Breaking News
Home / Uncategorized / ಮಕ್ಕಳೊಂದಿಗೆ ಫುಡ್…..ನಮ್ಮ ಎಂ ಎಲ್ ಎ ವೇರೀ ವೇರಿ ಗುಡ್…..!!!

ಮಕ್ಕಳೊಂದಿಗೆ ಫುಡ್…..ನಮ್ಮ ಎಂ ಎಲ್ ಎ ವೇರೀ ವೇರಿ ಗುಡ್…..!!!

ಮಕ್ಜಳೊಂದಿಗೆ ಬಿಸಿಯೂಟದ ಫುಡ್…ನಮ್ಮ ಎಂ ಎಲ್ ಎ ವೇರಿಗುಡ್…..

ಬೆಳಗಾವಿ- ನಾನು ಎಂ ಎಲ್ ಎ ಎನ್ನುವ ಅಹಂಕಾರ ಅವರಲ್ಲಿ ಇಲ್ಲವೇ ಇಲ್ಲ ಇವರು ಕೋಟ್ಯಾಂತರ ರೂ ಬೆಲೆಬಾಳುವ ಕಾರುಗಳಲ್ಲಿ ಓಡಾಡುವದಿಲ್ಲ ಕ್ಷೇತ್ರದ ಮನೆಯ ಮಗನಾಗಿ ಎಲ್ಲರೊಂದಿಗೆ ಬೆರೆಯುವ ಇವರು ಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿ ಆಹಾರದ ಗುಣಮಟ್ಟ ಪರಶೀಲಿಸಿದವರು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ

ಹೌದು ಅವರ ವರ್ಕಿಂಗ್ ಸ್ಟೈಲೇ ಬೇರೆ ಅವರ ಸೇವಾ ಲಹರಿಯೇ ಡಿಫರಂಟ್ ಆಗಿರುತ್ತದೆ ಅವರು ಇಂದು ಆಕಸ್ಮಿಕವಾಗಿ ನಗರದ ಚನ್ನಮ್ಮ ನಗರದ ಸರಕಾರಿ ಶಾಲೆಗೆ ಬೇಟಿ ನೀಡಿ ಮಕ್ಕಳೊಂದಿಗೆ ಬೆರೆತು,
ಅವರೊಂದಿಗೆ ಪ್ರೀತಿಯಿಂದ ಊಟ ಮಾಡಿದರು,

ಸರಕಾರಿ ಶಾಲೆಗೆ ಬರುವ ಬಡಮಕ್ಕಳ ಭಾವನೆಗಳಿಗೆ ಸ್ಪಂದಿಸುವ ಭಾಗವಾಗಿ, ಶಾಲೆಯ ಬಿಸಿ ಊಟ ಆಹಾರ ಗುಣಮಟ್ಟ ಸ್ವಂತ ತಾವೇ ಊಟ ಮಾಡಿ ಪರೀಕ್ಷಿಸಿದರು, ಶಾಲೆಯ ಆವರಣದ ಸ್ವಚ್ಛತೆ, ಶಾಲೆಯ ಮೂಲಭೂತ ಸೌಕರ್ಯಗಳ ಪೀಠೋಪಕರಣಗಳು, ಕ್ರೀಡಾ ಸಾಮಗ್ರಿಗಳು, ಮಕ್ಕಳ ಸಾಹಿತ್ಯ, ಇತ್ಯಾದಿಗಳ
ಕುರಿತು ಮಾಹಿತಿ ಪಡೆದು ಸಂಬಂಧಿಸಿದ ಶಿಕ್ಷಣ ಅಧಿಕಾರಿಗಳಿಗೆ ಖುದ್ದಾಗಿ ಚರ್ಚೆ ನಡೆಸಿದರು.
ಮಕ್ಕಳ ಗುಣಮಟ್ಟ ಶಿಕ್ಷಣ ನೀಡಲು ಶಿಕ್ಷಕರ ಅಭಾವದ ಬಗ್ಗೆ ಶಾಲೆಯ ಮಕ್ಕಳು ತಮ್ಮ ಭಾವನೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಸಕರು, ಈ ಸಮಸ್ಯೆ ನಿವಾರಣೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.
ಶಿಕ್ಷಕರೊಂದಿಗೆ ಮಾತನಾಡಿ, ಮಕ್ಕಳ ಸರ್ವಾಂಗೀಣ ವಿಕಾಸದಲ್ಲಿ ನಿಮ್ಮ ಯೋಗದಾನ ಮಹತ್ವದ್ದು, ಹಾಗಾಗೀ ಕಾಳಜಿ ವಹಿಸಿ ಎಂದು ಸಲಹೆ ನೀಡಿದರು. ಶಾಸಕರ ಈ ಆಕಸ್ಮಿಕ ಬೇಸಿಗೆ ಕ್ಷೇತ್ರ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *