Breaking News

ಗೋಕಾಕಿನಲ್ಲಿ ಹೊಸ ಬಾಂಬ್ ಸಿಡಿಸಿದ ರಮೇಶ್ ಜಾರಕಿಹೊಳಿ

ಕೂಡಲಸಂಗಮದಿಂದ ಬಳ್ಳಾರಿವರಗೆ ಯಾತ್ರೆ

ಬೆಳಗಾವಿ-ಗೋಕಾಕ್ ನಗರದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಹೊಸ ಬಾಂಬ್ ಸಿಡಿಸಿದ್ದಾರೆ.ಮುಡಾಹಗರಣಕ್ಕಿನಂತ ದೊಡ್ಡ ಹಗರಣ ವಾಲ್ಮೀಕಿ ಹಗರಣವಾಗಿದ್ದು,ವಾಲ್ಮೀಕಿ ಜನಾಂಗಕ್ಕೆ ಸರ್ಕಾರ ಮೋಸ‌ ಮಾಡಿದೆ.ಬಿಜೆಪಿಯ ದಿಲ್ಲಿ ಹೈಕಮಾಂಡ್ ಗೆ ಪರ್ಮಿಷನ್ ಕೇಳಿದ್ದಿನಿ. ಮಹರ್ಷಿ ವಾಲ್ಮೀಕಿ ನಿಗಮದ ಹಗರಣದ ತನಿಖೆಗೆ ಆಗ್ರಹಿಸಿ,
ಕೂಡಲಸಂಗಮದಿಂದ ಬಳ್ಳಾರಿವರಗೆ ಯಾತ್ರೆ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ನಾನು ಬಸನಗೌಡ ಯತ್ನಾಳ್ ಇಬ್ಬರ ಹೆಸರು ಮಾತ್ರ ಈಗ ಹೇಳ್ತಿನಿ,ನಮ್ಮ ಅಧ್ಯಕ್ಷರು ಮಾಡಿದ್ರೆ ಒಕೆ
ಇಲ್ಲವಾದ್ರೆ ನಾನು ಯತ್ನಾಳ್ ರೆಡಿ ಇದ್ದೇವೆ.
ಸದನದಲ್ಲಿ ಗಲಾಟೆ ಮಾಡಿದ್ರೆ ಸಾಲಲ್ಲ ಮೊದಲು ಬಳ್ಳಾರಿ ಪಾದಯಾತ್ರೆ ಮಾಡಬೇಕು.ಎಸ್ಸಿ, ಎಸ್ಟಿ ಹಣವನ್ನು ಗ್ಯಾರಂಟಿಗೆ ಬಳಸಿದ್ದಾರೆ.ಅದನ್ನ ಖಂಡಿಸಿ ಪಾದಯಾತ್ರೆ ಮಾಡ್ತೇವಿ ಎಂದ ರಮೇಶ್ ಜಾರಕಿಹೊಳಿ ಹೇಳಿದ್ದಾರೆ

ಪಾಯಾತ್ರೆಯ ದಿನಾಂಕ ಇನ್ನೂ ನಿಗಧಿಯಾಗಿಲ್ಲ ಶೀಘ್ರದಲ್ಲಿ ಪ್ರಾರಂಭ ಮಾಡ್ತೇವಿ,ಸಿಎಂ ಮಾಡಿದ ಹಗರಣವೂ ಸಹ ದೊಡ್ಡ ಹಗರಣ ಆಗಿದೆ.ಎಷ್ಟರ ಮಟ್ಟಿಗೆ ಹೋರಾಟ ಆಗಬೇಕಿತ್ತೊ ಆ ಪ್ರಮಾಣದಲ್ಲಿ ಆಗಲಿಲ್ಲ.ಸಿದ್ದರಾಮಯ್ಯ ಬಗ್ಗೆ ಗೌರವ ಇತ್ತು ಈಗ ಬಹಳ ಕೆಟ್ಟ ಅನಿಸುತ್ತೆ , ಮೂಡಾ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿದೆ. ವಾಲ್ಮೀಕಿ ನಿಗಮದ ಹಗರಣ ಮೂಡಾ ಹಗರಣಕ್ಕಿಂತಲೂ ದೊಡ್ಡ ಹಗರಣವಾಗಿದೆ ಇದರ ಬಗ್ಗೆ ಬಿಜೆಪಿ ನಾಯಕರು ಎಲ್ಲರೂ ಸೇರಿ ಪಾದಯಾತ್ರೆ ಮಾಡುವದು ಒಳ್ಳೆಯದೂ ಇಲ್ಲ ಅಂದ್ರೆ ನಾವೊಂತು ರೆಡಿ ಇದ್ದೇವೆ ಎಂದರು.

ಸಿದ್ದರಾಮಯ್ಯರನ್ನು ಕೆಳಗಿಳಿಸುವ ಹುಣ್ಣಾರ ನಡೆದಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಕೆಲವು ವಿಚಾರ ಮಾಧ್ಯಮಗಳ ಮುಂದೆ ಹೇಳಲು ಆಗವುದಿಲ್ಲ.
ಸಿದ್ದರಾಮಯ್ಯ ಕೆಳಗಿಳಿಸುವುದು ಬಿಡುವುದು ಅವರ ಪಕ್ಷದ ಆಂತರಿಕ ವಿಚಾರ.ಸರ್ಕಾರ ಅಧಿಕಾರಕ್ಕೆ ಬರಲು ಮೂಲ ಕಾರಣ ಸಿದ್ದರಾಮಯ್ಯ.135 ಸೀಟ್ ಬರಲು ಕಾರಣ ಸಿದ್ದರಾಮಯ್ಯ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಡಿಕೆ ಶಿವಕುಮಾರ್ ಗೆ   ಸಿಡಿ ಶಿವು ಅಂದ್ರು…

ಯಾರೋ ಎದೆಯುಬ್ಬಿಸಿಕೊಂಡು ಮಾತನಾಡಿದರೆ ಆಗೊಲ್ಲ.ಸಿಡಿ ಶಿವುನಂತವರು ಎದೆ ಉಬ್ಬಿಸಿಕೊಂಡು ಮಾತನಾಡಿದರೆ ಆಗಲ್ಲ.ಈಗ ಮಹಾನಾಯಕ ಹೆಸರು ಬದಲಾವಣೆ ಆಗಿದೆ.ಮಹಾನಾಯಕ ಎಂದರೆ ಅಂಬೇಡ್ಕರ್ ಗೆ ಅವಮಾನ ಆಗುತ್ತೆ.
ಅವನ ಹೆಸರು ಸಿಡಿ ಶಿವು ಎಂದ ರಮೇಶ್ ಜಾರಕಿಹೊಳಿ‌.ಡಿಕೆಶಿವಕುಮಾರ್ ಗೆ ಹೊಸ ನಾಮಕರಣ ಮಾಡಿದರು.ಸಿಡಿ ಶಿವು ಎಂದು ನಾನು ಕುಮಾರಸ್ವಾಮಿ ಮರುನಾಮಕರಣ ಮಾಡಿದ್ದೇವೆ ಎಂದ ರಮೇಶ್ ಜಾರಕಿಹೊಳಿ,ಗೃಹಲಕ್ಷ್ಮಿ ಹಣ ಬಾರದ ವಿಚಾರವಾಗಿ ಉತ್ತರಿಸಿದ ಅವರು,ಕಾಂಗ್ರೆಸ್ ಪಕ್ಷದ ತಪ್ಪಿಗಿಂತ ಬಿಜೆಪಿ ತಪ್ಪಿನಿಂದ ನಾವು ಅಧಿಕಾರಕ್ಕೆ ಬರಲಿಲ್ಲ.
ಬಿಜೆಪಿ ಸಮಸ್ಯೆಯಿಂದ ಪಕ್ಷ ಅಧಿಕಾರಕ್ಕೆ ಬರಲಿಲ್ಲ.
ಪಕ್ಷ ಸಂಘಟನೆಗೆ ಒತ್ತು ಕೊಡಬೇಕು
ಮುಡಾ ಹಗರಣಕ್ಕಿಂತ ದೊಡ್ಡ ಹಗರಣ ನಿಮ್ಮ ಹಣ ದುರ್ಬಳಕೆ ಮಾಡಿಕೊಂಡಿದ್ದು.ನಾನು ಯತ್ನಾಳ್ ಸಿದ್ದರಿದ್ದೆವೆ ಪಕ್ಷದ ಹೈಕಮಾಂಡ್ ಪರ್ಮಿಷನ್ ತೆಗೆದುಕೊಂಡು ನಿರ್ಣಯ ಮಾಡ್ತೇವಿ ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು.

ರಮೇಶ್ ಜಾರಕಿಹೊಳಿ ಅವರು ಪತ್ರಿಕಾಗೋಷ್ಢಿ ನಡೆಸಿದ ವಿಡಿಯೋ ನೋಡಲು ಕೆಳಗಿನ ಲಿಂಕ್ ಒತ್ತಿ

https://www.facebook.com/share/v/5uAMB9xJoAWgbuEW/?mibextid=oFDknk

Check Also

ಎಸ್ ಎಂ ಕೃಷ್ಣ ನಿಧನ, ನಾಳೆ ಸರ್ಕಾರಿ ರಜೆ ಘೋಷಣೆ,

ಎಸ್​ಎಂ ಕೃಷ್ಣ ನಿಧನ: ರಾಜ್ಯದಲ್ಲಿ 3 ದಿನ ಶೋಕಾಚರಣೆ; ನಾಳೆ ಸರ್ಕಾರಿ ರಜೆ ಘೋಷಣೆ, ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಅಂತ್ಯಕ್ರಿಯೆ …

Leave a Reply

Your email address will not be published. Required fields are marked *