಯಾರು ? ಎಂದು ಗುಣಾಕಾರ,ಭಾಗಾಕಾರ ಮಾಡಿದ್ರೆ ಲಕ್ಷ್ಮಣ ಸವದಿಯ ಆಕಾರ ಕಣ್ಣೆದುರಿಗೆ ಗೋಚರವಾಗುತ್ತದೆ.
ಡಿಸಿಸಿ ಬ್ಯಾಂಕಿನ ಅದ್ಯಕ್ಷ ಉಪಾಧ್ಯಕ್ಷ ರ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ,ಮತ್ತು ಕತ್ತಿ ಸಹೋದರರ ನಡುವೆ ಆರಂಭವಾದ ಜಗಳ ಈಗ ಈ ಮಟ್ಟ ತಲುಪಿದೆ.
ಬಿಜೆಪಿಯ ಒಂದು ಗುಂಪು ಲಕ್ಷ್ಮಣ ಸವದಿ ಅವರನ್ನು ಸಿಎಂ ಯಡಿಯೂರಪ್ಪ ನವರಿಗೆ ಪರ್ಯಾಯವಾಗಿ ಬೆಳೆಸುತ್ತಿದೆ,ಅದಕ್ಕಾಗಿಯೇ ಈ ಗುಂಪು ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರಿ ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಸ್ಥಾನ ಕೊಡಿಸುವಲ್ಲಿ ಸಫಲವಾಗಿದೆ.
ಸಿಎಂ ಯಡಿಯೂರಪ್ಪ ಅವರು ಉಮೇಶ್ ಕತ್ತಿ ಅವರ ರಕ್ಷಣೆಗೆ ನಿಂತಿರುವದು ಸ್ಪಷ್ಟವಾಗಿ ಕಾಣುತ್ತಿದೆ.ಹೇಗಾದ್ರು ಮಾಡಿ ಉಮೇಶ್ ಕತ್ತಿ ಅವರನ್ನು ಮಂತ್ರಿ ಮಾಡಲೇ ಬೇಕು ಎಂದು ಪಟ್ಟು ಹಿಡಿದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಹಿನ್ನಡೆಯಾಗಿದೆ ,ಈ ವಿಷಯದಲ್ಲಿ ಲಕ್ಷ್ಮಣ ಸವದಿ ಅವರ ಬೆನ್ನಿಗೆ ನಿಂತಿರುವ ಬಿಜೆಪಿ ನಾಯಕರ ಗುಂಪು ಉಮೇಶ್ ಕತ್ತಿ ಅವರಿಗೆ ಕೋಕ್ ಕೊಡಿಸುವಲ್ಲಿ ಸಫಲವಾಗಿದೆ ಎಂದು ಹೇಳಲಾಗುತ್ತಿದೆ.
ಸಚಿವ ಸಂಪುಟ ವಿಸ್ತರಣೆ ಆದ ಬಳಿಕವೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉಮೇಶ್ ಕತ್ತಿ ಮಂತ್ರಿ ಆಗೋದು ನೂರಕ್ಕೆ ನೂರು ಖಚಿತ,ಇನ್ನೊಮ್ಮೆ ದೇಹಲಿಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾರೆ.
ಮಹೇಶ್ ಕುಮಟೊಳ್ಳಿ ಮತ್ತು ಲಕ್ಷ್ಮಣ ಸವದಿ ಒಂದೇ ಕ್ಷೇತ್ರದವರು ಕುಮಟೊಳ್ಳಿ ಮಂತ್ರಿಯಾದರೆ ಲಕ್ಷ್ಮಣ ಸವದಿ ವರ್ಚಸ್ಸು ಕಡಿಮೆ ಆಗಬಹುದು ಎಂದು ಕುಮಟೊಳ್ಳಿ ಅವರನ್ನು ಸಚಿವರ ಪಟ್ಟಿಯಿಂದ ಕೈಬಿಡಲಾಗಿದೆ,
ಒಟ್ಟಾರೆ ಬೆಳಗಾವಿ ಜಿಲ್ಲೆಯ ರಾಜಕಾರಣ ,ಬಿಜೆಪಿಗೆ ಮುಖ್ಯ ದಾಳವಾಗಿದೆ.ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಲಕ್ಷ್ಮಣ ಸವದಿ ಅವರನ್ನು ರಾಜಕೀಯವಾಗಿ ಪ್ರಬಲಗೊಳಿಸುವ ಕೆಲಸ ಬಿಜೆಪಿಯಲ್ಲಿ ಗುಪ್ತವಾಗಿಯೇ ನಡೆದಿದೆ ಇದು ಸಿಎಂ ಯಡಿಯೂರಪ್ಪನವರಿಗೂ ಗೊತ್ತಾಗಿದೆ. ಹೇಗಾದ್ರೂ ಮಾಡಿ ಉಮೇಶ್ ಕತ್ತಿಗೆ ಮಂತ್ರಿ ಮಾಡಿ ಲಕ್ಷ್ಮಣ ಸವದಿಯ ರಾಜಕೀಯ ನಾಗಾಲೋಟಕ್ಕೆ ಬ್ರೆಕ್ ಹಾಕಲು ಸಿಎಂ ಎಲ್ಲಿಲ್ಲದ ಪ್ರಯತ್ನ ನಡೆಸಿದ್ದಾರೆ ಈ ಆಟದಲ್ಲಿ ಯಾರು ಗೆಲ್ತಾರೆ,ಯಾರು ಸೋಲ್ತಾರೆ ,ಅನ್ನೋದನ್ನು ಕಾದು ನೋಡಬೇಕಾಗಿದೆ
ಬೆಳಗಾವಿ ಜಿಲ್ಲೆಯ ಪಾಲಿಟಿಕ್ಸ ರಾಜ್ಯ ರಾಜಕಾರಣದ ದಾಳವಾಗಿದ್ದು ಬೆಳಗಾವಿ ಜಿಲ್ಲೆಗೆ ಹೆಚ್ವಿನ ಲಾಭವಾಗಿದೆ ,ಯಾಕಂದ್ರೆ ಬೆಳಗಾವಿ ಜಿಲ್ಲೆಗೆ ಒಂದು ಡಿಸಿಎಂ ಸ್ಥಾನ,ನಾಲ್ಕು ಮಂತ್ರಿ ಸ್ಥಾನ,ಒಂದು ಎಂ,ಎಲ್ ಸಿ ಸ್ಥಾನ ದಕ್ಕಿದೆ , ಬೆಳಗಾವಿ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲೆಯ ನಾಲ್ಕು ಜನ ಶಾಸಕರು ಮಿನಿಸ್ಟರ್ ಆಗಿದ್ದಾರೆ .
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಾರು ಸಫಲರಾಗುತ್ತಾರೆ ? ಈ ವಿಷಯದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುವದನ್ನು ನೋಡಬೇಕಾಗಿದೆ.