,ಬೆಳಗಾವಿ- ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರ್ನಲ್ಲಿ ನಡೆದ ಕನಕದಾಸ ವೃತ್ತದ ಗೊಂದಲ ನಿವಾರಣಾ ಸಭೆಯಲ್ಲಿ ಕಾನೂನು ಮತ್ತು ಸಂಸದಿಯ ಸಚಿವ ಮಾಧುಸ್ವಾಮಿ ಅವರು ಬೇಜವಾಬ್ದಾರಿಯಾಗಿ ವರ್ತಿಸುವುದಲ್ಲದೇ ಒಂದೇ ಸಮಾಜದ ಸಚೀವ ಎನ್ನುವಂತೆ ಉದ್ದಟತನ ಮೆರದಿದ್ದಾರೆಂದು ಆರೋಪಿಸಿ ಕೂಡಲೆ ಅವರನ್ನು ವಜಾಗೊಳಿಸಬೇಕೆಂದು ಬೆಳಗಾವಿಯಲ್ಲಿ ಹಾಲುಮತ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ
ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಾಲುಮತ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಸಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿರುವ ಹುಳಿಯಾರ್ನಲ್ಲಿರುವ ಶ್ರಿಕನಕದಾಸರ ವೃತ್ತದ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಹಮ್ಮಿಖೊಂಡಿದ್ದ ಶಾಂತಿರೀತಿಯ ಸಭೆಯಲ್ಲಿ ಕಾನೂನು ಮತ್ತು ಸಂಸದಿಯ ಸಚೀವ ಜೆ.ಸಿ ಮಾಧುಸ್ವಾಮಿ ಅವರು ಜನಪ್ರತಿನಿಧಿಗಳಂತೆ ವರ್ತಿಸದೆ ಬೇಜವಾಬ್ದಾರಿತನ ತೋರಿದ್ದರು ಇದರ ಕುರಿತು ಕುರುಭ ಸಮಾಜದವರು ದೂರವಾಣಿ ಮೂಲಕ ಸ್ಪಷ್ಟಿಕರಣ ಕೇಳಿದಾಗ ತಾನು ಒಂದೇ ಸಮಾಜದ ನಾಯಕ ಅನ್ಯ ಸಮಾಜದ ಬಗ್ಗೆ ನನಗೆ ಆಸಕ ತಿ ಇಲ್ಲ ಎನ್ನುವಂತೆ ಮಾತನಾಡಿ ಉದ್ದಟತನ ಮೆರದಿದ್ದಾರೆ ಕೂಡಲೆ ಅವರನ್ನು ಸಚೀವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಡಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಸಂಘಟನಾ ಅಧ್ಯಕ್ಷ ಸಂತೋಷ ಚೋರಮೂಲೆ ಮಾತನಾಡಿ ಸಚೀವ ಮಾಧುಸ್ವಾಮಿಯು ಕೇವಲ ಒಂದು ಸಮಾಜದ ನಾಯಕ ಎನ್ನುವಂತೆ ಮಾತನಾಡಿದ್ದು ಎಲ್ಲ ಸಮುದಾಯದ ಜನತೆಯ ಮತದಿಂದ ಗೆದ್ದಿರುವುದನ್ನು ಮರೆತಂತಿದೆ. ಎಲ್ಲರನ್ನು ಒಂದೇ ರೀತಿಯಲ್ಲಿ ನೋಡದ ಇವರು ಕೂಡಲೆ ರಾಜಿನಾಮೆ ನೀಡಬೇಕು ಇಲ್ಲದಿದ್ದರೆ ಮುಖ್ಯಮಂತ್ರಿಗಳು ಇವರನ್ನು ವಜಾಗೊಳಿಸಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದರು
ಈ ಸಂದರ್ಭದಲ್ಲಿ ಶಂಕರ ಹೆಗಡೆ, ಸೋಮಲಿಂಗ್ ಮಳಮಳಸಿ, ವಿನಾಯಕ ಕಟ್ಟಿಮನಿ, ಲಕ್ಷ್ಮಣ ಲವಟೆ, ಕೃಷ್ಣಾ ಕುರಬರ, ಮಂಜುನಾಥ ಬೆಣ್ಣಿ ಸೇರಿದಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು