ಜಾಂಬೋಟಿ ಬಳಿ ಕಾರು ಪಲ್ಟಿ ಶಾಸಕ ಅರವಿಂದ ಬೆಲ್ಲದ ಪಾರು
ಬೆಳಗಾವಿ- ಖಾನಾಪೂರ ತಾಲ್ಲೂಕಿನ ಜಾಂಬೋಟಿಯ ಕುಸಮಳ್ಳಿ ಬಳಿ ಶಾಸಕ ಅರವಿಂದ ಬೆಲ್ಲದ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿದ್ದು ಶಾಸಕ ಅರವಿಂದ ಬೆಲ್ಲದ ಪಾರಾಗಿದ್ದಾರೆ
ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಟಾಟಾ ಎಕ್ಸಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಜಾಂಬೋಟಿಯ ಕುಸಮಳ್ಳಿ ಬಳಿ ಕಾರು ರಸ್ತೆ ಪಕ್ಕದ ಸಂರಕ್ಷಣಾ ಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.ಶಾಸಕ ಅರವಿಂದ ಬೆಲ್ಲದ ಅವರಿಗೆ ಯಾವುದೇ ರೀತಿಯ ಗಾಯ ಆಗಿಲ್ಲ ಅವರು ಸುರಕ್ಷಿತವಾಗಿದ್ದು ಬೇರೆ ಕಾರಿನಲ್ಲಿ ಧಾರವಾಡ ಪಟ್ಟಣಕ್ಕೆ ಹಿಂದಿರುಗಿದ್ದಾರೆ
ಖಾನಾಪೂರ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ಪರಶೀಲನೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ