Breaking News
Home / LOCAL NEWS / ಕಂಗ್ರಾಳಿ ಗ್ರಾಮದಲ್ಲಿ ಹಳದಿ ಕುಂಕುಮ ಕಾರ್ಯಕ್ರಮ

ಕಂಗ್ರಾಳಿ ಗ್ರಾಮದಲ್ಲಿ ಹಳದಿ ಕುಂಕುಮ ಕಾರ್ಯಕ್ರಮ

ಬೆಳಗಾವಿ-ಬೆಳಗಾವಿ ಗಡಿ ಭಾಗದಲ್ಲಿ ನಡೆಯುವ ಹಳದಿ ಕುಂಕುಮ ಕಾರ್ಯಕ್ರಮ ಸಮಂಧ ಬೆಳೆಸುವ ಕಾರ್ಯಕ್ರಮವಾಗಿದ್ದು ಈ ಅಪರೂಪದ ಕಾರ್ಯಕ್ರಮದಿಂದ ಮಹಿಳಾ ಸಬಲೀಕರಣ ,ಮಾಡಲು ಸಾಧ್ಯವಿದೆ ಈ ಕಾರ್ಯಕ್ರಮ ಮಹಿಳಾ ಶಕ್ತಿಯನ್ನು ಒಗ್ಗೂಡಿಸಲು ಪೂರಕವಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ
ಬೆಳಗಾವಿ ಸಮೀಪದ ಬಿ ಕೆ ಕಂಗ್ರಾಳಿ ಗ್ರಾಮದÀ ವಿಠ್ಠಲ ಮಂದಿರದಲ್ಲಿ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ಮಹಿಳೆಯರಿಗೆ ಹಳದಿ ಕುಂಕುಮ ಅರ್ಪಿಸಿ ಮಾತನಾಡಿ ಅವರು ಭಾರತೀಯ ಸಂಸ್ಸøತಿಯಲ್ಲಿ ಮಹಿಳೆಗೆ ದೇವಿಯ ಸ್ಥಾನವಿದೆ ಮಹಿಳೆಯರು ಹಳದಿ ಕುಂಕುಮ ಕಾರ್ಯಕ್ರಮದ ಮೂಲಕ ಸಂಘಟಿತರಾಗಬೇಕು ತಮ್ಮ ಹಕ್ಕುಗಳನ್ನು ಪಡೆಯಲು ಮಹಿಳೆಯರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮನೆಯಿಚಿದ ಹೊರಗೆ ಬರುವದರ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು
ಭಾರತೀಯ ಸಂಸ್ಕøತಿಯಲ್ಲಿ ಅನೇಕ ಧಾರ್ಮಿಕ ಸಂಪ್ರದಾಯಗಳಿವೆ ಎಲ್ಲ ಸಂಪ್ರದಾಯಗಳಲ್ಲಿ ವಿಶೇಷವಾದ ಅರ್ಥವಿದೆ ಧರ್ಮಾಚರಣೆಯಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ ಹಳದಿ ಕುಂಕುಮ ಕಾರ್ಯಕ್ರಮ ಸಹೋದರಿಯರ ನಡುವಿನ ಸಂಭಂಧಗಳಿಗೆ ಸೇತುವೆಯಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯ ವ್ಯೆಕ್ತಪಡಿಸಿದರು
ಇದೇ ಸಂಧರ್ಭದಲ್ಲಿ ಕಂಗ್ರಾಳಿ ಗ್ರಾಮದ ಸೈನಿಕರನ್ನು ಸನ್ಮಾನಿಸಲಾಯಿತು
ಗ್ರಾಮದ ಹಿರಿಯರಾದ ಭಾವುರಾವ ಪಾಟೀಲ,ಸಂತೋಷ ಖಾನಾಪೂರ,ಪೂನಂ ಜಯರಾಮ ಪಾಟೀಲ,ವನಶ್ರೀ ಪಾಟೀಲ, ವೈಷ್ಣವಿ ಪಾಟೀಲ,ಲಕ್ಷ್ಮೀ ಬೋರುಡ,ಜಯಶ್ರೀ ಪಾಟೀಲ,ವೈಷ್ಣವಿ ಬೆಳಗಾಂವಕರ, ಕಲ್ಪನಾ ಬೆಳಗುಂದಕರ,ರಾಜಶ್ರೀ ಪಾಟೀಲ, ಅಶ್ವಿನಿ ಪಾಟೀಲ ತಾಲೂಕಾ ಪಂಚಾಯತಿ ಅಧ್ಯಕ್ಷ ಶಂಕರಗೌಡಾ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *