LOVE…..ಬೆಂಗಳೂರ TO ಬೆಳಗಾವಿ……!!!

ಬೆಳಗಾವಿ -ಸೋಶಿಯಲ್ ಮೀಡಿಯಾ ಬೆಳೆದಿದೆ, ಜಗತ್ತು ಚಿಕ್ಕದಾಗಿದೆ.ಸಂಪರ್ಕ ಸರಳವಾಗಿದೆ.ಹೀಗಾಗಿ ಪ್ರೀತಿ ಪ್ರೇಮದ ವ್ಯಾಪ್ತಿಯೂ ದೊಡ್ಡದಾಗಿದೆ.ಬೆಂಗಳೂರಿನ ಹುಡುಗಿ, ಬೆಳಗಾವಿ ಹುಡುಗ ಇಬ್ಬರ ನಡುವೆ ಇನ್ಸ್ಟಾಗ್ರಾಮ್ ನಲ್ಲಿ ಲವ್ ಆಗಿದೆ. ಬೆಂಗಳೂರಿನ ಹುಡುಗಿ ಈಗ ಬೆಳಗಾವಿ ತಲುಪಿದ್ದಾಳೆ. ನಾವಿಬ್ರು ಲವ್ ಮಾಡುತ್ತೇವೆ.ನಮ್ಮ ಮದುವೆ ಮಾಡಿಸಿ ಅಂತಾ ಈ ಜೋಡಿ ಈಗ ಬೆಳಗಾವಿ ಪೋಲೀಸರ ಮೊರೆ ಹೋದ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಕಸ್ತೂರಬಾ ನಗರದ ನಿವಾಸಿ ಪ್ರೀಯಾಂಕಾ ಕೋಟ್ಯಾಧೀಶೆ, ಪ್ರೀಯಾಂಕಾ ಚಿಕ್ಕವಳಾಗಿದ್ದಾಗ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡಿದ್ದಾಳೆ. ಬೆಂಗಳೂರಿನಲ್ಲಿ ನಾಲ್ಕು ಅಂತಸ್ತಿನ ಮನೆ, ಮತ್ತು ಕಾಂಪ್ಲೆಕ್ಸ್, ಶಿವಮೊಗ್ಗ ದಲ್ಲಿ ಇರುವ ಮೂರು ಮನೆಗಳ ಒಡತಿ ಆಗಿರುವ ಪ್ರೀಯಾಂಕಾ, ಸೋದರಮಾವನ ಆಶ್ರಯದಲ್ಲಿ ಇರುತ್ತಾಳೆ.

ಕೋಟ್ಯಾಧಿಶೆ ಆಗಿರುವ ಪ್ರೀಯಾಂಕಾ ಮತ್ತು ಬೆಳಗಾವಿ ಅಲಾರವಾಡದ ರೋಹೀತ್ ಕೋಲಕಾರ ಜಿತೆ ಇನ್ಸ್ಟಾಗ್ರಾಮ್ ನಲ್ಲಿ ಲವ್ ಆಗಿದೆ. ಈ ಲವ್ ಈಗ ಮ್ಯಾರೇಜ್ ಹಂತ ತಲುಪಿದೆ.ಹೀಗಾಗಿ ಪ್ರೀಯಾಂಕಾ ಈಗ ಸೋದರ ಮಾವನ ಪಂಜರದಿಂದ ತಪ್ಪಿಸಿಕೊಂಡು ಬೆಳಗಾವಿಗೆ ಬಂದಿದ್ದಾಳೆ. ನಮ್ಮ ಮದುವೆ ಮಾಡಿಸಿ ಅಂತಾ ಪಟ್ಟು ಹಿಡಿದಿದ್ದಾಳೆ.

ಪ್ರೀಯಾಂಕಾ ಮತ್ತು ರೋಹೀತ್ ಜೊತೆ ಲವ್ ಆಗುರುವ ವಿಚಾರ ಪ್ರಿಯಾಂಕಾ ಸೋದರ ಮಾವನಿಗೆ ಗೊತ್ತಾಗಿದೆ.ಹೀಗಾಗಿ ಪ್ರೀಯಾಂಕಾ ಹಲವಾರು ದಿನಗಳಿಂದ ಗೃಹ ಬಂಧನದಲ್ಲಿದ್ದಳು. ಈಗ ಈ ಪ್ರೀಯಾಂಕಾ ಬೆಳಗಾವಿ ಹುಡುಗ ರೋಹೀತ್ ನ ಗರಡಿ ಸೇರಿದ್ದಾಳೆ. ಮದುವೆ ಮಾಡಿಸುವಂತೆ ಪ್ರೀಯಾಂಕಾ ಈಗ ಬೆಳಗಾವಿ ಪೋಲೀಸರ ಮೊರೆ ಹೋಗಿದ್ದಾಳೆ.

ಪ್ರೀಯಾಂಕಾ ರೋಹೀತ್ ನಡುವಿನ ಲವ್ ಜರ್ನಿ ಎಲ್ಲಿಗೆ ಮುಟ್ಟುತ್ತದೆ ,ಅನ್ನೋದನ್ನು ಕಾಯ್ದು ನೋಡಬೇಕಾಗಿದೆ.

Check Also

ಕುಂಭಮೇಳದಿಂದ ವಾಪಸ್ ಬರುವಾಗ ಬೆಳಗಾವಿಯ ನಾಲ್ವರ ಸಾವು

ಬೆಳಗಾವಿ- ಮಹಾ ಕುಂಭಮೇಳಕ್ಕೆ ಹೋಗಿ ವಾಪಾಸ್ ಆಗುವಾಗ ಟಿ.ಟಿ ವಾಹನ ಅಪಘಾತಕ್ಕೀಡಾಗಿ ಬೆಳಗಾವಿಯ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.ಬೆಳಗಾವಿಯ ಶಹಾಪುರ …

Leave a Reply

Your email address will not be published. Required fields are marked *