ಬೆಳಗಾವಿ- ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಬೆಳಗಾವಿ ನಗರದಲ್ಲಿ ಅಪಾರ ಜನ ಮೆಚ್ವುಗೆ ಗಳಿಸಿರುವ ಬೆಳಗಾವಿಯ ರೋಟರಿ ನಾರ್ಥ ವಿಂಗ್ ನವರು ನಗರದಲ್ಲಿ ಭಾಷಾ ಸೌಹಾರ್ದತೆ ಕಾಪಾಡಲು ವಿನೂತನವಾದ ಸಾಮಾಜಿಕ ಕಾರ್ಯ ಮಾಡಲು ಯೋಜನೆ ರೂಪಿಸಿದ್ದಾರೆ.
ಇಂದು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೋಟರಿ ಕ್ಲಬ್ ಪದಾಧಿಕಾರಿಗಳು ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಒಂದು ಕನ್ನಡ,ಒಂದು ಮರಾಠಿ ಶಾಲೆಯನ್ನು ದತ್ತು ಪಡೆದು ಎರಡೂ ಶಾಲೆಗಳಲ್ಲಿ ಸಕಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಇಂಗ್ಲಿಷ್ ಶಾಲೆಗಳ ಮಾದರಿಯಲ್ಲಿ ದತ್ತು ಪಡೆದ ಎರಡೂ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಪರಿವರ್ತನೆ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದು ರೋಟರಿ ಕ್ಲಬ್ ನ ಪ್ರಕಾಶ ಪಾಟೀಲ ತಿಳಿಸಿದರು
ಶಾಲೆಗಳ ಅಭಿವೃದ್ಧಿಗಾಗಿ ಡೋನೇಶನ್ ಕಲೆಕ್ಟ ಮಾಡಲು ಮಾರ್ಚ 8 ರಂದು ಕೆ ಎಲ್ ಇ ಯ ಸೆಂಟೇನರಿ ಅಡಿಟೋರಿಯಮ್ ನಲ್ಲಿ ಘಾಶಿರಾಮ್ ಕೋತ್ವಾಲ್ ಎಂಬ ಪ್ರಸಿದ್ಧ ಮರಾಠಿ ನಾಟಕ ಪ್ರದರ್ಶನ ಮಾಡುತ್ತೇವೆ ಮಾರ್ಚ 8 ರಂದು ಮಧ್ಯಾಹ್ನ 12-00 ಘಂಟೆಗೆ ಒಂದು ಶೋ ಸಂಜೆ 6-00. ಘಂಟೆಗೆ ಇನ್ನೊಂದು ಶೋ ನಡೆಯಲಿದೆ
ಪ್ರಸಿದ್ಧ ಘಾಶಿರಾಮ್ ಕೋತ್ವಾಲ ನಾಟಕವನ್ನು ಖ್ಯಾತ ಲೇಖಕ ವಿಜಯ ಟೆಂಡೊಲ್ಕರ್ ಅವರು ರಚಿಸಿದ್ದು ಮರಾಠಿ ಕಲಾವಿದ ಅಣ್ಣಾ ಎಂದೇ ಕರೆಯಲ್ಪಡುವ ಸರ್ಕಾರದ ಕೆಲಸ ದೇವರ ಕೆಲಸ ಎಂಬ ಕನ್ನಡ ಚಿತ್ರದಲ್ಲಿಯೂ ಅಭಿನಯಿಸಿರುವ ಮಾಧವ ಅಭ್ಯಂಕರ್ ಅವರು ಅಭಿನಯ ಮಾಡಲಿದ್ದಾರೆ
ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ರಂಗಭೂಮಿ ಕಲಾವಿದ. ಮಾಧವ ಅಭ್ಯಂಕರ್ ಮಹಾರಾಷ್ಟ್ರ ,ಕರ್ನಾಟಕ ಮತ್ತು ಪಶ್ವಿಮ್ ಬೆಂಗಾಲ್ ನಲ್ಲಿ ರಂಗಭೂಮಿಗೆ ಅಲ್ಲಿಯ ಪ್ರೇಕ್ಷಕರು ಪ್ರೋತ್ಸಾಹಿಸುತ್ತಾರೆ, ಈ ಮೂರು ರಾಜ್ಯಗಳಲ್ಲಿ ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಳನ್ನು ಮಾಡಲಾಗುತ್ತದೆ.
ಘಾಶಿರಾಮ್ ಕೋತ್ವಾಲ್ ಎಂಬ ನಾಟಕ ಸಂಪೂರ್ಣವಾಗಿ ರಾಜಕೀಯ ಆಧಾರಿತ ನಾಟಕ 1994 ರಂದ ಇಲ್ಲಿಯವರೆಗೆ 1200 ಕ್ಕೂ ಹೆಚ್ವು ಪ್ರಯೋಗ ಪ್ರದರ್ಶಿತವಾಗಿವೆ,ಬೆಳಗಾವಿಯಲ್ಲಿ ಪ್ರದರ್ಶನವಾಗುವ ಎರಡು ಪ್ರಯೋಗ ಸೇರಿಸಿದರೆ ಘಾಶಿರಾಮ್ ಕೋತ್ವಾಲ 1240 ಪ್ರಯೋಗ ಪ್ರದರ್ಶನ ಮಾಡಿದಂತಾಗುತ್ತದೆ ಎಂದು ಮಾಧವ ಹೇಳಿದರು.