Breaking News

ಲಕ್ಷ್ಮೀ ಹೆಬ್ಬಾಳಕರ್ ಜನತಾ ದರ್ಶನದಲ್ಲಿ ಜನಜಾತ್ರೆ…!!

ಬೆಳಗಾವಿ- ಲಕ್ಷ್ಮೀ ಹೆಬ್ಬಾಳಕರ್ ಅವರು ಕುವೆಂಪು ನಗರದ ಗೃಹ ಕಚೇರಿಯಲ್ಲಿ ನಡೆಸುತ್ತಿರುವ ಜನತಾ ದರ್ಶನದಲ್ಲಿ ಜನಜಾತ್ರೆಯೇ ಸೇರುತ್ತಿದೆ. ಗ್ರಾಮೀಣ ಕ್ಷೇತ್ರದ ಜನರ ಪಾಲಿಗೆ ಹೆಬ್ಬಾಳಕರ್ ಗೃಹ ಕಚೇರಿ ಅಕ್ಷಯ ಪಾತ್ರೆಯಾಗಿದ್ದು ಸತ್ಯ.

ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ, ಗೃಹಲಕ್ಷ್ಮೀ ಯೋಜನೆಯ ಅಡ್ಡಿ ಆತಂಕಗಳನ್ನು ತಾಂತ್ರಿಕ ತೊಂದರೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ, ಮೈಸೂರು ಮಹಾರಾಜರ ಅಂಗಳದಲ್ಲಿ ಗೃಹಲಕ್ಷ್ಮೀ ಯೋಜನೆಯ ಕಾರ್ಯಕ್ರಮವನ್ನು ನಿಭಾಯಿಸಿ ರಾಜ್ಯದ ಜನರ ಗಮನ ಸೆಳೆದಿರುವ ಮಿನಿಸ್ಟರ್ ಲಕ್ಷ್ಮೀ ಹೆಬ್ಬಾಳಕರ್ ಅವರು ಮೈಸೂರಿನ ಕಾರ್ಯಕ್ರಮ ಮುಗಿಸಿ ಉಡುಪಿ ಜಿಲ್ಲೆಯಲ್ಲಿ ಒಂದು ರೌಂಡ್ ಹಾಕಿ ಅಲ್ಲಿಯ ಉಸ್ತುವಾರಿ ಜವಾಬ್ದಾರಿಯನ್ನೂ ನಿಭಾಯಿಸಿರುವ ಅವರು ನೇರವಾಗಿ ತಮ್ಮ ಗ್ರಾಮೀಣ ಕ್ಷೇತ್ರದ ಮನೆಯ ಮಗಳಾಗಿ ಕ್ಷೇತ್ರದ ಜನರ ಕಷ್ಟ ಸುಖಗಳನ್ನು ಆಲಿಸುವ ಮೂಲಕ ಎಲ್ಲ ಜವಾಬ್ದಾರಿಗಳು ಅತ್ಯಂತ ಅಚ್ವುಕಟ್ಟಾಗಿ ನಿಭಾಯಿಸುತ್ತಿದ್ದಾರೆ.

ಲಕ್ಷ್ಮೀ ಹೆಬ್ಬಾಳಕರ್ ಮಿನಿಸ್ಟರ್ ಆದ ಬಳಿಕ ಗ್ರಾಮೀಣ ಕ್ಷೇತ್ರದ ಕಡೆ ಗಮನ ಹರಿಸುವದಿಲ್ಲ ಎನ್ನುವ ಟೀಕೆಗೆ ಅವಕಾಶ ಮಾಡಿ ಕೊಡದೇ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಇಂದು ಬೆಳಗ್ಗೆ ಕುವೆಂಪು ನಗರದ ಗೃಹಕಚೇರಿಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಜನತಾ ದರ್ಶನ ನಡೆಸಿದ್ದು,ಈ ಜನತಾ ದರ್ಶನದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಅಷ್ಟೇ ಅಲ್ಲ ಜಿಲ್ಲೆಯ ವಿವಿಧ ತಾಲ್ಲೂಕಿನ ಜನರೂ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.

ಮುತಗಾದಲ್ಲಿ ಆಸ್ಪತ್ರೆ…

ಗೋಕಾಕ್ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಡಾ. ಮಹಾಂತೇಶ ಕಡಾಡಿ ಅವರ ನೆರವಿನಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದಲ್ಲಿ ಖಾಸಗಿ ಆಸ್ಪತ್ರೆ ಆರಂಭಿಸುವಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಯಶಸ್ವಿಯಾಗಿದ್ದಾರೆ.

Check Also

ವ್ಯಾಪಕ‌ ಮಳೆ: ಜು.27 ರಂದು ಶಾಲಾ-ಕಾಲೇಜು‌ ರಜೆ

ಬೆಳಗಾವಿ, ಜು.26(ಕರ್ನಾಟಕ ವಾರ್ತೆ): ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ(ಜುಲೈ 27) ಜಿಲ್ಲೆಯ ರಾಮದುರ್ಗ ತಾಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕುಗಳ …

Leave a Reply

Your email address will not be published. Required fields are marked *